Sunday, 24th November 2024

ಹಿಂದೂ ಕಾರ್ಯಕರ್ತರಿಗೆ ಬರುತ್ತಿವೆ ಬೆದರಿಕೆ ಕರೆ

ವಿಶ್ವವಾಣಿ ವಿಶೇಷ

ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲೇ ರಾಜ್ಯದಲ್ಲಿ ಮತ್ತೆ ಕೆಲ ಹಿಂದೂ ಕಾರ್ಯಕರ್ತರ ಹತ್ಯೆಗೆ
ಮತೀಯ ಶಕ್ತಿಗಳು ಸಂಚು ರೂಪಿಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು, ದಕ್ಷಿಣ ಕನ್ನಡ, ಮಲೆನಾಡು ಸೇರಿದಂತೆ ಪ್ರಬಲವಾಗಿ ಹಿಂದುತ್ವದ ಬಗ್ಗೆ ಪ್ರತಿಪಾದಿಸುತ್ತಿರುವ ಹಿಂದೂ ಪರ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರನ್ನು ಮತಾಂಧರು ಹಿಟ್‌ಲಿಸ್ಟ್ ಮಾಡಿ ಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಹಾಕುತ್ತಿದ್ದಾರೆ. ಹಿಂದೂಪರ ಮುಖಂಡ ಪುನೀತ್ ಕೆರೆಹಳ್ಳಿ, ಭರತ್ ಶೆಟ್ಟಿ ಸೇರಿ ಹಲವರಿಗೆ ಇಂಟರ್‌ನೆಟ್ ಕಾಲ್ ಮುಖಾಂತರ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಮುಖಂಡರು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಅರಿತ ಗುಪ್ತಚರ ಇಲಾಖೆ ಸಂಬಂಧಪಟ್ಟವ ರಿಗೆ ಎಚ್ಚರದಿಂದಿರುವಂತೆ ಸೂಚನೆ ನೀಡಿದೆ. ಈ ಬೆಳವಣಿಗೆಗಳ ಮಧ್ಯೆ ಕೆಲ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವುದಾಗಿ ಕಿಡಿಗೇಡಿಗಳು ಬೆದರಿಕೆ ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂದು ಹರ್ಷನನ್ನು ಮುಗಿಸಿದಂತೆ ನಾಳೆ ನಿಮ್ಮನ್ನು ಮುಗಿಸಲಾಗುವುದು. ಇನ್ನು ಒಂದೇ ತಿಂಗಳಲ್ಲಿ ಹೆಣ ಬೀಳಲಿಲ್ಲ ಅಂದ್ರೆ ನೋಡು ಎಂದು ಹಿಂದೂ ಪರ ಸಂಘಟನೆಯ ಮುಖಂಡರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ನಿಮಗೆ ಒಂದೇ ದೇಶ ಹಿಂದೂಸ್ತಾನ ಮಾತ್ರ. ನಮಗೆ ಎಷ್ಟು ಬೇಕಾದರೂ ದೇಶಗಳಿವೆ ಪರಾರಿ ಯಾಗುವುದಕ್ಕೆ. ಇನ್ನು ಇದೆ ಮಾರಿ ಹಬ್ಬ. ನಿನಗೆ ಸ್ಕೆಚ್ ಆಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ತೇಜಸ್ ಗೌಡ, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆಯನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಕೆಲ ಹಿಂದೂ ಮುಖಂಡರಿಗೆ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಡಿಯೋದಲ್ಲಿ ಏನಿದೆ?: ನಿನೆಂಥಾ ಪುನೀತ್ ….. ಎಂಬ ಅವಾಚ್ಯ ಪದಗಳಿಂದ ನಿಂದಿಸಿ ನಿನ್ನನ್ನು ತೆಗೆಯುವುದು ೧೦೦ ಪರ್ಸೆಂಟ್ ಪಕ್ಕಾ. ನಿನಗೆ
ಅಷ್ಟೊಂದು ತಾಕತ್ತು, ಧಮ್ ಇದ್ದರೆ, ನಿಂದು ಲೊಕೇಷನ್ ಕೊಡು. ಒಂದು ತಿಂಗಳಿನಲ್ಲಿ ನಾವು ಯಾರೆಂದು ತಿಳಿಸುತ್ತೇವೆ. ನಿಮಗೆ ಇರುವುದು ಒಂದೇ
ಒಂದು ದೇಶ ಮಾತ್ರ ಅದು ಹಿಂದೂಸ್ತಾನ. ಆದರೆ ನಮಗೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಎಷ್ಟೊಂದು ದೇಶಗಳಿವೆ. ನಿನ್ನ ಹೆಸರು ಬೀದಿ ನಾಯಿ ಕೂಡ
ಹೇಳುತ್ತದೆ. ನೀನು ಈಗ ಹಿಟ್‌ಲಿಸ್ಟ್‌ನಲ್ಲಿ ನಂಬರ್ ಒನ್.

ಟೆಂನ್ಷನ್ ಮಾಡಿಕೊಳ್ಳಬೇಡ. ನೆಕ್ಸ್ಟ್ ವಿಕೆಟ್ ನಿಂದೆ ಆಯ್ತಾ. ಈ ವಿಷಯ ನಿಮ್ಮ ಸ್ನೇಹಿತರಿಗೆ ಬೇಕಾದರು ಹೇಳಿಕೊ ಎಂದು ಎಚ್ಚರಿಕೆ ನೀಡಲಾಗಿದೆ.
ಅದೇ ರೀತಿ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಮಾಡಿದ ಕರೆಯಲ್ಲಿ, ನೆಕ್ಸ್ಟ್ ಟಾರ್ಗೆಟ್ ನಿಂದೆ. ಒಂದೇ ಒಂದು ತಿಂಗಳು ಟೈಮ್ ನಿಂಗೆ. ಒಂದೇ ತಿಂಗಳಿನಲ್ಲಿ ನಿನ್ನ ಹೆಣ ಬೀದಿಯಲ್ಲಿ ಇಲ್ಲದಿದ್ದರೆ ಕೇಳು. ಒಂದು ತಿಂಗಳಿನಲ್ಲಿ ನಿನ್ನನ್ನು ಮುಗಿಸದೇ ಹೋದರೆ ನೋಡು. ಇನ್ನೊಬ್ಬ ಪುತ್ತೂರಿನಲ್ಲಿ ಇದ್ದಾನೆ. ಅವನಿಗೂ ಹಾಗೂ ಭರತ್‌ಗೂ ಸ್ಕೆಚ್ ಆಗಿದೆ. ನೀನು ಸೇರಿ ಮೂವರ ವಿಕೇಟ್ ಟಾರ್ಗೆಟ್ ಆಗಿದೆ. ಮೂವರಲ್ಲಿ ಒಂದು ವಿಕೆಟ್ ಆದಷ್ಟು ಬೇಗ ಹೋಗುತ್ತದೆ ಎಂದು ಹೇಳಲಾಗಿದೆ.

ದೂರು ನೀಡಲು ಸಲಹೆ
ಈ ಮಧ್ಯೆ ಪ್ರಾಣ ಬೆದರಿಕೆ ಕರೆ ಬರುತ್ತಿರುವವರು ಪೊಲೀಸರಿಗೆ ದೂರು ನೀಡುವಂತೆ ಹಿರಿಯ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ಶಾಂತಿ, ಸುವ್ಯವಸ್ಥೆ ಜತೆಗೆ ಕಾನೂನು ಪಾಲನೆ ನಮ್ಮ ಕರ್ತವ್ಯ. ಯಾರೇ ಸಮಾಜಘಾತುಕರು ಕರೆ ಮಾಡಿ ಬೆದರಿಕೆ ಹಾಕಿದರೂ ತಕ್ಷಣ ಮಾಹಿತಿ ನೀಡಿ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

? ಮುಂದಿನ ಟಾರ್ಗೆಟ್ ನೀನೇ. ಇನ್ನು ಒಂದು ತಿಂಗಳು ಮಾತ್ರ ನಿನಗೆ ಅವಕಾಶ ಎಂದು ಎಚ್ಚರಿಕೆ
? ಒಂದು ತಿಂಗಳಲ್ಲಿ ನಿನ್ನ ಹೆಣ ಬೀದಿಯಲ್ಲಿ ಬೀಳದೇ ಇದ್ದರೆ ಕೇಳು. ನಿನ್ನ ಕಥೆ ಮುಗಿಯಿತು ಎಂದು ಹೇಳಿಕೆ