Saturday, 14th December 2024

ಸಾಮಾಜಿಕ ಕಾಳಜಿಯ ಸರಳ, ಸಜ್ಜನ ಧರ್ಮದರ್ಶಿ ರಾಮಪ್ಪನವರು

ಜಲದೊಡಲು ಸೇರಿದ್ದ ತಮ್ಮ ವಂಶದ ತಲೆ ತಲಾಂತರದ ಆರಾಧ್ಯ ದೇವತೆ ಚೌಡಮ್ಮನನ್ನು ಹಿನ್ನೀರ ತಟದಲ್ಲಿ ಪುನರ್‌ಪ್ರತಿಷ್ಠಾಪಿಸಿ, ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಬೆಳೆಸಿದ ಸಾಧಕ ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪನವರು. ಸಿಗಂದೂರನ್ನು ಸರ್ವಧರ್ಮ ಸಮನ್ವಯದ, ಸಮಭಾವದ ಶ್ರದ್ಧಾ ಕೇಂದ್ರವಾಗಿ ರೂಪಿಸಿದ ಹೆಗ್ಗಳಿಕೆ ಅವರಿಗೆ ಸಲ್ಲಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಚಿರಪರಿಚಿತ ರಾಗಿರುವ ಇವರು, ಇದೀಗ ವಿಶ್ವವಾಣಿ ಪತ್ರಿಕೆಯ ಮಾರಿಶಸ್ ಗ್ಲೋಬಲ್ ಸಾಧಕ ಪ್ರಶಸ್ತಿಯ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. 

ಕನ್ಯಾಕುಮಾರಿ ಹೆಗಡೆ

ಸಿಗಂದೂರು ಶಕ್ತಿಕ್ಷೇತ್ರವಾಗಿ ಬೆಳೆಯುವಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ನವರ ಯೋಜನಾ ಬದ್ಧ ದೂರದರ್ಶಿತ್ವದ ಕೊಡುಗೆಯಿದೆ. ಕಾಡಿನ ಮಧ್ಯದೊಳಗೆ ದೇವೀಕ್ಷೇತ್ರ ವಿಶ್ವಮಟ್ಟ ದಲ್ಲಿ ಪ್ರಸಿದ್ಧಿಯನ್ನು ಹೊಂದಿದೆ ಎಂದರೆ ಇವರೇ ಕಾರಣಕರ್ತರು. ಸರ್ವಜನಾಂಗದ ಧಾರ್ಮಿಕ ಕ್ಷೇತ್ರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಜಾರಿಗೆ ತಂದು ಯಶಸ್ವಿಯಾದ ಧರ್ಮದರ್ಶಿ ಇವರು.

ಸುಮಾರು ೬೨ ವರ್ಷಗಳ ಹಿಂದೆ ಶರಾವತಿ ಜಲ ವಿದ್ಯುತ್ ಯೋಜನೆಯಲ್ಲಿ ತಮ್ಮ ಭೂಮಿ, ಮನೆ ಕಳೆದುಕೊಂಡು ಸರಕಾರ ನೀಡಿದ ೨೨ ಎಕರೆ ಅರಣ್ಯ ಭೂಮಿಯನ್ನು ನಂಬಿ ಸೊರಬ ತಾಲೂಕಿನ ಹೊಳೆಕೊಪ್ಪಕ್ಕೆ ಸ್ಥಳಾಂತರಗೊಂಡರು. ಆಗ ರಾಮಪ್ಪ ನವರಿಗೆ ಕೇವಲ ಹತ್ತು ವರುಷ. ಅಲ್ಲಿಯವರೆಗೆ ಶ್ರೀಮಂತಿಕೆ ಕಂಡಿದ್ದ ಕೂಡು ಕುಟುಂಬಕ್ಕೆ ಈಗ ಬಿದರಕ್ಕಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು! ಕಾಡು ಸವರಿ ಗಿಡನೆಟ್ಟ ಭೂಮಿಯಲ್ಲಿ ಫಲ ಕಾಣುವ ಹೊತ್ತಿ ಗಾಗಲೇ ರಾಮಪ್ಪನವರ ತಂದೆ ಶೇಷಪ್ಪನವರು ತೀರಿಕೊಂಡರು. ತಂದೆಯ ಅಕಾಲಿಕ ಅಗಲಿಕೆಯ ನಂತರ, ಮೂವರು ಸಹೋದರರ ಜತೆ ಸೇರಿ ಹಗಲಿರುಳು ಜಮೀನಿನ ಕೆಲಸಕ್ಕೆ ಮುಂದಾದರು.

ಎರಡು ರುಪಾಯಿ ಕೂಲಿಗೆ ಲಿಂಗದಹಳ್ಳಿ, ಉಪ್ಪಳಿ ಮೊದಲಾದ ಊರುಗಳಲ್ಲಿ ಅಡಿಕೆ ತೋಟಗಳಲ್ಲಿ ಕೆಲಸ ಮಾಡಿದ್ದೂ ನಿಜ. ಕುಟುಂಬ ನಿರ್ವಹಣೆಗೆ ತರಕಾರಿ ಬೆಳೆದು ಸಂತೆಯಲ್ಲಿ ಕೂತು ಮಾರಾಟ ಮಾಡಿದ್ದೂ ಇದೆ. ಮಲೆನಾಡಿಗೆ ಅಪರಿಚಿತವಾಗಿದ್ದ ಶುಂಠಿಯನ್ನು ಸೊರಬ ತಾಲೂಕಿನಲ್ಲಿಯೇ ಮೊದಲ ಬಾರಿ ಬೆಳೆದು ಶ್ರಮದಿಂದ ಸಾಧನೆ ಮಾಡಬಹುದು ಎಂದು ನಿರೂಪಿಸಿದರು.

ಧಾರ್ಮಿಕ ಕ್ಷೇತ್ರ ಸಿಗಂದೂರು
ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಸಿಗಂದೂರು ಧರ್ಮ ಕ್ಷೇತ್ರವಾಗಿ ಎ ಜನಾಂಗದವರ ಆರಾಧನಾ ತಾಣವಾಗಿದೆ. ಮುಸ್ಲಿಂ ಹಾಗೂ ಕಿಶ್ಚಿಯನ್ ಸಮುದಾಯ ಸೇರಿದಂತೆ ಹಲವು ಧರ್ಮೀಯರೂ ದೇವಿಯ ಭಕ್ತರಾಗಿದ್ದಾರೆ. ಆಂಧ್ರ, ತಮಿಳು ನಾಡು, ಕೇರಳ, ಮಹಾರಾಷ್ಟ್ರ ಇನ್ನೂ ಅನೇಕ ರಾಜ್ಯಗಳ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ವಿದೇಶದಲ್ಲಿರುವವರೂ ಸನ್ನಿಧಾನದ ಸಂಪರ್ಕದಲ್ಲಿzರೆ. ಸಮಾನತೆಯ ನೆಲೆಗಟ್ಟಿನಲ್ಲಿ ಶ್ರೀ ಕ್ಷೇತ್ರ ಸಿಗಂದೂರು ದೇಶದ ಮಹತ್ವದ ದೇವಾಲಯಗಳಲ್ಲಿ ಒಂದಾಗಿದೆ. ಸಿಗಂದೂರಿನಲ್ಲಿ ಪರಂಪರೆಯಂತೆ ದೇವಿಯ ನಿತ್ಯ ಪೂಜೆ , ಪುನಸ್ಕಾರಗಳು, ಯಜ್ಞಯಾ ಗಾದಿಗಳು, ನಡೆಯುತ್ತಿದೆ.

ಅಮವಾಸ್ಯೆಯ ವಿಶೇಷ ಪೂಜೆ ಬೆಳಗಿನ ಜಾವದಲ್ಲಿಯೇ ನಡೆಯುವ ಕ್ರಮವಿದ್ದು, ಅಂದು ದೂರದೂರಿನಿಂದ ಭಕ್ತರು ರಾತ್ರಿಯಿಡೀ ದೇವಿ ದರ್ಶನಕ್ಕೆ ಕಾಯುತ್ತಿರುತ್ತಾರೆ. ಸಿಗಂದೂರು ಚೌಡೇಶ್ವರೀ ದೇವಸ್ಥಾನದ ಧರ್ಮದರ್ಶಿಯಾದ ರಾಮಪ್ಪನವರು ದೇವಿ ಸನ್ನಿಧಾನಕ್ಕೆ ನೊಂದು ಬೆಂದು ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಶಾಂತ ರೀತಿಯಲ್ಲಿ ಆಲಿಸಿ ಸಂತೈಸುತ್ತಾರೆ. ಉತ್ತಮ ಮಾರ್ಗದರ್ಶನ ನೀಡಿ ಆತ್ಮ ಸ್ಥೆರ್ಯ ತುಂಬುತ್ತಾರೆ. ನ್ಯಾಯಾಲಯದಲ್ಲಿ ಇತ್ಯರ್ಥಗೊಳಿಸಿಕೊಳ್ಳಲಾ ಗದ ಸಾವಿರಾರು ವ್ಯಾಜ್ಯಗಳನ್ನು, ಕೌಟುಂಬಿಕ ಕಲಹಗಳನ್ನು ದೇವಿ ಸ್ಥಾನದಲ್ಲಿ ಬಗೆಹರಿಸಿರುತ್ತಾರೆ.

ಸಿಗಂದೂರು ಕ್ಷೇತ್ರಕ್ಕೆ ದ್ವಿಮುಖ ಸಂಚಾರದ ಉತ್ತಮ ರಸ್ತೆ ನಿರ್ಮಾಣವಾಗಿದೆ. ಯಾತ್ರಾರ್ಥಿಗಳಿಗೆ ವಸತಿಗೃಹ, ಕಲ್ಯಾಣ ಮಂಟಪ, ನಿತ್ಯ ಅನ್ನದಾಸೋಹ ಮೊದಲಾದ ಮೂಲ ಸೌಕರ್ಯಗಳು ಲಭ್ಯವಾಗಿದೆ. ಇಲ್ಲಿ ಜಾತಿ, ಶ್ರೀಮಂತ ಬಡವ ಎನ್ನುವ ಪರಿಭೇದ ಕೂಡ ಕಾಣುವುದಿಲ್ಲ. ನಾಡಿನ ಎಡೆಯಿಂದ ನಿತ್ಯ ಸಿಗಂದೂರಿಗೆ ಬರುವ ಸಾವಿರಾರು ಭಕ್ತರು ತಮ್ಮ ಕಷ್ಟಗಳ ಮನಸ್ಸಿನ ದುಗುಡಗಳ ನಿವಾರಣೆಗೆ ಚೌಡೇಶ್ವರಿಯಲ್ಲಿ ಪ್ರಾರ್ಥಿಸಿ ನಿರಾಳರಾಗುತ್ತಾರೆ. ಭಕ್ತರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ಭೋಜನ ವ್ಯವಸ್ಥೆ ಇದೆ. ಪರ್ವಕಾಲದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ.

ಸಮಾಜಮುಖಿ ಕಾರ್ಯ
ಚೌಡೇಶ್ವರಿಯ ಅನುಗ್ರಹದಿಂದ ನೂರಾರು ಕುಟುಂಬಗಳು ತಮ್ಮ ಬದುಕನ್ನು ಕಟ್ಟಿಕೊಂಡಿzರೆ. ಶ್ರೀಕ್ಷೇತ್ರದಿಂದ ಹಲವು ದಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮವನ್ನು ನಡೆಸುತ್ತ ಬಂದಿರುವ ರಾಮಪ್ಪನವರು ಸುತ್ತಮುತ್ತಲ ಹಲವು ದೇವಸ್ಥಾನ ಗಳ ಜೀರ್ಣೋದ್ದಾರಕ್ಕೆ ನೆರವು ನೀಡಿದ್ದಾರೆ. ಸಿಗಂದೂರು ಚೌಡಮ್ಮ ಚಾರಿಟೇಬಲ್ ಎಜ್ಯುಕೇಷನ್ ಎಂಬ ಸಂಸ್ಥೆಯ ಹೆಸರಲ್ಲಿ ಬಡತನದಿಂದ ವ್ಯಾಸಂಗ ಮಾಡಲಾಗದ ನೂರಾರು ಮಕ್ಕಳಿಗೆ ನೆರವಾಗಿzರೆ. ಉನ್ನತ ವ್ಯಾಸಂಗದ ಸಂಪೂರ್ಣ ವೆಚ್ಚ ಭರಿಸಿದ್ದಾರೆ.

ವಿದೇಶಕ್ಕೆ ಸ್ಪರ್ಧಾತ್ಮಕ ಕ್ರೀಡಾಕೂಟಕ್ಕೆ ತೆರಳಲು ಅವಕಾಶ ದೊರೆತರೂ ಬಡತನ ಕಾರಣದಿಂದ ತೆರಳಲಾರದ ಸ್ಥಳೀಯ ಪ್ರತಿಭಾವಂತ ಮಕ್ಕಳಿಗೆ ವೀಸಾ ಕೊಡಿಸಿ, ಆರ್ಥಿಕ ನೆರವು ನೀಡಿ, ಪ್ರೋತ್ಸಾಹಿಸಿದ್ದಾರೆ. ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರಗತಿಪರ ರೈತರಿಗೆ ಪ್ರೋತ್ಸಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಯೋಗ ಶಿಬಿರ, ಹಾಗೂ ಹಲವು ಕ್ರೀಡಾಕೂಟಗಳಿಗೆ ಧನ ಸಹಾಯ ಹೀಗೆ ಇನ್ನು ಹಲವು ಸಾಮಾಜಿಕ, ಧಾರ್ಮಿಕ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸುತ್ತಾ ಬಂದಿದ್ದಾರೆ. ದ್ವೀಪ ಪ್ರದೇಶದ ಜನರ ತುರ್ತು ಆರೋಗ್ಯ ಸೇವೆಗಾಗಿ ಅಂಬುಲೆನ್ಸ್ ಇರಿಸಿದ್ದಾರೆ. ಸರಕಾರಿ ಶಾಲೆಗಳನ್ನ ಬಣ್ಣ ಬಳಿದು ಸಿಂಗರಿಸಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಕಡುಬಡವ ರಿಗೆ ಆಹಾರ ಧಾನ್ಯ ವಿತರಿಸಿದ್ದಾರೆ. ಕೊರೋನಾ ವಾರಿಯರ‍್ಸ್‌ಗೆ, ತುಮರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೇಜರ್, ಹಾಗೂ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ.

ಸಿಗಂದೂರಿನ ಸುತ್ತಮುತ್ತ ಪ್ರತಿ ವರ್ಷ ನೂರಾರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಕಾಳಜಿ ತೋರಿzರೆ. ಜಾನಪದ ಕಲೆ ಯಕ್ಷಗಾನಕ್ಕೆ ಪ್ರೋತ್ಸಾಹ ನಾಡಿನ ಪ್ರಸಿದ್ಧ ಜಾನಪದ ಕಲೆ ಯಕ್ಷಗಾನ ಉಳಿಸಿ ಬೆಳೆಸಲು ಮಲೆನಾಡ ಭಾಗದಲ್ಲಿ ೨೦ ವರ್ಷಗಳ ಹಿಂದೆಯೇ ಸಿಗಂದೂರು ಮೇಳ ಕಟ್ಟಿ ನೂರಾರು ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಮೇಳ ಸಾವಿರಾರು ಕಲಾಪ್ರದರ್ಶನ ನೀಡಿದ್ದು, ಘಟ್ಟದ ಮೇಲೆ ಧಾರ್ಮಿಕ ಕ್ಷೇತ್ರದ ಪೋಷಣೆಯಲ್ಲಿರುವ ಏಕೈಕ ವೃತ್ತಿಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯಕ್ಷ ಕವಿ, ಸಾಹಿತಿ ಟಿಎಂ ಶೇಷಗಿರಿಯವರಿಂದ ಸಿಗಂದೂರು ಕ್ಷೇತ್ರ ಮಹಾತ್ಮೆ ಎಂಬ ಎಂಬ ಪ್ರಸಂಗ ಬರೆಸಿ, ಸಾವಿರಾರು ಯಶಸ್ವಿ ಪ್ರದರ್ಶನ ನಡೆಸಿದ್ದಾರೆ.

ಅಲ್ಲದೆ ಕೋಲಾಟ, ಡೊಳ್ಳು, ಹಸೆ ಚಿತ್ತಾರ ಮೊದಲಾದ ಜಾನ ಪದ ಕಲಾವಿದರನ್ನು ಪ್ರೋತ್ಸಾಹಿಸಿ ದ್ದಾರೆ. ನಾಡಿನ ಪ್ರಸಿದ್ಧ ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಸಿಗಂಧೂರನ್ನು ಸಂದರ್ಶಿಸಿ, ರಾಮಪ್ಪನವರ ಕರ್ತವ್ಯ ದೀಕ್ಷೆಗೆ ಮೆಚ್ಚುಗೆ ವ್ಯಕ್ತ ಪಡಿಸಿzರೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಯವರು ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಿಗಂಧೂರು ದೇವಾಲಯವನ್ನು ನೆನೆದು ತಾಯಿ ಪಾದಕ್ಕೆ ನಮಸ್ಕರಿಸುತ್ತೇನೆ ಎಂದಿದ್ದರು. ದೇವಿಯ ಶಕ್ತಿ ಮತ್ತು ಧರ್ಮಾಧಿಕಾರಿ ರಾಮಪ್ಪ ನವರ ಆಡಳಿತ ವೈಖರಿಯನ್ನು ಮನಗಂಡ ಮೋದೀಜಿಯವರು ಸಿಗಂಧೂರು ದೇವಿಯ ವಿಶೇಷ ಆಶೀರ್ವಾದ ಬೇಡಿದ್ದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ಸಾಮಾಜಿಕ ಸೇವೆಗೆ ಸಂದ ಗೌರವ
ರಾಮಪ್ಪನವರ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಅವುಗಳಲ್ಲಿ ಕುಂಭಕೋಣ ಇಂಟರ್‌ನ್ಯಾಷನಲ್ ಓಪನ್ ಯುನಿವರ್ಸಿಟಿ ಆ- ಹ್ಯುಮಾನಿಟಿ ಹೆಲ್ತ ಸೈ ಎಂಡ್ ಪೀಸ್ ಇವರು ನೀಡಿದ ಗೌರವ ಡಾಕ್ಟರೇಟ್ ಪದವಿ ಹಾಗೂ ಬನವಾಸಿಯ ಕದಂಬ ಮಯೂರ ಸಂಸ್ಥೆಯ ಕದಂಬಶ್ರೀ ಪ್ರಶಸ್ತಿ, ಸಿzಪುರದ ತರಳಿಮಠದ ತರಳಿ ಪ್ರಶಸ್ತಿ ಸೇರಿದೆ.

ಧನಾಂಜನೇಯ ಸ್ವಾಮಿ ದೇವಾಲಯ!
ಒಂದು ಕಡೆ ಸಿಗಂಧೂರು ದೇವಿಯ ಅವಿರತ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ರಾಮಪ್ಪನವರು ಹೊಳೆಕೊಪ್ಪದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ವಿಜಯನಗರ ಕಾಲದ ಶ್ರೀ ಧನಾಂಜನೇಯ ಸ್ವಾಮಿ ದೇವಸ್ಥಾನವನ್ನು ಅಭಿವೃದ್ದಿಪಡಿಸಿ ನಿತ್ಯ ತ್ರಿಕಾಲ ಪೂಜೆ, ಪರ್ವಕಾಲದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ವ್ಯವಸ್ಥೆಗೊಳಿಸಿzರೆ. ದೇವಾಲಯದ ಆವರಣದಲ್ಲಿ ೫೦೦೦ ಜನ ಕೂರಬಹುದಾದ ವಿಶಾಲವಾದ ಸಮುದಾಯ ಭವನವನ್ನು, ವಸತಿ ಸಮುಚ್ಚಯವನ್ನು ನಿರ್ಮಿಸಿzರೆ. ಧನಾಂಜನೇಯ ಕಲ್ಯಾಣ ಮಂಟಪದಲ್ಲಿ ವರ್ಷದಲ್ಲಿ ನೂರಾರು ಮದುವೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಇತ್ತೀಚೆಗಷ್ಟೇ ಧನಾಂಜನೇಯ ಸ್ವಾಮಿಯ ಪುನರ್‌ಪ್ರತಿಷ್ಟಾಪನೆ ಕೂಡ ಮಾಡಿಸಿದ್ದಾರೆ. ಡಾ. ಮಲ್ಲಕ್ಕಿ ಶ್ರೀಪಾದ ಭಟ್ಟರ ಪೌರೋಹಿತ್ಯದಲ್ಲಿ ಈ ದೇವತಾಕಾರ್ಯ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ವಾಯುಪುತ್ರನ ಸೇವಾಕಾರ್ಯದಲ್ಲೂ ತಲ್ಲೀನ ರಾಗಿರುವ ರಾಮಪ್ಪನವರು ಅಲ್ಲಿ ಅನ್ನದಾನ, ವಿದ್ಯಾದಾನಗಳನ್ನು ಹಮ್ಮಿಕೊಳ್ಳುವ ಯೋಜನೆ ಹೊಂದಿದ್ದಾರೆ !

*

ರಾಮಪ್ಪನವರು ನಿಜಕ್ಕೂ ಒಬ್ಬ ಧಾರ್ಮಿಕ ಸಂತ. ಸಾಮಾನ್ಯರಲ್ಲಿ ಸಾಮಾನ್ಯರಂತೇ ಬದುಕುವ ಅವರಲ್ಲಿ ಒಬ್ಬ ಮಹಾನ್ ಜನಸೇವಕ ಅಡಗಿzನೆ.
ಧರ್ಮ, ಜಾತಿ, ಮತ, ಎಲ್ಲವನ್ನೂ ಮೀರಿ ನಿಂತಿರುವ ರಾಮಪ್ಪನವರಿಗೆ ಸಮಾಜಸೇವೆ ಮತ್ತು ಬಡವರ ಪರ ನಿಲ್ಲಬೇಕು ಎನ್ನುವುದು ಪ್ರಥಮ ಆಧ್ಯತೆ. ಅದೇ ಕಾರಣಕ್ಕೆ ಅವರು ಇವತ್ತು ಸಿಗಂದೂರು ಕ್ಷೇತ್ರವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದಿzರೆ. ವಿಶ್ವವಾಣಿ ಗ್ಲೋಬಲ್ ಅಚರ್ಸ್ ಪ್ರಶಸ್ತಿ ಪಡೆಯಲು ಯೋಗ್ಯರಾಗಿದ್ದಾರೆ.

-ಡಾ. ಶ್ರೀಪಾದ್ ಭಟ್, ಮಲ್ಲಕ್ಕಿ