ಸಂಗ್ರಹ: ರುದ್ರಯ್ಯ. ಎಸ್.ಎಸ್
ರಜೆ ಕಳೆಯಲು ದೂರದ ದೇಶಕ್ಕೆ, ನಾಡಿಗೆ ಹೋಗಬೇಕು ಎನಿಸುತ್ತದೆ. ಆದರೆ, ಏನೂ ಗೊತ್ತಿಲ್ಲದೇ ಹೇಗಪ್ಪಾ ಅಲ್ಲಿಗೆ ಹೋಗೋದು ಎಂಬ ಗೊಂದಲ ನಿಮ್ಮಲ್ಲಿದ್ದರೆ, ಅದಕ್ಕೆ ಈ ಕೆಲ ಆಪ್ ಗಳು ಸಹಕಾರಿ ಆಗುವುದು ಖಚಿತ.
ಪ್ರವಾಸೋದ್ಯಮದಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ಭಾರಿ ಬದಲಾವಣೆ ಗಳು ಕಂಡುಬಂದಿವೆ. ಹಾಗೆಯೇ ನೀವೇನಾದರೂ ರಜೆಯಲ್ಲಿ ಮಜಾ ಮಾಡಲು ಹೊಸ ಪ್ರವಾಸಿ ತಾಣವಾಗಳಿಗೆ ಹೋಗಲು ಬಯಸಿದ್ದರೆ ಈ ಕೆಳಗೆ ತಿಳಿಸಲಾದ ಪ್ರಯಾಣಕ್ಕೆ ಅನುಕೂಲಕರವಾದ ಅಪ್ಲಿಕೇಶನ್ ಬಳಸಬಹುದು. ಇವುಗಳು ನಿಮ್ಮ ಅಗತ್ಯತೆಗೆ ಅನುಗುಣವಾಗಿ ಪ್ರವಾಸದ ಯೋಜನೆಯನ್ನು
ಸರಳ ಗೊಳಿಸಿ ಹೊಸ ಸ್ಥಳಗಳಲ್ಲಿ ಮುಕ್ತವಾಗಿ ವ್ಯವಹರಿಸಲು ಸಹಕಾರಿ ಯಾಗುತ್ತವೆ.
ಹಾಗಾಗಿ ನಿಮ್ಮ ಟ್ರಾವೆಲ್ ಏಜೆಂಟ್ಸ್‌ಗೆ ಬೈ-ಬೈ ಹೇಳುವ ಮೂಲಕ ಪ್ರವಾಸ ವೆಚ್ಚವನ್ನೂ ಕಡಿತಗೊಳಿಸಿಕೊಳ್ಳಿ. ಭಾರತದಲ್ಲಿಯೇ ಪ್ರವಾಸ ಕೈಗೊಳ್ಳಿ ಅಥವಾ ವಿದೇಶದ ವಿಹಾರಕ್ಕೆ ಹೋಗುವಾಗ ಈ ಅಪ್ಲಿಕೇಶನ್‌ಗಳು ನಿಮ್ಮ ಜತೆಗಿರಲಿ.
Skyscanner
ಕಡಿಮೆ ದರದದಲ್ಲಿ ಟ್ರಾವೆಲ್ ಟಿಕೆಟ್ ಬುಕ್ ಮಾಡಲು ನೀವು ಸದಾ Skyscanner ಉಪಯೋಗಿಸಬಹುದು. ಇದನ್ನು
ಪ್ರಪಂಚದಾ ದ್ಯಂತ 90 ದಶಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಿದ್ದಾರೆ. ಇದು ವಿವಿಧ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಟಿಕೆಟ್ ಕಾಯ್ದಿರಿಸಲು ಸಹಕಾರಿಯಾಗಿದೆ ಜತೆಗೆ ಇತರ ಸಂಸ್ಥೆಗಳೊಂದಿಗೆ ದರಗಳನ್ನು ಹೋಲಿಕೆ ಮಾಡಬಹುದು.
Agoda
ನೀವು ಪ್ರವಾಸಿ ತಾಣಗಳಲ್ಲಿ ಉತ್ತಮ ಸೌಲಭ್ಯವಿರುವ ಹೋಟೆಲ್ ಗಳನ್ನು ಹುಡುಕುತ್ತಿದ್ದರೆ ಅದಕ್ಕೆ Agoda ಅಪ್ಲಿಕೇಶನ್
ಸಹಕರಿಸುತ್ತದೆ. ನಿಮ್ಮ ಪ್ರವಾಸಿ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಗೆ ಉತ್ಕೃಷ್ಠ ಹೋಟೆಲ್‌ಗಳನ್ನು ಸೂಚಿಸುತ್ತದೆ. ಅಲ್ಲದೆ
ರಿಯಾಯಿತಿ ದರವನ್ನು ತಿಳಿಸುತ್ತದೆ. ಈ ಅಪ್ಲಿಕೇಶನ್ ಮೂಲಕ ಹಾಸ್ಟೆಲ್ ಮತ್ತು ಅಪಾರ್ಟ್‌ಮೆಂಟ್‌ಗಳ ದರವನ್ನೂ ತಿಳಿಯ ಬಹುದು.
Airbnb
ನಿಮಗೆ ಅಗತ್ಯವಿರುವ ಸಕಲ ಸೌಕರ್ಯಗಳನ್ನು ಹೊಂದಿರುವ ಹೋಟೆಲ್ ಕೊಠಡಿಗಳು ಬೇಕಾಗಿದಲ್ಲಿ Airbnb ಬಳಸಿ. ಇದು
ಯಾವುದೇ ಸ್ಥಳದಲ್ಲಿ ನಿಮ್ಮ ಆಯ್ಕೆಗೆ ಅನುಗುಣವಾಗಿ ಕೊಠಡಿಗಳು, ಮನೆಗಳು ಮತ್ತು ಸಂಪೂರ್ಣ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆ ಪಡೆಯಲು ಮಾರ್ಗ ದರ್ಶನ ನೀಡುತ್ತದೆ. ಇದರಲ್ಲಿ ನಿಮ್ಮ ಅಗತ್ಯತೆಗಳಾದ ಸ್ವಿಮ್ಮಿಂಗ್ ಪೂಲ್, ವಾಷಿಂಗ್ ಮೆಷಿನ್, ಕಿಚನ್ ಸೇರಿದಂತೆ ಇತ್ಯಾದಿಗಳನ್ನು ಪಟ್ಟಿ ಮಾಡಿ ನಿಮಿಷಾರ್ಧದಲ್ಲಿ ಹುಡುಕಿ ಕೊಡಲಿದೆ.
TripAdvisor
ನೀವು ಎಂದಿಗೂ ಭೇಟಿ ನೀಡದ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಆಲೋಚನೆ ಇದ್ದರೆ ನಿಮಗೆ TripAdvisor ಅಗತ್ಯವಿದೆ ಎಂದರ್ಥ. ಹೋಟೆಲ್ ಗಳು, ಡೈನಿಂಗ್ ಸ್ಪಾಟ್ ಗಳೊಂದಿಗೆ ಅತ್ಯುತ್ತಮ ಅನುಭಗಳನ್ನು ಪಡೆಯಲು ಸಂಪೂರ್ಣ ಟ್ರಿಪ್ ಆಯೋಜನೆ ಮಾಡಲು ಇದೊಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ.
Meetup
ಸ್ಥಳವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಸ್ಥಳೀಯ ಅನುಭವಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು. ಇದಕ್ಕೆ ನಿಮಗೆ ಹೊಂದುವ ಸಮಾನಮನಸ್ಕರನ್ನು ಭೇಟಿಯಾಗಲು ಹಾಗೂ ಉತ್ತಮ ಅಡುಗೆ ಅನ್ವೇಷಣೆ ಸೇರಿದಂತೆ ಸಂಗೀತ, ವಾಕಿಂಗ್ ಟೂರ್ ಅಥವಾ ಕ್ರೀಡೆಗಳು ಮತ್ತು ನಿಮ್ಮ ರೀತಿಯ ಜನರೊಂದಿಗೆ ಸಂಪರ್ಕ ಸಾಧಿಸಲು ಈ Meetup ಆಪ್ ಸಹಕಾರಿಯಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ೧೬೦ ಕ್ಕೂ ಹೆಚ್ಚು ದೇಶಗಳ ಡೇಟಾ ಹೊಂದಿರುವ Rome2rio ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಯಾವುದೇ ವಿಳಾಸ ಅಥವಾ ಲ್ಯಾಂಡ್ ಮಾರ್ಕ್ ನಮೂದಿಸಿದರೆ ಸಾಕು ವಸತಿ ಸೌಲಭ್ಯಗಳು ಸೇರಿದಂತೆ ಸುತ್ತಲ
ಪ್ರದೇಶ ದಲ್ಲಿ ಕೈಗೊಳ್ಳಬಹುದಾದ ಕೆಲಸಗಳು ಹಾಗೂ ಹೇಗೆ ಸುತ್ತಾಡಬೇಕು (ವೆಚ್ಚದ ವಿಶ್ಲೇಷಣೆಯೊಂದಿಗೆ) ಎಂಬ ಮಾರ್ಗ ದರ್ಶನ ನೀಡುತ್ತದೆ.
Triplt
ಕಾಲೇಜ್ ಗೆಳೆಯರ ಬಳಗ ಅಥವಾ ಕಚೇರಿ ಸಿಬ್ಬಂದಿ ಈ ತರಹದ ಯಾವುದೇ ಗುಂಪು ಪ್ರವಾಸವನ್ನು ಯೋಜಿಸುವಾಗ ಈ Triplt ಆಪ್ ಸಹಕಾರಿಯಾಗಿದೆ. ಗುಂಪಿನಲ್ಲಿರುವ ಪ್ರತಿಯೊಬ್ಬರ ಐಡಿಗಳು ಮತ್ತು ವ್ಯಾಕ್ಸಿನೇಷನ್ ಪ್ರಮಾಣ ಪತ್ರಗಳನ್ನು ಒಂದೇ ಕಡೆ ಅಪ್ರೋಡ್ ಮಾಡುವುದರಿಂದ ಹಿಡಿದು ನಿಮ್ಮ ಪ್ರವಾಸದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಯೋಜಿಸುವವರೆಗೆ ಈ ಅಪ್ಲಿಕೇಶನ್ ಎಲ್ಲವನ್ನೂ ಮಾಡುತ್ತದೆ. ನಿಮ್ಮ ಟ್ರಿಪ್ ಸಮೀಪಿಸುತ್ತಿದ್ದಂತೆ, ಅಪ್ಲಿಕೇಶನ್ ಪ್ರವೇಶದ ಅವಶ್ಯಕತೆಗಳು, ಅಗತ್ಯ ಲಸಿಕೆ ಪ್ರಮಾಣಪತ್ರಗಳು ಮತ್ತು ವಿಶೇಷವಾಗಿ ಸಂಗ್ರಹಿಸಲಾದ ಮಾಹಿತಿ ನೀಡುತ್ತದೆ.
Packing Pro
ಸಾಮಾನ್ಯವಾಗಿ ಪ್ರವಾಸ ಎಲ್ಲರಿಗೂ ಇಷ್ಟ ಆದರೆ ಪ್ಯಾಕಿಂಗ್ ಕಷ್ಟ. ಹೌದು, ಎಷ್ಟೋ ಜನರು ಪ್ರವಾಸಕ್ಕೆ ಬೇಕಾಗುವ ವಸ್ತು ಗಳನ್ನು ಪ್ಯಾಕ್ ಮಾಡುವಲ್ಲಿ ಗೊಂದಲ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಪ್ರವಾಸದ ಅವಧಿ, ಪ್ರವಾಸಿ ತಾಣಗಳ ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿ ನಿಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಪ್ಯಾಕ್ ಮಾಡುವುದರೊಂದಿಗೆ ಬ್ಯಾಗ್ ಗಳ ಹೊರೆ ಯನ್ನು ತಗ್ಗಿಸಲು ಈ ಪ್ಯಾಕಿಂಗ್ ಪ್ರೊ ಉತ್ತಮವಾಗಿದೆ.
TravelSpend
ಪ್ರವಾಸದ ಕುರಿತು ಯೋಜಿಸುವಾಗ ವೆಚ್ಚದ ಕುರಿತು ಯೋಚಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯ ಪಡೆಯಲು ಉತ್ಸುಕರಾಗಿರುತ್ತಾರೆ. ಇದಕ್ಕೆ TravelSpend ಸಹಾಯ ಮಾಡುತ್ತದೆ. ನಿಮ್ಮ ಪ್ರಯಾಣದ ಪ್ರಾರಂಭದಲ್ಲಿ ಬಜೆಟ್ ಅನ್ನು ಹೊಂದಿಸಿ ದೈನಂದಿನ ವೆಚ್ಚಗಳನ್ನು ಯಾವುದೇ ಕರೆನ್ಸಿಯಲ್ಲಿ ಸೇರಿಸಿದರೆ ಸಾಕು ಅದನ್ನು ಸ್ವಯಂಚಾಲಿತವಾಗಿ ಹೊಮ್ ಕರೆನ್ಸಿಗೆ ಪರಿವರ್ತಿಸುತ್ತದೆ. ಇದರಿಂದಾಗಿ ನಿಮಗೆ ಸುಲಭವಾಗಿ ಬಿಲ್‌ಗಳನ್ನು ವಿಭಜಿಸಿ ಸಂಪೂರ್ಣ ಪ್ರವಾಸದ ವೆಚ್ಚ ವನ್ನು ಅಂದಾಜಿಸಲು ಸಹಾಯವಾಗುತ್ತದೆ.
App in the Air
ಈ ಆಪ್ ಪ್ರಯಾಣದ ಮಾರ್ಗಗಳು, ಭೋಜನ ವ್ಯವಸ್ಥೆಯ ಪಾಸ್ ಗಳು ಮತ್ತು ಆಗಾಗ್ಗೆ -ರ್ಯ ಕಾರ್ಯಕ್ರಮಗಳನ್ನು ಟ್ರ್ಯಾಕ್
ಮಾಡುವುದಲ್ಲದೆ ಚೆಕ್ ಇನ್, ಭದ್ರತೆ ಮತ್ತು ಅಲ್ಲಿನ ಸಂಪ್ರದಾಯಗಳ ಜತೆಗೆ ಆಹಾರ ಪದ್ಧತಿ ಹಾಗೂ ಲ್ಯಾಂಡಿಂಗ್ ಸಮಯ ವನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೆ ನೀವು ಅಗತ್ಯ ವಿಮಾನ ನಿಲ್ದಾಣ ಕುರಿತ ಡೇಟಾ ಜತೆಗೆ ಮಾಹಿತಿಯನ್ನು ಪಡೆಯುತ್ತೀರಿ. ಹೇಗೆಂದರೆ ಯಾವ ವಿಮಾನ ನಿಲ್ದಾಣದಲ್ಲಿ ಅತ್ಯುತ್ತಮ ಕಾಫಿ ದೊರೆಯುತ್ತದೆ ಎಂಬುದನ್ನು ತಿಳಿಯಬಹುದು.