Sunday, 15th December 2024

ಸ್ವಯಂ ಸೇವಕರಿಂದ ಸಾಮಾಜಿಕ ಸಾಮರಸ್ಯದ ವಾತಾವರಣ ನಿರ್ಮಾಣ

ಮೋಹನ್ ಭಾಗವತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರು

ವಿಜಯದಶಮಿ ಉತ್ಸವದ ಸಂದರ್ಭ ಮಾಡಿದ ಭಾಷಣ

ಈ ವರ್ಷ ನಮ್ಮ ಸ್ವಾತಂತ್ರ್ಯದ 75ನೇ ವರ್ಷ. ನಾವು 15 ಆಗ 1947 ರಂದು ಸ್ವತಂತ್ರರಾದೆವು. ದೇಶವನ್ನು ಮುನ್ನಡೆಸಲು ನಾವು ನಮ್ಮ ದೇಶದ ಸೂತ್ರ ಗಳನ್ನು ನಮ್ಮ ಕೈಯಲ್ಲಿ ತೆಗೆದುಕೊಂಡಿದ್ದೇವೆ. ಅದು ಸ್ವಾಧೀನತೆ ಯಿಂದ ಸ್ವಾತಂತ್ರ್ಯದೆಡೆಗಿನ ನಮ್ಮ ಪ್ರಯಾಣದ ಆರಂಭದ ಒಂದು ಬಿಂದುವಾಗಿತ್ತು. ಈ ಸ್ವಾತಂತ್ರ್ಯ ನಮಗೆ ರಾತ್ರೋರಾತ್ರಿ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸ್ವತಂತ್ರ ಭಾರತದ ಚಿತ್ರಣ ಹೇಗಿರಬೇಕು, ಭಾರತೀಯ ಪರಂಪರೆಯ ಅನುಸಾರವಾಗಿ, ನಾವೆ ಸಮಾನರು ಎಂಬ ಮನೋಭಿಲಾಷೆಯೊಂದಿಗೆ ದೇಶದ ವಿವಿಧ ಪ್ರದೇಶಗಳಿಂದ, ಎಲ್ಲ ಜತಿಗಳಿಗೆ ಸೇರಿದ ವೀರರ ತಪಸ್ಸು, ತ್ಯಾಗ ಮತ್ತು ಬಲಿದಾನಗಳು ಹಿಮಾಲಯ ಪರ್ವತದಂತೆ ನಮ್ಮ ಮುಂದಿದೆ.

ಗುಲಾಮಗಿರಿಯ ಭಾರವನ್ನು ಎದುರಿಸುತ್ತಿದ್ದ ಸಮಾಜವೂ ಅವರೊಂದಿಗೆ ಜತೆಯಾಗಿ ನಿಂತಿತು. ನಂತರ ಶಾಂತಿಯುತ ಸತ್ಯಾಗ್ರಹದಿಂದ ಹಿಡಿದು ಸಶಸ್ತ್ರ ಹೋರಾಟದವರೆಗಿನ ಎಲ್ಲ ಮಾರ್ಗಗಳು ಸ್ವಾತಂತ್ರ್ಯದ ಹೊಸ್ತಿಲಿಗೆ ತಂದು ನಿಲಿಸಿದವು. ಆದರೆ ನಮ್ಮ ತಾರತಮ್ಯದ ಮನಸ್ಥಿತಿ, ಸ್ವಧರ್ಮದ, ಸ್ವರಾಷ್ಟ್ರ, ಸ್ವತಂತ್ರ್ಯದ ಬಗೆಗಿನ ಅರಿವಿನ ಅeನ, ಅಸ್ಪಷ್ಟತೆ, ಅನಿಶ್ಚಿತ ನೀತಿ ಮತ್ತು ಅದರೊಂದಿಗೆ ಆಟವಾಡುವ ಬ್ರಿಟಿಷರ ಕುಟಿಲ ತಂತ್ರಗಳ ಕಾರಣ, ಎಂದಿಗೂ ಮರೆಯಲಾಗದ ದೇಶ ವಿಭಜನೆಯ ನೋವು ಪ್ರತಿ ಭಾರತೀಯನ ಹೃದಯದಲ್ಲಿ ನೆಲೆಗೊಂಡಿತು. ನಮ್ಮ ಇಡೀ ಸಮಾಜ, ವಿಶೇಷವಾಗಿ ಹೊಸ ತಲೆಮಾರಿ ನವರು ಈ ಇತಿಹಾಸವನ್ನು ತಿಳಿದು ಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಮತ್ತು ನೆನಪಿಟ್ಟುಕೊಳ್ಳಬೇಕು. ಯಾರೊಂದಿಗೋ ದ್ವೇಷವನ್ನು ಹೊಂದಲು ಈ ಕಾರ್ಯ ಮಾಡಬಾರದು. ಕಳೆದುಹೋದ ಏಕತೆ ಮತ್ತು ಸಮಗ್ರತೆಯನ್ನು ಮರಳಿ ಪಡೆಯಲು ಆ ಸ್ಮರಣೆಯು ಅವಶ್ಯಕವಾಗಿದೆ. ಪರಸ್ಪರ ದ್ವೇಷವನ್ನು ಹೆಚ್ಚಿಸುವ ಮೂಲಕ ಆ ಇತಿಹಾಸವನ್ನು ಪುನರಾವರ್ತಿ ಸುವ ಪ್ರಯತ್ನಗಳನ್ನು ಸಂಪೂರ್ಣವಾಗಿ ವಿಫಲಗೊಳಿಸುತ್ತದೆ.

ಸಾಮಾಜಿಕ ಸಾಮರಸ್ಯ: ಸಮಾನ ಸಮಾಜವು ಒಂದು ಏಕೀಕೃತ ಮತ್ತು ಅಖಂಡ ರಾಷ್ಟ್ರದ ಪೂರ್ವಭಾವಿ ಷರತ್ತಾಗಿದೆ. ಇದಕ್ಕೆ ಜತಿಯಾಧಾರಿತ ಅಸಮಾನತೆ ಅಡ್ಡಿಯಾಗಿದೆ, ಇದು ನಮ್ಮ ದೇಶದ ಹಳೆಯ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಹಲವು ಕಡೆಯಿಂದ, ಹಲವು ರೀತಿಯಲ್ಲಿ ಪ್ರಯತ್ನ ಗಳು ನಡೆದಿವೆ. ಆದಾಗ್ಯೂ, ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ. ಸಮಾಜದ ಮನಸ್ಸು ಇನ್ನೂ ಜತಿ, ಅಸಮಾನತೆಯ ಭಾವನೆ ಗಳಿಂದ ಕೂಡಿದೆ. ದೇಶದ ಬೌದ್ಧಿಕ ಪರಿಸರದಲ್ಲಿ ಈ ಅಂತರವನ್ನು ಕಡಿಮೆ ಮಾಡುವ ಮೂಲಕ, ಪರಸ್ಪರ ಅನ್ಯೋನ್ಯತೆ ಮತ್ತು ಸೌಹಾರ್ದತೆ ಸೃಷ್ಟಿಸುವ ಧ್ವನಿಗಳು ಕಡಿಮೆ, ಹಾಳುಗೆಡವುವರೇ ಹೆಚ್ಚು. ನಮ್ಮ ಮಾತುಕಥೆಗಳು ಸಕಾರಾತ್ಮಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಗಮನ ವಹಿಸಬೇಕು.

ಸಮಾಜವನ್ನು ಅನ್ಯೋನ್ಯತೆ ಮತ್ತು ಸಮಾನತೆಯ ಆಧಾರದ ಮೇಲೆ ಕಟ್ಟಬಯಸುವವರೆಲ್ಲರೂ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಾಮಾಜಿಕ ಮತ್ತು ಕೌಟುಂಬಿಕ ಮಟ್ಟದಲ್ಲಿ ಪರಸ್ಪರ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಪರಸ್ಪರ ಸ್ನೇಹ ಮತ್ತು ಕುಟುಂಬಗಳ ನಡುವಣ ಬಾಂಧವ್ಯಗಳು ಸಾಮಾ ಜಿಕ ಸಮಾನತೆ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ. ಸಂಘದ ಸ್ವಯಂ ಸೇವಕರು ಸಾಮಾಜಿಕ ಸಾಮರಸ್ಯದ ಚಟುವಟಿಕೆಗಳ ಮೂಲಕ ಸಾಮಾಜಿಕ ಸಾಮರಸ್ಯ ದ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಮತ್ತು ಏಕತೆ: ಭಾರತದ ಸಮಗ್ರತೆ ಮತ್ತು ಏಕತೆಯ ನಂಬಿಕೆಗಳು ಮತ್ತು ಮಾನವರ ಸ್ವಾತಂತ್ರ್ಯದ ಕಲ್ಪನೆಯು ಶತಶತಮಾನಗಳಿಂದ ಇಲ್ಲಿಯವರೆಗೆ ನಮ್ಮಲ್ಲಿ ನಡೆದುಕೊಂಡು ಬರುತ್ತಿದೆ. ಅದಕ್ಕಾಗಿ ನಿರಂತರ ರಕ್ತ ಮತ್ತು ಬೆವರು ಸುರಿಸುವ ಕೆಲಸವೂ ಸಾಗುತ್ತಲೇ ಇದೆ. ಈ ವರ್ಷ ಶ್ರೀ ಗುರುತೇಗ್ ಬಹದ್ದೂರ್ ಜೀ ಮಹಾರಾಜರ 400ನೇ ಪ್ರಕಾಶ ಪರ್ವವಾಗಿದೆ (400ನೇ ಜನ್ಮ ವರ್ಷಾಚರಣೆ). ಆಗ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಧಾರ್ಮಿಕ ಮತಾಂಧತೆಯ ವಿರುದ್ಧ ನಿಂತಿದ್ದಕ್ಕಾಗಿ ಅವರು ಹುತಾತ್ಮರಾದರು. ಅವರು ಈ ನೆಲದ ಸಂಸ್ಕೃತಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಷ್ಟದೈವ ಪೂಜೆ ಅಥವಾ ಕಿರುಕುಳದ ಭಯ ವಿಲ್ಲದೇ ಒಬ್ಬರ ನಂಬಿಕೆಗಳ ಆಚರಣೆಯನ್ನು ಅನುಷ್ಠಾನಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದರಿಂದ ಅವರನ್ನು  ಗುರಿಯಾಗಿಸಿ ಕೊಂಡಿದ್ದರು.

ಅವರನ್ನು ‘ಚಾದರ್ ಆಪ್‌ಹಿಂದದ (ಹಿಂದ್‌ನ ಗುರಾಣಿ) ಎಂದು ಕರೆಯಲಾಗುತ್ತದೆ. ಅವರು ಶತಮಾನಗಳ ಕಾಲ, ಕಾಲದ ಪ್ರವಾಹಗಳನ್ನು ಧೈರ್ಯ ದಿಂದ ಎದುರಿಸಿದ ಯೋಧರ ನಕ್ಷತ್ರಪುಂಜದಲ್ಲಿ ಸೂರ್ಯರಾಗಿದ್ದರು ಮತ್ತು ಭವ್ಯವಾದ ಮತ್ತು ಎಲ್ಲವನ್ನು ಒಳಗೊಂಡ ಧಾರ್ಮಿಕ
ಸ್ವಾತಂತ್ರ್ಯದ ಭಾರತದ ಪರಂಪರೆಯ ನಿರಂತರತೆಯನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಸಮರ್ಪಿಸಿದರು. ಇಂತಹ ಮಹಾನ್ ಪೂರ್ವಜನರ ಮನದಲ್ಲಿದ್ದ ಗೌರವ, ಅವರ ಮಾತೃಭೂಮಿಗಾಗಿನ ದೃಢವಾದ ಸಮರ್ಪಣಾ ಭಾವ, ತಮ್ಮ ಜೀವ ವನ್ನು ಪಣಕಿಟ್ಟ ತಾಯ್ನಾಡಿನ ಮೇಲಿನ ಅಚಲವಾದ ಭಕ್ತಿ ಮತ್ತು ಅವರಿಂದ ಸಂರಕ್ಷಿಸಲ್ಪಟ್ಟ ಹಾಗೂ ವಧಿಸಿದ ನಮ್ಮ ಉದಾರವಾದ ಸರ್ವಸಮ್ಮತವಾದ ಸಂಸ್ಕೃತಿ ನಮ್ಮ ರಾಷ್ಟ್ರದ ಜೀವನದ ಆಧಾರವಾಗಿದೆ.

ಆಧುನಿಕ ಕಾಲದಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರ ಅವರು ರಚಿಸಿದ ಪ್ರಸಿದ್ಧ ಕವಿತೆಯಲ್ಲಿ ಅದೇ ಮಾತನ್ನು ಬೇರೆ ರೀತಿಯಲ್ಲಿ ಹೇಳಲಾಗಿದೆ. ಎಲ್ಲಿ ಮನಸ್ಸು ಭಯದಿಂದ ಮುಕ್ತವಾಗಿರು ತ್ತದೆಯೋ, ಅಲ್ಲಿ ನಾವು ಹೆಮ್ಮೆಯಿಂದ ತಲೆ ಎತ್ತಿ ನಡೆಯಬಹುದು, ಅಲ್ಲಿ ಜ್ಞಾನಮುಕ್ತವಾಗಿರುತ್ತದೆ. ಎಲ್ಲಿ ವಿಶಾಲವಾದ ವಿಶ್ವವನ್ನು  ಸಂಕುಚಿತತೆಯಿಂದಾಗಿ ತುಂಡರಿಸಿದ ಗೋಡೆಗಳನ್ನು ಕಟ್ಟಲಾಗಿಲ್ಲ ಅಲ್ಲಿ ಪ್ರತಿಯೊಂದು ವಾಕ್ಯವೂ ಹೃದಯಾಳದಿಂದ ಬರುತ್ತದೆ.

ಎಲ್ಲಿ ದಣಿವರಿಯದ ಶ್ರಮವು ತನ್ನ ತೋಳುಗಳನ್ನು ಪರಿಪೂರ್ಣತೆಯ ಕಡೆಗೆ ಚಾಚುತ್ತದೋ; ಎಲ್ಲಿ ಸತ್ಯಧಾರೆಯ ಹರಿವು ತನ್ನ ದಾರಿಯನ್ನು
ಸತ್ತ ಮರುಭೂಮಿಯಲ್ಲಿ ಕಳೆದುಹೋಗುವುದಿಲ್ಲವೋ; ಎಲ್ಲಿ ಮನಸ್ಸು ಸದಾ ಉದಾತ್ತ, ವಿಶಾಲ ಚಿಂತನೆ ಮತ್ತು ಕ್ರಮಕದತ್ತ ಮುನ್ನುಗುತ್ತದೋ;
ನಿದ್ರಿಸುತ್ತಿರುವ ಈ ಭಾರತವನ್ನು ಅದೇ ಸ್ವಾತಂತ್ರ್ಯ ಸ್ವರ್ಗದಲ್ಲಿ ಎಚ್ಚರಗೊಳಿಸಿ. ದೇಶದ ಸ್ವಾತಂತ್ರ್ಯೋತ್ತರ ಜೀವನದ ಈ ಕಲ್ಪಿತ ಚಿತ್ರದ ಸಂದರ್ಭದಲ್ಲಿ, ನಾವು ಸನ್ನಿವೇಶಗಳನ್ನು ನೋಡಿದಾಗ, ಸ್ವಾಧೀನತೆಯಿಂದ ಸ್ವಾತಂತ್ರ್ಯದತ್ತ ನಮ್ಮ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ ಎಂದು ಮನಸ್ಸಿಗೆ ಬರುತ್ತದೆ. ಭಾರತದ ಪ್ರಗತಿಗೆ ಮತ್ತು ವಿಶ್ವದಲ್ಲಿ ಭಾರತ ಗೌರವಾನ್ವಿತ ಸ್ಥಾನವನ್ನು ಪಡೆಯುವುದು ಕೆಲವು ವಿಷಿದ್ಧಕಾರಿ ಚಿಂತನೆಗಳುಳ್ಳವರಿಗೆ ಬೇಡವಾಗಿದೆ. ಕೆಲವು ದೇಶಗಳಲ್ಲಿ ಅವರಿಗೆ ಅಧಿಕಾರವಿದೆ.

ಸನಾತನ ಮೌಲ್ಯಾಧಾರಿತ ವ್ಯವಸ್ಥೆಯನ್ನು ಅನುಸರಿಸುವ ಬಗ್ಗೆ ಆಲೋಚಿಸುವ ಧರ್ಮವು ಭಾರತದಲ್ಲಿ ಮೇಲುಗೈ ಸಾಧಿಸಿದರೆ, ಸ್ವಾರ್ಥಶಕ್ತಿಗಳ ದುಷ್ಟ ಆಟವು ತಟಸ್ಥಗೊಳ್ಳುತ್ತದೆ. ಭಾರತವು ವಿಶ್ವವನ್ನು ತನ್ನಮೌಲ್ಯಾಧಾರಿತ- ಧಾರ್ಮಿಕ ದೃಷ್ಟಿಕೋನದಿಂದ ನೋಡುತ್ತದೆ. ಅದು ಜಗತ್ತಿನಲ್ಲಿ ಕಳೆದು ಹೋದ ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಪರಸ್ಪರ ಸಹಕಾರ ಮತ್ತು ಸ್ನೇಹಪರತೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ತಡೆಯಲು ವ್ಯವಸ್ಥಿತವಾದ ಷಡ್ಯಂತರಗಳು ನಿರಂತರವಾಗಿ ನಡೆಯುತ್ತಿದೆ. ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರಿಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು
ಮತ್ತು ಭಾರತದ ಪ್ರಜೆಗಳನ್ನೂ ಗೊಂದಲಕ್ಕೀಡು ಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಈ ಪಡೆಗಳು ತಮ್ಮ ಕಾರ್ಯಾ ಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯ ಗತಗೊಳಿಸಲು ಒಗ್ಗೂಡುತಿವೆ.

ನಾವು ಇಂತಹ ಎಲ್ಲ ಪಡೆಗಳು ಸೃಷ್ಟಿಸಿತ್ತಿರುವ ಈ ಮಾನಸಿಕ ಮಾಯಾ ಜಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ವಕ್ರ ಮನಸ್ಸುಗಳು ತಮ್ಮ ಹಳೆಯ ತಂತ್ರಗಳನ್ನು ಅನುಸರಿಸುತ್ತವೆ ಮತ್ತು ಅವರ ದುಷ್ಕೃತ್ಯಗಳನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಹಂಕಾರದ ಮತಾಂಧರಿಂದಾಗಿ ಕೆಲವು ಬೆಂಬಲವನ್ನು ಗಳಿಸಲು, ಜನರ ಅeನದ ಲಾಭವನ್ನು ಪಡೆದು ಅಸತ್ಯದ ಆಧಾರದ ಮೇಲೆ ಅವರನ್ನು ದಾರಿ ತಪ್ಪಿಸಲು, ಅವರ ಪ್ರಸ್ತುತ ಅಥವಾ ಕಾಲ್ಪನಿಕ ಸಮಸ್ಯೆಗಳನ್ನು ಉತ್ಪ್ರೇಕ್ಷಿಸುವ ಮೂಲಕ ಜನರನ್ನು ಕೆರಳಿಸುವುದು, ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಮತ್ತು ಯಾವುದೇ ಬೆಲೆಯನ್ನು ತೆತ್ತು ಅತೃಪ್ತಿ, ಪರಸ್ಪರ ಸಂಘರ್ಷ, ಭಿನ್ನಾಭಿಪ್ರಾಯ, ಭಯೋತ್ಪಾದನೆ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಮೂಲಕ ಅವರ ಕ್ಷೀಣಿಸುತ್ತಿರುವ ಪ್ರಭಾವವನ್ನು ಪುನಃ
ಸಮಾಜದಲ್ಲಿ ಹೇರುವ ದುರುದ್ದೇಶ ಈಗಾಗಲೇ ಬಹಿರಂಗವಾಗಿದೆ.

ಕರೋನಾ ವಿರುದ್ಧದ ಹೋರಾಟ: ಕರೋನಾ ವೈರಸ್‌ನ ಮೂರನೇ ಅಲೆಯನ್ನು ಎದುರಿಸಲು ಸಜಗಿದ್ದು, ನಮ್ಮ ಸ್ವಾತಂತ್ರ್ಯದ ೭೫ನೇ
ವಾರ್ಷಿಕೋತ್ಸವವನ್ನು ಆಚರಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ, ಸಮಾಜವು ಮತ್ತೊಮ್ಮೆ ತನ್ನ ಸಾಮೂಹಿಕ ಪ್ರಯತ್ನಗಳ ಮೂಲಕ ಮತ್ತೆ ಮತ್ತೆ ಪುಟಿದೇಳುವಿಕೆಯನ್ನು ನಿರೂಪಿಸಿತು. ಎರಡನೇ ಅಲೆಯು ಹೆಚ್ಚು ವಿನಾಶಕಾರಿಯಾಗಿತ್ತು ಮತ್ತು ಅನೇಕ ಯುವಕರನ್ನು ಸಹ ಬಲಿ ತೆಗೆದುಕೊಂಡಿತು. ಆದರೂ ರೋಗದಿಂದ ಗಂಭೀರವಾದ ಆರೋಗ್ಯದ ಅಪಾಯಗಳ ಹೊರತಾಗಿಯೂ ಮಾನವ ಕುಲದ ಸೇವೆಯಲ್ಲಿ ನಿಸ್ವಾರ್ಥವಾಗಿ ಸಮರ್ಪಿಸಿದ ಪುರುಷರು ಮತ್ತು ಮಹಿಳೆಯರ ಪ್ರಯತ್ನಗಳು ಶ್ಲಾಘನೀಯ.

ಸಂಕಟದ ಕಾರ್ಮೋಡಗಳು ಇನ್ನೂ ನಮ್ಮನ್ನು ಕಾಡುತ್ತಿದೆ. ಕರೋನಾ ವೈರಸ್ ವಿರುದ್ಧ ನಮ್ಮ ಹೋರಾಟ ಇನ್ನೂ ಮುಕ್ತಾಯಗೊಂಡಿಲ್ಲ; ಇದರ
ನಡುವೆಯೂ ನಾವು ಮೂರನೇ ಅಲೆಯನ್ನು ಎದುರಿಸಲು ಹೆಚ್ಚೂ ಕಡಿಮೆ ತಯಾರಾಗಿದ್ದೇವೆ. ಲಸಿಕೆಗಳನ್ನು ಸಾಮೂಹಿಕವಾಗಿ ನೀಡಲಾಗುತ್ತಿದೆ ಮತ್ತು ಅದನ್ನು ಪೂರ್ಣಗೊಳಿಸಬೇಕು. ಸಮಾಜವು ಜಗರೂಕವಾಗಿದೆ ಮತ್ತು ಸಂಘದ ಸ್ವಯಂಸೇವಕರು ಮತ್ತು ಹಲವಾರು ಇತರ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಗ್ರಾಮ ಮಟ್ಟದವರೆಗೂ ಕಾರ್ಯಕರ್ತರಿಗೆ ತರಬೇತಿ ನೀಡಿವೆ. ಅವರು ಜಗರೂಕತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ತುರ್ತುಸಂದರ್ಭಗಳಲ್ಲಿ ಸ್ಥಳೀಯರ ಬೆಂಬಲವನ್ನು ಪಡೆಯುತ್ತಾರೆ.

ಒಂದು ಕಡೆ ಮುಂಬರುವ ಅಲೆಯನ್ನು ಎದುರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದ್ದರೆ, ಮತ್ತೊಂದೆಡೆ, ಅಂತಿಮ ಹಂತಗಳ ಆಕ್ರಮಣವು ಹಿಂದಿನ ಆಕ್ರಮಣಕ್ಕೆ ಹೋಲಿಸಿದರೆ ಕಡಿಮೆ ತೀವ್ರತೆಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆಯೂ, ನಾವು ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರಯತ್ನಿಸಬೇಕು ಮತ್ತು ಎಲ್ಲ ಸಮಯದಲ್ಲೂ ಜಗರೂಕರಾಗಿರಬೇಕು. ಆತ್ಮವಿಶ್ವಾಸದ ನವೀಕರಣ ಮತ್ತು ನಮ್ಮ ಸಮಾಜದಲ್ಲಿ ನಮ್ಮ ‘ಸ್ವಾಭಿಮಾನ’ದ ಜಗೃತಿಯ ಕಾರ್ಯ ನಡೆಯುತ್ತದೆ. ಶ್ರೀರಾಮ ಜನ್ಮಭೂಮಿ ದೇವಾಲಯದ ನಿಽಸಮರ್ಪಣಾ ಅಭಿಯಾನವು
ಅಗಾಧವಾದ ಮತ್ತು ಭಕ್ತಿಪೂರ್ವಕ ಪ್ರತಿಕ್ರಿಯೆಯನ್ನು ಕಂಡಿದ್ದು ಈ ಜಗೃತಿಗೆ ಸಾಕ್ಷಿಯಾಗಿದೆ. ಜೀವನದ ವಿವಿಧ ಹಂತಗಳಲ್ಲಿನ ಸಾಮಾಜಿಕ ಪ್ರಯತ್ನಗಳ ಅಭಿವ್ಯಕ್ತಿಯ ನೈಸರ್ಗಿಕ ಫಲಿತಾಂಶ ಇದಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ೧ ಚಿನ್ನ, ೨ ಬೆಳ್ಳಿ ಮತ್ತು ೪ ಕಂಚಿನ ಪದಕಗಳನ್ನು ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ೫ ಚಿನ್ನ, ೮ ಬೆಳ್ಳಿ ಮತ್ತು ೬ ಕಂಚಿನ ಪದಕಗಳನ್ನು ಗಳಿಸುವ ಮೂಲಕ ನಮ್ಮ ಕ್ರೀಡಾಪಟುಗಳು ಉತ್ತಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ ಇದನ್ನು ಅಭಿನಂದಿಸಬೇಕು. ನಾವೆಲ್ಲರೂ ಅವರಿಗೆ ನೀಡಲಾದ ರಾಷ್ಟ್ರವ್ಯಾಪಿ ಅಭಿನಂದನೆಗಳ ಭಾಗವಾಗಿದ್ದೇವೆ. ೨೦೧೫ ರಲ್ಲಿ ರಾಂಚಿಯಲ್ಲಿ ನಡೆದ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ವಿಷಯದ ಕುರಿತು ನಿರ್ಣಯವನ್ನು ಅಂಗೀಕರಿಸಲಾಯಿತು.

ನಮ್ಮ ಆರ್ಥಿಕ ದೃಷ್ಟಿಕೋನ: ಪ್ರಚಲಿತ ಜಗತಿಕ ಆರ್ಥಿಕ ಮಾದರಿಯು ಹೊಸಸವಾಲುಗಳಿಂದ ಅಲುಗಾಡುತ್ತಿದೆ, ಅದು ಇತರರಾಷ್ಟ್ರಗಳ ಗ್ರಹಿಕೆಗೆ ಮೀರಿದೆ. ಯಾಂತ್ರೀಕರಣ ಮತ್ತು ನಿರುದ್ಯೋಗದ ಹೆಚ್ಚಳ, ಅನೈತಿಕ ತಂತ್ರeನದಿಂದಾಗಿ ಮಾನವಮೌಲ್ಯವ್ಯವಸ್ಥೆಯಲ್ಲಿ ಕುಸಿತ ಮತ್ತು ಹೊಣೆಗಾರಿಕೆ ಇಲ್ಲ ದಶಕ್ತಿ ಕೆಲವು ಉದಾಹರಣೆಗಳಾಗಿವೆ. ಇಡೀ ವಿಶ್ವವು ಈಗ ಭಾರತದತ್ತ ನೋಡುತ್ತಿದೆ, ಆರ್ಥಿಕವ್ಯವಸ್ಥೆ ಮತ್ತು ಅಭಿವೃದ್ಧಿಯ ಹೊಸ ಮಾನದಂಡ ಗಳನ್ನು ನಿರೀಕ್ಷಿಸುತ್ತಿದೆ. ನಮ್ಮ ರಾಷ್ಟ್ರದ ಸುದೀರ್ಘ ಜೀವನ ಅನುಭವ ಮತ್ತು ದೇಶ ಮತ್ತು ವಿದೇಶಗಳಲ್ಲಿ ಮಾಡಿದ ಆರ್ಥಿಕ ಪ್ರಯತ್ನಗಳಿಂದ ನಮ್ಮ ವಿಭಿನ್ನ ಆರ್ಥಿಕದೃಷ್ಟಿಕೋನವನ್ನು ಪಡೆಯಲಾಗಿದೆ. ಅದರಲ್ಲಿ, ಸಂತೋಷದ ಮೂಲವು ಮನುಷ್ಯನ ಒಳಗಿದೆ ಎಂದು ನಂಬಲಾಗಿದೆ.

ಸಂತೋಷವು ವಸ್ತುಗಳಲ್ಲಿ ಕಂಡುಬರುವುದಿಲ್ಲ. ಸಂತೋಷವು ಕೇವಲ ದೇಹದಿಂದ ಮಾತ್ರವಲ್ಲ. ದೇಹ, ಮನಸ್ಸು, ಬುದ್ಧಿಮತ್ತು ಆತ್ಮ ಈ ನಾಲ್ಕಕ್ಕೂ ಸಂತೋಷವನ್ನು ನೀಡುವ ಮಾನವನು, ಸೃಷ್ಟಿ ಮತ್ತು ಸಮಷ್ಠಿಯನ್ನು ಒಟ್ಟಾಗಿ ಅಭಿವೃದ್ಧಿ ಪಡಿಸಿ, ಅದನ್ನು ಪರಮೇಷ್ಠಿಯ ಕಡೆಗೆ ಕೊಡೊಯ್ಯು ತ್ತಾನೆ; ಅರ್ಥ-ಕಾಮವನ್ನು ಧರ್ಮದ ಶಿಸ್ತಿನ ಅಡಿಯಲ್ಲಿ ನಡೆಸುವ ಮೂಲಕ ಮಾನವರನಿಜವಾದಸ್ವಾತಂತ್ರ್ಯವನ್ನುಉತ್ತೇಜಿಸುವ ಆರ್ಥಿಕತೆಯನ್ನು ಇಲ್ಲಿ ಉತ್ತಮವೆಂದು ಪರಿಗಣಿಸಲಾಗಿದೆ. ನಮ್ಮ ಆರ್ಥಿಕದೃಷ್ಟಿಕೋನದಲ್ಲಿಉಪಭೋಗದಲ್ಲಿಯಲ್ಲ ಸಂಯಮಕ್ಕೆ ಮಹತ್ವವಿದೆ. ಮಾನವ ಭೌತ್ತಿಕ ಸಂಪತ್ತಿನ ವಸ್ತು ಮತ್ತು ಸಾಧನಗಳ ವಿಶ್ವಸ್ತನೇ ಹೊರತು ಅದರ ಮಾಲೀಕನಲ್ಲ.

ಇದು ಬ್ರಹ್ಮಾಂಡದ ಒಂದು ಭಾಗವಾಗಿದೆ, ವಿಶ್ವವನ್ನು ತನ್ನ ಜೀವನೋಪಾಯಕ್ಕಾಗಿ ಬಳಸಿಕೊಳ್ಳುವುದರೊಂದಿಗೆ, ಅದನ್ನು ರಕ್ಷಿಸುವುದು ಮತ್ತು
ಉತ್ತೇಜಿಸುವುದು ಅದರ ಕರ್ತವ್ಯವಾಗಿದೆ, ಇದುನಮ್ಮ ನಂಬಿಕೆ. ಈ ದೃಷ್ಟಿ ಪ್ರತ್ಯೇಕವಾದುದಲ್ಲ. ಇದುಬಂಡವಾಳ ಶಾಹಿ ಅಥವಾ ವ್ಯಾಪಾರಿ ಅಥವಾ ಉತ್ಪಾದಕ ಅಥವಾ ಕಾರ್ಮಿಕರ ಏಕಪಕ್ಷೀಯ ಹಿತಾಸಕ್ತಿಗಾಗಿ ಮಾತ್ರವಲ್ಲ. ಇದನ್ನೆಲ್ಲ ಗ್ರಾಹಕರೊಂದಿಗೆ ಕುಟುಂಬವಾಗಿ ನೋಡಿದರೆ, ಎಲ್ಲರಿಗೂ ಸಮತೋಲಿತ, ಪರಸ್ಪರ ಸಂಬಂಧದಆಧಾರದ ಮೇಲೆ ಸಂತೋಷದ ಕೂಡಿರುವ ದೃಷ್ಟಿ. ಈದೃಷ್ಟಿಕೋನವನ್ನು ಆಧರಿಸಿ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಸ್ಥಾಪಿಸುವುದು, ಪ್ರಪಂಚದಾದ್ಯಂತದ ಮೌಲ್ಯಯುತವಾದ ನಮ್ಮ ಕಲಿಕೆಗಳನ್ನು ಕ್ರೂಡಿಕರಿಸುವುದು ಮತ್ತು ಅದನ್ನು ನಮ್ಮ ಪ್ರಸ್ತುತ
ರಾಷ್ಟ್ರೀಯ ಸನ್ನಿವೇಶದೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ. ಸಮಗ್ರ ಮತ್ತು ಏಕೀಕೃತ ಅಭಿವೃದ್ಧಿಯ ಹೊಸ ಪರಿಕಲ್ಪನೆಯ ಮಾದರಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಾಭಾವಿಕ ಫಲಿತಾಂಶ, ಸ್ವಯಂ ದದೃಷ್ಟಿಕೋನದ ಬಹುನಿರೀಕ್ಷಿತ ಆವಿಷ್ಕಾರ.

ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ನಿರ್ಣಯ: ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿ ಅಸಮತೋಲನದ ಸವಾಲು ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ತೆಗೆದುಕೊಂಡ ಹಲವಾರು ಕ್ರಮಗಳಿಂದಾಗಿ, ಕಳೆದ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೆ, ಈ ನಿಟ್ಟಿನಲ್ಲಿ, ೨೦೧೧ರ ಜನಗಣತಿಯ ಧಾರ್ಮಿಕ ಆಧಾರದ (ಛ್ಝಿಜಿಜಜಿಟ್ಠo ಜ್ಟಟ್ಠ್ಞb) ಮೇಲೆ ಮಾಡಿದ ವಿಶ್ಲೇಷಣೆ ಯಿಂದ ವಿವಿಧ ಸಮುದಾಯಗಳ ಜನಸಂಖ್ಯೆಯ ಅನುಪಾತದಲ್ಲಿನ ಬದಲಾವಣೆಯ ದೃಷ್ಟಿಯಿಂದ ಜನಸಂಖ್ಯಾನೀತಿಯನ್ನು ಮರು ಪರಿಶೀಲಿಸ ಬೇಕಾಗಿದೆ ಎಂದು ಅಖಿಲ ಭಾರತ ಕಾರ್ಯಕಾರಿ ಮಂಡಳಿಯು ನಂಬಿದೆ.

ವಿವಿಧ ಸಮುದಾಯಗಳ ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿನ ಭಾರೀ ವ್ಯತ್ಯಾಸದಿಂದಾಗಿ, ನಿರಂತರ ವಿದೇಶಿ ಒಳನುಸುಳುವಿಕೆ ಮತ್ತು ಮತಾಂತರದಿಂದಾಗಿ, ದೇಶದ ಒಟ್ಟಾರೆ ಜನಸಂಖ್ಯೆಯ ಅನುಪಾತದಲ್ಲಿ ಹೆಚ್ಚುತ್ತಿರುವ ಅಸಮತೋಲನ, ವಿಶೇಷವಾಗಿ ಗಡಿಪ್ರದೇಶಗಳಲ್ಲಿ ದೇಶದ ಏಕತೆ, ಸಮಗ್ರತೆ ಮತ್ತು ಸಾಂಸ್ಕೃತಿಕ ಗುರುತಗಳ ಮೇಲೆ ಗಂಭೀರ ಬಿಕ್ಕಟ್ಟನ್ನು ಉಂಟು ಮಾಡಬಹುದು. ಭಾರತವು ೧೯೫೨ ರಲ್ಲಿಯೇ ಜನಸಂಖ್ಯೆಯನ್ನು ನಿಯಂತ್ರಿಸುವ ಕ್ರಮಗಳನ್ನು ಘೋಷಿಸಿದ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿತ್ತು, ಆದರೆ ೨೦೦೦ ನೇ ಇಸವಿಯಲ್ಲಿ ಮಾತ್ರ ಅದು ಸಮಗ್ರ ಜನಸಂಖ್ಯಾ ನೀತಿಯನ್ನು ರೂಪಿಸಲು ಮತ್ತು ಜನಸಂಖ್ಯಾ ಆಯೋಗವನ್ನು ಸ್ಥಾಪಿಸಲು ಸಾಧ್ಯವಾಯಿತು. ೨.೧ -ಲವತ್ತತೆಯ ಆದರ್ಶ ಸ್ಥಿತಿಯನ್ನು ಸಾಽಸುವ ಮೂಲಕ ೨೦೪೫ ರ ವೇಳೆಗೆ ಸ್ಥಿರ ಮತ್ತು ಆರೋಗ್ಯಕರ ಜನಸಂಖ್ಯೆಯ ಗುರಿಯನ್ನು ಸಾಧಿಸುವುದು ಈ ನೀತಿಯ ಉದ್ದೇಶವಾಗಿತ್ತು. ನಮ್ಮ ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಫಲವತ್ತತೆಯ ದರದ ಈ ಗುರಿ ಸಮಾಜದ ‌ಎಲ್ಲಾ ವರ್ಗಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ೨೦೦೫-೦೬ರ ರಾಷ್ಟ್ರೀಯ ಫಲವತ್ತತೆ ಮತ್ತು ಆರೋಗ್ಯ ಸಮೀಕ್ಷೆ ಮತ್ತು ೨೦೧೧ರ ಜನಗಣತಿಯು ೦-೬ ವಯಸ್ಸಿನ ಗುಂಪಿನ ಜನಾಂಗೀಯ ಆಧಾರದ ಮೇಲೆ ಪಡೆಯಲಾಗಿದೆ, ಇದು ‘ಅಸಮಾನ’ ಒಟ್ಟು -ಲವತ್ತತೆದರ ಮತ್ತು ಮಕ್ಕಳ ಜನಸಂಖ್ಯೆಯ ಅನುಪಾತವನ್ನು ಸೂಚಿಸುತ್ತದೆ. ೧೯೫೧ ಮತ್ತು ೨೦೧೧ ರ ನಡುವಿನ ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿನ ದೊಡ್ಡ ವ್ಯತ್ಯಾಸದಿಂದಾಗಿ, ಭಾರತದಲ್ಲಿ ಹುಟ್ಟಿಕೊಂಡ ಪಂಥಗಳ ಅನು
ಯಾಯಿಗಳ ಪ್ರಮಾಣವು ದೇಶದ ಜನಸಂಖ್ಯೆಯಲ್ಲಿ ೮೮ ಪ್ರತಿಶತದಿಂದ ೮೩.೮ ಪ್ರತಿಶತಕ್ಕೆ ಇಳಿದಿದೆ, ಆದರೆ ಮುಸ್ಲಿಂ ಜನಸಂಖ್ಯೆಯು ಅನುಪಾತವು ೯.೮ ಶೇಕಡದಿಂದ ೧೪.೨೩ ಶೇಕಡಾಕ್ಕೆ ಹೆಚ್ಚಾಗಿದೆ.

ಇದರ ಜತೆಗೆ, ದೇಶದ ಗಡಿಪ್ರದೇಶಗಳು ಹಾಗೂ ಅಸ್ಸಾಂ, ಪಶ್ಚಿಮಬಂಗಾಳ ಮತ್ತು ಬಿಹಾರದ ಗಡಿಜಿಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ, ಇದು ಬಾಂಗ್ಲಾದೇಶದಿಂದ ನಿರಂತರ ಒಳ ನುಸುಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಗೌರವಾನ್ವಿತ ಸುಪ್ರಿಂಕೋರ್ಟ್ನೇಮಿಸಿದಉಪಮನ್ಯುಹಜ್ರಿಕಾ ಆಯೋಗದ ವರದಿಯಲ್ಲಿ ಮತ್ತು ಕಾಲಕಾಲಕ್ಕೆ ನ್ಯಾಯಾಂಗ ನಿರ್ಧಾರಗಳಲ್ಲಿ ಈ ಸತ್ಯಾಂಶಗಳು ದೃಢಪಟ್ಟಿವೆ. ಅಕ್ರಮ ನುಸುಳುಕೋರರು ರಾಜ್ಯದ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಹಾಗೂ ಈ ರಾಜ್ಯಗಳ ಸೀಮಿತ ಸಂಪನ್ಮೂಲಗಳ ಮೇಲೆ ದೊಡ್ಡ ಹೊರೆಯಾಗುತ್ತಿದ್ದಾರೆ ಮತ್ತು ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆಯನ್ನು ಉಂಟು ಮಾಡುತ್ತಿದ್ದಾರೆ ಎಂಬುದು ಸಹ ಒಂದು ಸತ್ಯವಾಗಿದೆ.

ಗಡಿಯಾಚೆಗಿನ ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಬೇಕು. ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಘೆZಠಿಜಿಟ್ಞZ ಛಿಜಜಿoಠಿಛ್ಟಿ ಟ್ಛ ಇಜಿಠಿಜ್ಢಿಛ್ಞಿo) ರಚಿಸುವ ಮೂಲಕ, ಈ ಒಳನು ಸುಳುಕೋರರು ಪೌರತ್ವದ ಹಕ್ಕುಗಳನ್ನು ಮತ್ತು ಭೂಮಿಯನ್ನು ಖರೀದಿಸುವ ಹಕ್ಕಿನಿಂದ ವಂಚಿತರಾಗಬೇಕು.

ವಾಯವ್ಯ ಗಡಿಯಲ್ಲಿ: ಮತ್ತೊಂದು ಅನಿರೀಕ್ಷಿತವಲ್ಲದ, ಆದರೆ ನಿರೀಕ್ಷೆಗಿಂತ ಮುಂಚಿತವಾಗಿ ಬಂದಿರುವ ಒಂದು ಸನ್ನಿವೇಶವೆಂದರೆ, ಅಫ್ಘಾನಿ ಸ್ತಾನದಲ್ಲಿ ತಾಲಿಬಾನ್ ಸರಕಾರ ರಚನೆಯಾಗಿದೆ. ಅವರ ಪೂರ್ವಭಾವಿ – ಭಾವೋದ್ರಿಕ್ತ ಮತಾಂಧತೆ, ದೌರ್ಜನ್ಯ ಮತ್ತು ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ – ಪ್ರತಿಯೊಬ್ಬರೂ ತಾಲಿಬಾನ್ ಬಗ್ಗೆ ಭಯಭೀತರಾಗಲು ಇಷ್ಟುಸಾಕು. ಆದರೆ ಈಗ ಚೀನಾ, ಪಾಕಿಸ್ತಾನ ಮತ್ತು ಟರ್ಕಿ ತಾಲಿಬಾನ್ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಅಬ್ದಾಲಿಯಿಂದ, ನಮ್ಮವಾಯುವ್ಯ ಗಡಿಗಳ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಚಿಂತಿಸುವಂತಾಗಿದೆ. ತಾಲಿಬಾನ್,
ಕೆಲವೊಮ್ಮೆ ಶಾಂತಿ ಮತ್ತು ಕೆಲವೊಮ್ಮೆ ಕಾಶ್ಮೀರದ ಬಗ್ಗೆ ಜತೆ ಜತೆಯ ಮಾತನಾಡಲಾರಂಭಿಸಿದೆ. ಇದು ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲವೆಂಬುದರ ಸೂಚಕವಾಗಿದೆ.

ನಾವು ನಮ್ಮ ಕಾರ್ಯತಂತ್ರದ ಸನ್ನದ್ಧತೆಯನ್ನು ಸಂಪೂರ್ಣವಾಗಿ ಬಿಗಿಯಾಗಿ ಇಟ್ಟುಕೊಳ್ಳಬೇಕು ಮತ್ತು ಎಲ್ಲಾ ಗಡಿಗಳಲ್ಲಿ ಜಗರೂಕರಾಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ, ದೇಶದ ಆಂತರಿಕ ಭದ್ರತೆ ಮತ್ತು ಸ್ಥಿರತೆಯನ್ನು ಸರಕಾರ ಮತ್ತು ಸಮಾಜವು ಎಚ್ಚರಿಕೆಯಿಂದ ಮತ್ತು ಜಗರೂಕತೆಯಿಂದ ರಕ್ಷಿಸಬೇಕು. ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಸೈಬರ್ಭದ್ರತೆಯಂತಹ ಹೊಸಕಾಳಜಿಯೊಂದಿಗೆ ನವೀಕೃತ ವಾಗಲು ಪ್ರಯತ್ನಗಳನ್ನು ಹೆಚ್ಚಿಸಬೇಕು. ಭದ್ರತೆಯಂತಹ ಕ್ಷೇತ್ರಗಳಲ್ಲಿ ನಾವು ಆದಷ್ಟು ಬೇಗ ಸ್ವಾವಲಂಬಿಗಳಾಗಿರಬೇಕು. ಮಾತುಕಥೆಯ
ಮಾರ್ಗಗಳನ್ನು ತರೆದಿಟ್ಟುಕೊಂಡಿರಬೇಕು, ಹೃದಯಪರಿವರ್ತನೆ ಯಾವಾಗ ಬೇಕಾದರೂ ಆಗಬಹುದು ಎಂಬನಂಬೆಕೆಯನ್ನು ಜೀವಂತವಾಗಿರಿಸಿ ಕೊಳ್ಳುವುದರ ಜತೆಗೆ ಎಲ್ಲಾ ಸಂಭವಗಳನ್ನು ಎದುರಿಸುವ ತಯಾರಿಯನ್ನು ಮಾಡಿಕೊಂಡಿರಬೇಕು. ಈ ದುರಂತ ಸಮಯದಲ್ಲಿ, ಭಾರತದ ಉಳಿದಭಾಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಭಾವನಾತ್ಮಕ ಏಕೀಕರಣದ ಅಗತ್ಯವನ್ನು ಸಹ ಅರಿತುಕೊಳ್ಳಬೇಕು. ರಾಷ್ಟ್ರೀಯ ಮನೋಭಾವದ ನಾಗರಿಕರ ಮನೋಬಲವನ್ನು ಮುರಿಯಲು ಮತ್ತು ಅವರ ಭಯೋತ್ಪಾದನೆಯ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸಲು; ಜಮ್ಮು
ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಆ ನಾಗರಿಕರ – ವಿಶೇಷವಾಗಿ ಹಿಂದೂಗಳ ಉದ್ದೇಶಿತ ಹಿಂಸೆಯ ಮಾರ್ಗವನ್ನು ಅಳವಡಿಸಿಕೊಂಡಿzರೆ. ನಾಗರಿಕರು ಧೈರ್ಯಶಾಲಿಗಳು ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಜತೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು
ಮುಗಿಸಲು ಪ್ರಯತ್ನಗಳು ವೇಗಗೊಳ್ಳಬೇಕು.

ಹಿಂದೂ ದೇವಾಲಯಗಳು: ರಾಷ್ಟ್ರದ ಏಕತೆ, ಸಮಗ್ರತೆ, ಭದ್ರತೆ, ಅಭಿವೃದ್ಧಿ, ಸಮೃದ್ಧಿ ಮತ್ತು ಶಾಂತಿಗೆ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳ ಜತೆಗೆ ಹಿಂದೂ ಸಮಾಜದ ಕೆಲವು ಕಾಳಜಿಗಳಿವೆ; ಅದನ್ನು ಪರಿಹರಿಸುವ ಪ್ರಯತ್ನಗಳು ಕೂಡ ಅಗತ್ಯ. ಇಂದಿನ ಹಿಂದೂ ದೇವಾಲಯಗಳ ಸ್ಥಿತಿಯು ಅಂತಹ ಒಂದು ಚಿಂತನೆಯ ವಿಷಯವಾಗಿದೆ. ದಕ್ಷಿಣ ಭಾರತದ ದೇವಾಲಯಗಳನ್ನು ರಾಜ್ಯಸರಕಾರಗಳು ಸಂಪೂರ್ಣವಾಗಿ ನಿಯಂತ್ರಿಸುತ್ತವೆ. ದೇಶದ ಉಳಿದ ಭಾಗಗಳಲ್ಲಿ ಕೆಲವು ಸರಕಾರದಿಂದ ನಿರ್ವಹಿಸಲ್ಪಡುತ್ತವೆ, ಕೆಲವು ಅವಿಭಕ್ತ ಕುಟುಂಬ ಟ್ರಸ್ಟ್‌ಗಳ ಮೂಲಕ ನಿರ್ವಹಿಸಲ್ಪಡುತ್ತವೆ ಮತ್ತು ಕೆಲವು ಸಮಾಜದ ನೋಂದಣಿ ಕಾಯಿದೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಟ್ರಸ್ಟ್‌ಗಳಿಂದ ನಡೆಸಲ್ಪಡುತ್ತವೆ.

ಕೆಲವು ದೇವಾಲಯಗಳು ಸಂಪೂರ್ಣವಾಗಿ ಯಾವುದೇ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ದೇವಸ್ಥಾನಗಳ ಚರ ಮತ್ತು ಸ್ಥಿರಾಸ್ತಿಗಳ ದುರುಪಯೋಗದ ಪ್ರಕರಣಗಳು ಬೆಳಕಿಗೆ ಬಂದಿವೆ. ನಿರ್ದಿಷ್ಟ ಆಚಾರಗಳು, ಶಾಸಸಂಪ್ರದಾಯಗಳು ಪ್ರತಿದೇವಸ್ಥಾನಕ್ಕೆ ಮತ್ತು ಅದರಲ್ಲಿ ನೆಲೆಸಿರುವ ದೇವರಿಗೆ ಅನ್ವಯಿಸುತ್ತವೆ. ಆ ಆಚರಣೆಗಳಲ್ಲಿ ಹಸ್ತಕ್ಷೇಪ ಮತ್ತು ಮಧ್ಯಪ್ರವೇಶದ ನಿದರ್ಶನಗಳೂ ವರದಿಯಾಗಿವೆ. ದೇವರ ದರ್ಶನ, ಆತನನ್ನು ಆರಾಧಿಸುವುದು, ಜತಿ ಮತ ಬೇಧವಿಲ್ಲದೆ ಎಲ್ಲ ಭಕ್ತರಿಗೂ ಮುಕ್ತಪ್ರವೇಶವಾಗಬೇಕು, ಅದು ಎಲ್ಲ ದೇವಸ್ಥಾನಗಳಲ್ಲಿ ಇಲ್ಲ, ಇರಬೇಕು. ದೇವಾಲಯಗಳು,
ಧಾರ್ಮಿಕ ನೀತಿಗಳು, ಧರ್ಮಶಾಸ್ತ್ರಗಳ ಜ್ಞಾನ, ಧಾರ್ಮಿಕ ವಿದ್ವಾಂಸರು, ಹಿಂದೂ ಸಮಾಜದ ನಂಬಿಕೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಈ ಎಲ್ಲ ಸನ್ನಿವೇಶಗಳು ಎಲ್ಲರ ಮುಂದಿವೆ. ಜತ್ಯತೀತ ವಾಗಿದ್ದರೂ ಸಹ, ಹಿಂದೂ ಧಾರ್ಮಿಕ ಸ್ಥಳಗಳನ್ನು ಮಾತ್ರ ದಶಕಗಳ ಮತ್ತು ಶತಮಾನಗಳ ಕಾಲವ್ಯವಸ್ಥೆಯ ಹೆಸರಿನಲ್ಲಿ ವಶಪಡಿಸಿಕೊಳ್ಳಬೇಕು, ಅವುಗಳನ್ನು ಭಕ್ತರಲ್ಲದವರು / ಅಧರ್ಮಿಗಳು / ಧರ್ಮದ್ರೋಹಿ ಗಳು ನಡೆಸುತ್ತಾರೆ. ಅನ್ಯಾಯವನ್ನು ತೊಡೆದುಹಾಕಬೇಕು, ಹಿಂದೂದೇವಾಲಯಗಳ ನಿರ್ವಹಣೆ ಹಿಂದೂ ಭಕ್ತರಿಂದ ಆಗಬೇಕು ಮತ್ತು ಹಿಂದೂ ದೇವಾಲಯಗಳ ಆಸ್ತಿದೇವರ ಪೂಜೆಗೆ ಮತ್ತು ಹಿಂದೂ ಸಮಾಜದ ಸೇವೆ ಹಾಗೂ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು, ಇದು ಸಮಂಜಸವಾಗಿದೆ ಮತ್ತು ಅಗತ್ಯವಾಗಿದೆ. ಈ
ಚಿಂತನೆಯ ಜತೆಯಲ್ಲಿ, ದೇವಸ್ಥಾನಗಳನ್ನು ಮತ್ತೊಮ್ಮೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಜೀವನದ ಕೇಂದ್ರಬಿಂದುವನ್ನಾಗಿಸುವ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ ಮತ್ತು ಹಿಂದೂ ಸಮಾಜದ ಬಲವನ್ನು ಆಧರಿಸಿ ದೇವಸ್ಥಾನಗಳ ಸೂಕ್ತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳ ಬೇಕಾಗಿದೆ.

ನಮ್ಮ ಏಕಾತ್ಮತೆಯ ಸೂತ್ರ: ಸರಕಾರಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತೊಡಗಿರುವ ಜನರು ತಮ್ಮ ಕೆಲಸವನ್ನು ಮಾಡುತ್ತಿದ್ದರೂ ಸಹ, ಎಲ್ಲಾ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಮಾನಸಿಕ, ದೈಹಿಕಮತ್ತು ಆಧ್ಯಾತ್ಮಿಕ ಭಾವದಿಂದ ಭಾಗವಹಿಸುವಿಕೆ ಮುಖ್ಯವಾಗಿದೆ. ಸಮಾಜದ ಉಪಕ್ರಮದಿಂದ ಮಾತ್ರ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಆದ್ದರಿಂದ, ಮೇಲಿನ ಸಮಸ್ಯೆಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜಗೃತಿಯ ಜತೆಗೆ, ಸಮಾಜದ
ಮನಸ್ಸು, ಮಾತು ಮತ್ತು ನಡವಳಿಕೆಯ ಅಭ್ಯಾಸಗಳನ್ನು ಬದಲಾಯಿಸುವ ಅವಶ್ಯಕತೆಯಿದೆ.

ಆದ್ದರಿಂದ ಪ್ರಾಚೀನ ಕಾಲದಿಂದ ಹರಿಯುವ ಈ ಸನಾತನ ರಾಷ್ಟ್ರದ ಅಮರ ಸತ್ವದ ಬಗ್ಗೆ ತಿಳಿವಳಿಕೆ ಮತ್ತು eನವು ನಮ್ಮಸಮಾಜದ ಸಾಮೂಹಿಕ
ಪ್ರeಯಲ್ಲಿ ಚೆನ್ನಾಗಿ ವ್ಯಾಪಿಸಬೇಕಾಗಿದೆ. ಭಾರತದ ವೈವಿಧ್ಯಮಯ ಭಾಷಿಕ, ಧಾರ್ಮಿಕ ಮತ್ತು ಪ್ರಾದೇಶಿಕ ಸಂಪ್ರದಾಯಗಳನ್ನು ಸಮಗ್ರ ಘಟಕವಾಗಿ ಸಂಯೋಜಿಸುವುದು ಮತ್ತು ಎಲ್ಲರ ನಡುವೆ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳೊಂದಿಗೆ ಎಲ್ಲರನ್ನೂ
ಸಮಾನವಾಗಿ ಸ್ವೀಕರಿಸುವುದು ಮತ್ತು ಗೌರವಿಸುವುದು ನಮ್ಮ ಸಂಸ್ಕೃತಿ. ನಮ್ಮ ನಡವಳಿಕೆಯು ಈ ಪರಂಪರೆಗೆ ಅನುಗುಣವಾಗಿರಬೇಕು. ನಾವು ನಮ್ಮ ರಾಜಕೀಯ, ಧಾರ್ಮಿಕ, ಜತಿ ಆಧಾರಿತ, ಭಾಷಿಕ ಮತ್ತು ಪ್ರಾದೇಶಿಕ ಗುರುತುಗಳಿಂದ ಪಡೆದ ಅಹಂಕಾರದ ಹೆಮ್ಮೆಯನ್ನು ಕರಗಿಸಬೇಕು.

ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು
ಮತ್ತುಪೂಜ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಅನನ್ಯಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಆ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ ಸಾಮಾನ್ಯ ಪೂರ್ವಜರು.

ಸಂಘಟಿತ ಹಿಂದೂ ಸಮಾಜ: ನಮ್ಮದೇಶದ ಇತಿಹಾಸದಲ್ಲಿ, ಪರಸ್ಪರ ಭಿನ್ನಾಭಿಪ್ರಾಯ, ಅನ್ಯಾಯ, ಹಿಂಸೆಯ ಘಟನೆಗಳು ಸಂಭವಿಸಿವೆ, ದೀರ್ಘಕಾಲದವರೆಗೆ ಯಾವುದಾದರು ಪ್ರತ್ಯೇಕತೆ, ಅಪನಂಬಿಕೆ, ಅಸಮಾನತೆ ಅಥವಾ ವೈರತ್ವವಿದ್ದರೆ ಅಥವಾ ವರ್ತಮಾನದಲ್ಲಿ ಈರೀತಿ ಏನಾದರೂ ಸಂಭವಿಸಿದಲ್ಲಿ; ಆ ಸಮಸ್ಯೆಗಳ ಕಾರಣವನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅವುಗಳನ್ನು ನಿವಾರಿಸುವ ಮೂಲಕ, ಇಂತಹ ಘಟನೆ
ಮರುಕಳಿಸಬಾರದು, ಪರಸ್ಪರದ್ವೇಷ, ಪ್ರತ್ಯೇಕತೆಯನ್ನು ತೆಗೆದುಹಾಕಬೇಕು ಮತ್ತು ಸಮಾಜವನ್ನು ಅಂತಹಮಾತು ಮತ್ತು ಕ್ರಿಯೆಯೊಂದಿಗೆ ಜೊಡಿಸಬೇಕು. ನಮ್ಮಲ್ಲಿರುವ ಭೇದಗಳನ್ನು ಮತ್ತು ಅಪಶ್ರುತಿಯನ್ನು ಬಳಸಿ ನಮ್ಮನ್ನು ವಿಭಜಿಸುವವರು, ಪರಸ್ಪರ ಪ್ರಾಮಾಣಿಕತೆಯ ಬಗ್ಗೆ ಅವಿಶ್ವಾಸವನ್ನು ಮೂಡಿಸುವವರು, ನಮ್ಮ ಶ್ರದ್ಧೆನಂಬಿಕೆಯನ್ನು ನಾಶಮಾಡವವರು ಮತ್ತುಭ್ರಷ್ಟಗೊಳಿಸುವವರುನಮ್ಮತಪ್ಪುನಡೆಗಳಿಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ, ಇದನ್ನು ಅರ್ಥ ಮಾಡಿಕೊಳ್ಳಬೇಕು.

ಹಿಂದೂ ಸಮಾಜವು ಭಾರತದ ಮುಖ್ಯವಾಹಿನಿಯ ಮೌಲ್ಯವ್ಯವಸ್ಥೆಯ ಭಾಗವಾಗಿ, ಅದರ ಸಂಘಟಿತ ಸಾಮಾಜಿಕ ಶಕ್ತಿ, ವಿಶ್ವಾಸ ಮತ್ತು ನಿರ್ಭೀತ ಮನೋಭಾವವನ್ನು ಅರಿತುಕೊಂಡಾಗ ಮಾತ್ರಇದನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಹಿಂದೂಗಳೆಂದು ಹೇಳಿಕೊಳ್ಳುವ ಪ್ರತಿಯೊಬ್ಬರ ಜವಾಬ್ದಾರಿಯೆಂದರೆ, ಅವರು ತಮ್ಮವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ತಮ್ಮ ನಡವಳಿಕೆಯೊಂದಿಗೆ ಹಿಂದೂ ಜೀವನ ದೃಷ್ಟಿಕೋನದ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲಬೇಕು.

ನಾವು ಎಲ್ಲಾ ರೀತಿಯ ಭಯಗಳಿಂದ ಮುಕ್ತರಾಗಬೇಕು. ದೌರ್ಬಲ್ಯವು ಹೇಡಿತನಕ್ಕೆ ಕಾರಣವಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ, ನಾವು ದೈಹಿಕ, ಬೌದ್ಧಿಕ ಮತ್ತು ಮಾನಸಿಕಶಕ್ತಿ, ಧೈರ್ಯ, ಹುರುಪು ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಒಂದು ಸಮಾಜದ ಬಲವು ಅದರ ಏಕತೆಯಲ್ಲಿರುತ್ತದೆ;
ಸಾಮೂಹಿಕ ಆಸಕ್ತಿ ಮತ್ತು ಬುದ್ಧಿವಂತಿಕೆ ಮತ್ತು ಅದರಕಡೆಗೆ ಸಮರ್ಪಣೆಯ ಬಗ್ಗೆ ಸೂಕ್ಷ್ಮತೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ವಿಚಾರಗಳು, ವ್ಯಕ್ತಿಗಳು, ಗುಂಪುಗಳು, ಘಟನೆಗಳು, ಪ್ರಚೋದನೆಗಳಿಂದ ಜಗರೂಕರಾಗಿ ಎಲ್ಲ ರೀತಿಯ ಪರಸ್ಪರ
ವೈಷಮ್ಯಗಳಿಂದ ಸಮಾಜವನ್ನು ದೂರವಿರಿಸಲು ಪ್ರತಿಯೊಬ್ಬರೂ ಸಿದ್ಧರಾಗಿರುವುದು ಅಗತ್ಯವಾಗಿದೆ.

ಶಕ್ತಿಯ ಆರಾಧನೆಯಾರಿಗೂ ವಿರೋಧ ಅಥವಾ ಪ್ರತಿಕ್ರಿಯೆಗಾಗಿ ಅಲ್ಲ. ಇದು ಸಮಾಜದ ಸ್ವಾಭಾವಿಕ ನಿರೀಕ್ಷಿತ ಸ್ಥಿತಿ. ಜಗತ್ತು ಶಕ್ತಿ, ನಮ್ರತೆ, ಜ್ಞಾನ ಮತ್ತು ಸಂಘಟಿತ ಸಮಾಜವನ್ನು ಮಾತನ್ನು ಮಾತ್ರ ಕೇಳುತ್ತದೆ. ಸತ್ಯ ಮತ್ತು ಶಾಂತಿಶಕ್ತಿಯ ಆಧಾರದ ಮೇಲೆಯೇ ಅವಲಂಭಿತವಾಗಿದೆ. ಬಲಶಾಲಿ ಮತ್ತು ನಿರ್ಭೀತರಾಗುವ ಮೂಲಕ ನಾವು ಹಿಂದೂ ಸಮಾಜವನ್ನು ಸೃಷ್ಟಿಸಬೇಕು, ಅದು ಈ ಪದಗಳನ್ನು ಸಾಕಾರಗೊಳಿಸುತ್ತದೆ – ನಾನು ಯಾರಿಗೂ ಬೆದರಿಕೆ ಹಾಕುವುದಿಲ್ಲ, ಅಥವಾ ನನಗೆ ಒಗ್ಗಟ್ಟಿನ, ಬಲಿಷ್ಠ ಮತ್ತು ಸಕ್ರಿಯ ಸಮಾಜವು ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು 96 ವರ್ಷಗಳಿಂದ ಈ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಅಪೇಕ್ಷಿತ ಗುರಿಯನ್ನು ಸಾಧಿಸುವವರೆಗೆ ಅದನ್ನು ಮುಂದುವರಿಸುತ್ತದೆ. ನಾವು ಇಂದು ಆಚರಿಸುತ್ತಿರುವ ಶುಭ ಹಬ್ಬದಲ್ಲಿ ಅಡಕಗೊಂಡಿರುವ ಸಂದೇಶ ಕೂಡ ಇದೇ ಆಗಿದೆ. ಒಂಬತ್ತು ದಿನಗಳ ವ್ರತದ ನಂತರ, ದೈವಿಕಶಕ್ತಿಗಳನ್ನು ಆಹ್ವಾನಿಸಿ, ಪೂಜಿಸಿ, ಎಲ್ಲಾ ಶಕ್ತಿಗಳನ್ನು ಕ್ರೋಡೀಕರಿಸಿದರು. ತದನಂತರ ಮಾನವೀಯತೆಯನ್ನು ಹಲವಾರು ರೀತಿಯಲ್ಲಿ ಕಾಡುತ್ತಿದ್ದ ರಾಕ್ಷಸರು ನಿರ್ನಾಮವಾದರು.

ಇಂದು, ಜಗತ್ತು ಪ್ರಸ್ತುತ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತವನ್ನು ಎದುರು ನೋಡುತ್ತಿದೆ ಮತ್ತು ಭಾರತವು ಈ ಭರವಸೆಯನ್ನು ಪೂರೈಸಲು ಸಿದ್ಧವಾಗಿರ ಬೇಕಾಗಿದೆ. ನಮ್ಮ ಸಮಾಜದ ಏಕತೆಯ ಸೂತ್ರವೆಂದರೆ ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರ ವೈಭವ ಮತ್ತು ನಮ್ಮ ತಾಯ್ನಾಡಿನ ಬಗೆಗೆ ನಮ್ಮ ಹೃದಯದಲ್ಲಿ ಮೂಡುವ ಪರಿಶುದ್ಧ ಭಕ್ತಿ. ‘ಹಿಂದೂ’ ಎಂಬ ಪದವು ಈ ಅರ್ಥದ ಅಭಿವ್ಯಕ್ತಿಯಾಗಿದೆ. ನಾವೆಲ್ಲರೂ ಈ ಮೂರು ತತ್ವಗಳನ್ನು
ಮೇಳೈಸಿಕೊಂಡು ನಮ್ಮ ಅನನ್ಯತೆಯ ಅಂತರ್ಗತವಾದ ಶಾಶ್ವತ ಏಕತೆಯ ಅಲಂಕಾರದಿಂದ ಸಂಪೂರ್ಣ ದೇಶವನ್ನು ನಿರ್ಮಿಸಬೇಕಾಗಿದೆ. ಈ ಕಾರ್ಯವನ್ನು ಮಾಡಲೇಬೇಕಾಗಿದೆ. ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಗಿದೆ. ಈ ತಪಸ್ಸಿನಲ್ಲಿ ನಿಮ್ಮ ಕೊಡುಗೆಯನ್ನು ನೀಡಲು ನಿಮ್ಮೆಲ್ಲರನ್ನೂ ಆಹ್ವಾನಿಸಿ ನನ್ನ ವಿನಂತಿಯನ್ನು ಮುಗಿಸುತ್ತೇನೆ.

ಜನರ ಮನಸ್ಸಿನ ಭ್ರಾಂತಿಯನ್ನು ತೊಡೆಯಲು ಕ್ರಾಂತಿ ಸಂಗೀತವನ್ನು ಹಾಡುತ್ತೇವೆ, ಒಂದಕ್ಕೆ ದಶಲಕ್ಷಗಳಾಗಿ ಕೋಟಿಗಳನ್ನೇ ಆಹ್ವಾನಿಸುತ್ತೇವೆ.
ಇದಾದಾಗಲೇ ವಿಶ್ವದಲ್ಲಿ ತಾಯಿಯು ಸಮ್ಮಾನಿತಳಾಗುತ್ತಾಳೆ ನಿರಂತರವಾಗಿ ಈ ರಾಗದ ತಾಳದೊಂದಿಗೆ ಮುನ್ನುಗುತ್ತಿವೆ ಹೆಜ್ಜೆಗಳು ಅಗಣಿತ ಅವಿರತ ವಾಗಿ ಧ್ಯೇಯದೆಡೆಗೆ ಸಾಗುತ್ತಿವೆ ಹೆಜ್ಜೆಗಳು ಭಾರತ ಮಾತೆಗೆ ಜಯವಾಗಲಿ.

ಕುಟುಂಬ ಪ್ರಬೋಧನ್
ಇದೇ ಸಮಯದಲ್ಲಿ, ಇಂತಹ ಬೆದರಿಕೆಗಳ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಣವನ್ನು ಹೊಂದಲು ಸರಿ-ತಪ್ಪುಗಳನ್ನು ವಿವೇಚಿಸುವ ಮತ್ತು ನೈತಿಕತೆ-ಅನೈತಿಕತೆಯನ್ನು ಸ್ಪಷ್ಟವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕು. ಅನೇಕ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂತರು ಈ ಕಾಯಕದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ. ನಾವು ಕೂಡ ನಮ್ಮ ಕುಟುಂಬ ಸದಸ್ಯರೊಂದಿಗೆ ಈ ವಿಷಯಗಳ ಬಗ್ಗೆ ಚರ್ಚಿಸಿ ನಮ್ಮ ನಡವಳಿಕೆಗಳನ್ನು ರೂಪಿಸಿಕೊಳ್ಳಬಹುದು.

ಸಂಘದ  ಸ್ವಯಂಸೇವಕರು ಕೂಡ ’ಕುಟುಂಬ ಪ್ರಬೋಧನ್’ (ಕೌಟುಂಬಿಕ ಸಂವಾದ) ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಉದ್ದೇಶಕ್ಕಾಗಿ ಕೊಡುಗೆ ನೀಡುತ್ತಿzರೆ. ನೀವು ಮನ್ಕಾ ಬ್ರೇಕ್ ಉತ್ತಮ್ ಬ್ರೇಕ್ ಎನ್ನುವುದನ್ನು ಕೇಳಿರಬಹುದು ಅಥವಾ ಓದಿರಬಹುದು (ಮನಸ್ಸಿನ ಮೇಲೆ ನಿಯಂತ್ರಣ ಹೊಂದುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ನಿಯಂತ್ರಣವಾಗಿದೆ). ಈ ಬುದ್ಧಿವಂತಿಕೆಯ ಆಲೋಚನೆಯೊಂದೇ ನಮ್ಮ ನಂಬಿಕೆಯನ್ನು ದುರ್ಬಲ ಗೊಳಿಸುತ್ತಿರುವ ಮತ್ತು ಅಜಗರೂಕತೆಯನ್ನು ಉತ್ತೇಜಿಸುತ್ತಿರುವ ಭಾರತೀಯ ಮೌಲ್ಯ ವ್ಯವಸ್ಥೆಯ ಮೇಲಿನ ಬಹುಮುಖಿ ದಾಳಿಗಳ ಸವಾಲುಗಳಿಗೆ ಪರಿಹಾರವಾಗಿದೆ.

ಸ್ವಾರ್ಥ ಶಕ್ತಿಗಳಿಗೆ ಅನುಕೂಲ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ಸ್ವಯಂ ಬಗೆಗಿನ ಅಜ್ಞಾನ, ಅಸ್ಪಷ್ಟತೆ ಮತ್ತು ಅಪನಂಬಿಕೆಯ ಜತೆಜತೆಗೆ, ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ಹೆಚ್ಚಿನ ವೇಗದಲ್ಲಿ ಪ್ರಚಾರಗೊಳ್ಳುತ್ತಿರುವ ಕೆಲವು ಹೊಸ ವಿಷಯಗಳು ಈ ಸ್ವಾರ್ಥಿಶಕ್ತಿಗಳ ಕೆಟ್ಟ ಆಟಗಳಿಗೆ ಅನು
ಕೂಲಕರವಾಗಿವೆ. ಬಿಟ್‌ಕಾಯಿನ್‌ನಂತಹ ಅನಿಯಂತ್ರಿತ ಪ್ರವೃತ್ತಿಯು ಎಲ್ಲ ದೇಶಗಳ ಆರ್ಥಿಕತೆಗೆ ಸವಾಲಾಗಿ ಪರಿಣಮಿಸುವ ಆರ್ಥಿಕ ಅಸ್ಪಷ್ಟತೆಯ ಮಾಧ್ಯಮವಾಗಿ ಪರಿಣಮಿ ಸುತ್ತದೆ.

ಯಾವುದೇ ನಿಬಂಧನೆಗಳಿಗೆ ಒಳಪಡದ ಒ.ಟಿ.ಟಿ ವೇದಿಕೆಗಳಲ್ಲಿ ಏನನ್ನು ಬೇಕಾದರೂ ಪ್ರದರ್ಶಿಸಲಾಗುತ್ತದೆ ಮತ್ತು ಅಂತಹವನ್ನು ಯಾರು ಬೇಕಾದರೂ ವೀಕ್ಷಿಸಬಹುದಾಗಿದೆ. ಕೇವಲ ಆನ್‌ಲೈನ್ ಶಿಕ್ಷಣವನ್ನು ನಡೆಸಬೇಕಾಗಿತ್ತು. ಆದರೆ ಮಕ್ಕಳು ಮೊಬೈಲ್‌ಗಳಿಗೆ ಅಂಟಿಕೊಳ್ಳುವುದು ಈಗ ನಿಯಮವಾಗಿ ಬಿಟ್ಟಿದೆ. ವಿವೇಚನೆ ಮತ್ತು ಸರಿಯಾದ ನಿಯಂತ್ರಣದ ಕೊರತೆಯು ಸಮಾಜವನ್ನು ಈ ಎಲ್ಲ ಹೊಸ ಒಳಿತು- ಕೆಡುಕುಗಳಿಂದ ಎಲ್ಲಿಗೆ ಕೊಂಡೊಯ್ಯುತ್ತದೆ
ಎಂದು ಹೇಳುವುದು ಕಷ್ಟ. ಆದರೆ ದೇಶದ ವಿರೋಧಿ ಘಟಕಗಳು ಈ ವಿಧಾನಗಳನ್ನು ಬಳಸಲು ಬಯಸುತ್ತಾರೆ ಎಂದು ತಿಳಿದಿದೆ. ಆದ್ದರಿಂದ, ಸರಕಾರವು ಸಮಯಕ್ಕೆ ಸರಿಯಾಗಿ ಇಂತಹ ಎಲ್ಲ ವಿಷಯಗಳ ಮೇಲೆ ಸರಿಯಾದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕು.

ಭಾರತೀಯ ದೃಷ್ಟಿಕೋನದಲ್ಲಿ ಆರೋಗ್ಯ ನಮ್ಮದೇ ಆದ ಸಂಪ್ರದಾಯದಿಂದ ನಾವು ಹೊಂದಿರುವ ದೃಷ್ಟಿ ಮತ್ತು eನವು ಇಂದಿಗೂ ಉಪಯುಕ್ತವಾಗಿದೆ, ಈ ಕರೋನಾದ ಪರಿಸ್ಥಿತಿಯು ಅದನ್ನು ತೋರಿಸಿದೆ. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ.

ಭೌಗೋಳಿಕವಾಗಿ ವಿಶಾಲವಾದ ಮತ್ತು ಜನನಿಬಿಡತೆ ಇರುವ ನಮ್ಮ ದೇಶದಲ್ಲಿ ನಮಗೆಲ್ಲರಿಗೂ ತಿಳಿದಿದೆ, ಇಂತಹ ವೈದ್ಯಕೀಯ ವ್ಯವಸ್ಥೆಯು ಪ್ರತಿ ಯೊಬ್ಬ ವ್ಯಕ್ತಿಗೂ ಸುಲಭವಾಗಿ ಲಭ್ಯವಾಗುವುದು ಮತ್ತು ಅಗ್ಗದ ದರದಲ್ಲಿ ಲಭ್ಯವಾಗುಬೇಕೆನ್ನುವುದು ಅಗತ್ಯ ಎಂದು ನಮ್ಮ ಅನುಭವಕ್ಕೆ ಬರುತ್ತದೆ. ನಾವು ರೋಗಗಳನ್ನು ಗುಣಪಡಿಸುವ ಜೊತೆಗೆ ಆಯುರ್ವೇದದ ಆರೋಗ್ಯದ ಬಗ್ಗೆ ಯೋಚಿಸಬೇಕು. ಆಹಾರ, ಮನರಂಜನೆ, ವ್ಯಾಯಾಮ ಮತ್ತು ಧ್ಯಾನದ ಸಮತೋಲನದ ನಮ್ಮ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಜೀವನವು ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ ಮತ್ತು ದೇಹಗಳನ್ನು
ಸೋಂಕುಗಳಿಗೆ ನಿರೋಧಕವಾಗುವಂತೆ ಬಲಪಡಿಸುವ ವಾತಾವರಣವನ್ನು ಬೆಳೆಸಬಹುದು. ನಮ್ಮ ಈ ಜೀವನಶೈಲಿ ಪರಿಸರದೊಂದಿಗೆ ಸಂಪೂರ್ಣ ವಾಗಿ ಹೊಂದಿಕೊಳ್ಳುತ್ತದೆ ಮತ್ತು ಸಂಯಮದಂತಹ ದೈವಿಕ ಗುಣಗಳನ್ನು ನೀಡುತ್ತದೆ.

ಕರೋನಾದ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಮದುವೆ ಕಾರ್ಯಕ್ರಮಗಳನ್ನು ನಿಷೇಽಸಲಾಗಿದೆ. ನಾವು ಅವುಗಳನ್ನು ಸರಳತೆಯಿಂದ ಮಾಡಬೇಕಿತ್ತು. ನಮ ಕಣ್ಣಿಗೆ ಗೋಚರಿಸುವ ಉತ್ಸಾಹಗಳಲ್ಲಿ ಇಳಿಕೆ ಕಂಡುಬಂದಿತು, ಆದರೆ ನಾವು ಹಣ, ಶಕ್ತಿ ಮತ್ತು ಇತರ ಸಂಪನ್ಮೂಲಗಳ ತ್ಯಾಜ್ಯದಿಂದ ರಕ್ಷಿಸಲ್ಪಟ್ಟಿದ್ದೇವೆ ಮತ್ತು ಪರಿಸರದ ಮೇಲೆ ಅದರ ನೇರ ಅನುಕೂಲಕರ ಪರಿಣಾಮಗಳನ್ನು ನಾವು ಅನುಭವಿಸಿದ್ದೇವೆ. ಸನ್ನಿವೇಶಗಳನ್ನು ರದ್ದುಗೊಳಿಸಿದಾಗ ಈ ಅನುಭವದಿಂದ ಈಗ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಾ, ನಾವು ನಮ್ಮ ಮೂಲಜೀವನ ಶೈಲಿಗೆ ಅನುಗುಣವಾಗಿ ಪರಿಸರ ಹೊಂದಾಣಿಕೆಯ ಜೀವನಶೈಲಿಗೆ ಅಂಟಿಕೊಳ್ಳಬೇಕು, ದುಂದುವೆಚ್ಚ ಮತ್ತು ಕುಂದುಕೊರತೆಗಳನ್ನು ತಪ್ಪಿಸಬೇಕು. ಈ ಅನುಭವಗಳಿಂದ ಕಲಿಯುವುದು ಮತ್ತು ಸಾಮಾನ್ಯಜೀವನವು ಪುನಃ ಸ್ಥಾಪನೆಯಾದಾಗ ವ್ಯರ್ಥವಾದ ಖರ್ಚುಗಳನ್ನು ತಡೆಯಲು ಮತ್ತು ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿ ಸಿಕೊಳ್ಳಲು ಪ್ರಯತ್ನಿಸುವುದು ಜಣತನ. ಪ್ರಕೃತಿ ಸ್ನೇಹಿ ಜೀವನ ಶೈಲಿಯನ್ನು ಪ್ರತಿಪಾದಿಸುವ ವ್ಯಾಪಕ ಚಳುವಳಿ ಬಲವಾಗಿ ಬೆಳೆಯುತ್ತಿದೆ. ಪರಿಸರ ಸಂರಕ್ಷಣೆ ಚಟುವಟಿಕೆಗಳ ಭಾಗವಾಗಿ ಸಂಘದ ಸ್ವಯಂಸೇವಕರು ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ಬ ಳಕೆ ನಿರ್ಮೂಲನೆ ಮತ್ತು ಮರನೆಡುವಿಕೆ ಕುರಿತು ಜನರಿಗೆ ಶಿಕ್ಷಣ ನೀಡುತ್ತಿzರೆ.

ಪ್ರಸ್ತುತ, ಆಯುರ್ವೇದ ಮತ್ತು ಇತರ ಚಿಕಿತ್ಸಾ ವಿಧಾನಗಳ ಬಳಕೆಯಿಂದ, ಪ್ರಾಥಮಿಕ ಆರೋಗ್ಯರಕ್ಷಣೆಯ ಅಗತ್ಯಗಳನ್ನು ಸ್ಥಳೀಯ ಗ್ರಾಮಮಟ್ಟದಲ್ಲಿ ಪರಿಣಾಮಕಾರಿಯಾಗಿ ಪರಿಹರಿಸಬಹುದು. ನಾವು ವಲಯಮಟ್ಟದಲ್ಲಿ ದ್ವಿತೀಯ ಆರೋಗ್ಯವ್ಯವಸ್ಥೆಯನ್ನು ಆಯೋಜಿಸಲು ಯೋಜಿಸಿದರೆ ಜಿಲ್ಲಾಮಟ್ಟ ದಲ್ಲಿ ತೃತೀಯ ಆರೋಗ್ಯಕೇಂದ್ರಗಳ ಲಭ್ಯತೆ ಮತ್ತು ನಗರಗಳಲ್ಲಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಔಷಧದ ಒಂದು ವಿಧಾನದ ಮೇಲುಗೈಗಾಗಿ ಸಂಘರ್ಷಕ್ಕೆ ಇಳಿಯುವ ಬದಲು, ಎಲ್ಲಾ ಚಿಕಿತ್ಸಾ ವಿಧಾನಗಳ ತರ್ಕಬದ್ಧ ಬಳಕೆಯು ಎಲ್ಲರಿಗೂ ಕೈಗೆಟುಕುವ, ಲಭ್ಯವಿರುವ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತದೆ.

***

‘ಸ್ವತಂತ್ರ ಜೀವನ’ ಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ. ಮಹಾರಾಷ್ಟ್ರದ ಸಂತ ಜ್ಞಾನೇಶ್ವರ
ಮಹಾರಾಜ್ ಜೀ ಪ್ರಾರ್ಥನೆಯಲ್ಲಿ ಬರೆಯುತ್ತಾರೆ, ದುಷ್ಟರ ದುಷ್ಟತನವು ಕೊನೆಗೊಳ್ಳಲಿ ಮತ್ತು ಅವರ ಕಾರ್ಯಗಳು ಸದ್ಗುಣವಾಗಿ ಬದಲಾಗಲಿ. ಪ್ರತಿಯೊಬ್ಬರ ಎಲ್ಲ ಆಸೆಗಳನ್ನು ಈಡೇರಿಸುವಾಗ ಎಲ್ಲರಲ್ಲಿಯೂ ಸದಾಚಾರದ ಪ್ರಜ್ಞೆಯನ್ನು ಬೆಳಗಿಸುವ, ಸಂಕಟದ ಕರಾಳಮೋಡಗಳು ದೂರವಾಗಲಿ.

ಜನಸಂಖ್ಯಾ ನೀತಿ: ದೇಶದ ಅಭಿವೃದ್ಧಿಯನ್ನು ಪುನರ್ವಿ ಮರ್ಶಿಸುವಾಗ ಒಂದು ಸಂಕಷ್ಟವು ಮುನ್ನೆಲೆಗೆ ಬರುತ್ತದೆ, ಅದು ಅನೇಕರನ್ನು ಚಿಂತೆಗೀಡು ಮಾಡುತ್ತದೆ. ದೇಶದ ಜನಸಂಖ್ಯೆಯ ತ್ವರಿತ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ಸವಾಲನ್ನು ಸರಿಯಾಗಿ ಪರಿಗಣಿಸಬೇಕು.