Sunday, 15th December 2024

ನವ ಸಹಸ್ರಮಾನದ ಯುವಜನತೆಯ ಮೆಚ್ಚುಗೆ ಪಡೆದುಕೊಂಡಿರುವ ನಿಸರ್ಗದ ಅಂಶಗಳನ್ನು ಒಳಗೊಂಡ ಕಟ್ಟಡಗಳು

ಗ್ರೀಷ್ಮಾ ರೆಡ್ಡಿ, ನಿರ್ದೇಶಕರು, ಕಾನ್ ಕಾರ್ಡ್.

ಕಳೆದ ಹಲವು ವರ್ಷಗಳಲ್ಲಿ ವಾಸ್ತುಶಿಲ್ಪ ವಿನ್ಯಾಸ ವಿಕಸನಗೊಂಡಿದೆ. ಇಂದು ತಂತ್ರಜ್ಞಾನ ಈ ಕುರಿತ ಪ್ರಮುಖ ಚಾಲನೆ ನೀಡುವ ವಿಷಯಗಳಲ್ಲಿ ಒಂದಾಗಿದ್ದು, ಸುಸ್ಥಿರ ಹಸಿರು ಕಟ್ಟಡಗಳು ಅತ್ಯಂತ ಹೆಚ್ಚಿನ ಬೇಡಿಕೆ ಹೊಂದಿವೆ. ವಾಸ್ತುಶಿಲ್ಪಿಗಳು ಸ್ಫೂರ್ತಿ ಪಡೆವ ಅನೇಕ ಚಿಂತನೆಗಳಲ್ಲಿ ಬಯೊಫಿಲಿಕ್ ವಿನ್ಯಾಸ ಒಂದಾಗಿದ್ದು, ಬದುಕುವ ಸ್ಥಳಗಳಲ್ಲಿ ನೈಸರ್ಗಿಕ ಅಂಶಗಳನ್ನು ಸೇರಿಸುವಂತಹ ಚಿಂತನೆ ಇದಾಗಿದೆ. ನಮ್ಮ ಮನೆಗಳಲ್ಲಿ ಇರುವ ಅತ್ಯಂತ ಸಾಮಾನ್ಯ ಬಯೊಫಿಲಿಕ್ ವಿನ್ಯಾಸ ಗಳಲ್ಲಿ ಬೆಳಕಿನ ಕಿಂಡಿಗಳಿoದ ಬರುವ ನೈಸರ್ಗಿಕ ಬೆಳಕು, ಕಾರಂಜಿಗಳ ರೂಪದಲ್ಲಿರುವ ನೀರು ಮತ್ತು ಹಸಿರು ಅಥವಾ ಜೀವಂತ ಗೋಡೆಗಳ ರೂಪದಲ್ಲಿರುವ ಗಿಡಗಳು ಸೇರಿರುತ್ತವೆ. ಈ ಚಿಂತನೆ ವಿಸ್ತಾರವಾದ ಜನಪ್ರಿಯತೆಯನ್ನು ಕ್ಷಿಪ್ರಗತಿಯಲ್ಲಿ ಪಡೆಯುತ್ತಿದ್ದು, ಮನೆಗಳು, ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಕರ‍್ಯಸ್ಥಳಗಳಲ್ಲಿ ಕೂಡ ಅತ್ಯಂತ ಬೇಡಿಕೆಯ ವಾಸ್ತುಶಿಲ್ಪದ ಪ್ರಕಾರಗಳಾಗಿರುತ್ತವೆ.

40 ವರ್ಷಗಳ ಹಿಂದೆ ಪರಿಕಲ್ಪನೆ ಮಾಡಲಾದ ಚಿಂತನೆ ಇದಾಗಿದ್ದರೂ ಕೂಡ, ಬಯೊಫಿಲಿಕ್ ವಿನ್ಯಾಸ ಚಿಂತನೆಯು ಕೋವಿಡ್-19 ನಂತರದ ದಿನಗಳಲ್ಲಿ ಸಂಪೂರ್ಣ ಪ್ರಸ್ತುತತೆ ಪಡೆದುಕೊಂಡಿದೆ. ಜೊತೆಗೆ ನವ ಸಹಸ್ರಮಾನದ ಯುವಜನತೆ ಹೆಚ್ಚು ಆರೋಗ್ಯಕರ ಮತ್ತು ಒತ್ತಡ ಮುಕ್ತವಾದ ಜೀವನದ ಕಡೆಗೆ ಸಾಗುತ್ತಿರುವ ಸಂದರ್ಭದಲ್ಲಿ ಇದು ಅವರಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅವರಿಗೆ ಸುಸ್ಥಿರತೆ ಪ್ರಮುಖವಾಗಿ ಕಾಣಲಾರಂಭಿಸಿದ್ದು, ಅವರು ಬಯೊಫಿಲಿಕ್ ವಿನ್ಯಾಸ ಚಿಂತನೆಯಲ್ಲಿ ನಿರ್ಮಿಸಲಾದ ಹಸಿರು ಕಟ್ಟಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದ್ದಾರೆ. ಹೆಚ್ಚು ಹಸಿರಾದ ಮತ್ತು ಹೆಚ್ಚು ಪರಿಸರ ಸ್ನೇಹಿಯಾದ ಮನೆಗಳು ಮತ್ತು ಕಾರ್ಯಸ್ಥಳಗಳ ಕಡೆಗೆ ಆದ್ಯತೆಯ ಬದಲಾವಣೆ ಕಂಡುಬoದಿದೆ. ನೈಸರ್ಗಿಕ ವಿಶ್ವ ಮತ್ತು ನಗರದ ವಾತಾವರಣಗಳ ನಡುವೆ ಅಂತರವನ್ನು ತುಂಬಲು ಬಯೊಫಿಲಿಕ್ ಕಾರ್ಯಸ್ಥಳಗಳು ಅವಕಾಶವನ್ನು ಪೂರೈಸುತ್ತವೆ.

ಕಾರ್ಯಸ್ಥಳಗಳಿಗೆ ನಿಸರ್ಗದ ಸೌಂದರ್ಯ ಮತ್ತು ಪ್ರಶಾಂತತೆಯನ್ನು ಇವು ತರುತ್ತವೆ. ನೈಸರ್ಗಿಕ ಬೆಳಕು, ಒಳಾಂಗಣ ಸಸ್ಯಗಳು, ಜೀವಂತ ಗೋಡೆಗಳು ಮತ್ತು ನೀರಿನ ವೈಶಿಷ್ಟö್ಯಗಳು ಮುಂತಾದವುಗಳನ್ನು ಸಮಗ್ರವಾಗಿ ಸೇರಿಸುವುದರ ಜೊತೆಗೆ ಈ ಸ್ಥಳಗಳು ಸೌಹಾರ್ದಯುತ ಮತ್ತು ಪುನರುಜ್ಜೀವನ ಗೊಳಿಸುವಂತಹ ವಾತಾವರಣವನ್ನು ಉದ್ಯೋಗಿಗಳಿಗಾಗಿ ಸೃಷ್ಟಿಸುತ್ತದೆ.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಕುರಿತ ಜವಾಬ್ಧಾರಿಗೆ ಭಾರತೀಯ ಬದ್ಧತೆಗೆ ತಕ್ಕಂತೆ ಈ ಬಯೊಫಿಲಿಕ್ ಕಾರ್ಯಸ್ಥಳಗಳು ಇರುತ್ತವೆ. ಸುಸ್ಥಿರ ವಸ್ತುಗಳು, ಶಕ್ತಿ ಕಾರ್ಯಕ್ಷಮತೆಯ ವ್ಯವಸ್ಥೆಗಳು ಮತ್ತು ಹಸಿರು ತಂತ್ರಜ್ಞಾನಗಳನ್ನು ಸಮಗ್ರವಾಗಿ ಒಂದುಗೂಡಿಸುವ ಮೂಲಕ ಈ ಸ್ಥಳಗಳು ಉದ್ಯಮಗಳ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುವಲ್ಲಿ ಕೊಡುಗೆ ನೀಡುತ್ತವೆ. ನೈಸರ್ಗಿಕ ಬೆಳಕಿನ ಬಳಕೆಯು ಕೃತಕ ಬೆಳಕಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಇದರೊಂದಿಗೆ ವಿದ್ಯುತ್ ಉಳಿತಾಯ ಮಾಡುವುದಲ್ಲದೆ, ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಸಸ್ಯಗಳು ಮತ್ತು ಹಸಿರು ಗೋಡೆಗಳನ್ನು ಅಳವಡಿಸುವುದರಿಂದ ಒಳಾಂಗಣ ಗಾಳಿಯ ಗುಣಮಟ್ಟ ಸುಧಾರಿಸುವುದಲ್ಲದೆ, ಇದರಿಂದ ಹೆಚ್ಚು ವೆಚ್ಚವಾಗುವಂತಹ ಹಾಗೂ ದುಬಾರಿಯಾದ ವಾಯು ಶುದ್ಧೀಕರಣ ವ್ಯವಸ್ಥೆಯ ಅಗತ್ಯ ಕಡಿಮೆಯಾಗುತ್ತದೆ.

ನೈಸರ್ಗಿಕವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಅತ್ಯಂತ ಬುದ್ಧಿವಂತ ರೀತಿಯಲ್ಲಿ ಅಳವಡಿಸುವುದರೊಂದಿಗೆ ಬಯೊಫಿಲಿಕ್ ವಿನ್ಯಾಸವು ಕಾರ್ಯಸ್ಥಳಗಳನ್ನು ಪ್ರಗತ್ಯಾತ್ಮಕವಾಗಿ ಪರಿವರ್ತಿಸುತ್ತಿದೆ. ಉದ್ಯೋಗಿಗಳಲ್ಲಿ ಆನಂದ, ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯನ್ನು ಇದು ಹೆಚ್ಚಿಸುತ್ತದೆ ಎಂದು ನಿರೂಪಿತವಾಗಿದೆ. ಇದರೊಂದಿಗೆ ಒತ್ತಡಮಟ್ಟಗಳು ಕಡಿಮೆಯಾಗುತ್ತವೆ, ಮಾಲಿನ್ಯ ಕಡಿಮೆಯಾಗುತ್ತವೆ, ವಾಯು ಸ್ವಚ್ಛವಾಗುತ್ತದೆ ಮತ್ತು ಸೃಜನಶೀಲತೆಗೆ ಚಾಲನೆ ಲಭಿಸುತ್ತದೆ. ಗ್ರಹಿಕೆಯ ಕಾರ್ಯ, ದೈಹಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಇದು ಬೆಂಬಲಿಸುತ್ತದೆ ಎಂಬುದು ನಿರೂಪಿತವಾಗಿರುತ್ತದೆ. ಬಯೊಫಿಲಿಕ್ ತಂತ್ರಗಳಲ್ಲಿ ಹೊರಾಂಗಣದೊoದಿಗೆ ಕಟ್ಟಡದ ಒಳಭಾಗ ಸೌಹಾರ್ದತೆ ಸಾಧಿಸಲು ಗಾಜಿನ ಬಳಕೆ ಸೇರಿರುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಕಿಟಕಿಗಳು, ಸರ‍್ಯನ ಬೆಳಕು ಮತ್ತು ನಿಸರ್ಗದ ನೋಟಗಳು ಕಾಣುವಂತಿದ್ದರೆ ಇದರಿಂದ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ಗುಣಪಡಿಸುವಿಕೆ ಹೆಚ್ಚಾಗುತ್ತದೆ.

ಬಯೊಫಿಲಿಕ್ ವಿನ್ಯಾಸದ ಕೆಲವು ಲಾಭಗಳು ಸುಧಾರಿತ ಗ್ರಹಿಕೆಯ ಕಾರ್ಯ ಮತ್ತು ಉತ್ಪಾದಕತೆಯೊಂದಿಗೆ ಸಂಪರ್ಕ ಹೊಂದಿರುತ್ತವೆ. ನೈಸರ್ಗಿಕ ನೋಟಗಳು, ಹಸಿರು ಮತ್ತು ಸರ‍್ಯನ ಬೆಳಕು ಕಾಣುವಂತಿದ್ದರೆ ಅದರಿಂದ ಏಕಾಗ್ರತೆ, ಸೃಜನಶೀಲತೆ ಹೆಚ್ಚಾಗಬಹುದು. ಅಲ್ಲದೆ, ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯವು ಹೆಚ್ಚಾಗಬಹುದಾಗಿರುತ್ತದೆ. ನೈಸರ್ಗಿಕ ವಸ್ತುಗಳು ಮತ್ತು ರಚನೆಗಳನ್ನು ಅಳವಡಿಸುವುದರಿಂದ ಏಕಾಗ್ರತೆ ಭಂಗವಾಗುವುದು ಕಡಿಮೆಯಾಗುತ್ತದೆಯಲ್ಲದೆ, ಗಮನ ಕೇಂದ್ರೀಕರಿಸುವುದು ಹೆಚ್ಚಾಗುತ್ತದೆ. ಬಯೊಫಿಲಿಕ್ ವಿನ್ಯಾಸ ಸುಸ್ಥಿರತೆಯ ನೀತಿಗಳಿಗೆ ಹೊಂದಿಕೊಳ್ಳುವoತಿರುತ್ತದೆ.

ನೈಸರ್ಗಿಕ ಬೆಳಕು ಮತ್ತು ವಾತಾನುಕೂಲವನ್ನು ಗರಿಷ್ಟಗೊಳಿಸುವುದು ಮುಂತಾದ ಶಕ್ತಿ ಕಾರ್ಯಕ್ಷಮತೆಯ ಕಾರ್ಯತಂತ್ರಗಳನ್ನು ಅಳವಡಿಸುವುದರೊಂದಿಗೆ ಬಯೊಫಿಲಿಕ್ ಕಾರ್ಯಸ್ಥಳ ಗಳು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದಲ್ಲದೆ, ಪರಿಸರದಲ್ಲಿನ ಪರಿಣಾಮವನ್ನು ಕಡಿಮೆ ಮಾಡಬಹುದು. ಸುಸ್ಥಿರ ವಸ್ತುಗಳು ಮತ್ತು ಸುಸ್ಥಿರ ವಸ್ತುಗಳ ಬಳಕೆ ಮತ್ತು ಹಸಿರು ತಂತ್ರಜ್ಞಾನಗಳ ಅಳವಡಿಕೆ ಹೆಚ್ಚು ಹಸಿರಾದ ಮತ್ತು ಹೆಚ್ಚು ಸುಸ್ಥಿರವಾದ ಕಾರ್ಯಸ್ಥಳಕ್ಕೆ ಕೊಡುಗೆ ನೀಡುತ್ತವೆ.

ನಿಸರ್ಗಕ್ಕೆ ತೆರೆದುಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಬಯೊಫಿಲಿಕ್ ಕಾರ್ಯಸ್ಥಳಗಳು ನೈಸರ್ಗಿಕ ಅಂಶಗಳಾದ ಸಸ್ಯಗಳು, ನೈಸರ್ಗಿಕ ಬೆಳಕು ಮತ್ತು ನೀರಿನ ವೈಶಿಷ್ಟö್ಯಗಳನ್ನು ಸಮಗ್ರವಾಗಿ ಒಂದುಗೂಡಿಸುತ್ತವೆ. ಇದರಿಂದ ಸ್ಪರ್ಶ, ಶ್ರವಣ, ವಾಸನೆ, ನೋಟ ಮತ್ತು ರುಚಿ ಸೇರಿದ ಐದು ಇಂದ್ರಿಯಗಳನ್ನು ತೊಡಗಿಸುತ್ತವೆಯಲ್ಲದೆ, ಮಾನವರು ಮತ್ತು ನಿಸರ್ಗದ ನಡುವೆ ಹೆಚ್ಚುತ್ತಿರುವ ಅಂತರವನ್ನು ತುಂಬಿಕೊಡುತ್ತವೆ.

ಇತ್ತೀಚಿನ ಸಮಯದಲ್ಲಿ ಸಂಶೋಧನೆ ಮತ್ತು ಪ್ರಾಯೋಗಿಕ ಉಪಯೋಗಗಳಲ್ಲಿ ನರವಿಜ್ಞಾನ ಮತ್ತು ವಾಸ್ತುಶಿಲ್ಪಗಳ ನಡುವೆ ಸಹಭಾಗಿತ್ವ ಮತ್ತು ಈ ವಿಷಯಗಳ ಮೇಲಿನ ಗಮನ ಕೇಂದ್ರೀಕರಿಸುವಿಕೆಯು ಸತತವಾಗಿ ಹೆಚ್ಚುತ್ತಿದೆ. ಹಸಿರು ಕಟ್ಟಡದ ಮಾನದಂಡಗಳಲ್ಲಿ ಕೂಡ ಬಯೊಫಿಲಿಯಾವನ್ನು ಅಳವಡಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಈ ವಿನ್ಯಾಸ ಒಳಾಂಗಣ ವಾತಾವರಣದ ಗುಣಮಟ್ಟದ ಮೇಲೆ ಸಕಾರಾತ್ಮಕ ಉಂಟುಮಾಡುವುದು ಕಾರಣವಾಗಿರುತ್ತದೆ. ಜೊತೆಗೆ ಸುತ್ತಲಿನ ವಾತಾವರಣದೊಂದಿಗೆ ಸಂಪರ್ಕದ ಭಾವನೆಯನ್ನು ಪೋಷಿಸುವ ಇದರ ಸಾಮರ್ಥ್ಯವು ಕೂಡ ಇದಕ್ಕೆ ಕಾರಣವಾಗಿದೆ.

ಬಯೊಫಿಲಿಕ್ ವಿನ್ಯಾಸವು ಯಾವುದೇ ವ್ಯಕ್ತಿಗೆ ಅಥವಾ ಕಂಪನಿಗೆ ಸುಲಭವಾಗಿ ಲಭ್ಯವಿರುತ್ತದೆ. ಸಣ್ಣ ಅಥವಾ ದೊಡ್ಡದಾದ ಯಾವುದೇ ಒಳಾಂಗಣದಲ್ಲಿ ಇದನ್ನು ಪರಿಚಯಿಸಬಹುದಲ್ಲದೆ, ಇದನ್ನು ಸಾಧ್ಯವಾಗಿಸಲು ಯಾವುದೇ ದೊಡ್ಡ ಬಜೆಟ್ ಅಗತ್ಯವಿರುವುದಿಲ್ಲ. ನೀರಿನ ಅಂಶವನ್ನು ಪರಿಚಯಿಸುವುದಾಗಿರಲಿ ಅಥವಾ ನಮ್ಮ ಕಾರ್ಯಸ್ಥಳಗಳಿಗೆ ಹಸಿರನ್ನು ಸೇರಿಸುವುದಾಗಿರಲಿ ಅಥವಾ ವಾಣಿಜ್ಯ ಕಟ್ಟಡಗಳಿಗೆ ನಿಸರ್ಗದ ಅಂಶಗಳನ್ನು ಅಳವಡಿಸುವುದಾಗಿರಲಿ ಈ ವಿನ್ಯಾಸವು ನೈಸರ್ಗಿಕ ಜಗತ್ತಿನ ಸೌಂದರ್ಯವನ್ನು ಬಿಂಬಿಸುವುದಲ್ಲದೆ, ಈ ಸ್ಥಳಗಳಲ್ಲಿ ನಮಗೆ ಸಾಂತ್ವನ ಮತ್ತು ಆರಾಮವೆನಿಸುವ ಪ್ರಜ್ಞೆಯನ್ನು ನಾವು ಪಡೆದುಕೊಳ್ಳುತ್ತೇವೆ.

ನಿಸರ್ಗದೊಂದಿಗೆ ನಿರ್ಮಿತ ವಾತಾವರಣವನ್ನು ಸೌಹಾರ್ಧತೆಯೊಂದಿಗೆ ಒಂದುಗೂಡಿಸಲು ಅನನ್ಯ ಅವಕಾಶವನ್ನು ಭಾರತೀಯ ಸ್ಥಳಗಳಲ್ಲಿ ಬಯೊಫಿಲಿಕ್ ವಿನ್ಯಾಸದ ಅಳವಡಿಕೆ ಪ್ರಸ್ತುತಪಡಿಸುತ್ತಿದೆ. ಹಸಿರಿ ಸುಸ್ಥಿರವಾದ ಮತ್ತು ಸಾಂಸ್ಕೃತಿಕವಾಗಿ ಪ್ರಸ್ತುತವಾದ ಕಾರ್ಯಸ್ಥಳಗಳನ್ನು ಸೃಷ್ಟಿಸುವುದರೊಂದಿಗೆ ಭಾರತವು ಉದ್ಯೋಗಿಗಳ ಯೋಗಕ್ಷೇಮ, ಉತ್ಪಾದಕತೆ ಮತ್ತು ಪರಿಸರ ಉಸ್ತುವಾರಿಯನ್ನು ಹೆಚ್ಚಿಸಬಹುದು. ಬಯೊಫಿಲಿಕ್ ವಿನ್ಯಾಸ ತತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಭಾರತೀಯ ಸಂಸ್ಥೆಗಳು ಮತ್ತು ಅವುಗಳ ಉದ್ಯೋಗಿಗಳಿಗೆ ಹೆಚ್ಚು ಹಸಿರಿನ ಮತ್ತು ಆರೋಗ್ಯಪೂರ್ಣ ಭವಿಷ್ಯಕ್ಕೆ ದಾರಿಯಾಗಬಹುದು.

ಗ್ರೀಷ್ಮಾ ರೆಡ್ಡಿ, ನಿರ್ದೇಶಕರು, ಕಾನ್ ಕಾರ್ಡ್