Sunday, 8th September 2024

1930ರಿಂದಲೂ ಕೈ ಬರಹದಲ್ಲಿ ಪತ್ರ ಬರೆಯುತ್ತಿದ್ದ ಶಿವಕುಮಾರ ಸ್ವಾಮೀಜಿ

ನಮ್ಮಲ್ಲಿ ಮಾತ್ರ

ಸಾವಿರಾರು ಪತ್ರಗಳನ್ನು ಸಂರಕ್ಷಿಸಿರುವ ಸಿದ್ದಗಂಗಾ ಮಠ

ವಿಶೇಷ ವರದಿ: ರಂಗನಾಥ ಕೆ.ಮರಡಿ

ತುಮಕೂರು: ಪವಿತ್ರ ಕ್ಷೇತ್ರ ಸಿದ್ದಗಂಗಾ ಮಠದ ನಡೆದಾಡುವ ದೇವರು ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು ೧೯೩೦ರಿಂದ ಬರೆದಿರುವ ಕೈ ಬರಹದ ಪತ್ರಗಳನ್ನು ಸುರಕ್ಷಿತವಾಗಿ ಸಂರಕ್ಷಿಸುತ್ತಿರುವ ಕರ‍್ಯ ಮಠದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ದೇಶ, ವಿದೇಶಗಳಲ್ಲಿ ಅಸಂಖ್ಯಾತ ಸಿದ್ದಗಂಗಾ ಮಠದ ಭಕ್ತರು ಇದ್ದಾರೆ. ಕೆಲವರು ನೇರವಾಗಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶರ‍್ವಾದ ಪಡೆಯುತ್ತಿದ್ದರು. ವಿದೇಶಗಳಲ್ಲಿರುವ ಕೆಲವು ಭಕ್ತರಿಗೆ ಶ್ರೀಗಳು ಪತ್ರ ಬರೆದು ಆಶರ‍್ವದಿಸುವ ಕಾರ‍್ಯವನ್ನು ಲಿಂಗೈಕ್ಯ ರಾಗುವವರೆಗೂ ನಡೆಸಿಕೊಂಡು ಬರುತ್ತಿದ್ದರು.

ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿಯಾಗಿ 1930ರಲ್ಲಿ ಆಗಮಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಸನ್ಯಾಸಾಶ್ರಮಿಯಾಗಿದ್ದರು. ಸ್ವಲ್ಪ ದಿನಗಳ ನಂತರ ಬೆಂಗಳೂರಿಗೆ ಉನ್ನತ ಶಿಕ್ಷಣಕ್ಕೆ ತೆರಳಿದ್ದರು. ಆ ಸಮಯದಲ್ಲಿ ತಮ್ಮ ಗುರುಗಳಾದ ಉದ್ಧಾನ ಶಿವಯೋಗಿ ಸ್ವಾಮೀಜಿಗೆ ಬರೆದ ಪತ್ರಗಳು ಇಂದಿಗೂ ಹಾಳಾಗದಂತೆ ಮಠದಲ್ಲಿರುವುದು ಎಲ್ಲರನ್ನು ಬೆರಗುಗೊಳಿಸುತ್ತದೆ.

ಉನ್ನತ ಪ್ರಜೆಗಳು ಶ್ರೀಗಳಿಂದ ಸಲಹೆ ಪಡೆಯುತ್ತಿದ್ದರು. ದೇಶದ ಉನ್ನತ ಪ್ರಜೆಗಳಾದ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ಅಬ್ದುಲ್ ಕಲಾಂ, ಜೆ.ಹೆಚ್. ಪಟೇಲ್, ನಿಜಲಿಂಗಪ್ಪ, ಮೈಸೂರು ಮಹಾರಾಜರು, ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಪರನಮೇಶ್ವರ್ ಹೀಗೆ ಹಲವರು ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಾಮೀಜಿಯವರಿಗೆ ಪತ್ರ ಬರೆದು, ಆಶರ‍್ವಾದ ಬಯಸಿ, ಸರ‍್ಥ ಸರಕಾರ ನಡೆಸುವ ಬಗ್ಗೆ ಸಲಹೆ ಕೋರಿರುವ ನೂರಾರು ಪತ್ರಗಳನ್ನು ಮಠದಲ್ಲಿ ಸುರಕ್ಷಿತವಾಗಿವೆ.

ಕೇವಲ ಜನಪ್ರತಿನಿಧಿಗಳಲ್ಲದೆ ದೇಶದ ನಾನಾ ವಿವಿಧ ಮಠಾಧಿಪತಿಗಳೊಂದಿಗೆ ಸುವಿಚಾರಗಳನ್ನು ವಿಷಯ ವಿನಿಮಯ ಮಾಡಿ ಕೊಂಡು, ಉತ್ತಮ ಸಮಾಜ ನರ‍್ಮಾಣಕ್ಕೆ ಸಲಹೆ, ಸೂಚನೆಗಳನ್ನು ಶ್ರೀಗಳು ಹಂಚಿಕೊಂಡಿರುವುದು ಸಂತಸಕರ ವಿಚಾರ ವಾಗಿದೆ.

ಕನ್ನಡದಲ್ಲಿ ಪತ್ರ ಬರೆಯುತ್ತಿದ್ದ ಸ್ವಾಮೀಜಿ
ಮಠದ ಭಕ್ತರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಲು ಶ್ರೀಗಳು ಕನ್ನಡದಲ್ಲಿ ಕೈ ಬರಹದ ಮೂಲಕ ಪತ್ರ ಬರೆಯುತ್ತಿದ್ದರು. ಈ ಪತ್ರವನ್ನು ಭಕ್ತರು ಬಂಗಾರಕ್ಕಿಂತಲೂ ಮಿಗಿಲಾಗಿ ಮನೆಗಳಲ್ಲಿ ಇಟ್ಟು ಪೂಜಿಸುತ್ತಾರೆ. ಪತ್ರಗಳನ್ನು ಬರೆಯಲು ಅನಗತ್ಯವಾಗಿ ಖಾಲಿ ಹಾಳೆ ಗಳನ್ನು ಸ್ವಾಮೀಜಿ ಬಳಸುತ್ತಿರಲಿಲ್ಲ. ಪತ್ರ ಬರೆದ ನಂತರ ಬರೆದಿರುವ ಪ್ರತಿಯೊಂದು ಅಕ್ಷರಗಳನ್ನು ಬಹಳ ಎಚ್ಚರಿಕೆಯಿಂದ ಅವಲೋಕನ ಮಾಡಿ ನಂತರ ಕನ್ನಡದಲ್ಲಿ ಸಹಿ ಮಾಡುತ್ತಿದ್ದ ಶಿವಕುಮಾರ ಸ್ವಾಮೀಜಿಯವರ ಶಿಸ್ತು, ಕನ್ನಡಾಭಿಮಾನ ಮಾದರಿ ಯಾಗಿದೆ.

ಪತ್ರಗಳ ಸಂರಕ್ಷಣೆ
ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಕೈ ಬರಹದಲ್ಲಿ ಸಾವಿರಾರು ಪತ್ರಗಳನ್ನು ದೇಶ, ವಿದೇಶದ ಮೂಲೆ, ಮೂಲೆಗೆ ಬರೆದಿರುವುದು ಮಹತ್ವದ ಸಂಗತಿ. ಅಲ್ಲದೆ ಈ ಪ್ರತಿಯೊಂದು ಪತ್ರಗಳು ಸಿದ್ದಗಂಗಾ ಮಠದ ಅತ್ಯಮೂಲ್ಯ ಆಸ್ತಿ ಯಾಗಿವೆ. ಈ ಪತ್ರಗಳು ಹಾಳಾಗದಂತೆ ಬಹಳ ರ‍್ಷ ಸಂರಕ್ಷಿಸಿಡಲು ಲ್ಯಾಮಿನೇಷನ್ ಮಾಡಲಾಗುತ್ತಿದೆ. ನೂರಾರು ಮೂಟೆಗಳಲ್ಲಿ ಹತ್ತಾರು ರ‍್ಷಗಳ ಕಾಲದ ಸಾವಿರಾರು ಪತ್ರಗಳು ಸಂಗ್ರಹವಾಗಿದ್ದು, ಇವುಗಳನ್ನು ವಿಂಗಡಿಸಿ ದಾಖಲೀಕರಣಗೊಳಿಸಲಾಗುತ್ತಿದೆ. ಈ ಮಹತ್ವದ ಕರ‍್ಯಕ್ಕೆ ಕೆಲವು ವಿದ್ವಾಂಸಕರು ಕೈ ಜೋಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!