Sunday, 24th November 2024

ಶಿಶುಗಳಲ್ಲಿ ಬಹುತೇಕ ನ್ಯುಮೋನಿಯಾ ಸಂಬಂಧಿತ ಸಾವುಗಳನ್ನು ತಡೆಗಟ್ಟಬಹುದು

ಜಗತ್ತಿನ ಎಲ್ಲೆಡೆ ಮಕ್ಕಳ ಸಾವಿನ ಏಕೈಕ ದೊಡ್ಡ ಕಾರಣಗಳಲ್ಲಿ ನ್ಯುಮೋನಿಯಾ ಒಂದಾಗಿದೆಯಲ್ಲದೇ ಐದು ವರ್ಷಗಳಿ ಗಿಂತಲೂ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಶೇ. 41ಕ್ಕಿಂತ ಹೆಚ್ಚಿನ ಮರಣಗಳಿಗೆ ಕಾರಣವಾಗಿದೆ. ಇವುಗಳನ್ನು ಸಮಕ್ಕೆ ಸರಿಯಾದ ಮತ್ತು ಸೂಕ್ತವಾದ ವೈದ್ಯಕೀಯ ಹಸ್ತಕ್ಷೇಪದೊಂದಿಗೆ ತಡೆಗಟ್ಟಬಹುದಾಗಿದೆ. ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಸಂಬAಧಿತ ಸಾವುಗಳನ್ನು ತಡೆಯಬಹುದಾಗಿದೆ.

ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳಿAದಾಗಿ ಈ ಶ್ವಾಸಕೋಶದ ತೀವ್ರ ಉಸಿರಾಟದ ಸೋಂಕು ಉಂಟಾಗಬಹುದು. ಇದು ವಾಯು ಮಾಲಿನ್ಯದಿಂದ ಹೆಚ್ಚಾಗುತ್ತ್ತದೆ. ಅಲ್ಲದೇ ಇದು ಸಾವುಗಳ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಅಪೌಷ್ಟಿಕತೆ, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಕಲುಷಿತ ಕುಡಿಯುವ ನೀರಿನಂತಹ ಅಂಶಗಳೊAದಿಗೆ ಕೂಡ ಸಾವಿನ ಸಾಧ್ಯತೆ ಸಂಬAಧ ಹೊಂದಿರುತ್ತದೆ. ಜಗತ್ತಿನ ಎಲ್ಲೆಡೆ ನ್ಯುಮೋನಿಯಾ ಹೊಂದಿರುವ ಮಕ್ಕಳ ಪೈಕಿ ಭಾರತ ಅತ್ಯಧಿಕ ಮರಣ ಪ್ರಮಾಣ ದಾಖಲಿಸಿದೆ. ಆರಂಭಿಕ ಹಂತದಲ್ಲಿಯೇ ಈ ರೋಗ ಪತ್ತೆ ಮಾಡುವುದು, ಶೀಘ್ರ ಚೇತರಿಕೆಗೆ ಬಹಳ ಮುಖ್ಯ ವಾಗಿರುತ್ತದೆ.

ಜೊತೆಗೆ ನ್ಯುಮೋನಿಯಾದ ರೋಗಲಕ್ಷಣಗಳನ್ನು ಪೋಷಕರು ಅರಿಯುವುದು ಹಾಗೂ ಅರ್ಥಮಾಡಿಕೊಳ್ಳುವುದು ಮುಖ್ಯ ವಾಗಿರುತ್ತದೆ. ಜ್ವರ, ವಾಂತಿ, ದಣಿವು ಅಥವಾ ಚಡಪಡಿಕೆ ಇರುವ ಮಕ್ಕಳಲ್ಲಿ ಪಾಲಕರು ಸಾಮಾನ್ಯವಾಗಿ ಸ್ವಯಂ-ಔಷಧಿ ಕ್ರಮವನ್ನು ಆರಿಸಿಕೊಳ್ಳುತ್ತಾರೆ. ಇದು ದೇಶದಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ತಪ್ಪಾಗಿರುತ್ತದೆ. ನ್ಯುಮೋನಿಯಾ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳಿಗೆ ಆರೋಗ್ಯ ಸೇವೆ ಪೂರೈಸುವವರಿಂದ ಆರಂಭಿಕ ಹಂತದ ಚಿಕಿತ್ಸೆ ಸಾವಿನ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಅರಿತುಕೊಳ್ಳಲಾಗಿದೆ.

ಸಾಮಾನ್ಯವಾಗಿ ಸೋಂಕು ಉಂಟಾದ ಎರಡು ಅಥವಾ ಮೂರು ದಿನಗಳ ನಂತರ ಕಾಣಿಸಿಕೊಳ್ಳುವ ನ್ಯುಮೋನಿಯಾದ ಲಕ್ಷಣ ಗಳಲ್ಲಿ ಜ್ವರ, ಬೆವರುವಿಕೆ, ಶೀತ ಜೊತೆಗೆ ನಡುಕ ಮತ್ತು ಉಸಿರಾಟದ ತೊಂದರೆಗಳು ಸೇರಿರುತ್ತವೆ.

ನ್ಯುಮೋನಿಯಾದ ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ:
• ವೇಗವಾದ ಅಥವಾ ಕಷ್ಟಪಟ್ಟು ಉಸಿರಾಡುವುದು
• ಕೆಮ್ಮು (ಕಫದೊಂದಿಗೆ)
• ಕೆಮ್ಮುವಾಗ ಅಥವಾ ಗಟ್ಟಿಯಾಗಿ ಉಸಿರಾಡುವಾಗ ಎದೆ ನೋವು
• ಉಬ್ಬಸ(ವೀಝಿಂಗ್)
• ತುಟಿಗಳು ಅಥವಾ ಉಗುರುಗಳು ನೀಲಿಗಟ್ಟುವುದು

ಸಾಮಾನ್ಯವಾಗಿ ಈ ಮೇಲೆ ಹೇಳಲಾದ ರೋಗಲಕ್ಷಣಗಳನ್ನು ಆಧರಿಸಿ ನ್ಯುಮೋನಿಯಾದ ರೋಗನಿರ್ಣಯ ಕೈಗೊಳ್ಳಲಾಗುತ್ತದೆ. ಸೋಂಕಿನ ಪ್ರಮಾಣ ತಿಳಿಯಲು ಮತ್ತು ನಿರ್ಧರಿಸಲು ಎದೆಯ ಎಕ್ಸ್-ರೇ ಅಗತ್ಯವಾಗಬಹುದು. ಶೀತ, ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳಿಗೆ ಕಾರಣವಾಗುವ ವೈರಸ್‌ಗಳಿಂದ ನ್ಯುಮೋನಿಯಾದ ಬಹುತೇಕ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ನ್ಯುಮೋನಿಯಾ ಸಾಂಕ್ರಾಮಿಕ ರೋಗವಲ್ಲ, ಆದರೆ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅದು ಹರಡಬಹುದು. ಸೋಂಕಿನಿAದ ಕೂಡಿರುವ ಪಾತ್ರೆಗಳು, ಕುಡಿಯುವ ನೀರು ಮತ್ತು ಸಾಮಾನ್ಯ ಸಂಪರ್ಕ ಸ್ಥಳಗಳಾದ ಬಾಗಿಲ ಹಿಡಿಗಳು, ರೇಲಿಂಗ್‌ಗಳು ಇತ್ಯಾದಿಗಳ ಸಂಪರ್ಕದ ಮೂಲಕವೂ ಈ ರೋಗದ ಸೋಂಕಿಗೆ ಗುರಿಯಾಗಬಹುದು.

ಸಾಕಷ್ಟು ಪ್ರಮಾಣದ ವಿಶ್ರಾಂತಿ ಮತ್ತು ಜಲಸೇವನೆಯೊಂದಿಗೆ ದೇಹಕ್ಕೆ ನೀರು ಸೇರುವಂತೆ ಮಾಡುವುದು ಹಾಗೂ ಕೆಮ್ಮು ಮತ್ತು ಜ್ವರವನ್ನು ನಿಯಂತ್ರಿಸಲು ರೋಗಲಕ್ಷಣದ ಚಿಕಿತ್ಸೆಯನ್ನು ಹೊರತುಪಡಿಸಿ, ವೈರಲ್ ನ್ಯುಮೋನಿಯಾಗೆ ಯಾವುದೇ ನಿರ್ದಿಷ್ಟ ಔಷಧಿ ಇರುವುದಿಲ್ಲ. ವೈರಲ್ ನ್ಯುಮೋನಿಯಾದಲ್ಲಿ ದೇಹಸ್ಥಿತಿ ಸಾಮಾನ್ಯವಾಗಿ ಕೆಲವು ದಿನಗಳ ನಂತರ ಸುಧಾರಿಸುತ್ತದೆ, ಆದರೆ ಕೆಮ್ಮು ಹಲವಾರು ವಾರಗಳವರೆಗೆ ಇರಬಹುದು. ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಲ್ ನ್ಯುಮೋನಿಯಾದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಕರವಾದ ಕಾರಣ, ದ್ವಿತೀಯಕ ಸೋಂಕು ತಡೆಯುವುದಕ್ಕೆ ಆ್ಯಂಟಿಬಯಾಟಿಕ್ ಔಷಧಗಳನ್ನು ವೈದ್ಯರು ನೀಡುವರು.

ಯಾರಿಗೆ ಬೇಕಾದರೂ ನ್ಯುಮೋನಿಯಾ ಸೋಂಕು ಉಂಟಾಗಬಹುದು. ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ, ಅಸ್ತಮಾ ಹೊಂದಿರುವ ಮತ್ತು ಅಕಾಲಿಕವಾಗಿ ಜನಿಸಿದ ಶಿಶುಗಳು ಬೇರೆ ಮಕ್ಕಳಿಗಿಂತ ನ್ಯುಮೋನಿಯಾಗೆ ತುತ್ತಾಗುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಬಹುತೇಕ ಆರೋಗ್ಯವಂತ ಮಕ್ಕಳು ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಬಲದ ಮೇಲೆ ನ್ಯುಮೋನಿಯಾವನ್ನು ಎದುರುಸುತ್ತಾರೆ, ಆದರೆ ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳು ನ್ಯುಮೋನಿಯಾಗೆ ತುತ್ತಾಗುವ ಉನ್ನತ ಅಪಾಯ ಹೊಂದಿರು ತ್ತಾರೆ. ಅಪೌಷ್ಟಿಕತೆ ಅಥವಾ ಅಪೌಷ್ಟಿಕತೆಯಿಂದ ಮಗುವಿನ ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳಬಹುದು. ಅದರಲ್ಲೂ ವಿಶೇಷವಾಗಿ ಕನಿಷ್ಠ ಆರು ತಿಂಗಳವರೆಗೆ ಎದೆಹಾಲು ನೀಡದ ಶಿಶುಗಳಲ್ಲಿ ಈ ಅಪಾಯ ಹೆಚ್ಚಿಸುತ್ತದೆ.

ಮಗುವಿಗೆ ನ್ಯುಮೋನಿಯಾ ಬರುವ ಸಾಧ್ಯತೆ ಕಡಿಮೆ ಮಾಡಲು ನಿಗದಿಪಡಿಸಿರುವಂತೆ ಸಮಯಕ್ಕೆ ಸರಿಯಾಗಿ ಲಸಿಕೆ ಅತ್ಯಗತ್ಯ ವಾಗಿರುತ್ತದೆ. ಏಕೆಂದರೆ ಇದು ಮಗುವಿಗೆ ಎಚ್‌ಐಬಿ. ನ್ಯುಮೋಕೊಕಸ್, ದಡಾರ ಮತ್ತು ನಾಯಿಕೆಮ್ಮು (ಪೆರ್ಟುಸಿಸ್) ವಿರುದ್ಧ ರಕ್ಷಣೆ ನೀಡುತ್ತದೆ. ಮಗುವಿಗೆÀ ನೈಸರ್ಗಿಕ ರೋಗ ನಿರೋಧಕತೆ ಬೆಳೆಸಲು ಉತ್ತಮ ಮಾರ್ಗವೆಂದರೆ ಜೀವನದ ಮೊದಲ 6 ತಿಂಗಳವರೆಗೆ ಸ್ತನ್ಯಪಾನ ಸೇರಿದಂತೆ ಸಾಕಷ್ಟು ಪೋಷಣೆ ನೀಡುವುದಾಗಿರುತ್ತದೆ. ಈ ಮೂಲಕ ಸಾಮಾನ್ಯ ಕಾಯಿಲೆಗಳ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದಾಗಿರುತ್ತದೆ. ನಿಮ್ಮ 6 ತಿಂಗಳೊಳಗಿನ ಮಗುವಿಗೆ ಉಸಿರಾಟದ ತೊಂದರೆ ಅಥವಾ 102ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಾಗಿ ದೀರ್ಘಕಾಲದವರೆಗೆ ಜ್ವರ ಇದ್ದರೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯಿರಿ, ಅದು ನ್ಯುಮೋನಿಯಾ ಸೋಂಕು ಆಗಿರಲೂಬಹುದು.