ತಂದೆ ಮೃತದೇಹ ಬೈಕ್‌ನಲ್ಲಿ ಸಾಗಾಟದ ಬಗ್ಗೆ ವರದಿ ಮಾಡಿದ್ದ ವಿಶ್ವವಾಣಿ
ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ
ಕಾಯಂ ಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾವಗಡ ತಾಲೂಕಿನ ದಳವಾಯಿ ಹಳ್ಳಿ ನಿವಾಸಿಯೊಬ್ಬರು ತಂದೆಯ ಮೃತ ದೇಹ ಸಾಗಿಸಲು ಆಂಬ್ಯುಲೆನ್ಸ್
ಸಿಗದೆ ದ್ವಿ ಚಕ್ರವಾಹನದಲ್ಲಿ ಸಾಗಿಸಿದ ಹೃದಯವಿದ್ರಾವಕ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.
ಅದರ ಪರಿಣಾಮವಾಗಿ ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವೈ.ಎನ್.ಹೊಸಕೋಟೆ ಸಮುದಾಯ
ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ.
ಆಂಬ್ಯುಲೆನ್ಸ್ ಅನ್ನು ಮೃತ ದೇಹ ಸಾಗಾಣಿಕೆಗೆ ಬಳಸುವ ಅನುಮತಿ ಇಲ್ಲ. ಕೇವಲ ರೋಗಿಗಳನ್ನು ಸಾಗಿಸಲು ಮಾತ್ರ ಬಳಸಬಹುದಾಗಿದೆ. ಮೃತ ವ್ಯಕ್ತಿಯನ್ನು ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸಂಬಂಽ ಕರು ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಆಗ ವೈದ್ಯರು ಪಾವಗಡದಿಂದ ವಾಹನ ವ್ಯವಸ್ಥೆಯಲ್ಲಿ ಕಲ್ಪಿಸಿ ಅನುಕೂಲ ಮಾಡಿಕೊಡುವಷ್ಟರಲ್ಲಿ ಅವರ ಗಮನಕ್ಕೆ ಬಾರದೆ ಮೃತ ವ್ಯಕ್ತಿಯ ಸಂಬಂಧಿಕರು ಸ್ವಯಂ ಪ್ರೇರಿತ ವಾಗಿ ಮೃತ ವ್ಯಕ್ತಿ ಯನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿದ್ದಾರೆ.
ಇಂತಹ ಘಟನೆ ಗಳು ಮರು ಕಳಿಸದಂತೆ ಕ್ರಮವಹಿಸಬೇಕಾಗಿ ಸೂಚಿಸಿ ಕೂಡಲೇ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ಆಗಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿದೆ ಎಂದು ಡಿಎಚ್‌ಒ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: Tumkur News: ಸಿವಿಲ್ ಇಂಜಿನಿಯರ್ಸ್ ಆಕ್ಟ್ ಶೀಘ್ರವೇ ಜಾರಿ