Sunday, 8th September 2024

ರಾಜ್ಯದಲ್ಲಿಯೇ ಉಳಿದಿದ್ದರೆ ಜಾಲಪ್ಪ ಇನ್ನೂ ಎತ್ತರಕ್ಕೆ ಏರುತ್ತಿದ್ದರೇನೋ ?

Siddaramayya

ಅರ್ಹತೆ ಇದ್ದೂ ಮುಖ್ಯಮಂತ್ರಿಯಾಗದ ಮುತ್ಸದ್ದಿ

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ

ಅಧಿಕಾರಯುವಾಗಿ ನನ್ನನ್ನು ಗದರಿಸುವ ಮತ್ತು ಮುಲಾಜಿಲ್ಲದೆ ಪ್ರಶ್ನಿಸುವ ಕೆಲವೇ ಕೆಲವು ಹಿರಿಯರಲ್ಲಿ ಆರ್.ಎಲ.ಜಾಲಪ್ಪನವರೂ ಒಬ್ಬರಾಗಿದ್ದರು. ಅವರ ನಿಧನದಿಂದ ನಾನು ನನ್ನ ಕುಟುಂಬದ ಹಿರಿಯರೊಬ್ಬರನ್ನು ಕಳೆದುಕೊಂಡಂತಾಗಿದೆ. ನನ್ನ ಮತ್ತು ಅವರ ಸಂಬಂಧ ಅಷ್ಟೊಂದು ಆಪ್ತವಾ ಗಿತ್ತು. ಈ ಸಲಿಗೆಯ ಸಂಬಂಧಕ್ಕೆ ವಯಸ್ಸಿನ ಹಿರಿತನವಷ್ಟೇ ಅಲ್ಲ, ನಮ್ಮ ನಡುವಿನ ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಮತ್ತು ಕಾಳಜಿಯೂ ಕಾರಣ.

ಹಿಂದುಳಿದ ಜಾತಿಯಿಂದ ರಾಜ್ಯದ ಮೊದಲ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಆ ಅವಕಾಶ ದಿಂದ ವಂಚಿತರಾದವಡಿರು ಜಾಲಪ್ಪನವರು. ಅವರನ್ನು ರಾಜಕೀಯವಾಗಿ ಮುಗಿಸಲು ಏನೆಲ್ಲ ನಡೆಯಿತು ಎನ್ನುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಇದಕ್ಕೆ ಯಾರು ಕಾರಣರೆಂಬ ವಿಶ್ಲೇಷಣೆಗೆ ಈ ಸಂದರ್ಭದಲ್ಲಿ ನಾನು ಹೋಗುವುದಿಲ್ಲ. ಆದರೆ ಜಾಲಪ್ಪನವರು ಎಷ್ಟೊಂದು ವಿಶಾಲ ಮನಸ್ಸಿನವರೆಂದರೆ ತಮಗೆ ಒದಗಿಬರದ ಮುಖ್ಯಮಂತ್ರಿ ಸ್ಥಾನದಲ್ಲಿ ನನ್ನನ್ನು ಕಾಣಲು ಅವರು ಬಯಸಿದ್ದರು.

೧೯೯೬ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದಾಗ ನಾನು ಮುಖ್ಯಮಂತ್ರಿಯಾಗಬೇಕೆಂದು ಅವರು ಪಕ್ಷದಲ್ಲಿ ಒತ್ತಡ ಹೇರಿದ್ದರು. ಕೊನೆಗೆ ೨೦೧೩ರಲ್ಲಿ ನಾನು ಮುಖ್ಯ ಮಂತ್ರಿಯಾದಾಗ ಬಹಳ ಖುಷಿ ಪಟ್ಟಿದ್ದರು.

ಜನಪರ ಕಾಳಜಿ ಮತ್ತು ದಕ್ಷತೆಯಿಂದಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಜನಮೆಚ್ಚುವ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಜಾಲಪ್ಪನವರು ನನ್ನ ಪಾಲಿನ ಅಪರೂಪದ ಮಾರ್ಗದರ್ಶಕರಾಗಿದ್ದರು. ಮುಖ್ಯಮಂತ್ರಿ ಯಾಗಿದ್ದಾಗಲೂ ನಾನು ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೆ, ಪ್ರತೀ ಭೇಟಿಯ ಸಂದರ್ಭದಲ್ಲಿಯೂ ಅವರು ಆಡಳಿತಾತ್ಮಕ ಕೌಶಲದ ಗುಟ್ಟುಗಳನ್ನು ಹಂಚಿಕೊಳ್ಳುತ್ತಿದ್ದರು. ೧೯೯೪ರಲ್ಲಿ ದೇವೇಗೌಡರ ಸಂಪುಟದಲ್ಲಿ ನಾನು ಕಂದಾಯ ಸಚಿವನಾಗಲು ಬಯಸಿದ್ದೆ. ಆಗ ಜಾಲಪ್ಪನವರು ನಾನು ಹಣಕಾಸು ಸಚಿವ ಸ್ಥಾನ ಕೇಳುವಂತೆ ಸಲಹೆ ನೀಡಿದ್ದರು

error: Content is protected !!