ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಇಂಥ ಸನ್ನಿವೇಶಗಳನ್ನು ಬಹುಶಃ ಹಳೆಯ ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ. ಆಗ ಶ್ರೀಮಂತರಾಗಲಿ ಬಡವರಾಗಲಿ, ರೋಗಿಯನ್ನು ನೋಡಲು ವೈದ್ಯರೇ ಅವರ ಮನೆಗಳಿಗೆ ಹೋಗುತ್ತಿದ್ದರು. ಆದರೆ ಈಗ ಆ ಪರಿಪಾಠವೇ ಮರೆತು ಹೋಗಿ, ರೋಗಿಗಳೇ ವೈದ್ಯರ ಮನೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಅಲೆಯುವಂತೆ ಆಗಿದೆ. ಇದರಿಂದ ವೈದ್ಯ ಮತ್ತು ರೋಗಿ ನಡುವಿನ
ಮಾನವೀಯ ಸಂಬಂಧ ಮರೆಯಾಗಿ ವಾಣಿಜ್ಯ ಮತ್ತು ವ್ಯವಹಾರಗಳ ಮೇಲಾಟ ಹೆಚ್ಚಾಗಿದೆ.
ಇಂಥ ಅನಾರೋಗ್ಯ ಸಾಮಾಜಿಕ ಸ್ಥಿತಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಬೆಂಗಳೂರಿನ ನರ್ಚರ್ (ಆರೈಕೆ ) ಆಸ್ಪತ್ರೆ, ಸದೊಂದು
ಪ್ರಯೋಗಕ್ಕೆ ಕೈಹಾಕಿದೆ. ನರ್ಚರ್ ಎಂದರೆ ಅಮ್ಮನ ಆರೈಕೆ. ಹಿಂದೆ ಅಮ್ಮನ ಮನೆಯಲ್ಲಿ ಆಗುತ್ತಿದ್ದ ಹೆರಿಗೆಯ ಹಾಗೆ ಅದೇ
ಮುತುವರ್ಜಿಯಿಂದ ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳೊಂದಿಗೆ ಹೆರಿಗೆ ಮಾಡಿಸುವ ವಿನೂತನ ಸೇವಾ ಸೌಲಭ್ಯವನ್ನು ನರ್ಚರ್ ಆಸ್ಪತ್ರೆ ಆರಂಭಿಸಿದೆ.
ಹಾಗಂತ ಈ ಆಸ್ಪತ್ರೆ ರೋಗಿಯ ಮನೆಗೆ ಆಂಬುಲೆನ್ಸ್ ಕಳುಹಿಸಿ ಭಾರೀ ಮೊತ್ತದ ಬಿಲ್ ನೀಡದೇ ಅಗತ್ಯ ವೈದ್ಯಕೀಯ ಸಲಹೆ
ಮತ್ತು ಚಿಕಿತ್ಸೆ ನೀಡಿ ಧೈರ್ಯ ತುಂಬಲಿದೆ. ಅದಕ್ಕಿಂತ ಮುಖ್ಯವಾಗಿ ವೈದ್ಯಕೀಯ ಅರಿವು ಮೂಡಿಸಿ, ಸುಖವಾಗಿ ಹೆರಿಗೆ ಮಾಡಿಸ ಲಿದ್ದು ಮಗುವಿನ -ಟೋಶೂಟ್ ಹಾಗೂ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿಸಿ ಅಂದಹಾಗೆ ರಾಜಾಜಿನಗರ ಎರಡನೇ ಬ್ಲಾಕ್ನ ಕಾರ್ಡ್ ರೋಡ್ನಲ್ಲಿ ಇರುವ ನರ್ಚರ್ ಆಸ್ಪತ್ರೆ ಆರಂಭದ ಉದ್ದೇಶವೇ ಒಂದು ವಿಶೇಷ. ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಸವ ಕಾಲದ ಸಾವು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಹೆಚ್ಚುತ್ತಿರುವ ಸೀರೋಗಗಳನ್ನು ಪರಿಹಾರಗೊಳಿಸುವ ದೂರಗಾಮಿ ಉದ್ದೇಶದೊಂದಿಗೆ ನರ್ಚರ್ ಆಸ್ಪತ್ರೆ ಆರಂಭಿಸಲಾಗಿದೆ.
ಅಂದರೆ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ೧೨ನೇ ವಯಸ್ಸಿನಿಂದ ೧೮ನೇ ವಯಸ್ಸಿನವರೆಗೂ ವೈದ್ಯಕೀಯ ಸಲಹೆ
ಅನಿವಾರ್ಯ ಇರುತ್ತದೆ. ಈ ವಯಸ್ಸಿನಲ್ಲಿ ಆಗುವ ಬದಲಾವಣೆಗಳು ಹೆಣ್ಣು ಮಕ್ಕಳ ಮಾನಸಿಕ ಮತ್ತು ಬೌದ್ಧಿಕತೆ ಮೇಲೆ
ಸಾಕಷ್ಟು ಪರಿಣಾಮ ತರುತ್ತವೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳು ಈ ವಯಸ್ಸಿನಲ್ಲಿ ಸ್ತ್ರೀ ರೋಗ ಸಂಬಂಧಿ ಸಮಸ್ಯೆಗಳನ್ನು ಹೇಳಿಕೊಳ್ಳುವುದಿಲ್ಲ. ಇನ್ನು ವೈದ್ಯಕೀಯ ಸಲಹೆ ಪಡೆಯುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಹೆಣ್ಣು ಮಕ್ಕಳು ಅತಿ ಚಿಕ್ಕ
ವಯಸ್ಸಿನಲ್ಲಿ ಅಪಾಯಕಾರಿ ಸ್ತ್ರೀ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲೆಂದೇ ನರ್ಚರ್ ಆಸ್ಪತ್ರೆ ಜನ್ಮತಾಳಿದೆ. ಅಷ್ಟೇ ಅಲ್ಲ ಇಂಥ ಅನೇಕ ಸಮಸ್ಯೆಗಳಿಗೆ ಉಚಿತ ಪರಿಹಾರ ನೀಡಲು ನರ್ಚರ್ ಆಸ್ಪತ್ರೆ ವೈದ್ಯರು. ಸರ್ಕಾರಿ
ಶಾಲೆಗಳಿಗೆ ಭೇಟಿ ನೀಡಿ ಹೆಣ್ಣು ಮಕ್ಕಳಿಗೆ ಉಚಿತ ವೈದ್ಯಕೀಯ ಸಲಹೆ, ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡುವ ದೊಡ್ಡ ಅಭಿಯಾನವನ್ನೇ ಆರಂಭಿಸಲು ಸಜ್ಜಾಗಿದೆ. ಇಂಥ ಹತ್ತು ಹಲವು ವೈದ್ಯಕೀಯ ಸೇವೆಗಳೊಂದಿಗೆ ಮುನ್ನಡೆಯುತ್ತಿರುವ ಈ ಆಸ್ಪತ್ರೆಯ ಸಾರಥಿ ಡಾ.ಅಂಬುಜಾ ಗೋವಿಂದ ರಾಜ್ ಅವರ ವೈದ್ಯಕೀಯ ಸೇವಾಭಾವ ಮತ್ತು ಮೂಲಕ ಚಿಕಿತ್ಸೆ ಪರಿಣಾಮ ಕಾರಿಯಾಗಿ ಉತ್ತಮ ಫಲಿತಾಂಶ ಬರುವಂತೆ ಮಾಡಲಾಗುತ್ತದೆ.
ಆಸ್ಪತ್ರೆಯ ಮುಖ್ಯಸ್ಥೆ ಡಾ. ಅಂಬುಜಾ ಅವರು ಸೇರಿದಂತೆ ಸುಮಾರು ೧೫ ತಜ್ಞ ವೈದ್ಯರಿದ್ದು ಇವರ ಅನುಭವ ಮತ್ತು ಸಾಧನೆಗಳೇ ಆಸ್ಪತ್ರೆಯ ಹೆಗ್ಗಳಿಕೆ. ಸ್ತ್ರೀರೋಗವಷ್ಟೇ ಅಲ್ಲದೆ ಇತರ ಯಾವುದೇ ಆರೋಗ್ಯ ಸಮಸ್ಯೆಯಿದ್ದಲ್ಲಿ ಎಲ್ಲ ವಯಸ್ಸಿನ ಸ್ತ್ರೀಯರು ಇಲ್ಲಿನ ‘ವೆಲ್ ವುಮೆನ್ ಸೆಂಟರ್’ಗೆ ಭೇಟಿ ನೀಡಬಹುದು. ಒಟ್ಟಾರೆ ಇದೊಂದು ಹೆಂಗಳೆಯರ ಆಸ್ಪತ್ರೆ. ಸಮಸ್ಯೆ ಏನೇ ಇರಲಿ ರೋಗಿ ಸ್ತ್ರೀ ಆದರೆ ಇಲ್ಲಿಗೆ ಬರಬಹುದು.
ಸಾಧನೆಯೇ ಈ ಆಸ್ಪತ್ರೆಯ ವಿಶೇಷ ಆಕರ್ಷಣೆ. ಎಲ್ಲರಿಗೂ ನೈಸರ್ಗಿಕ ಪ್ರಸವ ಪ್ರಕ್ರಿಯೆ (ನಾರ್ಮಲ್ ಡೆಲಿವರಿ) ಆಗುವಂತೆ ಮಾಡುವುದೇ ಡಾ. ಅಂಬುಜಾ ಅವರ ಮೂಲ ಮಂತ್ರ ಹಾಗೂ ಧ್ಯೇಯ. ಹಲವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಿಸೇರಿ ಯನ್ ಮಾಡುತ್ತಾರೆ.
ಮೊದಲಿಗೇ ಕೃತಕ ಗರ್ಭಧಾರಣೆಯ (ಐಊ) ಮೊರೆ ಹೋಗದೇ ದಂಪತಿಗಳಿಗೆ ನೈಸರ್ಗಿಕವಾಗಿ ಗರ್ಭಧಾರಣೆಯಾಗಲು ಕೌನ್ಸೆ ಲಿಂಗ್ ಮಾಡುತ್ತಾರೆ. ಹಂತ ಹಂತವಾಗಿ ಪ್ರಯತ್ನ ಮಾಡಿ ಅನಿವಾರ್ಯ ವಾದರೆ ಮಾತ್ರ ಕೃತಕ ಗರ್ಭಧಾರಣೆಯನ್ನು (ಐಊ) ಮಾಡುತ್ತಾರೆ. ನಿಸರ್ಗಕ್ಕೆ ಒಂದು ಅವಕಾಶ ನೀಡದೇ ಏನನ್ನೂ ಮಾಡಬಾರದು ಎನ್ನುವ ಅಪರೂಪದ ವೈದ್ಯರು ಡಾ. ಅಂಬುಜಾ ಅವರು. ಅವರ ಕೈಯಲ್ಲಿ ನೀವು ಸೇಫ್!
ಉಪಕರಣಗಳದೆ ವಿಶೇಷ
ನರ್ಚರ್ ಆಸ್ಪತ್ರೆಯಲ್ಲಿ ೧೮ ಶುಶ್ರೂಷಾ ಕೊಠಡಿಗಳಿದ್ದು, ಯೋಗ ಮತ್ತು ಆಪ್ತ ಸಮಾಲೋಚನೆಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಎಲ್ಲಾ ರೀತಿಯ ಪರೀಕ್ಷೆ ಮತ್ತು ವಿವಿಧ ರೀತಿಯ ರೋಗ ಪತ್ತೆ ವ್ಯವಸ್ಥೆಯು ಲಭ್ಯವಿದ್ದು ಇದಕ್ಕಾಗಿ ಸುಧಾರಿತ ತಂತ್ರeನದ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಅದರಲ್ಲೂ ತೀವ್ರನಿಗಾ ಘಟಕ, ಹೆರಿಗೆ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಶುಚಿತ್ವ ಮತ್ತು ಲೇಟೆಸ್ಟ್ ಉಪಕರಣಗಳೇ ಆಸ್ಪತ್ರೆಯ ವಿಶೇಷ.
ಆಸ್ಪತ್ರೆ ವಿಶೇಷವೇನು ?
ನಿಮಗೊಂದು ಮಧುರ ನೆನಪನ್ನು ನೀಡಲಿದೆ. ಇವೆಲ್ಲವನ್ನೂ ಕೈಗೆಟುಕುವ ಬೆಲೆಯಲ್ಲಿ ನೀಡುವ ಪ್ರಯತ್ನ ಇವರದು.
೦೦
ಸ್ತ್ರೀ ರೋಗಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಮಹಿಳಾ ಪ್ರಧಾನ ಆಸ್ಪತ್ರೆ ಇದಾಗಿದೆ. ಇಲ್ಲಿ ದಾಂಪತ್ಯ ಹಾಗೂ ಸಂತಾನವೃದ್ಧಿ ಆರಂಭಿಕ ಸಮಸ್ಯೆಗಳಿಂದ ಹಿಡಿದು ಸ್ತ್ರೀಯರ ಮುಟ್ಟು ನಿಲ್ಲುವ ಕಾಲದವರೆಗಿನ ತೊಂದರೆ ಗಳನ್ನು ನಿವಾರಿಸಲಾಗುತ್ತದೆ. ವಿಶೇಷ ಎಂದರೆ ಇಲ್ಲಿ ರೋಗಿಗಳಿಗೆ ಬರಿ ಔಷಧ ಕೊಡುವುದು ಮಾತ್ರವಲ್ಲ ಯೋಗದ ಮೂಲಕ ರೋಗ ಗುಣಪಡಿಸಿಕೊಳ್ಳುವ ಶಕ್ತಿಯನ್ನು ರೋಗಿಗೆ ಬರುವಂತೆ ಮಾಡಲಾಗುತ್ತದೆ. ಗರ್ಭಿಣಿಯರಿಗೆ ಬೇಕಾದ ಔಷಧೋಪಚಾರ ಮತ್ತು ಆಪ್ತ ಸಮಾಲೋಚನೆಗಳನ್ನು ನೀಡುತ್ತಾರೆ.
೦೦
ಅಪರೂಪದ ವೈದ್ಯೆ ಡಾ.ಅಂಬುಜಾ
ಆಸ್ಪತ್ರೆಯ ಮಾಲೀಕರಾದ ಡಾ. ಅಂಬುಜಾ ಅವರು ಎಂ ಬಿ ಬಿ ಎಸ್ , ಹಾಗೂ ಎಂ ಎಸ್ (ಒ.ಬಿ.ಜಿ.)ಮತ್ತು ಅನೇಕ ಫೆಲೊಶಿಪ್ ಗಳನ್ನು ಮಾಡಿದ್ದಾರೆ. ಸುಮಾರು ೨೦ ವರ್ಷಗಳಿಗೂ ಹೆಚ್ಚಿನ ಸೇವಾ ಅನುಭವ ಹೊಂದಿರುವ ಅಂಬುಜಾ ಅವರು ರೋಗಿಗಳಿಗೆ ಉಪಚರಿಸುವ ರೀತಿಯೇ ವಿಶೇಷ. ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಿರುವ ಅಂಬುಜಾ ಅವರು ಸೊಪುರ ಮತ್ತು ಪುಣೆಯಲ್ಲಿ ಸಲ್ಲಿಸಿದ ವೈದ್ಯಕೀಯ ಸೇವೆಯಿಂದ ಅಪಾರ ಮೆಚ್ಚುಗೆ ಗಳಿಸಿದ್ದಾರೆ.
ಆನಂತರ ೨೦೦೭ರಿಂದ ಬೆಂಗಳೂರಿನ ಕಿಮ್ಸ್, ಸೇಂಟ್ ತೆರೇಸಾ, ಜಿ.ಎಂ. ಮಣಿಪಾಲ್ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸಿ ೫೦೦೦ ಕ್ಕೂ ಹೆಚ್ಚು ಹೆರಿಗೆ ಹಾಗೂ ೧೦೦೦ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳ ಅಪಾರ ಅನುಭವ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರು ಮತ್ತು ಕೃಷಿ ಕ್ಷೇತ್ರದ ಹೆಣ್ಣು ಮಕ್ಕಳಲ್ಲಿ ಉಂಟಾಗುತ್ತಿದ್ದ ಸ್ತ್ರೀರೋಗ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡಿ ಸೈ ಎನಿಸಿಕೊಂಡಿದ್ದ ಅಂಬುಜಾ ವೈದ್ಯಕೀಯ ಕ್ಷೇತ್ರದ ಅಪರೂಪದ ವೈದ್ಯೆಯಾಗಿದ್ದಾರೆ. ಇದೀಗ ಕರ್ನಾಟಕ ದಲ್ಲಿ ತಮ್ಮದೇ ವಿಶೇಷ ವೈದ್ಯಕೀಯ ಕೌಶಲ್ಯದೊಂದಿಗೆ ಸ್ತ್ರೀ ರೋಗಗಳನ್ನು ಗುರುತಿಸಿ ಪರಿಹಾರ ನೀಡಲು ಮುಂದಾಗಿದ್ದಾರೆ.