Thursday, 12th December 2024

ಸಿಹಿ ನಿದ್ರೆಗೆ ಸ್ಮಾರ್ಟ್‌ ಟಚ್‌ ಟಚ್ ನೀಡಿದ ರಿಪೋಸ್‌

ಹಾಸಿಗೆಗೆ ನೂತನ ಆಯಾಮ ನೀಡಿದ ಮ್ಯಾಟ್ರಸ್ ಕಂಪನಿ

ರಾಮನಾಥ್ ಭಟ್ ಅವರ ಮ್ಯಾಟ್ರಸ್ ಲೋಕದ ಸಾಹಸಗಾಥೆ

ನಾವು ಜೀವನದ ಬಹುಪಾಲು ಸಮಯ ಕಳೆಯುವ ಹಾಸಿಗೆಯ ಮೇಲೆ. ಮನುಷ್ಯ ಅತಿಹೆಚ್ಚು ಕಾಲ ಒಂದೇ ಸ್ಥಳ ದಲ್ಲಿರುವುದು ಇದೇ ಹಾಸಿಗೆಯಲ್ಲಿ. ನಿದ್ರೆ ಎಲ್ಲರಿಗೂ ಬೇಕು. ಆದರೆ, ನಾವು ನಿದ್ರಿಸುವ ಹಾಸಿಗೆಯ ಬಗೆಗೆ ನಮಗಂತೂ ಕಾಳಜಿಯೇ ಇಲ್ಲ. ನಿದ್ರಾಭಂಗದ ದಿನಗಳನ್ನು ಎದುರಿಸುತ್ತಿರುವ ಆಧುನಿಕ ಜನಾಂಗದ ಆಶಾಕಿರಣವಾಗಿ, ಸಿಹಿನಿದ್ರೆಗೆ ವೇದಿಕೆ ಒದಗಿಸುವ ಸಲುವಾಗಿ ರೂಪಿಸಿದ್ದೇ ರಿಪೋಸ್‌ನ ವಿನೂತನ, ಸ್ಮಾರ್ಟ್ ಶ್ರೇಣಿಯ ಹಾಸಿಗೆಗಳು. ಈ ನಿಟ್ಟಿನಲ್ಲಿ ರಿಪೋಸ್ ಸಂಸ್ಥೆಯದ್ದು ಹೊಸ ಸಾಹಸ ಗಾಥೆ. ಈ ಸಾಹಸಗಾಥೆಯ ಬಗ್ಗೆ, ಸಂಸ್ಥೆಯ ಕಾಳಜಿ, ಹುಟ್ಟು, ವಿನ್ಯಾಸ, ಆವಿಷ್ಕಾರ ಮತ್ತು ಮುಂದಿನ ಗುರಿಗಳ ಬಗ್ಗೆ ಸಂಸ್ಥೆಯ ಮುಖ್ಯಸ್ಥ ರಾಮನಾಥ್ ಭಟ್ ಅವರು ವಿಶ್ವವಾಣಿ ಸಂದರ್ಶನ ದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ

ರಿಪೋಸ್ ಸಂಸ್ಥೆಯ ಹುಟ್ಟು ಎಲ್ಲಿಂದ ಆರಂಭವಾಯ್ತು?
ನವೆಂಬರ್ 2012ರಲ್ಲಿ ರಿಪೋಸ್ ಸಂಸ್ಥೆಯನ್ನು ಆರಂಭ ಮಾಡಲಾಯಿತು. ಮ್ಯಾಟ್ರಸ್ ತಯಾರಿಕೆ ಕ್ಷೇತ್ರದಲ್ಲಿ ಅನುಭವವಿದ್ದ ನಾಲ್ವರು ಸ್ನೇಹಿತರು ಸೇರಿ ಕಂಪನಿಯನ್ನು ಆರಂಭಿಸಿದೆವು. ನಮ್ಮ ಸಂಸ್ಥೆಯ ಕೋರ್ ಟೀಂನಲ್ಲಿರುವ ಸದಸ್ಯರದ್ದು ಸುಮಾರು 150 ವರ್ಷಕ್ಕೂ ಕಡಿಮೆಯಿಲ್ಲದ ಮ್ಯಾಟ್ರಸ್ ತಯಾರಿಕಾ ಅನುಭವ. ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಸಿಗೆ ತಯಾರಿಕೆ ಕ್ಷೇತ್ರದಲ್ಲಿ ಅನುಭವವಿರುವ ತಂಡ ಜತೆಗೂಡಿದೆ.

ಮ್ಯಾಟ್ರಸ್ ಕ್ಷೇತ್ರದಲ್ಲಿ ಇಷ್ಟೊಂದು ಆವಿಷ್ಕಾರ ಕೈಗೊಳ್ಳಲು ಕಾರಣವೇನು?
ಪ್ರತಿಯೊಬ್ಬ ಮನುಷ್ಯನಿಗೂ ದಿನದಲ್ಲಿ ಕನಿಷ್ಠಎಂಟು ಗಂಟೆ ನಿದ್ರೆ ಬೇಕೆ ಬೇಕು ಎನ್ನುತ್ತಾರೆ ವೈದ್ಯರು. ಆದರೆ, ಅಂತಹ ನಿದ್ರೆಗೆ ಹಾಸಿಗೆ ಎಷ್ಟು ಮುಖ್ಯ ಎಂಬುದನ್ನು ಜನರು ಮನಗಂಡಿಲ್ಲ. ದೇಶದಲ್ಲಿ ನಡೆಯುವ ಬಹುತೇಕ ಅಪಘಾತಗಳಿಗೆ ನಿದ್ರೆಯ
ಕೊರತೆಯೇ ಕಾರಣ ಎನ್ನುತ್ತವೆ ವರದಿಗಳು. ಆದರೂ, ನಮ್ಮ ದೇಶದ ಜನರು ಮಂಚಕ್ಕೆ ಕೊಡುವಷ್ಟು ಆಧ್ಯತೆಯನ್ನು ಹಾಸಿಗೆಗೆ ಕೊಡುವುದಿಲ್ಲ. ನಾವು ಬಳಸುವ ಹಾಸಿಗೆ ಯಾವುದು ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇರುವುದಿಲ್ಲ.

ಎಷ್ಟು ವರ್ಷವಾಯ್ತು ಎಂಬ ಗಮನವೂ ಇರುವುದಿಲ್ಲ. ಅದರ ಮೇಲೆ ಎಷ್ಟು ಕೊಳೆಯಿದೆ ಎಂಬ ಬಗ್ಗೆ ನಾವು ಗಮನ ನೀಡು ವುದೇ ಇಲ್ಲ. ಹೀಗಿರುವಾಗ ಮನುಷ್ಯನಿಗೆ ನಿದ್ರೆ ಮತ್ತು ಆ ನಿದ್ರಿಸುವ ಸ್ಥಳವಾದ ಹಾಸಿಗೆ ಎಷ್ಟು ಮುಖ್ಯ ಎಂಬುದನ್ನು ಮನಗಾ ಣಲು ಈ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ಮುಂದಾಗಿದ್ದೇವೆ.

ರಿಪೋಸ್ ಮ್ಯಾಟ್ರಸ್ ಸಾಮ್ರಾಜ್ಯದ ವಿಸ್ತರಣೆ ಹೇಗಿದೆ?
ಕೇರಳದಿಂದ ನಮ್ಮ ಮ್ಯಾಟ್ರಸ್ ಸಂಸ್ಥೆಯ ವಹಿವಾಟು ಆರಂಭವಾಗಿತ್ತು. ಕೊಯಮತ್ತೂರಿನಲ್ಲಿ ನಮ್ಮ ಮುಖ್ಯ ತಯಾರಿಕಾ ಘಟಕ ನಿರ್ಮಿಸಲಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಹಾಸಿಗೆ ಸಂಬಂಧಿಸಿ ವಿಶೇಷ ಕಾಳಜಿಯಿದೆ. ಈ ಎರಡು ರಾಜ್ಯಗಳಿಗೆ ನಿರ್ಮಾಣ ಘಟಕ ಹತ್ತಿರದಲ್ಲಿದೆ. ರಾಜ್ಯಕ್ಕೂ ಕೂಡ 24 ಗಂಟೆಯೊಳಗೆ ರವಾನೆ ಮಾಡಲು ಸಾಧ್ಯವಿದೆ. ಹೀಗಾಗಿ, ಅಲ್ಲಿ ನಿರ್ಮಾಣ ಮಾಡಲಾಗಿದೆ. ಪಶ್ಚಿಮ ಭಾರತಕ್ಕೆ ಸಂಬಂಽಸಿದಂತೆ ಪುಣೆಯಲ್ಲಿ, ಮತ್ತೊಂದು ಘಟಕವನ್ನು ಮೀರತ್‌ನಲ್ಲಿ ತೆರೆಯಲಾಗಿದೆ.

ಮುಂದಿನ ದಿನಗಳಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಿರ್ಮಾಣ ಘಟಕ ತೆರೆಯುವ ಚಿಂತನೆ ನಡೆದಿದೆ. ಅಲ್ಲಿಂದ ಈಶಾನ್ಯ ರಾಜ್ಯಗಳಲ್ಲಿ ತನ್ನ ಸಾಮಾಜ್ರ್ಯ ಸ್ಥಾಪಿಸಲು ಚಿಂತಿಸಲಾಗಿದೆ. ದೇಶಾದ್ಯಂತ 1400ಕ್ಕೂ ಹೆಚ್ಚು ಡೀಲರ‍್ಸ್‌ಗಳನ್ನು ಸಂಸ್ಥೆ ಹೊಂದಿ ದೆ. 400 ಕ್ಕೂ ಹೆಚ್ಚು ಕಾರ್ಮಿಕರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 100ಕ್ಕೂ ಅಧಿಕ ಸೇಲ್ಸ್ ಟೀಂ ಇದೆ. ಗ್ರಾಹಕರಿಗೆ ಬೆಡ್ ರೂಂ ಡೆಲೆವರಿ ನೀಡಲಾಗುತ್ತದೆ. ಗ್ರಾಹಕರ ಕಾಟ್ ಮತ್ತು ಬೆಡ್ ರೂಂ ವಿನ್ಯಾಸಕ್ಕೆ ತಕ್ಕಂತೆ ಹಾಸಿಗೆ ತಯಾರಿಸಿಕೊಡುವ ವ್ಯವಸ್ಥೆ ವ್ಯವಸ್ಥೆಯಿದೆ.

ಇತರ ಮ್ಯಾಟ್ರಸ್‌ಗಳಿಗಿಂತ ರಿಪೋಸ್ ಮ್ಯಾಟ್ರಸ್ ಹೇಗೆ ಭಿನ್ನವಾಗಿವೆ?
ರಿಪೋಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಉತ್ಪನ್ನಗಳಿವೆ. ಕನಿಷ್ಠ 5 ಸಾವಿರದಿಂದ 2 ಲಕ್ಷದವರೆಗಿನ ವಿವಿಧ ಬೆಲೆಯ ಹಾಸಿಗೆಗಳು ಲಭ್ಯವಿದೆ. ಬಿಐಎ ಎಂಬ ಅಮೆರಿಕದ ಮ್ಯಾಟ್ರಸ್ ಕಂಪನಿ ಜತೆಗೆ ರಿಪೋಸ್ ಒಪ್ಪಂದ ಮಾಡಿಕೊಂಡಿದೆ. ಅಮೆರಿಕದ ಮ್ಯಾಟ್ರಸ್ ಗುಣಮಟ್ಟವನ್ನು ಭಾರತಕ್ಕೆ ತಲುಪಿಸುವ ಪ್ರಯತ್ನವನ್ನು ಆ ಮೂಲಕ ಮಾಡಲಾಗುತ್ತಿದೆ. ಭಾರತಕ್ಕೆ ಹೋಲಿಕೆ ಮಾಡಿದರೆ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ನಿದ್ರೆ ಮತ್ತು ಹಾಸಿಗೆಗೆ ಹೆಚ್ಚು ಗಮನ ನೀಡುತ್ತವೆ. ಹೀಗಾಗಿ, ಭಾರತದಲ್ಲಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನೆಮ್ಮದಿಯ ನಿದ್ರೆಯನ್ನು ಆಸ್ವಾದಿಸುವಂತೆ ಮಾಡುವುದು ರಿಪೋಸ್ ಗುರಿಯಾಗಿದೆ.

ವೇಕ್ ಅಪ್ ಟು ಪ್ರೆಶ್ ಐಡಿಯಾಸ್ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಲಾಕರ್ ಬೆಡ್ ಆವಿಷ್ಕಾರ ಮಾಡಲಾಗಿದೆ. ಮ್ಯೂಸಿಕ್ ಪಿಲ್ಲೋ ತಯಾರಿಸಿದ್ದು, ಇದು ಭಾರತದಲ್ಲಿಯೇ ಮೊದಲ ಪ್ರಯೋಗ. ನಾವು ಬಳಸುವ ದಿಂಬಿಗೆ ಮೊಬೈಲ್ ಕನೆಕ್ಟ್ ಮಾಡಿ ಸಂಗೀತ ಕೇಳಬಹುದು. ಸ್ಮಾರ್ಟ್‌ಗ್ರೀಡ್ ಹಾಸಿಗೆಗಳನ್ನು ಇತ್ತೀಚೆಗೆ ಮಾರುಕಟ್ಟೆಗೆ ತರಲಾಗಿದೆ.
ಇದು ಜಪಾನೀಸ್ ಟೆಕ್ನಾಲಜಿ ಹೊಂದಿದ್ದು, ಇದರಲ್ಲಿ 2500 ಏರ್ ಪ್ಯಾಕೇಟ್ ಒಳಗೊಂಡಿದೆ. ಇದು ಆರಾಮದಾಯ ನಿದ್ರೆಯನ್ನು ತರುವ ಉತ್ಪನ್ನವಾಗಿದೆ.

ಮಾರುಕಟ್ಟೆ ವಿಸ್ತರಣೆಗೆ ರಿಪೋಸ್‌ನ ಕಾರ್ಯತಂತ್ರಗಳೇನು?
ರಿಪೋಸ್ ತನ್ನ ಮಾರುಕಟ್ಟೆಯನ್ನು ದೇಶಾದ್ಯಂತ ವಿಸ್ತರಣೆ ಮಾಡುವ ಪ್ರಯತ್ನವನ್ನು ನಡೆಸಿದೆ. ಈ ಕಾರಣದಿಂದ ಭಾರತದ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರನ್ನು ಸಂಸ್ಥೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಲಾಗಿದೆ. ಅವರು ಮುಂದಿನ ಎರಡು ವರ್ಷಗಳ ಕಾಲ ನಮ್ಮ ರಾಯಭಾರಿಯಾಗಿರಲಿದ್ದಾರೆ. ಎರಡು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೇರಳದಲ್ಲಿ ನಡೆಯುವ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಆಫಿಷಿಯಲ್ ಪಾರ್ಟನರ್ ಆಗಿ ಮುಂದುವರಿಯಲು ತೀರ್ಮಾನಿಸಿದ್ದೇವೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕ್ರಮಗಳನ್ನು ಕೈಗೊಂಡಿದ್ದೇವೆ.

ಸಂಸ್ಥೆಯ ಖ್ಯಾತಿ ಮತ್ತು ಗುರಿಯೇನು?
ಸಂಸ್ಥೆಗೆ ಎಕಾನಾಮಿಕ್ಸ್ ಟೈಮ್ಸ್‌ನಿಂದ ಬೆಸ್ಟ್ ಬ್ರಾಂಡ್ ಅವಾರ್ಡ್ ಬಂದಿದೆ. ಇದು ಕೂಡ ಎರಡು ಬಾರಿ ಬಂದಿದೆ. ೨೦೧೯ರಲ್ಲಿ ಕೇಂದ್ರ ಸರಕಾರದಿಂದ ದೇಶದ ಉತ್ತಮ ಸಣ್ಣ ಮತ್ತು ಮಧ್ಯಮ ವ್ಯಾಪಾರೋದ್ಯಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸಂಸ್ಥೆಯು 200 ಕೋಟಿ ಆರ್ಥಿಕ ಗುರಿಯನ್ನು ಹೊಂದಿದ್ದು, 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ 103 ಕೋಟಿ ವಹಿವಾಟು ನಡೆಸಿದೆ. ಮುಂದಿನ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸುಮಾರು 200 ಕೋಟಿ ರು. ವಹಿವಾಟು ನಡೆಸುವ ಗುರಿ ಹೊಂದಿದೆ.

ಈ ಕಾರಣಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ 300ಕ್ಕೂ ಹೆಚ್ಚು ಟ್ರೇಡ್ ಪಾಲುದಾರ ರನ್ನು ರೂಪಿಸಿದೆ. ದೇಶದ ನಂ.1 ಮ್ಯಾಟ್ರಸ್ ಕಂಪನಿಯಾಗಿ ಬೆಳೆಯುವ ನಿಟ್ಟಿನಲ್ಲಿ ನಾವು ಗಮನ ಕೇಂದ್ರೀಕರಿಸಿದ್ದು, ನಮ್ಮ ಉತ್ಕೃಷ್ಟ ಗುಣಮಟ್ಟ ಮತ್ತು ಧ್ಯೇಯ ನಮ್ಮನ್ನು ಆ ಸ್ಥಾನದಲ್ಲಿ ಪ್ರತಿಷ್ಠಾಪಿಸಲಿದೆ ಎಂಬ ನಂಬಿಕೆ ನಮ್ಮಲ್ಲಿದೆ.

ಮ್ಯೂಸಿಕ್ ಪಿಲ್ಲೋ
ರಿಪೋಸ್ ದೇಶದಲ್ಲಿಯೇ ಮೊದಲ ಮ್ಯೂಸಿಕ್ ಪಿಲ್ಲೋ ಅನ್ನು ಪರಿಚಯಿಸುತ್ತಿದೆ. ಇದರಲ್ಲಿ ಎರಡು ಸ್ಪೀಕರ್‌ಗಳು ಇದ್ದು, ನಿದ್ರೆಗೆ ಯಾವುದೇ ತೊಡಕಾಗದಂತೆ, ಪಕ್ಕದಲ್ಲಿರುವವರ ನಿದ್ರೆಗೆ ಯಾವುದೇ ಅಡಚಣೆಯಿಲ್ಲದಂತೆ ಸಂಗೀತ ಕೇಳುವ ಸಾಧ್ಯತೆ ಒದಗಿಸಿದೆ. ಮೊಬೈಲ್ ಕನೆಕ್ಟ್ ಮಾಡುವ ಮೂಲಕ ಸಂಗೀತ, ಮೋಟಿವೇಷನಲ್ ಸ್ಪೀಚ್ ಮೊದಲಾದವುಗಳನ್ನು ಕೇಳಲು ಅನುಕೂಲ ಒದಗಿಸಲಿದೆ. ಸ್ಪ್ರಿಂಗ್ ಮ್ಯಾಟ್ರಸ್ ಸರಣಿಯಲ್ಲಿ ಪಕ್ಕದವರಿಗೆ ನಿದ್ರಾಭಂಗವಾಗದಂತಹ ವ್ಯವಸ್ಥೆಯಿದೆ.

***

? ರಿಪೋಸ್ ಅತ್ಯಾಧುನಿಕ ತಂತ್ರಜ್ಞಾನದ ಮ್ಯಾಟ್ರಸ್ ಕಂಪನಿ

? ೨೦೨೧-೨೨ ನೇ ಆರ್ಥಿಕ ವರ್ಷದಲ್ಲಿ ೧೦೩ ಕೋಟಿ ವಹಿವಾಟು
? ೨೦೨೨-೨೩ರಲ್ಲಿ ೨೦೦ ಕೋಟಿ ರು. ವಹಿವಾಟಿನ ಗುರಿ
? ದೇಶದಲ್ಲಿ ೧೫೦೦ಕ್ಕೂ ಹೆಚ್ಚು ಡೀಲರ್‌ಗಳನ್ನು ಹೊಂದಿದ ಸಂಸ್ಥೆ
? ೫೦ಕ್ಕೂ ಹೆಚ್ಚು ಉತ್ಪನ್ನ, ೫ ಸಾವಿರದಿಂದ ೨ ಲಕ್ಷದವರೆಗಿನ ಹಾಸಿಗೆ
? ಸ್ಮಾರ್ಟ್ ಗ್ರೀಡ್ ಮ್ಯಾಟ್ರಸ್, ಮ್ಯೂಸಿಕ್ ಪಿಲ್ಲೋ ಆವಿಷ್ಕಾರ