Sunday, 8th September 2024

ರಾಮಮಂದಿರಕ್ಕೆ ಕರುನಾಡು ಕಲ್ಲು

ವಿಶ್ವವಾಣಿ ವಿಶೇಷ

ಯಲಹಂಕ ಬಳಿ ನವರತ್ನ ಅಗ್ರಹಾರದ ಗ್ರಾನೈಟ್ ರವಾನೆ

ಬೆಂಗಳೂರು/ ಬಾಗಲಕೋಟ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತೀರ್ಮಾನಿಸಿದ ದಿನದಿಂದಲೂ ಕರುನಾಡಿನ ನಂಟು ಬೆಸೆದು ಕೊಂಡೇ ಬರುತ್ತಿದ್ದು, ಇದೀಗ ತಳಹದಿಗೆ ರಾಜ್ಯದಿಂದಲೇ ಕಲ್ಲುಗಳ ರನಾವೆಯಾಗುತ್ತಿರುವುದು ವಿಶೇಷವಾಗಿದೆ.

ರಾಜ್ಯದಿಂದ ಈಗಾಗಲೇ ರಥ ನಿರ್ಮಾಣ ಸೇರಿ ಅನೇಕ ಕಚ್ಚಾ ವಸ್ತುಗಳ ರವಾನೆ ಮಾಡಲಾಗುತ್ತಿದೆ. ಮಂದಿರದ ತಳಹದಿಗೆ ಬಳಸುವ ಕಲ್ಲುಗಳನ್ನು ರಾಜ್ಯದಿಂದಲೇ ರವಾನಿಸಲಾಗುತ್ತಿದೆ. ರಾಜ್ಯದ ನವರತ್ನ ಅಗ್ರಹಾರ ಹಾಗೂ ದೊಡ್ಡಬಳ್ಳಾಪುರದಿಂದ ಗ್ರಾನೈಟ್ ಕಲ್ಲು ಗಳನ್ನು ಕಳುಹಿಸಲಾಗುತ್ತಿದೆ. ಮತ್ತಷ್ಟು ಹೆಚ್ಚಿನ ಕಲ್ಲುಗಳು, ಮರಳು ರಾಜ್ಯದಿಂದಲೇ ರವಾನೆಯಾಗ ಲಿದ್ದು, ಸುಸಜ್ಜಿತ ರಾಮಮಂದಿರದಲ್ಲಿ ಕರುನಾಡಿನ ಕಲ್ಲುಗಳು ಹಲವು ಕತೆ ಹೇಳಲಿವೆ.

ಮಂದಿರಕ್ಕಾಗಿ ಅ.೨೫ರಂದು ಶಿಲೆ ರವಾನಿಸುವ ಕಾರ್ಯ ನಡೆಯಲಿದೆ. ಮಂದಿರ ಸ್ಥಳದ ಭೂಭಾಗ ದೃಢ ವಾಗಿಲ್ಲದ್ದರಿಂದ ಗಟ್ಟಿ ಮುಟ್ಟಾದ ತಳಪಾಯಕ್ಕೆ ದೊಡ್ಡಬಳ್ಳಾಪುರ ಶಿಲೆಗಳು ಸೂಕ್ತವಾಗಿವೆ. ಈಗಾಗಲೇ ೪೨ ಅಡಿ ಮರಳನ್ನು ತೆಗೆಯಲಾಗಿದ್ದು, ಸಮತಟ್ಟು ಮಾಡುವ ಕಾರ್ಯ ಮುಕ್ತಾಯ ಹಂತ ಮಂದಿರದ ಎಂಜಿನಿಯರಿಂಗ್ ತಂಡದ ಸದಸ್ಯ ರೊಬ್ಬರು ಕರ್ನಾಟಕದವರಾಗಿದ್ದು, ರಥವೊಂದರ ನಿರ್ಮಾಣವೂ ರಾಜ್ಯದಲ್ಲಿ ಆಗುತ್ತಿದೆ.

ಜತೆಗೆ, ಯಲಹಂಕದ ನವರತ್ನ ಅಗ್ರಹಾರದಿಂದ ಈಗಾಗಲೇ ಗ್ರಾನೈಟ್‌ಗಳನ್ನು ಕಳುಹಿಸಲಾಗುತ್ತಿದೆ. ಕಲ್ಲುಗಳ ರವಾನೆಯಲ್ಲಿ ಪೇಜಾವರ ಶ್ರೀಗಳು ಮುಂದಾಳತ್ವ ವಹಿಸಿದ್ದು, ಯಲಹಂಕದ ಗ್ರಾನೈಟ್ ಉದ್ಯಮಿ ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾದ ಬೆಂಗಳೂರು ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಅವರ ಕ್ವಾರಿಯಿಂದ ಕಲ್ಲುಗಳನ್ನು ಕಳುಹಿಸ ಲಾಗಿತ್ತು.

ರಾಜರಥಕ್ಕೂ ಕೊಡುಗೆ
ಈ ನಡುವೆ ಮಂಗಳೂರಿನಿಂದ ಅಯೋಧ್ಯೆಯ ಶ್ರೀ ರಾಮಮಂದಿರದ ರಥವನ್ನು ತಯಾರಿಸಲಾಗುತ್ತಿದೆ. ಮಂಗಳೂರಿನ ವಿಶ್ವಕರ್ಮ ಸಮುದಾಯದ ಮುಖಂಡರೆಲ್ಲ ಸೇರಿ ರಥ ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕದ ಕಲ್ಲುಗಳು ಮತ್ತು ಕಲೆ, ವಾಸ್ತುಶಿಲ್ಪ ಪ್ರಖ್ಯಾತವಾದ ಕಾರಣ ಕರುನಾಡಿನಿಂದ ಗಟ್ಟಿಯಾದ ಗ್ರಾನೈಟ್ ಶಿಲೆಗಳನ್ನು ಕಳುಹಿಸಲಾಗುತ್ತಿದೆ. ಈ ಜತೆಗೆ ರಥದ ನಿರ್ಮಾಣದ ಹೊಣೆಯೂ ಕರ್ನಾಟಕಕ್ಕೆ ದಕ್ಕಿದೆ. ಹೀಗಾಗಿ, ಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ.

***

ಅಯೋಧ್ಯಾ ರಾಮ ಮಂದಿರ ನಿರ್ಮಾಣದ ಅಡಿಪಾಯಕ್ಕೆ ಇದೇ ೨೫ರಂದು ದೊಡ್ಡಬಳ್ಳಾಪುರ ಶಿಲೆಗಳನ್ನು ರವಾನಿಸುವ ಕಾರ್ಯ ನಡೆಯಲಿದೆ. ಮಂದಿರ ಸ್ಥಳದಲ್ಲಿ ವ್ಯಾಪಕ ಮರಳು ತುಂಬಿದ ಕಾರಣಕ್ಕೆ ಗಟ್ಟಿಮುಟ್ಟಾದ ತಳಪಾಯ ಹಾಕಲು ದೊಡ್ಡಬಳ್ಳಾಪುರ ಶಿಲೆಗಳು ಸೂಕ್ತವಾಗಿವೆ. ಈಗಾಗಲೇ ೪೨ ಅಡಿ ಮರಳನ್ನು ತೆಗೆಯಲಾಗಿದ್ದು, ಸಮತಟ್ಟು ಕಾರ್ಯ ಮುಕ್ತಾಯ ಹಂತ ತಲುಪಿದೆ.
-ವಿಶ್ವಪ್ರಸನ್ನ ತೀರ್ಥರು
ಪೇಜಾವರ ಮಠ

Leave a Reply

Your email address will not be published. Required fields are marked *

error: Content is protected !!