ಪಾಕವಿಧಾನ : #
ಪಾಸ್ತಾ-ಒಂದು ಕಪ್
ಕಿತ್ತಳೆ ಪದರ
ರೆಡ್ ಬೆಲ್‍ಪೆಪ್ಪರ್(ಕೆಂಪು ದಪ್ಪಮೆಣಸಿನಕಾಯಿ)-40 ಗ್ರಾಮ್
ಈರುಳ್ಳಿ-ಒಂದು ಟೇಬಲ್ ಸ್ಪೂನ್(ಕತ್ತರಿಸಿರುವುದು)
ಬೆಳ್ಳುಳ್ಳಿ-ಒಂದು ಎಸಳು(ಕತ್ತರಿಸಿರುವುದು)
ಟೊಮೋಟೊ-100 ಗ್ರಾಮ್
ಟೊಮೋಟೊ ಕಚಪ್-ಒಂದು ಟೇಬಲ್ ಸ್ಪೂನ್
ಎಣ್ಣೆ- ಒಂದು ಟೀ ಸ್ಪೂನ್
ಪ್ರೊಸೆಸ್ಡ್ ಚೀಸ್-ಒಂದು ಟೀ ಸ್ಪೂನ್(ತುರಿದಿದ್ದು)
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳು ಮೆಣಸು ಪುಡಿ.
ಬಿಳಿ ಪದರ
ಬೆಣ್ಣೆ-1/2 ಟೇಬಲ್ ಸ್ಪೂನ್
ಮೈದಾ ಹಿಟ್ಟು-65 ಗ್ರಾಮ್
ಹಾಲು-200 ಎಂಎಲ್
ಪ್ರೊಸೆಸ್ಡ್ ಚೀಸ್-ಒಂದು ಟೀ ಸ್ಪೂನ್(ತುರಿದಿದ್ದು)
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳು ಮೆಣಸು ಪುಡಿ.
ಹಸಿರು ಪದರ
ಪಾಲಾಕ್ ಸೊಪ್ಪು(ಸ್ಪಿನಾಚ್)-1/4 ಕಪ್
ಪಾಸ್ರ್ಲಿ- 2-3 ಕಡ್ಡಿಗಳಷ್ಟು(ಕತ್ತರಿಸಿದ್ದು)
ಬೆಳ್ಳುಳ್ಳಿ-ಒಂದು ಎಸಳು
ಈರುಳ್ಳಿ-ಒಂದು ಟೇಬಲ್ ಸ್ಪೂನ್(ಕತ್ತರಿಸಿದ್ದು)
ಎಣ್ಣೆ-ಒಂದು ಟೇಬಲ್ ಸ್ಪೂನ್-
ಪ್ರೋಸೆಸ್ಡ್ ಚೀಸ್-ಒಂದು ಟೀ ಸ್ಪೂನ್(ತುರಿದಿದ್ದು)
ತಯಾರಿಸುವ ವಿಧಾನ :
ಕಿತ್ತಳೆ ಸಾಸ್: ಟಮೋಟೊ ಮತ್ತು ರೆಡ್‍ಬೆಲ್ ಪೆಪ್ಪರ್‍ಗಳಿಗೆ ಸ್ವಲ್ಪ ಎಣ್ಣೆ ಬಳಿಯಿರಿ. ಒಲೆಯ ಬೆಂಕಿಯ ಮೇಲೆ ಅದರ ಚರ್ಮ ಸ್ವಲ್ಪ ಸುಡುವವರೆಗೆ ಬೇಯಿಸಿ. ಅದು ತಂಪಾಗಲು ಬಿಡಿ. ನಂತರ ಹೊರ ಸಿಪ್ಪೆಯನ್ನು ತೆಗೆದುಬಿಡಿ. ಇವುಗಳನ್ನು ಚೆನ್ನಾಗಿ ನುಣ್ಣಗೆ ಪೇಸ್ಟ್ ಆಗುವಂತೆ ಅರೆದುಕೊಳ್ಳಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಪ್ಯಾನ್‍ನಲ್ಲಿ ಮಧ್ಯಮ ಬೆಂಕಿಯಲ್ಲಿ ಅದು ಬಣ್ಣ ಬಿಡುವವರೆಗೆ ಬೇಯಿಸಿ. ಪೇಸ್ಟ್ ಸೇರಿಸಿ ಒಂದು ನಿಮಿಷದವರೆಗೆ ಬೇಯಿಸಿ. ಟೊಮೊಟೊ ಕೆಚಪ್, ಚೀಸ್, ಉಪ್ಪು, ಮೆಣಸುಪುಡಿಗಳನ್ನು ರುಚಿಗೆ ತಕ್ಕಷ್ಟು ಹಾಕಿ ಮಿಶ್ರಣ ಮಾಡಿ. ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ.
ವೈಟ್ ಸಾಸ್ : ಪ್ಯಾನ್‍ನಲ್ಲಿ ಬೆಣ್ಣೆಯನ್ನು ಕರಗಿಸಿ. ಹಿಟ್ಟು ಸೇರಿಸಿ ಹುರಿಯಿರಿ. ನಂತರ ಸ್ವಲ್ಪ ಬಿಸಿಯಾಗಿರುವ ಹಾಲು ಸೇರಿಸಿ ಸತತವಾಗಿ ಮಿಶ್ರಣ ಮಾಡುತ್ತಿರಿ. ಗಂಟುಗಳಾಗದಂತೆ ನೋಡಿಕೊಳ್ಳಿ. ಚೀಸ್ ಸೇರಿಸಿ ತೊಲಸುವುದನ್ನು ಮುಂದುವರಿಸಿ. ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಸಾಸ್ ಗಟ್ಟಿಯಾದ ಮೇಲೆ ಒಲೆಯ ಮೇಲಿಂದ ತೆಗೆದು ಪಕ್ಕಕ್ಕೆ ಇಡಿ.
ಹಸಿರು ಸಾಸ್ : 200 ಮಿಲಿ ಲೀಟರ್ ನೀರನ್ನು ಕುದಿಸಿ. ಪಾಲಕ್ ಸೊಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ. ತಕ್ಷಣ ತಣ್ಣನೆಯ ನೀರಿಗೆ ಸೇರಿಸಿಕೊಳ್ಳಿ. ಇದನ್ನು ಪಾಸ್ರ್ಲಿ ಜೊತೆಗೆ ಪ್ಯೂರಿಯಂತೆ ಗ್ರೈಂಡ್ ಮಾಡಿಕೊಳ್ಳಿ. ಪ್ಯಾನ್‍ವೊಂದರಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಅವು ಬಣ್ಣ ಬಿಡುವವರೆಗೆ ಫ್ರೈ ಮಾಡಿ. ಪಾಲಾಕ್ ಮತ್ತು ಪಾಸ್ರ್ಲಿ ಪ್ಯೂರಿ, ಚೀಸ್ ಸೇರಿಸಿ ಒಂದು ನಿಮಿಷ ಬೇಯಿಸಿ. ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಒಲೆಯ ಮೇಲಿಂದ ತೆಗೆದು ಪಕ್ಕಕ್ಕೆ ಇಡಿ.
ಪಾಸ್ತಾ : ಒಂದು ಲೀಟರ್ ನೀರನ್ನು ದಪ್ಪಗಿನ ಪಾತ್ರೆಯಲ್ಲಿ ಕುದಿಸಿರಿ. ಉಪ್ಪು, ಒಂದು ಟೀ ಸ್ಪೂನ್ ಎಣ್ಣೆ ಮತ್ತು ಪಾಸ್ತಾ ಸೇರಿಸಿ. 5ರಿಂದ 10 ನಿಮಿಷಗಳವರೆಗೆ ಬೇಯಿಸಿ. ಪಾಸ್ತಾ ಅತಿಯಾಗಿ ಬೇಯದಿರುವ ಖಾತ್ರಿ ಮಾಡಿಕೊಳ್ಳಿ. ನೀರನ್ನು ಸೋಸಿ ಪಾಸ್ತಾ ಆರಲು ಬಿಡಿ.
ಪ್ಲೇಟಿಂಗ್ : ಪಾಸ್ತಾವನ್ನು ಮೂರು ಸಮಾನ ಭಾಗಗಳಾಗಿ ಮೂರು ಪ್ರತ್ಯೇಕ ಬೌಲ್‍ಗಳಲ್ಲಿ ವಿಂಗಡಿಸಿ. ಒಂದು ಭಾಗಕ್ಕೆ ಕಿತ್ತಳೆ ಸಾಸ್ ಸೇರಿಸಿ. ಮತ್ತೊಂದು ಭಾಗಕ್ಕೆ ಹಸಿರು ಸಾಸ್ ಹಾಗೂ ಉಳಿದ ಭಾಗಕ್ಕೆ ಬಿಳಿ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ಪ್ಲೇಟ್ ಮೇಲೆ ದುಂಡಗಿನ ಕುಕ್ಕಿ ಕಟ್ಟರ್ ಇಟ್ಟು ಅದರಲ್ಲಿ ಹಸಿರು ಪಾಸ್ತಾ ಸೇರಿಸಿ ಚಮಚದಲ್ಲಿ ಒತ್ತಿ ಗಟ್ಟಿಯಾಗಿರುವಂತೆ ಮಾಡಿರಿ. ನಂತರ ಬಿಳಿ ಹಾಗೂ ಆರಂಜ್ ಪಾಸ್ತಾಗಳನ್ನು ಸೇರಿಸಿ ಇದೇ ಕ್ರಮವನ್ನು ಪುನರಾವರ್ತಿಸಿ. ಎಚ್ಚರಿಕೆಯೊಂದಿಗೆ ಕುಕ್ಕಿ ಕಟ್ಟರ್ ತೆಗೆದು ಹಸಿರು, ಕೆಂಪು ಮತ್ತು ಹಳದಿ ಪೆಪ್ಪರ್(ದಪ್ಪ ಮೆಣಸಿನಕಾಯಿಯ) ಉದ್ದವಾದ ತುಂಡುಗಳೊಂದಿಗೆ ಅಲಂಕರಿಸಿ