-ರಾಜೇಶ್ ಕೌಲ್, ಬಿಸಿನೆಸ್ ಹೆಡ್ – ಟ್ರಕ್ಸ್, ಟಾಟಾ ಮೋಟಾರ್ಸ್
–
1. ಟಾಟಾ ಮೋಟಾರ್ಸ್ ಡ್ರೈವರ್ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಖಚಿತಪಡಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ದಯವಿಟ್ಟು ಈ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತೀರಾ?
ಸಮಾಜದಲ್ಲಿ ಟ್ರಕ್ ಡ್ರೈವರ್ ಪ್ರಮುಖ ಪಾತ್ರ ವಹಿಸುತ್ತಾರೆ, ಕೇವಲ ವ್ಯವಸ್ಥಿತ ಹಾಗೂ ಸೂಕ್ತ ಸಮಯದಲ್ಲಿ ವಿತರಣೆ ಮಾಡುವುದಷ್ಟೇ ಅಲ್ಲದೇ ರಸ್ತೆ ಸುರಕ್ಷತೆ ಮತ್ತು ವಾಹನದ ಆರ್ಥಿಕ ಕಾರ್ಯನಿರ್ವಹಣೆಯನ್ನೂ ಖಚಿತಪಡಿಸುತ್ತಾರೆ. ಈ ಬಗ್ಗೆ ಅನುಮೋದಿಸಿರುವ ಟಾಟಾ ಮೋಟಾರ್ಸ್ ದೇಶಾದ್ಯಂತ ಡ್ರೈವರ್ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಸಹಯೋಗ ಹೊಂದಿದೆ. ಈ ಸಂಸ್ಥೆಗಳು ಸೈದ್ಧಾಂತಿಕ ಜ್ಞಾನ ಮತ್ತು ತರಬೇತಿಯ ಸಮ್ಮಿಶ್ರಣ ವಾಗಿದ್ದು, ಇದು ಹಗುರ ವಾಹನಗಳಿಂದ (ಎಲ್ ಎಂ ವಿ) ಭಾರವಾದ ಸರಕುಗಳನ್ನು ಸಾಗಿಸುವ ಟ್ರಕ್ ಗಳು ಹಾಗೂ ಟಿಪ್ಪರ್ ಮತ್ತು ನಿರ್ಮಾಣ ವಾಹನಗಳಂತಹ ವಿಶೇಷ ಯಂತ್ರಗಳ ವ್ಯಾಪಕ ಶ್ರೇಣಿಯನ್ನು ಆವರಿಸುತ್ತದೆ. ಒಂದು ದಶಕದಲ್ಲಿ, ಈ ಸಂಸ್ಥೆಗಳು 5 ಲಕ್ಷ ಚಾಲಕರಿಗೆ ತರಬೇತಿ ಕೌಶಲ್ಯ ನೀಡುವ ಮೂಲಕ, ತರಬೇತಿ ಪಡೆದ ಡ್ರೈವರ್ ಗಳ ಸಮೂಹ ರಚಿಸಿದ್ದು, ಸುರಕ್ಷಿತ ಹಾಗೂ ಜವಾಬ್ದಾರಿಯುತ ಡ್ರೈವಿಂಗ್ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ.
2. ಟ್ರಕ್ ಡ್ರೈವರ್ ಗಳ ಜೀವನದ ಗುಣಮಟ್ಟ ಸುಧಾರಿಸಲು ಟಾಟಾ ಮೋಟಾರ್ಸ್ ಯಾವ ಅಭಿಯಾನಗಳನ್ನು ಆರಂಭಿಸಿದೆ?
ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಟಾಟಾ ಮೋಟಾರ್ಸ್, ಟ್ರಕ್ ಚಾಲಕರ ಕಲ್ಯಾಣಕ್ಕೂ ಬದ್ಧವಾಗಿದೆ. ಟಾಟಾ ಮೋಟಾರ್ಸ್ ಈ ಚಾಲಕರು ಎದುರಿಸುತ್ತಿರುವ ಸವಾಲುಗಳನ್ನು ಆಳವಾಗಿ ಅರ್ಥಮಾಡಿಕೊಂಡಿದ್ದು, ಚಾಲಕರ ಎಲ್ಲಾ ಪ್ರಯತ್ನಗಳಲ್ಲಿ ಅವರ ಅಗತ್ಯಗಳಿಗೆ ಆದ್ಯತೆ ನೀಡಲು ಯಾವಾಗಲೂ ಶ್ರಮಿಸುತ್ತಿದೆ. ಟಾಟಾ ಸಮರ್ಥ್ ಅಭಿಯಾನದ ಮೂಲಕ, ಟಾಟಾ ಮೋಟಾರ್ಸ್ ಟ್ರಕ್ ಡ್ರೈವರ್ಗಳ ಯೋಗಕ್ಷೇಮಕ್ಕೆ ಆಳವಾದ ಬದ್ಧತೆ ಪ್ರದರ್ಶಿಸುವ ಮೂಲಕ, ಸಮಗ್ರ ಯೋಗಕ್ಷೇಮ ವಿಧಾನವನ್ನು ರೂಪಿಸುತ್ತದೆ.
ಸ್ವಾಸ್ಥ್ಯ ಸಮರ್ಥ್ ಮೂಲಕ, ಟಾಟಾ ಮೋಟಾರ್ಸ್ ಚಾಲಕರಿಗೆ ಅಗತ್ಯ ವೈದ್ಯಕೀಯ ಸೇವೆಗಳಿಗೆ ಪ್ರವೇಶ ನೀಡಿದ್ದು, ಇದು ನಿಯಮಿತ ತಪಾಸಣೆ ಅಥವಾ ವಿಶೇಷ ಸಮಾಲೋಚನೆಗಳು ಹಾಗೂ ಆಸ್ಪತ್ರೆಗೆ ದಾಖಲಾಗುವ ವೆಚ್ಚವನ್ನು ಸಹ ಒಳಗೊಂಡಿದೆ. ಸಂಪತ್ತಿ ಸಮರ್ಥ್ ಅಡಿಯಲ್ಲಿ, ಟಾಟಾ ಮೋಟಾರ್ಸ್ ಚಾಲಕ ರಿಗೆ ಸೂಕ್ತವಾದ ಹಣಕಾಸು ಸಲಹೆ ಮತ್ತು ವ್ಯವಸ್ಥಿತ ಹೂಡಿಕೆಗೆ ಮಾರ್ಗ ದರ್ಶನ ನೀಡುತ್ತದೆ, ಅವರ ಗಳಿಕೆಯನ್ನು ವಿವೇಚನೆಯಿಂದ ಹೂಡಿಕೆ ಮಾಡಲಾಗಿದೆ ಎಂದು ಖಚಿತಪಡಿಸುತ್ತದೆ. ಶಿಕ್ಷಾ ಸಮರ್ಥ್ ಆನ್ಲೈನ್ ಬೋಧನೆ ಆಳವಾದ ವೃತ್ತಿ ಸಮಾಲೋಚನೆಯೊಂದಿಗೆ ಸಂಯೋಜಿಸುತ್ತದೆ, ಟ್ರಕ್ ಡ್ರೈವರ್ಗಳ ಮಕ್ಕಳನ್ನು ಅವರ ಭವಿಷ್ಯದ ವೃತ್ತಿಗೆ ಸಿದ್ಧಪಡಿಸುತ್ತದೆ. ಅಂತಿಮವಾಗಿ, ಸುರಕ್ಷಿತ್ ಸಮರ್ಥ್ ಅಪಘಾತ ಮತ್ತು ಆಸ್ಪತ್ರೆಗೆ ದಾಖಲಾಗುವ ವೆಚ್ಚಕ್ಕೆ ರೂ 10 ಲಕ್ಷದವರೆಗಿನ ಪ್ರಯೋಜನಗಳನ್ನು ನೀಡುವುದರೊಂದಿಗೆ, ಚಾಲಕರು ಮತ್ತು ಅವರ ಕುಟುಂಬಗಳು ಅನಿರೀಕ್ಷಿತ ಪ್ರತಿಕೂಲಗಳಿಂದ ರಕ್ಷಿಸಲಾಗಿರುವುದನ್ನು ಖಚಿತಪಡಿಸುತ್ತದೆ.
3. ಟಾಟಾ ಮೋಟಾರ್ಸ್ ಡ್ರೈವರ್ ಗಳ ರಸ್ತೆ ಅನುಭವ ಸುಲಭಗೊಳಿಸಲು ತಂತ್ರಜ್ಞಾನವನ್ನು ಹೇಗೆ ಸಮಗ್ರಗೊಳಿಸಿದೆ?
ಪ್ರಮುಖ ವಾಣಿಜ್ಯ ವಾಹನ ತಯಾರಕರಾಗಿ, ಟಾಟಾ ಮೋಟಾರ್ಸ್ ಚಾಲಕರ ಅನುಭವಗಳನ್ನು ಸುಧಾರಿಸುವ ಉತ್ಪನ್ನಗಳು ಮತ್ತು ಸೇವೆಗಳ ಪೋರ್ಟ್ ಫೋಲಿಯೋಗಳಲ್ಲಿ ಪ್ರಮುಖ ತಂತ್ರಜ್ಞಾನಗಳನ್ನು ಗುರುತಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರೆಸಿದೆ. ಟಾಟಾ ಮೋಟಾರ್ಸ್ಗೆ ಸುರಕ್ಷತೆ ಒಂದು ಪ್ರಮುಖ ಉತ್ಪನ್ನ ಅಂಶವಾಗಿದ್ದು, ಇದು ಚಾಲಕನ ಯೋಗಕ್ಷೇಮವನ್ನು ಮಾತ್ರವಲ್ಲದೇ ವಾಹನ ಮತ್ತು ಅದರ ಸರಕುಗಳನ್ನೂ ಒಳಗೊಂಡಿದೆ. ಟಾಟಾ ಮೋಟಾರ್ಸ್ ಸುರಕ್ಷತೆಯನ್ನು ಸಕ್ರಿಯ ಸುರಕ್ಷತೆ ಮತ್ತು ನಿಷ್ಕ್ರಿಯ ಸುರಕ್ಷತೆ ಎನ್ನುವ ಎರಡು ದೃಷ್ಟಿಕೋನಗಳಿಂದ ಗಮನಿಸುತ್ತದೆ. ಆಧುನಿಕ ಟ್ರಕ್ಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿಷ್ಕ್ರಿಯ ಸುರಕ್ಷತೆ ಪ್ರಮುಖವಾಗಿಲ್ಲದಿದ್ದಾಗ ಡ್ರೈವರ್ ಬೆಂಬಲಿತ ವೈಶಿಷ್ಟ್ಯಗಳಿಂದ ಸಕ್ರಿಯ ಸುರಕ್ಷತೆಯನ್ನು ಬಲಪಡಿಸಲಾಗಿದೆ.
ಟಾಟಾ ಮೋಟಾರ್ಸ್ನ ಟ್ರಕ್ಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ), ಕ್ಯಾಮೆರಾದೊಂದಿಗೆ ಹಿಲ್ ಪಾರ್ಕಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್ ಏಯ್ಡ್ (ಹೆಚ್ ಎಸ್ ಎ), ಇಲೆಕ್ಟ್ರಾನಿಕ್ ಇಂಧನ ಕಳುವು ನಿರೋಧಕ ವ್ಯವಸ್ಥೆ, ಉರುಳುವಿಕೆ ನಿರೋಧಕ ಸೇರಿದಂತೆ ವಿಶ್ವದರ್ಜೆಯ ಚಾಲಕ ಸುರಕ್ಷತಾ ವೈಶಿಷ್ಟ್ಯಗಳ ಸೂಟ್ಗಳನ್ನು ಅಳವಡಿಸಲಾಗಿದೆ. ಸಂವೇದಕಗಳು, ಇಂಜಿನ್ ಬ್ರೇಕ್ ಅಸಿಸ್ಟ್ ಮತ್ತು ಏರ್ ಕಂಡೀಶನರ್ ಸುತ್ತುವರಿದ ಗಾಳಿಯ ತಾಪಮಾನ ಸಂವೇದಕದಿಂದ ಸುಸಜ್ಜಿತವಾಗಿದೆ. ಇಂತಹ ವೈಶಿಷ್ಟ್ಯಗಳು ಹೆಚ್ಚು ದೂರವನ್ನು ಸುರಕ್ಷಿತವಾಗಿ ಕ್ರಮಿಸುವ ಚಾಲಕನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಚಾಲಕ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಟಾಟಾ ಮೋಟಾರ್ಸ್ ಪ್ರೀಮಿಯಂ ಮತ್ತು ಬಾಳಿಕೆ ಬರುವ ಪ್ರಿಮಾ ಕ್ಯಾಬಿನ್ ಹಾಗೂ ಗಟ್ಟಿಮುಟ್ಟಾದ ಸಿಗ್ನಾ ಕ್ಯಾಬಿನ್ ನೀಡುತ್ತದೆ. ಟ್ರಕ್ ಡ್ರೈವರ್ಗಳಿಗೆ ಆಯಾಸ-ಮುಕ್ತ ಮತ್ತು ಸುರಕ್ಷಿತ ಕಾರ್ಯಾಚರಣಾ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟಿಯರಿಂಗ್ ವ್ಹೀಲ್ ಗಳು, ಹೊಂದಿಸಬಹುದಾದ ಸೀಟ್ ಗಳು, ಅತ್ಯುತ್ತಮ ಎರ್ಗಾನಮಿಕ್ಸ್ ಮತ್ತು ಡಿಜಿಟಲ್ ಡಿಸ್ ಪ್ಲೇ ಗಳಿಂದ ವಿನ್ಯಾಸಗೊಳಿಸಲಾಗಿದೆ.
4. ಟಾಟಾ ಮೋಟಾರ್ಸ್ ಗ್ರಾಹಕರಿಗೆ ಅನುಕೂಲಕರ ಹಾಗೂ ಸಮಸ್ಯಾರಹಿತ ಮಾರಾಟ ನಂತರದ ಅನುಭವವನ್ನು ಹೇಗೆ ಖಚಿತಪಡಿಸುತ್ತದೆ?
ಟಾಟಾ ಮೋಟಾರ್ಸ್ ತನ್ನ ಸಾಟಿಯಿಲ್ಲದ ಮಾರಾಟ ನಂತರದ ಸೇವೆಗಳಿಗೆ ಹೆಸರಾಗಿದ್ದು – ಗ್ರಾಹಕರು ದೀರ್ಘವಾದ ಮೌಲ್ಯಯುತ ಸೇವೆಗಳನ್ನು ಪಡೆಯುತ್ತಾರೆ ಮತ್ತು ಟಾಟಾ ಮೋಟಾರ್ಸ್ ಸಿವಿಗಳನ್ನು ಆಯ್ಕೆಮಾಡುವಾಗ ಪ್ರಮುಖ ನಿರ್ಣಾಯಕರಾಗಿರುತ್ತಾರೆ. ಸಂಪೂರ್ಣ ಸೇವಾ 2.0 ಅಭಿಯಾನದ ಅಡಿಯಲ್ಲಿ, ಟಾಟಾ ಮೋಟಾರ್ಸ್ ಮಾರಾಟ ನಂತರದ ಸೇವೆಗಳ ಶ್ರೇಣಿಯನ್ನು ನೀಡುತ್ತದೆ. ಇದು ಫ್ಲೀಟ್ ಮ್ಯಾನೇಜ್ಮೆಂಟ್ ಪರಿಹಾರಗಳು, ವಾರ್ಷಿಕ ನಿರ್ವಹಣಾ ಒಪ್ಪಂದಗಳು, ಟಾಟಾ ಅಲರ್ಟ್, ರಸ್ತೆಬದಿ ನೆರವಿನ ಸೇವೆ, ಸ್ಥಳದಲ್ಲೇ ಸರ್ವೀಸಿಂಗ್ ಮತ್ತು ’ಟಾಟಾ ಓಕೆ’ ಕಾರ್ಯಕ್ರಮದ ಮೂಲಕ ವಾಣಿಜ್ಯ ವಾಹನಗಳಿಗೆ ಮರುಮಾರಾಟದ ಆಯ್ಕೆಗಳನ್ನು ಒಳಗೊಂಡಿದೆ. ಚಾಲಕ ಅನುಭವವನ್ನು ಹೆಚ್ಚಿಸಲು ಟಾಟಾ ಬಂಧು ಅಪ್ಲಿಕೇಶನ್ ನ ತಂತ್ರಜ್ಞಾನ ಬಳಕೆ ಟಾಟಾ ಮೋಟಾರ್ಸ್ನ ಬದ್ಧತೆಗೆ ಸಾಕ್ಷಿಯಾಗಿದೆ. ’ಟಾಟಾ ಗುರು’ ಎಂದು ಕರೆಯಲಾಗುವ ರಸ್ತೆಬದಿ ನೆರವು ನೀಡುವ ಆಪ್ ಅನ್ನು ವಾಹನ ಮಾಲೀಕರು ಹಾಗೂ ಚಾಲಕರೊಂದಿಗೆ ತಡೆರಹಿತವಾಗಿ ಸಂಪರ್ಕಿಸುವ ವ್ಯಾಪಕ ಡಿಜಿಟಲ್ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. ಚಾಲಕರು ಅಗತ್ಯವಿದ್ದಲ್ಲಿ ತಕ್ಷಣದ ನೆರವಿಗಾಗಿ ಸಮೀಪದ ಟಾಟಾ ಮೋಟಾರ್ಸ್ ನೆರವು ಪೂರೈಕೆದಾರನ್ನು ತ್ವರಿತವಾಗಿ ಪತ್ತೆಮಾಡಿ ಸಂಪರ್ಕಿಸಬಹುದಾಗಿದ್ದು, ಇದು ಕುಸಿತದ ಸಮಯವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಲಾಭದಾಯಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ.