Thursday, 12th December 2024

ನಾವು ಯಾಕೆ ಹಲಸಿನ ಹಣ್ಣನ್ನ ತಿನ್ನಬೇಕು ಗೊತ್ತಾ?

ಬೇಸಿಗೆ ಮತ್ತು ಮಳೆಗಾಲದ ಆರಂಭದಲ್ಲಿ ಸಿಗುವ ಹಣ್ಣು ಹಲಸು. ವಿಶೇಷ ಪರಿಮಳ ಹಾಗೂ ರುಚಿಯಿಂದ ಕೂಡಿರುವ ಈ ಹಣ್ಣನ್ನು ಸಾಕಷ್ಟು ಜನರು ಸವಿಯಲು ಬಯಸುತ್ತಾರೆ. ರಸಭರಿತವಾದ ಈ ಹಣ್ಣನ್ನು ಸವಿಯುವುದರಿಂದ ಸಾಕಷ್ಟು ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳಬಹುದು. ಒಂದು ತೊಳೆಯನ್ನು ಸವಿಯುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಯಿಂದ ದೂರ ಇರಬಹುದು? ಎನ್ನುವುದನ್ನು ತಿಳಿಯೋಣ ಬನ್ನಿ…

ಪೋಷಕಾಂಶಗಳು:
ಒಂದು ಕಪ್ ಹಲಸಿನ ಹಣ್ಣಿನ ತೊಳೆಯಲ್ಲಿ 157 ರಷ್ಟು ಕ್ಯಾಲೋರಿ, 2 ಗ್ರಾಮ್ ಕೊಬ್ಬು, 38 ಗ್ರಾಮ್ ಕಾರ್ಬ, 3ಗ್ರಾಮ್ ಪ್ರೋಟೀನ್, 40 ಮಿ.ಗ್ರಾಂ. ಕ್ಯಾಲ್ಸಿಯಮ್ , ಮ್ಯಾಗ್ಸಿಸಿಯಮ್, ಫೈಬರ್ ಹಾಗೂ ವಿಟಮಿನ್ ಗಳು ಸಮೃದ್ಧವಾಗಿರುತ್ತವೆ.

http://vishwavani.news/vishwavani-vishesha/worldenvirnmentday/

ಆಂಟಿ ಆಕ್ಸಿಡೆಂಟ್ :
ಹಲಸಿನ ಹಣ್ಣು ಕ್ಯಾರೊಟಿನಾಯ್ಡ್, ವಿಟಮಿನ್ ಎ ಅನ್ನು ಸಮೃದ್ಧವಾಗಿ ಹೊಂದಿರುವುದರಿಂದ ಕ್ಯಾನ್ಸರ್, ಹೃದಯ ರೋಗ ಹಾಗೂ ಕಣ್ಣಿನ ಪೊರೆಯಂತಹ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಆರೋಗ್ಯ ಸಮಸ್ಯೆ ತಡೆಯುವುದು:
ಈ ಹಣ್ಣಿನಲ್ಲಿ ಇರುವ ಔಷಧೀಯ ಗುಣ ಹಾಗೂ ಪೋಷಕಾಂಶಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.

ಶೀತ-ಜ್ವರದ ಸಮಸ್ಯೆ:
ಗಣನೀಯವಾಗಿ ಈ ಹಣ್ಣನ್ನು ಸವಿದರೆ ಮಳೆಗಾಲದಲ್ಲಿ ಕಾಡುವ ಶೀತ, ಜ್ವರ ಕಫ, ಹಾಗೂ ನೆಗಡಿಯಂತಹ ಸಮಸ್ಯೆಗಳು ದೂರವಾಗುತ್ತವೆ.
ಹೊಟ್ಟೆ ಹುಣ್ಣು:
ಹಲಸಿನ ಹಣ್ಣು ಅತಿಯಾದ ಆಮ್ಲೀಯತೆಯಿಂದ ಕಾಡುವ ಹೊಟ್ಟೆ ಹುಣ್ಣಿನ ಸಮಸ್ಯೆಯನ್ನು ತಡೆಯುವುದು. ಹೊಟ್ಟೆ ತಂಪಾಗಿರಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರದಂತಹ ಸಮಸ್ಯೆ ಬರದು.

ಮಲಬದ್ಧತೆಯ ಸಮಸ್ಯೆ:
ಇಂದು ಸಾಕಷ್ಟು ಜನರು ಮಲಬದ್ಧತೆಯಂತಹ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆ ಕಾರಣದಿಂದಲೇ ಒಂದಷ್ಟು ಆರೋಗ್ಯ ಸಮಸ್ಯೆ ಸಹ ಕಾಡುವುದು. ಹಲಸಿನ ಹಣ್ಣಿನಲ್ಲಿ ಇರುವ ಸಮೃದ್ಧವಾದ ನಾರಿನಂಶವು ದೇಹದಲ್ಲಿಇರುವ ಕಲ್ಮಶಗಳನ್ನು ಸುಲಭವಾಗಿ ಹೊರ ಹಾಕಲು ಸಹಾಯ ಮಾಡುತ್ತದೆ.

ಗ್ಲೂಕೋಸ್ ಪ್ರಮಾಣ ಹೆಚ್ಚದು:
ಹಲಸಿನ ಹಣ್ಣಿನಲ್ಲಿ ಇರುವ ನಾರಿನಂಶ ಹಾಗೂ ಗ್ಲೂಕೋಸ್ ಪ್ರಮಾಣವು ಆರೋಗ್ಯದ ಹಿತ ಕಾಪಾಡುತ್ತವೆ. ಇದು ನಿಧಾನವಾಗಿ ಜೀರ್ಣವಾಗುವುದರಿಂದ ಬಹುಬೇಗ ಗ್ಲೂಕೋಸ್ ಪ್ರಮಾಣ ದೇಹಕ್ಕೆ ಸೇರದು. ಮಧುಮೇಹಿಗಳು ಸಹ ಸವಿಯಬಹುದಾದ ಹಣ್ಣು ಇದು ಎನ್ನಲಾಗುವುದು.

ಚರ್ಮದ ಸಮಸ್ಯೆ:
ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.  ಇದು ಚರ್ಮದ ಆರೋಗ್ಯವನ್ನು ಕಾಪಾಡುವುದು. ಜೊತೆಗೆ ಸೂರ್ಯನ ಕಿರಣದಿಂದ ಉಂಟಾಗುವ ಹಾನಿಯನ್ನು ಸಹ ತಡೆಯುವುದು.