Tuesday, 23rd April 2024

ಜನಸೇವೆಯೇ ಇವರಿಗೆ ಹೂಡಿಕೆ, ವಿಜಯ್ ಕುಮಾರ್‌ ಹೆಗ್ಗಳಿಕೆ !

ಮಾಲೂರಿನ ಮನೆ ಮನೆಗೂ ಈ ಹೆಸರು ಗೊತ್ತು. ಬಡಮಕ್ಕಳ ಕಣ್ಣೀರ ಒರೆಸುವುದರಲ್ಲಿ ಈ ವ್ಯಕ್ತಿಯ ಕೈ ಸದಾ ಮುಂದೆ. ಅದರಲ್ಲೂ ಕೋಟಿ ಕೋಟಿ ಸ್ವಂತ ಹಣವನ್ನು ಜನರ ಸೇವೆಗಾಗಿ ಹೂಡಿಕೆ ಮಾಡಿರುವ ಇವರಿಗೆ ದಿನನಿತ್ಯದ ಕೆಲಸವೆಂದರೆ ಜನಸೇವೆ ಮತ್ತು ಜನಸೇವೆಯಷ್ಟೇ! ಇವರೇ, ಮಾಲೂರಿನ ಪ್ರತೀ ಮನೆಗಳ, ಮನಗಳ ಮಾತಾಗಿರುವ, ಬಡವರ ಪಾಲಿನ ಆಶಾಕಿರಣ, ಕಷ್ಟಹೇಳಿಕೊಂಡು ಬಂದವರ ಪಾಲಿನ ಪರಿಪೂರ್ಣ ಕರ್ಣ, ಹೂಡಿ ವಿಜಯ್ ಕುಮಾರ್.

ವಿನಾಯಕರಾಮ್ ಕಲಗಾರು

ಮೂಲತಃ ಕೃಷಿಕರೂ, ವಾಣಿಜ್ಯೋದ್ಯಮಿಯೂ ಆಗಿರುವ ವಿಜಯ್ ಕುಮಾರ್, ಕೋಲಾರ ಜಿಲ್ಲೆಯ ಹೃದಯಭಾಗದಂತಿರೋ ಮಾಲೂರಿನವರು. ಸತತ
ಐದು ವರುಷಗಳಿಂದ ಮನೆ ಯಿಂದ ಹಣ ತಂದು ಸಮಾಜ ಸೇವೆ ಮಾಡುತ್ತಿರುವ ಇವರಿಗೆ ಹಗಲಿರುಳೂ ಮಾಲೂರಿನ ಅಭಿವೃದ್ಧಿಯದ್ದೇ ಯೋಚನೆ. ಆ
ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ಕೈಗೊಂಡು, ಅದನ್ನು ಜನರಿಗೆ ತಲುಪಿಸುತ್ತಿದ್ದಾರೆ. ವಿಜಯ್‌ಕುಮಾರ್ ಅವರ ವರಪತ್ನಿ ಶ್ವೇತಾ ವಿಜಯ್‌ ಕುಮಾರ್, ಕಾರ್ಪರೇಟರ್ ಆಗಿದ್ದು ಗಂಡನ ಜನಸೇವೆಯಲ್ಲಿ ಮೊದಲು ಕೈಜೋಡಿಸುವ ಸಾರ್ಥಕ ಮಹಿಳೆ.

ಕೋವಿಡ್ ೧೯ ಸಂದರ್ಭದಲ್ಲಂತೂ ಬಡ ರೈತರಿಗೆ ಮತ್ತು ರೈತಾಪಿ ಬಡವರಿಗೆ ಇಬ್ಬರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾದರು. ಹೆಂಡತಿ ತಮ್ಮ ಹೆಸರಲ್ಲಿ ಒಳ್ಳೇ ಬೆಲೆ ಕೊಟ್ಟು ರೈತರ ಬೆಳೆಗಳನ್ನು ಖರೀದಿ ಮಾಡಿದರೆ, ಅದೇ ಬೆಳೆಗಳನ್ನು ಬಡವರಿಗೆ ತಲಾ ಐದು ಕೇಜಿಯಂತೇ ಹಂಚುವ ಮೂಲಕ ಊರಿಗೇ ಮಾದರಿಯಾದರು. ಇದಲ್ಲದೇ ಕೊರೋನಾ ಎರಡೂ ಅಲೆಯಲ್ಲಿ ವಿಜಯ್ ಅವರು ದಿನಸಿ ಕಿಟ್, ಆಹಾರದ ಪೊಟ್ಟಣ, ಸ್ಯಾನಿಟೈಸರ್‌ಗಳು, ಫೇಸ್ ಮಾಸ್ಕ್‌ಗಳು ಸೇರಿದಂತೇ ಸಾಕಷ್ಟು ಸಹಾಯ ಸಾಮಗ್ರಿ ಗಳನ್ನು ರಸ್ತೆ ರಸ್ತೆಯಲ್ಲಿ ನಿಂತು ಹಂಚಿದರು.

ವಿಜಿಯವರು ಸರಿಸುಮಾರು ಎರಡೂವರೆ ಲಕ್ಷದಷ್ಟು ಮಾಸ್ಕ್ ಮತ್ತು ಫೇಸ್ ಶೀಲ್ಡ್ ವಿತರಣೆ ಮಾಡಿದ್ದಾರೆ ಎಂದರೆ ನೀವು ಅಚ್ಚರಿ ಪಡುತ್ತೀರಿ. ಜನ ಸೇವೆಯಲ್ಲಿ ಗಂಡನಿಗಿಂತ ಹೆಂಡತಿ ಮುಂದು. ಶ್ವೇತಾ ಅವರು ನಂಬರ್ ಒನ್ ಕಾರ್ಪೊರೇಟರ್ ಎನ್ನುವ ಬಿರುದು ಕೂಡ ಪಡೆದಿದ್ದಾರೆ. ಅದೂ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರ ಕೈಯಿಂದ!

ಹಿರಿಯ ನಾಗರಿಕರಿಗೆ ವ್ಯಾಕ್ಸಿನೇಷನ್!
ಅರವತ್ತು ವರುಷ ಮೇಲ್ಪಟ್ಟ ೧೭೫೦೦ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ, ವಿಶೇಷ ಚೇತನರಿಗೆ ಲಸಿಕೆ ಹಾಕಿಸಿಕೊಳ್ಳಲು ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಿದ್ದು ಇದೇ ಹೂಡಿ ವಿಜಯ್‌ಕುಮಾರ್. ಜತೆಗೆ ಹತ್ರತ್ರ ಹತ್ತು ಸಾವಿರದಷ್ಟು ಉಚಿತ ಕೋಡ್ ಔಷಧಿ ಕಿಟ್‌ಗಳನ್ನು ಸಪ್ಪಳ ಮಾಡದೇ ಹಪ್ಪಳದಂತೇ ಹಂಚಿದ್ದು ಇದೇ ವಿಜಿಯವರು !

ಸಾಲ ಮನ್ನಾ ಬಾಯ್ ಎಂಬಿಬಿಎಸ್!
ವಿಜಯ್‌ಕುಮಾರ್ ಕೋವಿಡ್ ಕಷ್ಟದಲ್ಲಿ ಸಿಲುಕಿದ ರೈತರಿಗೆ ಸಾಲಮನ್ನಾ ಮಾಡಿಸುವ ಮೂಲಕ ಜನಾನುರಾಗಿ ಎನಿಸಿಕೊಂಡರು. ೨೯ ರೈತರಿಗೆ ನೇರವಾಗಿ ಒಂದೂಮುಕ್ಕಾಲು ಲಕ್ಷದಷ್ಟು ಸಾಲವನ್ನು ಮರುಪಾವತಿ ಮಾಡಿ, ಋಣಮುಕ್ತ ಪತ್ರ ನೀಡಿ, ಅವರಿಗೆಲ್ಲಾ ಸರ್ಕಾರದಿಂದ ಸಬ್ಸಿಡಿ ಸಿಗುವಂತೇ ಮಾಡಿದರು. ಈ ಮೂಲಕ ರೈತರು ಕೃಷಿ ಚಟುವಟಿಕೆಗಳನ್ನು ಖುಷಿಯಿಂದ ಮುಂದುವರೆಸಿಕೊಂಡು ಹೋಗುವಂತೆ ಮಾಡಿಕೊಡಲಾಯಿತು!

ವಿಜಿಯವರು ಮೂರು ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಂಧುಗಳ ಕುಟುಂಬಕ್ಕೆ ರಂಜಾನ್ ಪ್ರಯುಕ್ತ ಸಿಹಿ ಮತ್ತು ಖರ್ಜೂರ ಹಂಚಿದ್ದನ್ನು ಇವತ್ತಿಗೂ  ಎಲ್ಲರೂ ನೆನೆಯುತ್ತಾರೆ. ವಿಜಿಯವರಿಗೆ ಇರುವ ಭಾರತೀಯತೆ ಮತ್ತು ನಾವೆಲ್ಲರೂ ಒಂದೇ ಎನ್ನುವ ಸಮಾನತೆಯ ಮೇಲಿನ ಗೌರವಕ್ಕೆ ಹ್ಯಾಟ್ಸ್ ಆಫ್ ಹೇಳುತ್ತಾರೆ!

ಜಾನುವಾರುಗಳಿಗೆ ಮೇವು ವಿತರಣೆ!
ವಿಜಿಯವರಿಗೆ ಹಸು-ಎತ್ತುಗಳೆಂದರೆ ವಿಶೇಷ ಗೌರವ. ಅವುಗಳ ಸೇವೆ ಮಾಡುವುದೆಂದರೆ ಎಲ್ಲಿಲ್ಲದ ಸಂಭ್ರಮ. ಮಾಲೂರು ತಾಲೂಕಿನ ಸುತ್ತ ಹಳ್ಳಿಗಳಲ್ಲಿ ನಡೆಯುವ ಊರ ಹಬ್ಬದಲ್ಲಿ ಎತ್ತುಗಳಿಗೆ ಬೂಸ ನೀಡುವುದಲ್ಲದೇ ಊರಲ್ಲಿ ನಡೆಯೋ ದನಗಳ ಜಾತ್ರೆಯಲ್ಲಿ ನೂರಾರು ರಾಸುಗಳಿಗೆ ಬೂಸಾ ನೀಡುವ ಕೆಲಸ ಮಾಡುತ್ತಾರೆ. ಆ ಕೆಲಸದಲ್ಲಿ ತೃಪ್ತಿ ಕಾಣುತ್ತಾರೆ. ಗೋ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಾರೆ!

ಇವೆಲ್ಲದರ ನಡುವೆ ಪೋಸ್ಟ್ ಮ್ಯಾನ್‌ಗಳಿಗೆ ರೈನ್ ಕೋಟ್ ವಿತರಣೆ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ಸೇರಿದಂತೇ ಹತ್ತು ಹಲವು ವಿತರಣಾ ಕಾರ‍್ಯಕ್ರಮಗಳಲ್ಲಿ ವಿಜಿಯಣ್ಣ ದಿನವೀಡಿ ಬಿಜಿ, ತಿಂಗಳಿಡೀ ಕಾರ್ಯನಿರತರಾಗಿರುತ್ತಾರೆ! ಜತೆಗೆ ಜನರ ಮನವಿ ಮೇರೆಗೆ ಮಾಲೂರಿನ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ, ಡಾ.ಬಿ ಆರ್ ಅಂಬೇಡ್ಕರ್ ಭವನದ ಪುನಶ್ಚೇತನ, ಹಲವೆಡೆ ರಕ್ತದಾನ ಶಿಬಿರ, ರಸ್ತೆ ಸುರಕ್ಷತೆಯ ಅರಿವು (ಅಲ್ಲಿ ಒಂದಷ್ಟು
ಹೆಲ್ಮೆಟ್ ವಿತರಣೆ) ಆಯುಷ್ಮಾನ್ ಭಾರತ್ ಮತ್ತು ಇ-ಶ್ರಮ್ ಕಾರ್ಡ್ ವಿತರಣೆ, ಗಣಪತಿ ದೇವಸ್ಥಾನ ಮಹಾದ್ವಾರ ನಿರ್ಮಾಣ, ಸಾಕಷ್ಟು ದೇವತಾ
ಕಾರ್ಯಗಳಲ್ಲಿ ವಿಶೇಷ ಸಹಭಾಗಿತ್ವ, ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ವಿಶೇಷ ವಾಹನ ವ್ಯವಸ್ಥೆ, ಜಲ ಸಂಜೀವಿನಿ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಭಾರತ ಅಭಿಯಾನ, ಆರೋಗ್ಯ ಶಿಬಿರ ಮತ್ತು ವೈದ್ಯಕೀಯ ನೆರವು, ಸತತ ನಾಲ್ಕು ವರ್ಷಗಳ ಕಾಲ ಎಪ್ಪತ್ತು ಸಾವಿರದಷ್ಟು ಉಚಿತ ಕ್ಯಾಲೆಂಡರ್ ವಿತರಣೆ, ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಯುವಕರು ಭಾಗಿಯಾಗುವಂತೇ ಒಂದಷ್ಟು ಉತ್ತೇಜನಕಾರೀ ಚಟುವಟಿಕೆಗಳು, ನಾಡಪ್ರಭು ಕೆಂಪೇಗೌಡರು, ಶಿವಾಜಿ ಮಹಾರಾಜ್ ಸೇರಿದಂತೇ ಸಾಕಷ್ಟು ಧೀಮಂತರ, ದೇಶಭಕ್ತರ ಹೆಸರಲ್ಲಿ ಜಯಂತಿಗಳ ಆಚರಣೆ, ಸಂಭ್ರಮಾಚರಣೆ, ಮಾಲೂರಿನಲ್ಲಿ ಕೆಂಪೇಗೌಡರ ರಥಯಾತ್ರೆ, ಹರ್ ಘರ್ ತಿರಂಗಾ ಅಭಿಯಾನ ಸೇರಿದಂತೆ ಮಾಲೂರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಂತೇ ಕೆಲಸ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಘಟಾನುಘಟಿಗಳ ಎದುರು ಹೋರಾಡಿ ತೀರಾ ಕಡಿಮೆ ಅಂತರದಲ್ಲಿ ವಿಜಿಯವರು ಸೋತಿದ್ದರೂ, ಮಾಲೂರು
ಮನೆಮನಗಳ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಲೇ ಇದ್ದಾರೆ. ಸೋಲು ಗೆಲುವು ಎಲ್ಲವನ್ನೂ ಮೀರಿ ಜನರ ಒಲವನ್ನು ಸಂಪಾದಿಸಿದ ಒಬ್ಬ ಸಾಮಾಜಿಕ ಕಾಳಜಿ ಇರುವ ಸ್ನೇಹ ಸಂತನಂತೇ ಬದುಕುತ್ತಿದ್ದಾರೆ ಹೂಡಿ ವಿಜಯ್‌ಕುಮಾರ್.

ಬಿಜೆಪಿಗೆ ಸೇರ್ಪಡೆ?! 
ಪಕ್ಷೇತರರಾಗಿ ದೊಡ್ಡ ಮಟ್ಟದ ಸವಾಲು ಎದುರಿಸಿ, ತೀರಾ ಕಡಿಮೆ ಅಂತರದಲ್ಲಿ ಪರಾಜಯಗೊಂಡಿರುವ ವಿಜಿ ಅವರ ಸಾಮಾಜಿಕ ಕಳಕಳಿ ಮತ್ತು ಜನಸೇವೆಯನ್ನು ಬಿಜೆಪಿಯ ದೊಡ್ಡ ಬಳಗ ನೋಡುತ್ತಲೇ ಇದೆ. ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರೆ ಈ ಬಾರಿ ಎಂಪಿ ಎಲೆಕ್ಷನ್‌ನಲ್ಲಿ ಪ್ಲಸ್ ಆಗುವ ಸಾಧ್ಯತೆ ಇದೆ ಎನ್ನುವ ಮೆಸೇಜ್ ಕೂಡ ಹೈಕಮಾಂಡ್ ಕಡೆ ಹೋಗಿ ತಲುಪಿದೆ. ಸದ್ಯದಲ್ಲೇ ಅವರು ಬಿಜಿಪಿಗೆ ಅದ್ದೂರಿಯಾಗಿ ಸೇರ್ಪಡೆ ಆಗುತ್ತಾರೆ ಎನ್ನುವ ರೂಮರ್ ಎದ್ದಿದೆ. ಅದು ನಿಜವೋ ಅಲ್ಲವೋ ಕಾದು ನೋಡಬೇಕಿದೆ!

ಜನಸೇವಕನಿಗೆ ವಿಶ್ವವಾಣಿ ಗ್ಲೋಬಲ್ ಪ್ರಶಸ್ತಿ
ಸಮಾಜಸೇವೆಯೇ ತಮ್ಮ ಮೂಲ ಉದ್ದೇಶ ಎಂದು ಸ್ವಂತ ಮನೆ ದುಡ್ಡು, ದುಡಿದ ದುಡ್ಡನ್ನು ಜನರ ಸೇವೆಗೆ ಮುಡಿಪಾಡಿಟ್ಟಿರುವ ಮಾಲೂರು ಮೂಲದ ಹೂಡಿ ವಿಜಯ್‌ಕುಮಾರ್ ಅವರಿಗೆ ಈ ವರ್ಷದ ವಿಯೆಟ್ನಾಂ ಗ್ಲೋಬಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ನಮ್ಮಂಥವರಿಗೆ ಇರುವ ಸ್ಪೂರ್ತಿಯನ್ನು ನೂರು ಪಟ್ಟು ಹೆಚ್ಚಿಸಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಸೇವೆ ಮಾಡಲು ವಿಶ್ವವಾಣಿ ಪ್ರಪಂಚ ಗಾತ್ರದ ಪ್ರಶಸ್ತಿ ಉತ್ತೇಜನವಾಗಲಿದೆ ಎನ್ನುವುದು ಹೂಡಿ ವಿಜಯ್‌ಕುಮಾರ್ ಅವರ ಅಭಿಪ್ರಾಯವಾಗಿದೆ!

ಯುವರತ್ನಈ ಮಾಲೂರಿನ ಸೇವಾರತ್ನ !
ವಿಜಿ ಅವರಿಗೆ ಯುವಕರನ್ನು ಬೆನ್ನುತಟ್ಟುವ, ಅವರಲ್ಲಿನ ಪ್ರತಿಭೆಯನ್ನು ಪ್ರಾಮಾಣಿಕವಾಗಿ ಪ್ರೋತ್ಸಾಹಿಸುವ ಒಂದು ವಿಶೇಷ ಮನಸ್ಸಿದೆ. ಅದೇ ಕಾರಣಕ್ಕೆ ಮಾಲೂರಿನಲ್ಲಿ ಯುವ ಕ್ರೀಡಾ ಉತ್ಸವ ಹಮ್ಮಿ ಕೊಂಡರು. ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಹಿತದೃಷ್ಟಿಯಿಂದ ವಿದ್ಯಾರ್ಥಿ ಮಿತ್ರ ಎನ್ನೋ ನಿಯತ ಕಾಲಿಕವನ್ನು ಬಿಡುಗಡೆ ಮಾಡಿದರು. ಅದನ್ನು ಉಚಿತವಾಗಿ ನೀಡುವುದರ ಮೂಲಕ ಯುವಕರಲ್ಲಿ ವಿದ್ಯಾ ಶ್ರದ್ಧೆ ಹೆಚ್ಚಿಸುವ ಕೆಲಸಕ್ಕೆ ಮುಂದಾ ದರು. ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ ೫೦೦೦ ಪ್ಲಸ್ ಪರೀಕ್ಷಾ ಕಿಟ್ ಗಳನ್ನು ತರಿಸುವ ಮೂಲಕ ಪ್ರೌಢ ಶಾಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿ ಆರ್ ಪ್ರೌಡ್ ಆ- ವಿಜಯ್‌ಕುಮಾರ್ ಎಂದೆನಿಸಿಕೊಂಡರು! ಪ್ರತಿಭಾ ವಂತ ಓದುಗ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ವಿದ್ಯಾದಾನಕ್ಕೆ ಕೈ ಜೋಡಿಸಿದರು.

Leave a Reply

Your email address will not be published. Required fields are marked *

error: Content is protected !!