Monday, 16th September 2024

ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ ಪ್ರಶಾಂತ ಗೌಡ

Prashanth Gowda

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಬಲರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಪ್ರತಿವರ್ಷ ಹತ್ತಾರು ನೂತನ ಯೋಜನೆ ಗಳನ್ನು ಘೋಷಣೆ ಮಾಡಿ, ಜಾರಿಗೊಳಿಸುತ್ತದೆ. ಆದರೆ ಅದನ್ನು ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುವುದಿಲ್ಲ. ಸರಕಾರದ ಯೋಜನೆ ಹಾಗೂ ಅರ್ಹರ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಯುವಮೋರ್ಚ ಅಧ್ಯಕ್ಷ ಪ್ರಶಾಂತ್ ಗೌಡರು.

ಹೌದು, ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ಪ್ರಶಾಂತ್ ಗೌಡರು, ಬಡವರಿಗೆ ಹಾಗೂ ಸರಕಾರದ ಯೋಜನೆಗಳಿಗೆ ಇರುವ  ಅಂತರ ವನ್ನು ಕಡಿಮೆ ಮಾಡಲು ಹಲವು ವರ್ಷಗಳಿಂದ ಶ್ರಮಿಸಿದ್ದರು. ಈ ಹಿಂದೆ ನಿಗದಿತ ಸ್ಥಳಕ್ಕೆ ಬಂದು ಅರ್ಹರು ಸಲ್ಲಿಸಬೇಕಿತ್ತು. ಆದರೀಗ ಬಡವರು, ಕೂಲಿ ಕಾರ್ಮಿಕರು, ವೃದ್ಧರಿಗೆ ನಿಗದಿತ ಸ್ಥಳಕ್ಕೆ ಬಂದು ಅರ್ಜಿ ಸಲ್ಲಿಸುವುದು ಬೇಡ. ಬದಲಿಗೆ ಅರ್ಹರಿರುವ ಕಡೆಗೆ ತಾವೇ ಹೋಗಿ, ಸಹಾಯ ಮಾಡಲು ವಿಶೇಷ ಯೋಜನೆಯೊಂದನ್ನು ರೂಪಿಸಿದ್ದಾರೆ.

ಕಾಮನ್ ಸರ್ವೀಸ್ ಸೆಂಟರ್ ವೆಹಿಕಲ್ ಎನ್ನುವ ವಿನೂತನ ಯೋಜನೆಯನ್ನು ಹಾಕಿಕೊಂಡಿರುವ ಪ್ರಶಾಂತ್ ಅವರು, ತಮ್ಮ ಸ್ವಂತ ದುಡ್ಡಲ್ಲಿ, ಜೀಪ್ ಒಂದನ್ನು ಕಚೇರಿಯಾಗಿ ಪರಿವರ್ತನೆ ಮಾಡಿ, ಅದರಲ್ಲಿಯೇ ಅರ್ಹರ ಮನೆ ಬಾಗಿಲಿಗೆ ತೆರಳಿ ಸೇವೆ ನೀಡುವ ಕಾರ್ಯವನ್ನು ಆರಂಭಿಸಿದ್ದಾರೆ. ವಾಹನದಲ್ಲಿ ಕಂಪ್ಯೂಟರ್ ವ್ಯವಸ್ಥೆ, ಬರುವ ಜನರಿಗೆ ಮಾಹಿತಿ ನೀಡುವುದಕ್ಕಾಗಿ ಸಿಬ್ಬಂದಿ ಸೇರಿದಂತೆ ಪ್ರತ್ಯೇಕ ತಂಡವನ್ನೇ ಈ ಕಾರ್ಯಕ್ಕೆ ಮಾಡಿ ದ್ದಾರೆ. ಈ ವಾಹನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುವ ಯೋಜನೆಗಳ ಮಾಹಿತಿ ನೀಡುವ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡುವ ಜತೆಗೆ ಅಗತ್ಯವಿದ್ದರೆ ಅರ್ಜಿಯನ್ನು ಸ್ಥಳದಲ್ಲಿಯೇ ಸಲ್ಲಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ರವರ ಜಯಂತಿಯಂದು ಈ ಕಾಮನ್ ಸರ್ವೀಸ್
ಸೆಂಟರ್ ವೆಹಿಕಲ್ ಅನ್ನು ಉದ್ಘಾಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರವರು, ಸಚಿವರಾದ ಗೋಪಾಲಯ್ಯ, ರಾಜ್ಯ ಯುವಮೊರ್ಚಾ ಅಧ್ಯಕ್ಷ ಸಂದೀಪ್ ಕುಮಾರ್ ಸೇರಿದಂತೆ ಹಲವ ಸಮ್ಮುಖದಲ್ಲಿ ಜನ ಸೇವೆಗೆ ಮೀಸಲಿಡಲಾಗಿದೆ. ಈ ವಾಹನದ ಮೂಲಕ ಅನೇಕರಿಗೆ ನೆರವಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ವಾಜಪೇಯಿ ಎಂದರೆ ಅಚ್ಚುಮೆಚ್ಚು 
ಪ್ರಶಾಂತ್ ಅವರು ಬಾಲ್ಯದಲ್ಲಿ ಸಂಕಷ್ಟ ಎದುರಿಸಿದರೂ, ಎಂದಿಗೂ ಜನಸೇನೆಯಿಂದ ಹಿಂದೆ ಸರಿಯಲಿಲ್ಲ. ಆದರೆ ಬಿಜೆಪಿಯನ್ನುಕಟ್ಟಿ ಬೆಳೆಸಿದ,
ಅಧಿಕಾರಕ್ಕಿಂತ ಪಕ್ಷ ಸಂಘಟನೆ, ಜನಸೇವೆಯೇ ಎಂದು ನಂಬಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತತ್ವ ಸಿದ್ಧಾಂತದಲ್ಲಿ ನಂಬಿದ್ದರು. ಅವರನ್ನು ಅನುಸರಿಸಿದರು. ಆದ್ದರಿಂದಲೇ ಅವರ ಹಾದಿಯಲ್ಲಿಯೇ ಪ್ರಶಾಂತ್ ಗೌಡ ಸಹ ಸಾಗಬೇಕು ಎಂದು ನಿರ್ಧರಿಸಿ, ಸಮಾಜಸೇವೆಗೆ ಧುಮುಕಿದರು. ವಾಜಪೇಯಿ ಅವರು ನಮಗೆ ಸಮಾಜ ಸೇವೆಯ ಬಗ್ಗೆ ಹೇಳಿಕೊಟ್ಟರು. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಆದರ್ಶಗಳು
ಸದಾ ನಮ್ಮೊಂದಿಗೆ ಇರಲಿದೆ. ೧೯೨೪ ಡಿ.೨೫ರಂದು ಜನಿಸಿದ ಅವರು ಈಗ ನಮ್ಮೊಂದಿಗೆ ಇದಿದ್ದರೆ ೯೭ ವರ್ಷಗಳಾಗುತ್ತಿತ್ತು. ಆದರೆ ಮೂರು ವರ್ಷದ ಹಿಂದೆ ನಮ್ಮನ್ನು ಅವರು ಅಗಲಿದರೂ ಅವರ ಜನ್ಮದಿನದಂದು ಅವರ ನೆನಪಿನಲ್ಲಿ ಇನ್ನಷ್ಟುಜನಸೇವೆ ಮಾಡಲು ಬಯಸುವೆ ಎಂದು ಪ್ರಶಾಂತ್ ಗೌಡ ಹೇಳಿದರು.

ಕೋವಿಡ್ ಸಮಯದಲ್ಲಿಯೂ ನೆರವು
ಮೊದಲಿನಿಂದಲೂ ಜನಸೇವೆಗೆ ಪಣತಗೊಟ್ಟಿರುವ ಪ್ರಶಾಂತ್ ಅವರುಕರೋನಾ ಸಮಯದಲ್ಲಿ ಸಾವಿರಾರು ಜನರಿಗೆ ಅವಿರತ ಹೋರಾಟ ಮಾಡಿದ್ದರು. ಕರೋನಾ ಸಮಯದಲ್ಲಿ ಮೊದಲ ಅಲೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ಪೊಟ್ಟಣವನ್ನು ಹಾಗೂ ಎರಡನೇ ಅಲೆಯಲ್ಲಿ  ಸಾವಿರಾರು ಜನರಿಗೆ ರೇಷನ್‌ಕಿಟ್ ವಿತರಿಸಿದರು. ಇದರೊಂದಿಗೆಕೂಲಿ ಕಾರ್ಮಿಕರಿಗೆ ನಿತ್ಯ ದಾಸೋಹ,ಕರೋನಾ ಸಂತ್ರಸ್ತರಿಗೆ ಔಷಧ ಸೌಲಭ್ಯ, ಆಂಬ್ಯುಲೆನ್ಸ್ ವ್ಯವಸ್ಥೆ, ವೆಂಟಿಲೇಟರ್‌ಗಳ ಸೌಲಭ್ಯ ಒದಗಿಸಲು ಯುದ್ಧೋಪಾದಿಯಲ್ಲಿಕಾರ್ಯನಿವರ್ಹಿಸಿದರು. ಕರೋನಾ ಮಾತ್ರವಲ್ಲದೇ, ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿರವರ ೭೧ನೇ ಹುಟ್ಟುಹಬ್ಬದ ಪ್ರಯುಕ್ತ ಹಾಗು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜಯಂತಿಯ ಅಂಗವಾಗಿ ಯುವ ಮೊರ್ಚಾ ನಡೆ- ಅಂತ್ಯೋದಯದೆಡೆ ಕಾರ್ಯಕ್ರಮ ನಡೆಸಿ, ಪ್ರಶಾಂತ್ ಗೌಡ ಮತ್ತು ತಂಡದವರಿಂದ ಸುಮಾರು ೨೦೦೦ ನೀರಿನಕ್ಯಾನ್ ವಿತರಣೆ, ಕೂಲಿ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡುಗಳು, ಬಡವರಿಗೆ ಮೀಸಲಿರುವಕೇಂದ್ರ ಹಾಗು ರಾಜ್ಯ ಸರಕಾರದ ವಿವಿಧ ಯೋಜನೆಗಳ ಅರ್ಜಿಗಳನ್ನು ಉಚಿತವಾಗಿ ಭರ್ತಿಮಾಡುವಕಾಮನ್ ಸರ್ವಿಸ್ ಸೆಂಟರ್ ವಾಹನವನ್ನು ಲೋಕಾರ್ಪಣೆ ಮಾಡಿದರು.

ಪ್ರಶಾಂತ್ ಗೌಡ ಅವರ ಕಾರ್ಯಕ್ಕೆ ಬ್ಯಾಟರಾಯನಪುರ ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದು, ನಮ್ಮ ಶಾಸಕರು ನಮ್ಮಕೈಗೆ ಸಿಗದಿದ್ದರೂ, ಪ್ರಶಾಂತ್ ಅವರಿಂದ ನಮಗೆ ಸಹಾಯ ಸಿಗುವುದು ಖಚಿತ. ಆದ್ದರಿಂದ ಶಾಸಕರಿಗಿಂತ ಹೆಚ್ಚು ಪ್ರಶಾಂತ್ ಆಪ್ತರಾಗಿದ್ದಾರೆ ಎನ್ನುವ ಮಾತನ್ನು ಸ್ಥಳೀಯರು ಹೇಳುತ್ತಾರೆ.

***

ಎಲ್ಲಕ್ಕಿಂತ ಮೊದಲು ಜನಸೇವೆ ಎನ್ನುವುದನ್ನು ನಮಗೆ ಅಟಾಲ್ ಬಿಹಾರಿ ವಾಜಪೇಯಿ ಅವರುಕಲಿಸಿದ್ದಾರೆ. ಅವರ ಹಾಕಿಕೊಟ್ಟ ಹೆಜ್ಜೆಗುರುತಿನಲ್ಲಿ ನಾನು ಸಾಗುತ್ತಿದ್ದೇನೆ. ಅನೇಕರಿಗೆ ಸರಕಾರಿ ಯೋಜನೆಗಳು ಏನು? ಅವುಗಳ ಪ್ರಯೋಜನ ಪಡೆಯುವುದು ಹೇಗೆ? ಎನ್ನುವ ಬಗ್ಗೆ ಮಾಹಿತಿಯೇ ಇರುವು ದಿಲ್ಲ. ಆದ್ದರಿಂದ ನನ್ನಕ್ಷೇತ್ರದ ವ್ಯಾಪ್ತಿಯಲ್ಲಿ ಸರಕಾರಿ ಸೇವೆಗಳನ್ನು ಮನೆಮನೆಗೆ ತಲುಪಿಸಲೆಂದುಕಾಮನ್ ಸರ್ವೀಸ್ ಸೆಂಟರ್ ವಾಹನವನ್ನು ಆರಂಭಿಸಿದ್ದೇನೆ.

– ಪ್ರಶಾಂತ್ ಗೌಡ ಬೆಂಗಳೂರು ಉತ್ತರ ಬಿಜೆಪಿ
ಯುವಮೋರ್ಚಾ ಅಧ್ಯಕ್ಷ

ರಾಜ್ಯ ಹಾಗೂ ಕೇಂದ್ರ ಸರಕಾರದ ಹಲವುಯೋಜನೆಗಳು ಬಡವರಿಗಾಗಿಯೇ ಮೀಸಲಿದ್ದರೂ ಅದನ್ನುಯಾವ ರೀತಿ ಪಡೆಯಬೇಕು ಎನ್ನುವ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ ಪ್ರಶಾಂತ್ ಗೌಡ ಅವರ ತಂಡದಿಂದ ವಿಶೇಷ ವಾಹನವನ್ನು ಆರಂಭಿಸಿ, ಉಚಿತವಾಗಿಯೋಜನೆಗಳಿಗೆ ಅರ್ಜಿ ಸಲ್ಲಿಸುವು ದಕ್ಕೆ ಸಹಾಯ ಮಾಡುತ್ತಿದ್ದಾರೆ. ಇದೊಂದು ಉತ್ತಮಯೋಜನೆಯಾಗಿದೆ.

– ಹರೀಶ್ ಸ್ಥಳೀಯರು

ರಾಜಕೀಯ ಜೀವನ

? ಆರ್‌ಎಸ್‌ಎಸ್ ಸಕ್ರಿಯಕಾರ್ಯಕರ್ತ
? ೨೦೦೫ದಲ್ಲಿ ಎಬಿವಿಪಿಗೆ ಸೇರ್ಪಡೆ
? ಅಮೃತನಗರದಲ್ಲಿ ಶಕ್ತಿಕೇಂದ್ರದ ಅಧ್ಯಕ್ಷ
? ೨೦೧೪ರಲ್ಲಿ ಬ್ಯಾಟರಾಯನಪುರ ೭ನೇ ವಾರ್ಡ್‌ಯುವ ಮೋರ್ಚಾ ಅಧ್ಯಕ್ಷ
? ೨೦೧೭ರಲ್ಲಿ ಬ್ಯಾಟರಾಯನಪುರ ಯುವಮೋರ್ಚ ಪ್ರಧಾನಕಾರ್ಯದರ್ಶಿ
? ೨೦೨೦ರಿಂದ ಬೆಂಗಳೂರು ಉತ್ತರ ಯುವಮೋರ್ಚ ಅಧ್ಯಕ್ಷ