ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ-೧ ಬಟ್ಟಲು, ಉಪ್ಪ-ರುಚಿಗೆ ತಕ್ಕಷ್ಟು, ಸಾಸಿವೆ- ಸ್ವಲ್ಪ, ಕರಿಬೇವು-ಸ್ವಲ್ಪ, ಜೀರಿಗೆ-ಸ್ವಲ್ಪ, ಎಣ್ಣೆ- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ, ಕಡಲೆಕಾಯಿ ಬೀಜ- ೧ ಸಣ್ಣ ಬಟ್ಟಲು(ಹುರಿದು ಪುಡಿ ಮಾಡಿದ್ದು)
ಮಾಡುವ ವಿಧಾನ: ಹಿಂದಿನ ದಿನ ರಾತ್ರಿಯೇ ಸಬ್ಬಕ್ಕಿಯನ್ನು ೩-೪ ಬಾರಿ ತೊಳೆದು ಸಬ್ಬಕ್ಕಿ ಮುಳುಗುವಷ್ಟು ನೀರು ಹಾಕಿ ನೆನೆಸಿಟ್ಟುಕೊಳ್ಳಬೇಕು. ಮರುದಿನ ಬೆಳಿಗ್ಗೆ ಬಾಣಲೆಗೆ ಎಣ್ಣೆ ಹಾಕಿ, ಕಾದನಂತರ ಸಾಸಿವೆ, ಕರಿಬೇವು, ಜೀರಿಗೆ ಹಾಕಿ ಕೆಂಪಗೆ
ಹುರಿದುಕೊಳ್ಳಿ. ನಂತರ ನೆನೆಸಿಟ್ಟ ಸಬ್ಬಕ್ಕಿ ಹಾಕಿ ಸಣ್ಣ ಉರಿಯಲ್ಲಿ ಸಬ್ಬಕ್ಕಿ ನೀರಿನ ಬಣ್ಣ ತಿರುಗುವವರೆಗೆ ಬಿಡಿ. ನಂತರ ಇದಕ್ಕೆ
ಉಪ್ಪು, ಕಡಲೆಕಾಯಿ ಬೀಜದ ಪುಡಿ ಹಾಕಿ ಮಿಶ್ರಣ ಮಾಡಿದರೆ, ಸಬ್ಬಕ್ಕಿ ಕಿಚಡಿ ಸಿದ್ಧ.