Saturday, 14th December 2024

ಪಾಕಶಾಲೆ: ಅಡಿಗರ ಪಾಕಪಯಣದ ಹೊಸ ಬ್ರ‍್ಯಾಂಡ್

ತೇಜಸ್ವಿನಿ ಸಿ.ಶಾಸ್ತ್ರಿ

ಉದ್ಯಾನನಗರಿಯ ಯಾವುದೇ ಏರಿಯಾಕ್ಕೆ ಹೋದರೂ ಅಲ್ಲೊಂದು ಅಡಿಗಾಸ್ ಹೋಟೆಲ್ ಪರಿಚಿತ ಲ್ಯಾಂಡ್ ಮಾರ್ಕ್ ಆಗಿ ನಿಂತಿದೆ. ಈ ಉದ್ಯಮದಲ್ಲಿ ಹೆಮ್ಮರವಾಗಿ ಬೆಳೆದಿರುವ ವಾಸುದೇವ್ ಅಡಿಗ ಇಂದು ಪಾಕಶಾಲೆ ಹಾಗೂ ನಂದಿ ಉಪಚಾರ್ ಎಂಬ ಎರಡು ಹೊಸ, ವಿಶಿಷ್ಟ ಆಹಾರ ಬ್ರ್ಯಾಂಡ್‌ಗಳನ್ನು
ನಾಡಿಗೆ ಪರಿಚಯಿಸಿದ್ದಾರೆ.

ಶುದ್ಧ, ಸಾಂಪ್ರದಾಯಿಕ, ಸಸ್ಯಹಾರಿ ಖಾದ್ಯಗಳೊಂದಿಗೆ ಭಾರತೀಯ ಆತಿಥ್ಯದ ರುಚಿ ಸವಿಯ ಬೇಕೆನಿಸಿ ದಾಕ್ಷಣ ನೆನಪಾಗುವ ಹೆಸರು ‘ಪಾಕಶಾಲೆ ’. ಕುಟುಂಬ, ಸ್ನೇಹಿತರು, ಬಂಧುಗಳು, ಅತಿಥಿಗಳನ್ನು ಯೋಚನೆ ಮಾಡದೇ ಊಟಕ್ಕೆ ಕರೆದೊಯ್ಯ ಬಹುದಾದ ಸ್ಥಳವೆನಿಸಿರುವ ಪಾಕಶಾಲೆಯಲ್ಲಿನ ಆ ಆಪ್ತವಾಗಿ ಬಡಿಸುವ, ನಗುತ್ತಾ ಉಪಚರಿಸುವ ವಾತಾವರಣವೇ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.

ಹೌದು, ‘ಪಾಕಶಾಲೆ’ ಇವತ್ತು ಕೇವಲ ಹೋಟೆಲ್ ಆಗಿ ಉಳಿದಿಲ್ಲ. ಬದಲಿಗೆ ಸಸ್ಯಾಹಾರಿ ಆಹಾರ ಕ್ಷೇತ್ರದಲ್ಲಿ ದಕ್ಷಿಣ ಭಾರತದ ಪ್ರತಿಷ್ಠಿತ, ಜನಪ್ರಿಯ, ವಿಶಿಷ್ಟ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ; ಒಂದು ಕಾಲದ ಉಡುಪಿ ಹೋಟೆಲ್‌ಗಳಂತೆಯೇ! ಬೆಂಗಳೂರಷ್ಟೇ ಅಲ್ಲದೇ, ದಕ್ಷಿಣ ಭಾರತದಾದ್ಯಂತ ೩೦ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಸಸ್ಯಾಹಾರಿ ಹೋಟೆಲ್ ಸಂಸ್ಕೃತಿ ಬಿಂಬಿಸುವ ಪಾಕಶಾಲಾ ಹೆರಿಟೇಜ್ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಪಾಕಶಾಲಾ ಹೆರಿಟೇಜ್‌ನಲ್ಲಿ ಪ್ರಾಚೀನ ಕಾಲದ ವಸ್ತುಗಳನ್ನು ಪರಿಚಯಿಸುವ ಜತೆಗೆ ಪ್ರಾಚೀನ ಶೈಲಿಯ ಕಲಾಕೃತಿಗಳು ಮಾರಾಟಕ್ಕೂ ಇಡಲಾಗಿದೆ.

ಈ ಹೋಟೆಲ್‌ನ ವಾಸ್ತುಶಿಲ್ಪವನ್ನೂ ಪ್ರಾಚೀನ ಕಾಲದ ರೀತಿಯಲ್ಲೇ ನಿರ್ಮಿಸಲಾಗಿದೆ. ಭಾರತದ ಸಸ್ಯಾಹಾರ ಹೋಟೆಲ್ ಉಧ್ಯಮದಲ್ಲಿ ದಶಕಗಳಿಂದ ಛಾಪು ಮೂಡಿಸಿದವರು. ಬಿಎಮ್‌ಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ ಅಡಿಗರಿಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶಗಳು ದೊರೆತರೂ ಅವರು ಆರಿಸಿದ್ದು ಆಹಾರ ಉದ್ಯಮವನ್ನು.

ತಾಯಿ ಶ್ರೀಮತಿ ಸರಸ್ವತಿ, ಸಾಂಪ್ರದಾಯಿಕ ಅಡುಗೆಯಲ್ಲಿ ಇನ್ನಿಲ್ಲದ ಪ್ರಾವಿಣ್ಯತೆ ಹೊಂದಿದ್ದರು. ಅದವರ ಜನ್ಮಜಾತ ಕೌಶಲ. ಅವರ ಕನಸಿನ ಕೂಸು
‘ಬ್ರಾಹ್ಮಣರ ಕಾಫಿ ಬಾರ್’ ೧೯೮೩ರಲ್ಲಿ ಆರಂಭವಾಗಿದ್ದು ಇಂದಿಗೂ ಬೆಂಗಳೂರಿಗರ ಉಪಾಹಾರದ ಹಾಟ್ ಫೇವರೀಟ್. ಮೃದುವಾದ ಇಡ್ಲಿ- ಬಾಯಿಗಿಟ್ಟರೆ
ಕರಗುವ ಉದ್ದಿನ ವಡೆ, ವಿಶಿಷ್ಟ ರುಚಿಯ ನೀರು ಎಲ್ಲರಿಗೂ ಎಲ್ಲ ರೀತಿಯ ಆಹಾರ ಪರಿಚಯಿಸುವುದು ನಮ್ಮ ಉದ್ದೇಶ.

ಬೆಂಗಳೂರಿಗರಿಗೆ ಊರಿನ ಸ್ವಾದ ಹಾಗೂ ಊರಿನ ಜನರಿಗೆ ಬೆಂಗಳೂರಿನ ಸ್ವಾದ ತಿಳಿಯಪಡಿಸಲು ಪ್ರಯತ್ನಿಸುತ್ತಿದ್ದೇವೆ. ಕೆಟರಿಂಗ್ ಬಗ್ಗೆಯೂ ನಾವು ಗಮನ ಹರಿಸುತ್ತೇವೆ. ನಮ್ಮ ಮುಖ್ಯ ಆಸಕ್ತಿಗಳಲ್ಲಿ ಅದೂ ಒಂದು.

-ವೈಜಯಂತಿ ಅಡಿಗ

ಚಟ್ನಿಯ ಮೇಲೆ ಘಮಘಮಿಸುವ ಬಿಸಿ ಕಾಫಿ ಹೀರಲು ಜನ ಬೆಳ್ಳಂಬೆಳಗ್ಗೆಯೇ ಸಾಲುಗಟ್ಟಿ ನಿಂತಿರುತ್ತಾರೆ. ಅಲ್ಲಿಂದ ಶುರುವಾದ ಅಡಿಗರ ಪಾಕ ಪ್ರೀತಿ ಇಂದು
ಹೆಮ್ಮರವಾಗಿ ನಿಂತಿದೆ. ೧೯೯೩ರಲ್ಲಿ ತಂದೆ ತಾಯಿಯವರ ಪ್ರೋತ್ಸಾಹದಿಂದ ‘ಅಡಿಗಾಸ್’ ಎಂಬ ಸ್ವಂತ ಉದ್ಯಮವನ್ನು ಅಡಿಗರು ಆರಂಭಿಸಿದರು. ಹೊಸತನಕ್ಕೆ ತೆರೆದುಕೊಳ್ಳಲು ಎಂದಿಗೂ ಹಿಂಜರಿಯದ ವಾಸುದೇವ್ ಅಡಿಗರು, ತಮ್ಮ ಹೋಟೆಲ್‌ಗಳಲ್ಲಿ ಹೊಸಹೊಸ, ಕ್ರಿಯಾಶೀಲ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ.

ವರ್ಷಗಳ ಹಿಂದೆಯೇ ದರ್ಶಿನಿ ಹೋಟೆಲ್‌ಗಳೊಂದಿಗೆ ಎಸಿ ಹಾಲ್‌ಗಳು, ಬಫೆಗಳು, ಪಾರ್ಟಿ ಹಾಲ್‌ಗಳ ಸಂಯೋಜನೆ ಮಾಡುವ ಪ್ರಯತ್ನವನ್ನು ಅಡಿಗರು
ಮಾಡಿ ಗೆದ್ದಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಪಳಗುತ್ತ, ‘ಅಡಿಗಾಸ್ ಫುಡ್ ಚೈನ್’ ಅನ್ನು ವಿಸ್ತರಿಸುತ್ತ ಬಂದರು. ಪರಿಣಾಮ ಇಂದು ನಾವು ಬೆಂಗಳೂರಿನಾದ್ಯಂತ ೨೫ಕ್ಕೂ ತೆರೆದಿದ್ದು ಉಡುಪಿ, ಕುಂದಾಪುರ, ಕುಂಭಾಶಿ ಹಾಗೂ ಮುರ್ಡೇಶ್ವರದಲ್ಲಿ ಈಗ ಜನಪ್ರಿಯವಾಗಿವೆ. ಈ ಹೋಟೆಲ್‌ಗಳಲ್ಲಿ ದಕ್ಷಿಣ ಕನ್ನಡದ ಸವಿಯ ಜತೆಗೆ
ದೇಶ-ವಿದೇಶಗಳ ಹಲವು ವಿಶೇಷ ತಿನಿಸುಗಳನ್ನು ಹೆಚ್ಚು ಅಡಿಗಾಸ್ ಹೋಟೆಲ್ ಕಾಣಬಹುದು. ಉದ್ಯಾನ ನಗರಿಯ ಯಾವುದೇ ಏರಿಯಾಕ್ಕೆ ಹೋದರೂ
ಅಲ್ಲೊಂದು ಅಡಿಗಾಸ್ ಹೋಟೆಲ್ ಪರಿಚಿತ. ಈ ಉದ್ಯಮದಲ್ಲಿ ಹೆಮ್ಮರವಾಗಿ ಬೆಳೆದಿರುವ ವಾಸುದೇವ್ ಅಡಿಗ ಇಂದು ಪಾಕಶಾಲೆ ಹಾಗೂ ನಂದಿ
ಉಪಚಾರ್ ಎಂಬ ಎರಡು ಹೊಸ ಆಹಾರ ಬ್ರ್ಯಾಂಡ್ ಗಳನ್ನು ನಾಡಿಗೆ ಪರಿಚಯಿಸಿದ್ದಾರೆ.

ಚಂದು ರಾಯಭಾರಿ

ಕರ್ನಾಟಕದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ಸಿಹಿಕಹಿ ಖ್ಯಾತಿಯ ಪಾಕಪ್ರವೀಣ ಚಂದ್ರು, ಸದ್ಯ ಪಾಕಶಾಲಾ ಹೋಟೆಲ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸಿಹಿಕಹಿ ಚಂದ್ರು ಹಾಗೂ ವಾಸುದೇವ್ ಅಡಿಗ ಅವರ ಸ್ನೇಹ ೨೫ ವರ್ಷಗಳಿಗೂ ಮೀರಿದ್ದು. ಚಂದ್ರು ಅವರ ಈ ಕೊಡುಗೆ ಈ ಸ್ನೇಹಕ್ಕೆ ಸಾಕ್ಷಿ. ಚಂದ್ರು
ಅವರು ಪಾಕಶಾಲೆಯಲ್ಲಿ ‘ಇಡ್ಲಿ ಸಾಂಬಾರ್ ಡಿಪ್’ ಅನ್ನು ಮರೆಯದೇ ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಪಾಕಶಾಲೆಯಲ್ಲಿ ಅವರ ನೆಚ್ಚಿನ ಆಹಾರವೂ ಅದೇ ಎನ್ನುತ್ತಾರೆ. ಸಿಹಿಕಹಿ ಚಂದ್ರು ಅವರ ಪ್ರಾಯೋಗಿಕ ಅಡುಗೆಗಳನ್ನು ಈಗ ಪಾಕಶಾಲೆಯಲ್ಲಿ ಪರಿಚಯಿಸಲಾಗುತ್ತಿದೆ.

ಸೆಲೆಬ್ರಿಟಿಗಳಿಗೂ ಬೇಕು ಪಾಕಶಾಲೆ ಮೆನು ಹೋಟೆಲ್‌ಗಳಷ್ಟೇ ಅಲ್ಲದೇ ಕೇಟರಿಂಗ್ ಸೇವೆಗಳನ್ನೂ ಪಾಕಶಾಲೆ ಒದಗಿಸುತ್ತಿದೆ. ಮದುವೆ, ಸಮಾರಂಭ ಗಳು,
ಪಾರ್ಟಿಗಳು, ಕಾರ್ಪೋರೇಟ್ ಕಚೇರಿಗಳಿಗೆ ನಿತ್ಯವೂ ಇಲ್ಲಿನ ಆಹಾರ ಬೃಹತ್ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ, ಇಂಡಿಯನ್ ಫಾರ್ಮಸ್ಯುಟಿಕಲ್ ಕಾಂಗ್ರೆಸ್, ದಕ್ಷಿಣ ಭಾರತ ಚಾರ್ಟೆಡ್ ಅಕೌಂಟೆಂಟ್ ಸಮ್ಮೇಳನ…ಹೀಗೆ ಪರಿಚಯಿಸಲಾಗಿದೆ. ನಗರದ ಜನರಿಗೆ ಸಾಂಪ್ರದಾಯಿಕ ಅಡುಗೆ ಪರಿಚಯಿಸಿದಂತೆ ಕರಾವಳಿ ಜನರಿಗೆ ಆಧುನಿಕ ಪಾಕಪದ್ಧತಿ ಬಗ್ಗೆ ಪರಿಚಯ ನೀಡುವುದು ಇವರ ಉದ್ದೇಶವಾಗಿದೆ.

ನಂದಿ ಉಪಚಾರ್ 
ಪಾಕಶಾಲಾ ಎಲ್ಲೆಡೆ ಜನಪ್ರಿಯವಾಗುತ್ತಿದ್ದಂತೆಯೇ ಹೊಸ ಬ್ರ್ಯಾಂಡ್ ‘ನಂದಿ ಉಪಚಾರ್’ ಅನ್ನು ಅಡಿಗರು ಆರಂಭಿಸಿದ್ದಾರೆ. ಸದ್ಯ ಎನ್‌ಎಚ್ ೭ನ ದೇವನಹಳ್ಳಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ಎರಡು ಸ್ಥಳಗಳಲ್ಲಿ ನಂದಿ ಉಪಚಾರ್ ಇದೆ. ಇದು ಬಹುಪಾಕಪದ್ಧತಿಯ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ದರ್ಶಿನಿ ಅನುಭವದೊಂದಿಗೆ ಫಾಸ್ಟ್ ಫುಡ್‌ಗಳನ್ನೂ ನೀಡಲಾಗುತ್ತದೆ. ವಾರಾಂತ್ಯದಲ್ಲಿ ಕುಟುಂಬದೊಂದಿಗೆ ನಂದಿಬೆಟ್ಟದ ಕಡೆಗೆ ಪ್ರವಾಸಕ್ಕೆ ಹೋದರೆ ನಂದಿ ಉಪಚಾರ್ ಒಂದು ಅದ್ಭುತ ಸವಿಯ ಅನುಭವ ನೀಡುತ್ತದೆ. ಬ್ಯುಸಿನೆಸ್ ಮೀಟ್‌ಅಪ್‌ಗಳಿಗೂ ಹೇಳಿಮಾಡಿಸಿದಂತಹ
ಸ್ಥಳ ಇದಾಗಿದೆ.

ಬೃಹತ್ ಸಂಘಟನೆಗಳು, ಉದ್ದಿಮೆಗಳಿಗೆ, ದೇಶದ ದೊಡ್ಡ-ದೊಡ್ಡ ಸಮಾವೇಶಗಳಿಗೆ ಅಡಿಗರ ಪಾಕಶಾಲೆಯಿಂದಲೇ ಊಟೋಪಹಾರ ಹೋಗ ಬೇಕು. ಡಾ.
ರಾಜ್‌ಕುಮಾರ್ ಕುಟುಂಬ, ಇನೋಸಿಸ್ ನಾರಾಯಣ ಮೂರ್ತಿ, ಡಾ.ಚಂದ್ರಶೇಖರ್ ಕಂಬಾರ್, ಎಲ್.ಕೆ.ಆಡ್ವಾಣಿ ಯಂತಹ ಗಣ್ಯರ ಮನೆಗೂ ವಿಶೇಷ ಸಂದರ್ಭ ಗಳಲ್ಲಿ ಇವರ ಊಟವೇ ಪೂರೈಕೆಯಾಗುವುದು.

ನನ್ನ ಗ್ರಾಹಕರಿಗೆ ನನ್ನ ಭರವಸೆಯೆಂದರೆ, ರುಚಿಕರವಾದ ಸರಳ ಹಾಗೂ ತಾಜಾ ಆಹಾರವನ್ನು ಮನೆಯಲ್ಲಿ ಮಾಡುವಂತೆಯೇ ಕೈಗೆಟುಕುವ ಬೆಲೆಯಲ್ಲಿ
ನೀಡುವುದಾಗಿದೆ. -ವಾಸುದೇವ್ ಅಡಿಗ