ಮನೆಯಲ್ಲಿ ಮಗುವೊಂದು ಕೈ ಜಾರಿ ಯಾವುದೋ ಒಂದು ವಸ್ತುವನ್ನು ಒಡೆದು ಹಾಕಿದರೆ ದೊಡ್ಡವರೆನಿಸಿಕೊಂಡವರು ತಟ್ಟನೆ ಸಿಟ್ಟಿನಿಂದ ಆ ಮಗುವಿನ ಕಪಾಳಕ್ಕೆ ಚಟಾರಣೆ ಹೊಡೆದು ನಿಂದಿಸುವ ದೃಶ್ಯಗಳನ್ನು ಕಂಡಾಗಲೆಲ್ಲಾ ವಸ್ತುಗಳ ಮೇಲಿರುವ ಕಾಳಜಿ, ವ್ಯಾಮೋಹ, ಪ್ರೀತಿ ಮನುಷ್ಯರ ಮೇಲೆ ಏಕಿಲ್ಲ ಎಂದು ಅನಿಸುತ್ತದೆ ಅಲ್ಲವೇ.
ಹೌದು, ಇದು ಒಂದು ಮಗುವಿನ ವಿಷಯದಲ್ಲಿ ಅಷ್ಟೇ ಅಲ್ಲ. ನಮ್ಮೊಡನೆ ಇರುವ ಸಂಬಂಧಿಗಳೊಡನೆ ಈ ರೀತಿಯ ವರ್ತನೆ ತೋರುತ್ತೇವೆ. ಇದಕ್ಕೆ ಪ್ರಮುಖ ಕಾರಣ ವೆಂದರೆ ಜತೆಗಿರುವವರಿಗಿಂತ ಜಡತ್ವ ತುಂಬಿದ ವಸ್ತುವಿನ ಮೇಲಿರುವ ಅತಿಯಾದ ವ್ಯಾಮೋಹ. ಸೊಸೆ ಅಡುಗೆ ಕೋಣೆಯಲ್ಲಿ ವಸ್ತುವನ್ನು ಬೀಳಿಸಿದರೆ ಅಥವಾ ನೆನಪಿಲ್ಲದೆ ಒಲೆಯ ಮೇಲಿಟ್ಟ ಹಾಲು ಉಕ್ಕಿದರೆ ಅತ್ತೆ ಅವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸು ವುದು.
ಗಂಡ ಬೈಕ್ ಮೇಲೆ ಬಟ್ಟೆ ಒಣ ಹಾಕಿರುವ ಕಾರಣಕ್ಕೆ ಹೆಂಡತಿಯನ್ನು ಬೈಯುವುದು. ಒಂದು ಸಿಸ್ ಪೆನ್ಸಿಲ್‌ನ್ನು ಕಳೆದು ಕೊಂಡಿದ್ದಕ್ಕಾಗಿ ಮಗುವಿಗೆ ತಾಯಿ ಹೊಡೆಯುವುದು. ವಯೋ ಸಹಜವಾಗಿ ನೆನಪಿನ ಶಕ್ತಿ ಕುಗ್ಗಿರುವ ತಂದೆ-ತಾಯಿ ಅಚಾನಕ್ ಮನೆಯ ಸಾಮಾಗ್ರಿಗಳನ್ನು ಆಚೆಗೆ ಬಿಟ್ಟು ಬಂದರೆ ಮನೆಮಂದಿ ಹೀಗಳೆಯುವುದು. ಇದೆಲ್ಲಕ್ಕಿಂತ ತೀರಾ ಇತ್ತೀಚೆಗೆ ತಮ್ಮ ಮೊಬೈಲನ್ನು ಮುಟ್ಟಿದರೆ ಸಾಕು ಬಾಯಿಗೆ ಬಂದಂತೆ ಒದರುವು ದು ಸರ್ವೇ ಸಾಮಾನ್ಯವಾದ ಸಂಗತಿಗಳಾಗಿವೆ.
‘ಹೀಗೆ ಒಂದು ದಿನ ಮನೆಯಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಗ ಹೊಡೆದ ಬಾಲ್ ನೇರವಾಗಿ ತಂದೆಯ ಲಕ್ಷ ಬೆಲೆ ಬಾಳುವ ಕಾರ ಗ್ಲಾಸ್ ಮೇಲೆ ಬಿದ್ದಿತು ಪರಿಣಾಮ ಗ್ಲಾಸ್ ಚುರಾಯಿತು. ಮೊದಲೇ ತನ್ನ ವಾಹನದ ಮೇಲೆ ಮೋಹ ಹೊಂದಿದ್ದ ತಂದೆ ಸಿಟ್ಟಿಗೆದ್ದು ಮಗನನ್ನು ಹಿಗ್ಗಾಮಗ್ಗ ಅವನ ಗೆಳೆಯರ ಎದುರಿಗೆಯೇ ತಳಿಸಿದ. ಇದರಿಂದ ಮನನೊಂದ ಮಗ ಮರುದಿನ ರಾತ್ರೋರಾತ್ರಿ ಮನೆ ಬಿಟ್ಟು ಹೊರಟು ಹೋಗಿದ್ದ. ಪೊಲೀಸ್ ಕಂಪ್ಲೇಟ್ ಕೊಟ್ಟರು ಸಹ ಕೊನೆಗೂ ಮಗ ಮನೆಗೆ ಮರುಳಿ ಬರಲೇ ಇಲ್ಲ’ ಇದೊಂದು ಕಥೆ.
ಈ ರೀತಿಯ ಘಟನೆ ನಡೆಯಬಾರದು ಎಂದರೇ ವಸ್ತುಗಳಿಗಿಂತ ವನುಷತ್ವಕ್ಕೆ ಅವರ ಭಾವನೆಗಳಿಗೆ ಬೆಲೆ ಕೊಡಬೇಕು ಅಷ್ಟೇ. ವಸ್ತುಗಳನ್ನೂ ಕಾಳಜಿ ಮಾಡುವುದು ತಪ್ಪುಲ್ಲ. ಆದರೆ, ತಿಳಿದು ಯಾರೂ ಸಹ ತಪ್ಪುಗಳನ್ನು ಮಾಡುವುದಿಲ್ಲ. ಬೈ ಮಿಸ್ಟೇಕ್
ಆದ ಸಣ್ಣ ತಪ್ಪುಗಳಿಗೆ ದೊಡ್ಡ ಶಿಕ್ಷೆ ಸಲ್ಲ. ಹಾಳಾದ ವಸ್ತುಗಳನ್ನೂ ಹಣ ಕೊಟ್ಟು ಮತ್ತೊಮ್ಮೆ ಕೊಂಡುಕೊಳ್ಳಬಹುದು. ಆದರೆ ದುಡುಕಿನಿಂದ ಕಳೆದುಕೊಂಡ ಸಂಬಂಧಗಳನ್ನು ಮತ್ತೆಂದೂ ಪಡೆಯಲು ಸಾಧ್ಯವಿಲ್ಲ ಎಂಬುದು ಪ್ರತಿಯೊಬ್ಬರೂ ಅರಿತು ಕೊಳ್ಳವ ಜತೆಗೆ ಭಾವನೆಗಳಿಗೆ ಸ್ಪಂದಿಸುವ ಗುಣ ನಿರ್ಜೀವ ವಸ್ತುಗಳಿಗಿಲ್ಲ. ಜೀವಿಗಳಲ್ಲಿ ಮಾತ್ರ ಇದೆ ಎಂಬುದು ಮನಗಾಣಬೇಕು.
ರುದ್ರಯ್ಯ ಎಸ್ ಎಸ್