ವಿ.ಸೋಮಣ್ಣ, ಸಚಿವರು, ಕರ್ನಾಟಕ ಸರ್ಕಾರ
‘ನರೇಂದ್ರಮೋದಿ’ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಮ್ಯಾಜಿಕ್ ಮಾಡಿದ ಹೆಸರು. ’ನರೇಂದ್ರ ಮೋದಿ’ ಹೆಸರಿನಲ್ಲಿ ಭಾರತವಷ್ಟೇ ಅಲ್ಲದೆ ವಿಶ್ವದಲ್ಲೂ ಬ್ರಾಂಡ್ ಕ್ರಿಯೇಟ್ ಆಗಿದೆ.
ದೃಢ ಸಂಕಲ್ಪ, ಇಚ್ಛಾಶಕ್ತಿ, ದಿಟ್ಟ ನಿರ್ಧಾರ, ವೈರಿಯ ಮನೆಗೆ ನುಗ್ಗಿ ಹೊಡೆಯುವಂತಹ ಆಕ್ರಮಣಕಾರಿ ಪ್ರವೃತ್ತಿ, ಚಾಣಾಕ್ಷತೆ, ಧೈರ್ಯ, ದಿಟ್ಟತನ, ಮಾತುಗಾರಿಕೆ, ತಂತ್ರಗಾರಿಕೆ, ವಿಶ್ವಾಸಾರ್ಹತೆ, ಎಷ್ಟೇ ಕಠಿಣ ವಾಗಿದ್ರೂ ಹಿಡಿದ ಕೆಲಸವನ್ನು ಬಿಡದೆ ಮಾಡುವ ದೃಢ ಸಂಕಲ್ಪ. ಇದೇ ಮೋದಿ ಅನ್ನೋ ನಾಯಕ ೧೩೦ಕೋಟಿ ಭಾರತೀಯರಲ್ಲಿ ಹೊಸ ಭರವಸೆ ಮೂಡಲು ಕಾರಣ.
೧೭ ಸೆಪ್ಟೆಂಬರ್ ೧೯೫೦ರಲ್ಲಿ ಗುಜರಾತ್ನ ಮೆಹ್ವಾನಾ ಜಿಲ್ಲೆಯ ವಡ್ನಗರದಲ್ಲಿ ಮೋದಿ ಜನಿಸಿದರು. ಆರ್ಎಸ್ಎಸ್ ಪ್ರಚಾರಕ ರಾಗಿ ಸೇವೆ ಸಲ್ಲಿಸಿದ ಅವರು ಮುಂದೆ ೧೯೮೦ರಲ್ಲಿ ಗುಜರಾತ್ ಬಿಜೆಪಿ ಘಟಕದಲ್ಲಿ ಗುರುತಿಸಿಕೊಂಡರು. ೨೦೦೧೦ ಗುಜರಾತ್ ಮುಖ್ಯ ಮಂತ್ರಿಯಾದ ಅವರು ಸತತ ೧೩ ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಯಾಗಿದ್ದರು. ೨೦೧೪ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ೨೦೧೪೦ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಬಹುಮತದೊಂದಿಗೆ ಗೆದ್ದು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರು.
ಪ್ರಧಾನಿ ಮೋದಿ ಸರ್ಕಾರದ ಪ್ರಮುಖ ಯೋಜನೆಯಾದ ಪ್ರತಿಯೊಬ್ಬರಿಗೂ ಮನೆ ಎಂಬ ಪರಿಕಲ್ಪನೆಯ ’ಪ್ರಧಾನ ಮಂತ್ರಿ ಅವಾಸ’ ಯೋಜನೆಯನ್ನು ೨೦೧೫೦ ಜೂನ್ ನಲ್ಲಿ ಪ್ರಾರಂಭಿಸಲಾಗಿತ್ತು. ಪಿ.ಎಂ.ಎ.ವೈ ಯೋಜನೆಯು ದೇಶದಲ್ಲಿನ ವಸತಿರಹಿತ ಜನರ ಜೀವನವನ್ನು ಯೋಜನೆಯಾಗಿದೆ. ಕಡಿಮೆ ಆದಾಯ ಉತ್ತಮಗೊಳಿಸುವ ಹೊಂದಿದ, ಮಧ್ಯಮ ವರ್ಗದ ಹಾಗೂ ಆರ್ಥಿಕ ವಾಗಿ ದುರ್ಬಲವಾದ ಸುಮಾರು ೨ ಕೋಟಿ ಜನರಿಗೆ ಮನೆ ನಿರ್ಮಿಸಿ ಕೊಡುವ ಗುರಿ ಈ ಯೋಜನೆದಾಗಿದೆ.
’ಸರ್ವರಿಗೂ ಸೂರು’ ಯೋಜನೆಯಡಿ ೧ ಲಕ್ಷ ಬಹುಮಹಡಿ ಕಟ್ಟಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ’ಸರ್ವರಿಗೂ ಸೂರು’ ಎಂಬ ಧೈಯದಡಿ ೨೦೧೬-೧೭ ಮತ್ತು ೨೦೧೭-೧೮೦ ’ಮುಖ್ಯಮಂತ್ರಿಗಳ ೧ ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ ಕೇಂದ್ರ ಸರ್ಕಾರದಿಂದ ಮೊದಲನೇ ಕಂತಿನ ರೂ. ೬೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಟ್ಟು ೧೦೪೦ ಎಕರೆ ಜಮೀನನ್ನು ನಿಗಮ ವಶಕ್ಕೆ ಪಡೆಯಲಾಗಿದ್ದು ಈ ಪೈಕಿ ೫೫೩ ಎಕರೆ ಜಮೀನಿನಲ್ಲಿ ಮನೆಗಳ ನಿರ್ಮಾಣ ಮಾಡ ಲಾಗುತ್ತಿದೆ.
ಮೊದಲನೇ ಹಂತದಲ್ಲಿ ೪೧೩ ಎಕರೆ ಜಮೀನಿನಲ್ಲಿ ೪೮,೪೯೮ ಮನೆಗಳ ಕಾಮಗಾರಿ ಪ್ರಾರಂಭಿಸಲಾಗಿದ್ದು, ೨೦೦೦ ಮನೆಗಳು ಪೂರ್ಣಗೊಂಡಿದ್ದು, ೧೦,೦೦೦ ಮನೆಗಳು ಮುಕ್ತಾಯ ಹಂತದಲ್ಲಿದೆ. ಫಲಾನುಭವಿಗಳ ವಾರ್ಷಿಕ ಆದಾಯದ ಮಿತಿಯನ್ನು ರೂ.೮೭,೬೦೦ ರಿಂದ ರೂ.೩.೦೦ ಲಕ್ಷಕ್ಕೆ ಹೆಚ್ಚಿಸಿ, ಯೋಜನೆಯ ಭೌಗೋಳಿಕ ಮಿತಿಯನ್ನು ಬಿಡಿಎ ವ್ಯಾಪ್ತಿಯಿಂದ ಬೆಂಗಳೂರು ನಗರ ಜಿ ವ್ಯಾಪ್ತಿಗೆ ವಿಸ್ತರಿಸಲಾಗಿದೆ.
ಸ್ಥಳೀಯ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಶೇ.೫೦%ರಷ್ಟು ಮನೆಗಳನ್ನು ಹಂಚಿಕೆ ಮಾಡಲಾಗುವುದು. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧೈಯದಂತೆ ನಮ್ಮ ನಡೆ ಪ್ರಧಾನಿ ಮೋದಿಯವರ ಘೋಷವಾಕ್ಯ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧೈಯದಂತೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.
ಪ್ರತಿಯೊಬ್ಬ ನಾಗರಿಕರಿಗೂ ಉಚಿತವಾಗಿ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ೯ ವಾರ್ಡ್ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತಜ್ಞ ವೈದ್ಯರು ಮತ್ತು ದಾದಿಯರನ್ನು ನೇಮಕ ಮಾಡಲಾಗಿದೆ. ದಾಸರಹಳ್ಳಿ ವಾರ್ಡ್ನಲ್ಲಿ ೨೯೦ ಹಾಸಿಗೆ ಸಾಮರ್ಥ್ಯವುಳ್ಳ ಸೂರ್ಪ ಸ್ಪೆಷಾಲಿಟಿ ಆಸ್ಪತ್ರೆ, ೬ ಅಪರೇಷನ್ ಥಿಯೇಟರ್, ಐ.ಸಿ.ಯು, ಸೌಲಭ್ಯ ಒದಗಿಸಲಾಗುತ್ತಿದೆ.
ಪಂತರಪಾಳ್ಯದ ಹೈಟೆಕ್ ಆಸ್ಪತ್ರೆಯಲ್ಲಿ ೪೦ ಹಾಸಿಗೆ ಪ್ರಿಮೆರ್ಚೂ ಮಕ್ಕಳ ಚಿಕಿತ್ಸೆಗೆ ನಿರ್ಮಾಣ ಮಾಡಲಾಗುತ್ತಿದೆ. ೬೦
ಹಾಸಿಗೆಯುಳ್ಳ ಕಿಡ್ನಿ ಡಯಾಲಿಸಿಸ್ ಸೆಂಟರ್ ಆರಂಭಿಸಲಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡಿ ಮಾಗಡಿ ರೋಡ್ ಪೊಲೀಸ್ ಠಾಣೆ ಹಿಂಭಾಗದಲ್ಲಿ ಹೈಟೆಕ್ ಶಾಲೆ ಮತ್ತು ಅರುಂಧತಿನಗರ, ಮಾನಸನಗರ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಉರ್ದು ಶಾಲೆ
ನವೀಕರಣ ಮಾಡಲಾಗುತ್ತಿದೆ. ೫೦ಕ್ಕೂ ಹೆಚ್ಚು ಉದ್ಯಾನವನಗಳ ನವೀಕರಣ, ಉನ್ನತೀಕರಣ ಮಾಡಲಾಗಿದೆ.
ಪ್ರತಿಯೊಂದು ರಸ್ತೆಗಳಿಗೆ ಮಾದರಿ ರಸ್ತೆ, ಹೈಟೆಕ್ ಪಾದಚಾರಿ ಮಾರ್ಗ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ೭೦ಕ್ಕೂ ಹೆಚ್ಚು ಶುದ್ಧಕುಡಿಯುವ ನೀರಿನ ಘಟಕ ಮತ್ತು ೯೦೦೦ ಸಾವಿರ ಕುಟುಂಬಗಳಿಗೆ ಕಾವೇರಿ ನೀರು ಸರಬರಾಜಿಗೆ ಜಲಸಂಗ್ರಾಹಕ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಜನಸಾಮಾನ್ಯರನ್ನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯದಂತೆ ಗೋವಿಂದರಾಜನಗರ
ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಕರ್ನಾಟಕ ಬಿಜೆಪಿ ನಿರ್ಧರಿಸಿದೆ. ಸೆಪ್ಟೆಂಬರ್ ೧೭ ರಂದು ಸೇವಾ ಪಾಕ್ಷಿಕೆಗೆ ಚಾಲನೆ ದೊರೆತಿದ್ದು ಅಕ್ಟೋಬರ್ ೨ರವರೆಗೆ ಒಂದು ಸಪ್ತಾಹದ ಕಾಲ.
ರಾಜ್ಯದ ನಾನಾ ಜಿಗಳಲ್ಲಿ ಜನೋಪಕಾರಿ ಸೇವೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಲು ತೀರ್ಮಾನಿಸಿದೆ.
ಸೇವಾ ಪಾಕ್ಷಿಕದ ಅಂಗವಾಗಿ, ಪ್ರತಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ, ಪ್ರತಿ ಜಿಲ್ಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ, ಬೂತ್ ಮಟ್ಟದಲ್ಲಿ ವನ ಮಹೋತ್ಸವ ಕಾರ್ಯಕ್ರಮ. ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಛತಾ ಕಾರ್ಯಕ್ರಮ, ಜಲವೇ ಜೀವನ ಜಾಗೃತಿ ಅಭಿಯಾನ, ವೋಕಲ್ – ಲೋಕಲ್ಗೆ ಉತ್ತೇಜನ ನೀಡಲು ಜನಜಾಗೃತಿ ಅಭಿಯಾನ ನಡೆಸುತೀರ್ಮಾನಿಸಿದೆ.
೨೦೨೫೦ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿಸುವ ಗುರಿಯೊಂದಿಗೆ ೧ ವರ್ಷ ಕಾಲ ಟಿ.ಬಿ ಖಾಯಿಲೆ ರೋಗಿಗಳಿಗೆ ಆಹಾರ, ಪೋಷಣೆ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ಸೇವಾ ಕಾರ್ಯ ಆರಂಭಿಸಲಾಗುತ್ತದೆ.
ಭಾರತದ ವಿವಿಧತೆಯಲ್ಲಿ ಏಕತೆಯ ಉತ್ಸವ ಆಯೋಜಿಸಲಾಗುತ್ತಿದ್ದು, ’ಏಕ್ ಭಾರತ್, ಶ್ರೇಷ್ಠ ಭಾರತ’ ಸಂದೇಶವನ್ನು ಸಮಾಜಕ್ಕೆ ಸಾರಲಿದೆ. ಬಡತನ ಶಾಶ್ವತವಲ್ಲ, ಬಡತನ ನಿವಾರಣೆಗೆ ಸರ್ಕಾರದ ಯೋಜನೆಗಳು ತಲುಪಿದಾಗ ಆರ್ಥಿಕವಾಗಿ ಸಬಲರಾಗುತ್ತಾರೆ. ಶಿಸ್ತು, ಸಂಯಮ, ದೇಶಭಕ್ತಿ, ದೇಶಪ್ರೇಮ, ಸೇವೆಯ ಪ್ರತೀಕದಂತಿರುವ ಮೋದಿಯವರನ್ನು ಇಂಥದ್ದೊಂದು ಹಿರಿಮೆಗೆ ಪಾತ್ರ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ದೊಡ್ಡದು ಎಂದರೆ ಅತಿಶಯೋಕ್ತಿಯಲ್ಲ.
ಹಲವು ಸುಧಾರಣೆ, ಯೋಜನೆಗಳನ್ನು ಜಾರಿ ತಂದಿರುವ ಪ್ರಧಾನಿ ಮೋದಿ ಅವರು ಮಾದರಿ ರಾಜಕಾರಣಿ, ಇಡೀ ಜಗತ್ತು ಭಾರತವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ ಎಂದರೆ ವಿಶ್ವನಾಯಕ ನರೇಂದ್ರ ಮೋದಿ ಅವರಲ್ಲಿದ್ದ ದೃಢ ನಿಶ್ಚಯವೇ ಕಾರಣ. ದೇಶದ ಜನರ ಭಾವನೆಗಳಿಗೆ ಸ್ಪಂದಿಸುವ ನಾಯಕ, ಕೋಟ್ಯಾಂತರ ಭಾರತೀಯರ ಆಶೋತ್ತರಗಳನ್ನು ಪೂರೈಸಿರುವ ರಾಜಕೀಯ ಸಂತ, ದೇಶವಾಸಿಗಳ ಶ್ರೇಯಸ್ಸಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಮೋದಿಯವರು ದೇಶಸೇವೆಯನ್ನೇ ಗುರಿಯಾಗಿಸಿಕೊಂಡ ಮಹಾನ್ ಯುಗಪುರುಷನೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.