Thursday, 12th December 2024

ಹೋಳಿ ಸಮಯದಲ್ಲಿ ತ್ವಚೆಯ ಆರೈಕೆ

– ಡಾ. ಭವ್ಯಶ್ರೀ, ಚರ್ಮರೋಗ ತಜ್ಞರು, ಸ್ಪೆಷಲಿಸ್ಟ್ ಹಾಸ್ಪಿಟಲ್

ಬಣ್ಣಗಳ ಹಬ್ಬವಾದ ಹೋಳಿಯನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುವುದಕ್ಕಾಗಿ ಇರುವ ಹಬ್ಬ ಇದಾಗಿದೆ. ಯುವಕರು ಮತ್ತು ಹಿರಿಯರು ಪರಸ್ಪರ ಬಣ್ಣ ಎರಚುವ ವಿನೋದ ಮತ್ತು ಉಲ್ಲಾಸದ ಸಮಯವಾಗಿದೆ. ಪ್ರಕೃತಿಯ ಬಣ್ಣಗಳನ್ನು ಸಂಭ್ರಮಿಸುವ ಸಮಯವೂ ಆಗಿದೆ. ಸಾಂಪ್ರದಾಯಿಕವಾಗಿ, ಹೋಳಿಯಲ್ಲಿ ಬಳಸುವ ಬಣ್ಣಗಳನ್ನು ಬೇವು, ಅರಿಷಿನ ಮುಂತಾದ ಸಸ್ಯಗಳಿಂದ ತಯಾರಿಸಲಾಗುತ್ತದೆ ಮತ್ತು ಈ ಬಣ್ಣಗಳು ಮಾನವ ದೇಹದ ಮೇಲೆ ಪರಿಣಾಮವು ಹೆಚ್ಚು ಗುಣಪಡಿಸುವ ಪ್ರಭಾವವನ್ನು ಹೊಂದಿವೆ.

ಆದರೆ ಇಂದು ಹೆಚ್ಚಾಗಿ ಕೃತಕವಾದ ಹಾಗೂ ರಾಸಾಯನಿಕಗಳಿಂದ ತಯಾರಿಸಿದ ಕಟುವಾದ ಮತ್ತು ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುವ ಬಣ್ಣಗಳನ್ನು ಬಳಸಲಾ ಗುತ್ತಿದೆ. ಇದು ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೋಳಿ ದಿನದಂದು ನಿಮ್ಮ ಚರ್ಮವನ್ನು ರಕ್ಷಿಸುವುದು ಸಾಕಾಗುವುದಿಲ್ಲ, ಹೋಳಿ ಆಚರಣೆಯ ಮೊದಲು ಮತ್ತು ಕನಿಷ್ಠ ಒಂದು ವಾರದ ಮುನ್ನ ಬ್ಲೀಚಿಂಗ್, ವ್ಯಾಕ್ಸಿಂಗ್ ಮತ್ತು ಫೇಶಿಯಲ್‍ ಗಳನ್ನು ತಪ್ಪಿಸುವಂತಹ ಕೆಲವು ಸಿದ್ಧತೆಗಳನ್ನು ಮುಂಚಿತವಾಗಿ ತೆಗೆದುಕೊಳ್ಳಬೇಕು. ಇದರಿಂದ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯ.

ಹೋಳಿ ಆಚರಣೆಯ ಸಮಯದಲ್ಲಿ ಮತ್ತು ನಂತರ ಆರೋಗ್ಯಕರ ಚರ್ಮದ ಆರೈಕೆಗಾಗಿ ಕೆಲವು ಸಲಹೆಗಳು ಇಲ್ಲಿವೆ:
• ಹೋಳಿ ಆಡುವಾಗ ಒಣ ಸಾವಯವ ಬಣ್ಣಗಳನ್ನು ಬಳಸಿ ಮತ್ತು ರಾಸಾಯನಿಕಗಳನ್ನು ಒಳಗೊಂಡಿರುವ ಬಣ್ಣಗಳನ್ನು ದೂರವಿಡಿ.
• ಹೋಳಿ ಆಡುವ ಮೊದಲು ತಲೆಯಿಂದ ಪಾದದವರೆಗೆ ಎಣ್ಣೆ ಹಚ್ಚಿಕೊಳ್ಳುವುದು ಸೂಕ್ತ.
• ಯಾವಾಗಲೂ ಮಾಯಿಶ್ಚರೈಸರ್ ಅನ್ನು ಬಳಿಯಲ್ಲಿ ಇಟ್ಟುಕೊಳ್ಳಿ, ವದ್ದೆಯಾದ ಚರ್ಮದ ಮೇಲೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿಡಿ. ಆದ್ದರಿಂದ, ನೀವು ಕಿರಿಕಿರಿಯನ್ನು ಅನುಭವಿಸಿದಾಗ, ಬಣ್ಣವನ್ನು ತೊಳೆದುಬಿಡಿ ಮತ್ತು ತಕ್ಷಣವೇ ಮಾಯಿಶ್ಚರೈಸರ್ ಅನ್ನು ಬಳಸಿ.
• ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ನಗರ ಜೇಡಿಮಣ್ಣಿನಿಂದ ಮಾಡಿದ ಪ್ಯಾಕ್ ಅಥವಾ ಕಡಲೆಹಿಟ್ಟು ಮತ್ತು ಅರಿಷಿನ ಸಂಯೋಜನೆಯ ಪ್ಯಾಕ್ ಬಳಸಿ. ಎರಡನೇ ಬಾರಿ ತೊಳೆಯಲು ಮುಖ ಮತ್ತು ದೇಹಕ್ಕೆ ಉಗುರು ಬೆಚ್ಚಗಿನ ನೀರಿನ ಜೊತೆಗೆ ಮೃದುವಾದ ಕ್ಲೀನ್ಸಿಂಗ್ ಮಿಲ್ಕನ್ನು ಬಳಸಿ.
• ನಿಮ್ಮ ನೆತ್ತಿಯನ್ನು ಉತ್ತಮ ಶಾಂಪೂವಿನಿಂದ ಸ್ವಚ್ಛಗೊಳಿಸಿ ಮತ್ತು ಕಂಡೀಷನರ್ ಜೊತೆಗೆ ಕೂದಲನ್ನು ತೇವಗೊಳಿಸಿ.
• ಸ್ನಾನದ ನಂತರ, ಚರ್ಮಕ್ಕೆ ಮಾಯಿಶ್ಚರೈಸ್ ಮತ್ತು ನಿಮ್ಮ ಕೂದಲಿಗೆ ಸೀರಮ್ ಬಳಸಿ.
• ರಕ್ಷಣೆಯ ಪದರವನ್ನು ರಚಿಸಲು ನಿಮ್ಮ ಉಗುರುಗಳಿಗೆ ಬಣ್ಣ ಹಚ್ಚಿರಿ, ಇದರಿಂದ ಬಣ್ಣವು ನಿಮ್ಮ ಉಗುರುಗಳಿಗೆ ಅಂಟಿಕೊಳ್ಳುವುದಿಲ್ಲ.
• ನಿಮ್ಮ ಚರ್ಮವು ಕೆಂಪಾಗಿದ್ದರೆ, ಕಿರಿಕಿರಿಯಾಗುವಂತಿದ್ದರೆ, ಸುಡುತ್ತಿದ್ದರೆ, ತುರಿಕೆ ಅಥವಾ ಒಡೆದಿದ್ದರೆ ತಕ್ಷಣ ಚರ್ಮರೋಗ ತಜ್ಞ ವೈದ್ಯರನ್ನು ಸಂಪರ್ಕಿಸಿ.
• ‘ನಂತರ ಬೇಸರ ಪಡುವುದಕ್ಕಿಂತಲೂ ಸುರಕ್ಷಿತವಾಗಿರುವುದು ಉತ್ತಮ’ ಎಂಬ ಹಳೆಯ ಮಾತು ಈ ಹಬ್ಬದ ಸಮಯದಲ್ಲಿ ಅತ್ಯಂತ ಸೂಕ್ತ ಎನಿಸುತ್ತದೆ ಮತ್ತು ಬುದ್ಧಿವಂತಿಕೆಯಿಂದ ಬಣ್ಣ ಆರಿಸಿ ನಂತರ ಬೇಕಾದಷ್ಟು ಹೋಲಿ ಆಡುವುದು ಸೂಕ್ತವಾಗಿದೆ.