Saturday, 27th July 2024

ಚಿತ್ರಸಂತೆ ರೂವಾರಿಗೆ ಮಾರಿಷಸ್ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ

ವಿನಾಯಕರಾಮ್ ಕಲಗಾರು

ಉತ್ಸವ, ಸಮಾರಂಭ, ರಾಜ್ಯೋತ್ಸವ ಪುರಸ್ಕಾರಗಳ ಹಿಂದಿನ ಸಮರ್ಥ ಸಾರಥಿ ಗಿರೀಶ್ ವಿ.ಗೌಡ

ಗಿರೀಶ್ ವಿ ಗೌಡ, ಚಿತ್ರಸಂತೆ! ಈ ಹೆಸರು ಹತ್ತು ವರುಷಗಳಿಂದ ಚಾಲ್ತಿಯಲ್ಲಿದೆ. ಚಿತ್ರೋದ್ಯಮ ಮತ್ತು ಚಿತ್ರ ಪತ್ರಿಕೋದ್ಯಮದಲ್ಲಿ ಹೆಚ್ಚು ಹೆಸರು ಮಾಡಿರುವ ಗಿರೀಶ್ ಗೌಡರ ಕನಸಿನ ಕೂಸು ಮತ್ತು ಕನಸು ಈ ಚಿತ್ರಸಂತೆ! ಗಿರೀಶ್ ಬಹುಮುಖ ಸಾಧಕರೂ ಹೌದು, ಚಿತ್ರಸಂತೆ ಮೀಡಿಯಾ ಮನೆಯ ಮೂಲಕ ಮನೆ ಮನೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಸತತ ಹತ್ತು ವರುಷಗಳಿಂದ ಚಿತ್ರಸಂತೆ ಅಡಿಯಲ್ಲಿ ನಾನಾ ಕಾರ್ಯಕ್ರಮ ಮತ್ತು ಮಾಧ್ಯಮ ಸಂಬಂಧಿತ ಸಮಾರಂಭ ಗಳನ್ನು ಹಮ್ಮಿಕೊಂಡು ಬರುತ್ತಿರುವವರು ಗಿರೀಶ್ ವಿ ಗೌಡ. ಅವರ ಲವಲವಿಕೆಯೇ ಅವರಿಗೆ ದಿವ್ಯ ಸ್ಪೂರ್ತಿ!

ಮೂಲತಃ ತುಮಕೂರಿನ ಗುಬ್ಬಿಯ ಸಮೀಪದ ಹಳ್ಳಿಯವರಾದ ಗಿರೀಶ್ ಅವರಿಗೆ ಮೊದಲಿನಿಂದಲೂ ಚಿತ್ರೋದ್ಯಮ ಮತ್ತು ನಾನಾ ವೇದಿಕೆ ಕಾರ್ಯಕ್ರಮಗಳೆಂದರೆ ಎಲ್ಲಿಲ್ಲದ ಆಸಕ್ತಿ. ಒಂದು ತಂಡವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ಗಿರೀಶ್ ಅವರಿಗೆ ಸಂಘಟನಾ ಶಕ್ತಿ ಕೂಡ ಅಷ್ಟೇ ಚೆನ್ನಾಗಿ ಒಲಿದಿದೆ.

ಹಂಪಿ ಉತ್ಸವ, ಆನೆಗುಂದಿ ಉತ್ಸವಗಳಿಂದ ಹೆಸರನ್ನು, ಒಂದು ಕಾಲದಲ್ಲಿ ಸಾಕಷ್ಟು ಜಿಮಟ್ಟದ ಉತ್ಸವಗಳಲ್ಲಿ ಕೇಳಿರುತ್ತೀರಿ. ಗಿರೀಶ್ ಗೌಡ್ರು ಹಿಂದೆ ಇzರೆ ಎಂದರೆ ಅಲ್ಲಿ ಎಲ್ಲವೂ ಸುಲಲಿತ, ಸುಭೀಕ್ಷಿತ. ಒಂದು ಸ್ಟೇಜ್ ಪ್ರೋಗ್ರಾಮ್ ಅನ್ನು ಹೇಗೆ ಕಂಡಕ್ಟ್ ಮಾಡಬೇಕು? ಅಲ್ಲಿ ಹೇಗೆ ಮ್ಯಾನೇಜ್ ಮಾಡಬೇಕು ಎನ್ನುವುದನ್ನು ಗಿರೀಶ್ ಗೌಡರಿಂದ ಕಲಿಯುವುದು ಸಾಕಷ್ಟಿದೆ. ವಾಕಿ ಟಾಕಿ, ಟಾಕ್ ಬ್ಯಾಕ್, ಸೆಲೆಬ್ರಿಟಿ ಕೋ ಆರ್ಡಿನೇಷನ್, ಡ್ಯಾ ಪ-ರ್ಮೆ,
ಮ್ಯಾನೇಜ್‌ ಮೆಂಟ್ ಸೇರಿದಂತೇ ಗಿರೀಶ್ ಅವರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಿದ್ಧಹಸ್ತರು. ರಾಜ್ಯದ ನಾನಾ ಜಿ, ತಾಲೂಕು ಸೇರಿದಂತೇ ಸಾಕಷ್ಟು ಕಡೆ ಹಂಪಿ ಉತ್ಸವ, ಆನೆಗುಂದಿ ಉತ್ಸವ ಸೇರಿದಂತೇ ಹತ್ತಾರು ಕಾರ್ಯಕ್ರಮಗಳ ಹಿಂದೆ ಗಿರೀಶ್ ಅವರ ಶ್ರಮವಿದೆ, ಸೇವೆಯಿದೆ.

ಹರಿವು ತಂದುಕೊಟ್ಟ ಖ್ಯಾತಿ
ಇದೇ ಗಿರೀಶ್ ಸಿನೆಮಾ ಮೇಲಿನ ಪ್ರೀತಿಯಿಂದ ಹರಿವು ಎಂಬ ಸಿನೆಮಾ ಮಾಡುತ್ತಾರೆ. ಸಂಚಾರಿ ವಿಜಯ್ ನಟನೆಯ, ಮನ್ಸೂರೆ ನಿರ್ದೇಶನದ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸುತ್ತದೆ. ಆ ಅತ್ಯಂತ ಸಂಭ್ರಮದ ವಿಷಯ ಗಿರೀಶ್ ಕಿವಿಗೆ ಬಿದ್ದಾಗ ಗಿರೀಶ್ ಚಿಕ್ಕ ಮಕ್ಕಳಂತೇ ಕುಣಿದಿದ್ದೂ ಇದೆ. ಹಿರಿಹಿರಿ ಹಿಗ್ಗಿ ಜಿಗಿದು ಸಂಭ್ರಮಿಸಿದ್ದೂ ಇದೆ. ಇದು ಕೇವಲ ನನ್ನ ನಿರ್ಮಾಣಕ್ಕೆ ಸಿಕ್ಕ ಫಲವಲ್ಲ, ಇಡೀ ಚಿತ್ರತಂಡ ಹಾಗೂ ಚಿತ್ರರಂಗಕ್ಕೆ ಸಿಕ್ಕ ಪ್ರತಿಫಲ ಎಂಬ ಸಾರ್ಥಕ ನುಡಿಗಳನ್ನಾಡಿ ಸಾಕಷ್ಟು ಕಡೆ ಪ್ರಶಂಸೆ ಗಳಿಸಿದ್ದರು. ನ್ಯಾಷನಲ್ ಅವಾರ್ಡ್ ಸಿಕ್ಕ ಬೆನ್ನ ಸಂಚಾರಿ ವಿಜಯ್ ಅವರಿಗೆ ಮತ್ತೊಂದು ಸಿನೆಮಾ ನಿರ್ಮಾಣ ಮಾಡಲು ವೇದಿಕೆ ರೆಡಿ ಮಾಡಿಕೊಂಡಿದ್ದರು.

ವಿಜಯ್ ಅಕಾಲಿಕ ಮರಣದ ಕಾರಣದಿಂದ ಆ ಪ್ರಾಜೆಕ್ಟ್ ಆಗಲಿಲ್ಲ. ಆದರೆ ವಿಜಯ್ ಸಾವಿನ ನೋವು ಇವತ್ತಿಗೂ ಗಿರೀಶ್ ಅವರ ಕಣ್ಣಳತೆಯಿಂದ ದೂರ ಸರಿದಿಲ್ಲ. ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರದ ರೂವಾರಿ ಗಿರೀಶ್ ಅವರಿಗೆ ರೆಬಲ್ ಸ್ಟಾರ್ ಅಂಬರೀಷ್ ಎಂದರೆ ಎಲ್ಲಿಲ್ಲದ ಒಲವು. ವಿಶೇಷ ಗೌರವ. ಅಂಬಿ ಬದುಕಿzಗಲಿಂದಲೂ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದ ಗಿರೀಶ್ ಅವರು ಯಾವುದೇ ಕಾರ್ಯಕ್ರಮ ಮಾಡಬೇಕು, ಸಮಾರಂಭ ನಡೆಸಬೇಕು ಎಂದರೂ ಅಲ್ಲಿ ಅಂಬಿ ಅವರ ಸಲಹೆ ಸೂಚನೆಗಳನ್ನು ಪಡೆದೇ ಮುಂದೆ ಹೆಜ್ಜೆ ಇಡುತ್ತಿದ್ದರು. ಅವರ ಹೆಚ್ಚಿನ ಪುರಸ್ಕಾರ, ಪ್ರಶಸ್ತಿ ಸಮಾರಂಭಗಳಿಗೆ ರೆಬಲ್ ಸ್ಟಾರ್ ಅಂಬರೀಶ್ ಅರ್ಪಿಸುವ ಎಂದೇ ಹಾಕುತ್ತಾರೆ. ಪ್ರತೀ ದಿನವೂ ಅಂಬರೀಶ್ ಅವರನ್ನು ನೆನೆಯುತ್ತಾರೆ. ಅವರನ್ನು ನೆನೆನೆನೆದೇ ಉತ್ಸವ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಪ್ಪು ಹೆಸರಲ್ಲಿ ಮಾಡುತ್ತಿzರೆ. ಚಿತ್ರರಂಗದ ನಾನಾ ಸಿನೆಮಾಗಳಿಗೆ, ನಟ ನಟಿಯರಿಗೆ, ಹಿರಿಯ ಕಿರಿಯ ಯುವ ಸಾಧಕರಿಗೆ ತಂತ್ರಜ್ಞರಿಗೆ ಯಾವುದೇ ಪ್ರತಿ-ಲಾಪೇಕ್ಷೆ ಇಲ್ಲದೇ ಸನ್ಮಾನಿಸಿ ಸತ್ಕರಿಸುತ್ತಾ ಬಂದಿದ್ದಾರೆ. ಈ ವರೆಗೆ ನಡೆದ ಸಮಾರಂಭ-ಉತ್ಸವಗಳಿಗೆ ರಾಕಿಂಗ್ ಸ್ಟಾರ್ ಯಶ್, ರೆಬಲ್ ಸ್ಟಾರ್ ಅಂಬರೀಶ್, ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ, ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಗಿಣಿ, ರಚಿತಾರಾಮ, ಪ್ರಿಯಾಂಕಾ ಉಪೇಂದ್ರ, ನೆನಪಿರಲಿ ಪ್ರೇಮ, ದುನಿಯಾ ವಿಜಯ, ನೀನಾಸಂ ಸತೀಶ್, ರಾಘವೇಂದ್ರ ರಾಜ್ ಕುಮಾರ್, ಎಸ್ ನಾರಾಯಣ್, ಉಮಾಪತಿ ಶ್ರೀನಿವಾಸ್ ಗೌಡ, ತರುಣ್ ಸುಧೀರ್ ಸೇರಿದಂತೇ ನೂರಾರು ಕಲಾವಿದ ಗಣ್ಯರು ಭಾಗಿಯಾಗಿದ್ದಾರೆ.

ಗೌಡರಿಗೆ ಗ್ಲೋಬಲ್ ಪ್ರಶಸ್ತಿ
ವಿವಿಧ ಕಾರ್ಯಕ್ರಮಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ವಿಶ್ವವಾಣಿ ಪತ್ರಿಕೆಯ ವಿಶೇಷ ಪುರಸ್ಕಾರವಾಗಿರುವ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಗಿರೀಶ್ ಗೌಡರ ಮುಡಿಗೇರಿದೆ. ದೂರದ ಮಾರೀಷಸ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಗಿರೀಶ್ ಅವರಿಗೆ ಈ ವಿಶೇಷ ಪ್ರಶಸ್ತಿಯನ್ನು ಘೋಷಿಸಲಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಗಳನ್ನು ಸದಾ ಇಷ್ಟಪಡುವ ಗಿರೀಶ್ ಅವರಿಗೆ ಈ ಪ್ರಶಸ್ತಿ ಸಂದಾಯವಾಗಿ ರುವುದು ಅವರ ಹುಮ್ಮಸ್ಸನ್ನು ದುಪ್ಪಟ್ಟಾಗಿಸಿದೆ. ವಿಶ್ವೇಶ್ವರ ಭಟ್ ಅವರ ಬ್ರ್ಯಾಂಡ್ ಇಪ್ಪತ್ತೈದು ವರುಷಗಳಿಂದ ಇದೆ. ಇದೀಗ ಆ ಕ್ರೇಜ್ ದುಪ್ಪಟ್ಟಾಗಿದೆ. ವಿಶ್ವವಾಣಿ ವಿಶ್ವಮಟ್ಟ ದಲ್ಲಿ ಹಮ್ಮಿಕೊಳ್ಳುತ್ತಿರುವ ಈ ಸಮಾರಂಭ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿದೆ ಎನ್ನುವುದು ಗಿರೀಶ್ ಗೌಡರ ಮನದಾಳದ ಮಾತು!

ಜೂನ್ ೧೦ಕ್ಕೆ ಚಿತ್ರಸಂತೆ ಪ್ರಶಸ್ತಿ ಪ್ರದಾನ ಸಮಾರಂಭ
ಗಿರೀಶ್ ಗೌಡರ ವರ್ಷದ ಸಂಭ್ರಮಾಚರಣೆ ಹಾಗೂ ಚಿತ್ರಸಂತೆಯ ಹನ್ನೊಂದನೇ ವರುಷದ ವಿಶೇಷ ಆಚರಣೆಯ ಪ್ರಯುಕ್ತ ಇದೇ ಜೂನ್ ೧೦ರಂದು ಚಿತ್ರಸಂತೆ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತೀ ವರುಷದಂತೇ ಈ ವರ್ಷವೂ ಇಲ್ಲಿ ದೊಡ್ಡ ದೊಡ್ಡ ತಾರೆಯರ ಸಮಾಗಮ ವಾಗಲಿದೆ. ಹತ್ತಾರು ಕಲಾವಿದರ, ತಂತ್ರಜ್ಞರ ಸಮಾವೇಶ ನಡೆಯಲಿದೆ. ವಿಶೇಷ ರೀತಿಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಈ ಸಾರಿ ಚಲನಚಿತ್ರ ರಂಗದ ಹಿರಿಯ ನಿರ್ಮಾಪಕ ದಿವಂಗತ ದ್ವಾರಕೀಶ್ ಹೆಸರಲ್ಲಿ ಒಂದಷ್ಟು ಹಿರಿಯ ಹಾಸ್ಯ ಕಲಾವಿದ ರನ್ನು ಕರೆದು ಸನ್ಮಾನಿಸಲಾಗುತ್ತಿದೆ. ರಂಗುರಂಗಿನ ವೇದಿಕೆಯಲ್ಲಿ ನೃತ್ಯ, ಹಾಸ್ಯ ಸೇರಿದಂತೇ ನಾನಾ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

ರಾಗಿಣಿ ಚಿತ್ರ ನಿರ್ಮಾಣಕ್ಕೆ ಮುಹೂರ್ತ
ಗಿರೀಶ್ ಗೌಡರ ಸಾರಥ್ಯದಲ್ಲಿ, ಜಟ್ಟ ಗಿರಿರಾಜ್ ನಿರ್ದೇಶನದಲ್ಲಿ ಹೊಸತೊಂದು ಸಿನೆಮಾ ಮೂಡಿ ಬರಲಿದ್ದು, ಮೊನ್ನೆ ತಾನೇ ರಾಗಿಣಿ ಹುಟ್ಟು ಹಬ್ಬ ದಂದು ಈ ಚಿತ್ರದ ಮುಹೂರ್ತ ನಡೆದಿದೆ. ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯದ ಈ ಚಿತ್ರದ ಕೆಲಸಗಳು ಶುರುವಾಗಲಿದೆ. ಗಿರೀಶ್ ಗೌಡರ ಅಧ್ಯಕ್ಷತೆಯ ಈ ಇಡೀ ಸಿನೆಮಾ ಮುಂದುವರೆಯಲಿದ್ದು, ಇನ್ನಷ್ಟು ಸದಭಿರುಚಿಯ ಚಿತ್ರಗಳನ್ನು ಮಾಡುವ ಮಹದಾಸೆ ಗಿರೀಶ್ ಅವರದ್ದಾಗಿದೆ. ಜತೆಗೆ ಒಂದಷ್ಟು ಹೊಸ ಪ್ರತಿಭೆಗಳಿಗೆ ಫೇಸ್ ಆಫ್ ಸ್ಯಾಂಡಲ್‌ವುಡ್ ಕಾರ್ಯಕ್ರಮದ ಮೂಲಕ ಅವಕಾಶ ಕೊಡಲು ಗೌಡರು ದೊಡ್ಡ ಮಟ್ಟದ ವೇದಿಕೆ ರೆಡಿಮಾಡಿದ್ದಾರೆ.

ಕಿರುತೆರೆ ಕಾರ್ಯಕ್ರಮಗಳ ನಿರ್ಮಾಣ
ಗಿರೀಶ್ ಕಿರುತೆರೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಸುವರ್ಣ ಪ್ಲಸ್ ವಾಹಿನಿಗೆ ಒಂದಷ್ಟು ಟಾಕ್ ಶೋಗಳ ನಿರ್ಮಾಣ ನಿರ್ದೇಶನ ಮಾಡಿದ್ದಾರೆ. ತದನಂತರ ಕಸ್ತೂರಿ ಚಾನೆಲ್‌ನ ಯಶಸ್ವೀ ಕಾರ್ಯಕ್ರಮ ಜಾಕ್ ಪಾಟ್ ಸೇರಿದಂತೇ ನಾನಾ ನಾನ್ ಫಿಕ್ಷನ್ ಕಾರ್ಯಕ್ರಮಗಳ ಹಿಂದೆ ಗಿರೀಶ್ ಅವರ ಹೆಸರಿದೆ. ಗಿರೀಶ್ ಮಾಡಿರುವ ಕೆಲಸದ ಹೆಜ್ಜೆಗುರುತಿದೆ. ಸದ್ಯ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭ ಸೇರಿದಂತೇ ಒಂದಷ್ಟು ಹೊಸ ಹೊಸ ಕಾರ್ಯಕ್ರಮ ನಿರ್ಮಾಣಕ್ಕೆ ಗಿರೀಶ್ ಅವರು ಸಿರಿಕನ್ನಡ ಚಾನೆಲ್ ಜತೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಹಮ್ಮಿಕೊಂಡಿದ್ದ ಚಿತ್ರಸಂತೆ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ಸಿರಿಕನ್ನಡ ವಾಹಿನಿಯ ಪ್ರಸಾರವಾಗಿದೆ. ಈ ವರುಷದ ಚಲನಚಿತ್ರ ಪ್ರಶಸ್ತಿ ಸಮಾರಂಭ ಕೂಡ ಸಿರಿ ಕನ್ನಡದ ಮೂಡಿ ಬರಲಿದೆ.

ಸಿನೆಮಾ ವಿತರಣೆಯಲ್ಲೂ ಗೌಡರು ಸೈ!
ಸಿನೆಮಾ ನಿರ್ಮಾಣ ಮಾಡಿ, ರಾಷ್ಟ್ರಮಟ್ಟದಲ್ಲಿ ‘ಹರಿವು’ ಮೂಡಿದಾಗ ಗಿರೀಶ್ ಅವರು ಚಿತ್ರ ವಿತರಣೆ ವಿಭಾಗಕ್ಕೂ ಕೈ ಹಾಕುತ್ತಾರೆ. ಕನ್ನಡದ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ವಿತರಣೆ ಮಾಡಲೂ ಮುಂದಾಗುತ್ತಾರೆ. ಖನನ, ಹ್ಯಾಂಗೋವರ್ ಸೇರಿದಂತೇ ಹತ್ತಾರು ಚಿತ್ರಗಳನ್ನು ಕಡಿಮೆ ಹಣಕ್ಕೆ, ಹೆಚ್ಚಿನ ಗುಣಮಟ್ಟಕ್ಕೆ ಹಂಚಿಕೆ ಮಾಡಿಕೊಡುವ ಗಿರೀಶ್ ಅವರನ್ನು ಹೊಸ ಚಿತ್ರತಂಡದವರು ಹುಡುಕಿ ಕೊಂಡು ಬರುತ್ತಾರೆ. ಪ್ರಾಮಾಣಿಕವಾಗಿ, ಗೌರವಯುತವಾಗಿ ನಡೆದುಕೊಳ್ಳುವ ಗಿರೀಶ್ ಅವರ ಡಿಸ್ಟ್ರಿಬ್ಯೂಷನ್ ಆಫೀಸ್ ಮಶ್ವ ರಂನಲ್ಲಿದೆ. ಹೊಸ ಪ್ರಯೋಗಗಳನ್ನು ಮಾಡಿರುವವರು ಗಿರೀಶ್ (೯೩೪೩೫ ೫೫೯೯೯) ಅವರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!