ಹಿಂದೆಲ್ಲಾ ಕಿಡ್ನಿ ವೈಫಲ್ಯ ಅಥವಾ ಕಿಡ್ನಿ ಸಂಬಂಧಿತ ಕಾಯಿಲೆ ಕೇವಲ ವಯಸ್ಕರು ಅಥವಾ ವಯಸ್ಸಾದವರದಲ್ಲಿ ಕಾಣು ತ್ತಿದ್ದೆವು. ಇದೀಗ ಮಕ್ಕಳಲ್ಲಿಯೂ ಸಹ ಕಿಡ್ನಿ ಸಂಬಂಧಿತ ಕಾಯಿಲೆ ಹೆಚ್ಚಳವಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸು ತ್ತಿದ್ದಾರೆ.
ಹೌದು, 15 ವರ್ಷ ಒಳಗಿನ ಮಕ್ಕಳಲ್ಲಿ ಕಿಡ್ನಿ ಸೋಂಕು, ಕಿಡ್ನಿ ಸ್ಟೋನ್ ಸೇರಿದಂತೆ ಇತರೆ ಕಿಡ್ನಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಪ್ರಕಾರ ಕನಿಷ್ಠ 2 ಸಾವಿರ ಮಕ್ಕಳು ಕಿಡ್ನಿ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ 500 ರಷ್ಟು ಮಕ್ಕಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ, ಉಳಿದವರು ಆಸ್ಪತ್ರೆಯಲ್ಲಿ ದಾಖಲಾಗುವ ಮಟ್ಟದಲ್ಲಿ ಆರೋಗ್ಯ ಹದಗೆಡುತ್ತಿರುವುದು ವರದಿಯಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಫೊರ್ಟಿಸ್ ಆಸ್ಪತ್ರೆ ಮೂತ್ರಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವ್ ಮೂರ್ತಿ, ಬದಲಾದ ಜೀವನ ಶೈಲಿ ಹಾಗೂ ಆಹಾರ ಶೈಲಿಯಿಂದಾಗಿ ಮಕ್ಕಳಲ್ಲಿ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು, ಸೋಂಕು ಹೆಚ್ಚುತ್ತಿದೆ.
ಮೊದಲೆಲ್ಲಾ ಮಕ್ಕಳಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆ ಅತಿ ಕಡಿಮೆ ಇತ್ತು. ಎಲ್ಲೋ ಒಂದೆ ರಡು ಪ್ರಕರಣಗಳು ಮಾತ್ರ ಪತ್ತೆ ಯಾಗುತ್ತಿದ್ದವು. ಇದೀಗ, ಮಕ್ಕಳಲ್ಲಿಯೇ ಹೆಚ್ಚು ಪ್ರಮಾಣ ದಲ್ಲಿ ಕಿಡ್ನಿ ಸಂಬಂಧ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದರೆ ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಅದೂ ಕೊನೆ ಹಂತಕ್ಕೆ ತಲುಪಿದರೆ ಪ್ರಾಣಕ್ಕೂ ಸಂಚಕಾರ ಮೂಡಬಹುದು. ಹೀಗಾಗಿ ಮಕ್ಕಳಲ್ಲಿ ಕಿಡ್ನಿ ಸಂಬಂಧ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ಇಲ್ಲಿದೆ.
ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ: ಕಿಡ್ನಿ ಸಂಬಂಧಿತ ಕಾಯಿಲೆಗಳು ಪ್ರಾರಂಭದಲ್ಲಿಯೇ ಲಕ್ಷಣಗಳು ಗೋಚರಿಸಿದರೂ ಆ ಬಗ್ಗೆ ನಿರ್ಲಕ್ಷ್ಯ ವಹಿಸಿಬಿಡುತ್ತಾರೆ. ಇದರಿಂದ ಕಾಯಿಲೆಯ ತೀವ್ರತೆ ಹೆಚ್ಚಬಹುದು. ಹೀಗಾಗಿ ಮೊದಲು ಹೊಟ್ಟೆ ನೋವು, ದೇಹ ದಲ್ಲಿ ಊತ ಕಂಡು ಬರುವುದು, ಮೂತ್ರದ ಕ್ರಿಯೆಯಲ್ಲಿ ಬದಲಾವಣೆ ಕಾಣುವುದು, ಅಸಹಜ ಬೆನ್ನು ನೋವು, ಆಯಾಸ ಮತ್ತು ದೌರ್ಬಲ್ಯ, ಚಳಿಯಾಗುವುದು, ಶೀತಭಾದೆ ಇಂಥ ಲಕ್ಷಣಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಮಕ್ಕಳಲ್ಲಿನ ಬದಲಾವಣೆಯನ್ನು ಪೋಷಕರು ಗಮನಿಸಿ, ಕೂಡಲೇ ವೈದ್ಯರನ್ನು ಕಾಣುವುದರಿಂದ ಕಿಡ್ನಿ ಸಮಸ್ಯೆಯನ್ನು ಪ್ರಾರಂಭದ ಹಂತದಲ್ಲಿಯೇ ಗುಣಪಡಿಸಬಹುದು. ಇಲ್ಲವಾದರೆ ಹೆಚ್ಚು ದೊಡ್ಡ ಪ್ರಮಾಣಕ್ಕೆ ತಿರುಗಬಹುದು.
ಆರೋಗ್ಯದಲ್ಲಿ ಸಮತೋಲ ಕಾಯ್ದುಕೊಳ್ಳಿ: ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೂ ಕಿಡ್ನಿ ಸಮಸ್ಯೆ ಉದ್ಭವಿಸಬಹುದು. ಬದಲಾದ ಜೀವನ ಶೈಲಿಯೇ ಕಿಡ್ನಿ ಸಮಸ್ಯೆ ಉಲ್ಬಣವಾಗಲು ಕಾರಣ ಎನ್ನಲಾಗಿದೆ. ಇಂದಿನ ಮಕ್ಕಳ ಲ್ಲಿಯೂ ಸಹ ಮಧುಮೇಹ, ಸ್ಥೂಲಕಾಯ ಸಾಮಾನ್ಯವಾಗಿದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಮಕ್ಕಳು ಮನೆಲ್ಲಿಯೇ ಇದಿದ್ದರಿಂದ ಮಕ್ಕಳ ದೈಹಿಕ ಚಟುವಟಿಕೆಗಳು ಸಂಪೂರ್ಣ ಕಡಿಮೆಯಾಗಿದೆ. ಇದು ಮಕ್ಕಳಲ್ಲಿ ಬೊಜ್ಜು ಹೆಚ್ಚಳವಾಗಿದೆ.
ಇದರಿಂದ ಸಹಜವಾಗಿಯೇ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಡಯಾಬಿಟಿಸ್‌ನಿಂದ ಸುಲಭವಾಗಿ ಕಿಡ್ನಿ ಸಮಸ್ಯೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅಗತ್ಯ ದೈಹಿಕ ಚಟುವಟಿಕೆ ಹಾಗೂ ಗುಣಮಟ್ಟದ ಆಹಾರ ಸೇವನೆಗೆ ಆದ್ಯತೆ ನೀಡುವುದು ಅಗತ್ಯ,
ಅನುವಂಶಿಯ ಇತಿಹಾದ ಇದ್ದರೆ ವೈದ್ಯರ ಸಲಹೆ ಪಡೆಯಿರಿ: ಇನ್ನೂ ಕೆಲ ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರದಿದ್ದರೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಇದಕ್ಕೆ ಅನುವಂಶಿಕ ಕಾರಣವೂ ಆಗಿರಬಹುದು. ಈಗಾಗಲೇ ಕುಟುಂಬ ದಲ್ಲಿ ಕಡ್ನಿ ಸಮಸ್ಯೆ ಇರುವ ಸದಸ್ಯರಿದ್ದರೆ ಜೀನ್ಸ್ ಮೂಲಕ ಮಕ್ಕಳಿಗೆ ಹಬ್ಬಲಿದೆ. ಆದರೆ ಈ ಪ್ರಮಾಣ ಕಡಿಮೆ. ಆದರೂ ಅಂಥ ಕುಟುಂಬದ ಹಿನ್ನೆಲೆ ಇರುವ ಮಕ್ಕಳು ವೈದ್ಯರ ಸಲಗೆ ಪಡೆಯುವುದು ಒಳ್ಳೆಯದು.