Thursday, 19th September 2024

ತಿಂಗಳಲ್ಲಿ ಜನ ಮೆಚ್ಚುವ ನಿರ್ಣಯಗಳು

ವಿಶ್ವವಾಣಿ ವಿಶೇಷ

ಮಹತ್ವದ ತೀರ್ಮಾನ ಕೈಗೊಂಡ ಮುಖ್ಯಮಂತ್ರಿಗೆ ಮೆಚ್ಚುಗೆಗಳ ಮಹಾಪೂರ
ಕರೋನಾ ಸಂಕಷ್ಟದ ನಡುವೆಯೂ ಹಲವು ಹೊಸ ಯೋಜನೆಗಳ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಅವರು ಕೆಳಗೆ ಇಳಿದು ಬಸವರಾಜ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದ ತಿಂಗಳಿಗೂ ಮೊದಲೇ ಹತ್ತು ಹಲವು
ಯೋಜನೆ ಹಾಗೂ ಘೋಷಣೆಗಳ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಧಿಕಾರ ಸ್ವೀಕರಿಸಿದ ದಿನದಿಂದ ಬೊಮ್ಮಾಯಿ ಅವರು ಕರೋನಾ ಸಂಕಷ್ಟದ ನಡುವೆಯೂ ಆಡಳಿತ ಸುಧಾರಣೆಗೆ ತರಲು ಮಹತ್ವ ನಿಲುವುಗಳನ್ನು ತಗೆದು ಕೊಂಡಿದ್ದಾರೆ. ಸಿಎಂ ಮಾಡಿದ ಮೊದಲ ಕೆಲಸವೆಂದರೆ ಆಡಳಿತ ವೆಚ್ಚದ ನೆಪದಲ್ಲಿ ಖರ್ಚಾಗುತ್ತಿದ್ದ ದುಂದು ವೆಚ್ಚಕ್ಕೆ ಬ್ರೇಕ್ ಹಾಕಿದ್ದು. ಇದರಿಂದ ತಿಂಗಳಿಗೆ ಕೋಟ್ಯಂತರ ರುಪಾಯಿ ಉಳಿತಾಯವಾಗಲಿದೆ ಎನ್ನುವುದು ಆರ್ಥಿಕ ಇಲಾಖೆ ಅಧಿಕಾರಿಗಳ ಮಾತಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿವಿಧ ಪಿಂಚಣಿ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಕ್ರಮಕ್ಕೆ ಮುಂದಾದರು. ಇದರಿಂದ ಆರ್ಥಿಕ ಹೊರೆ ಬೀಳುತ್ತದೆ ಎನ್ನುವುದು ತಿಳಿದಿದ್ದರೂ, ಜನರ ಹಿತಕ್ಕೆ ಇದನ್ನು ಮಾಡಲೇಬೇಕು ಎನ್ನುವ ನಿರ್ಧಾರ ಮಾಡಿ, ಈ ತೀರ್ಮಾನ ಕೈಗೊಂಡರು.

ಝೀರೋ ಟ್ರಾಫಿಕ್‌ಗೆ ಬೇಡವೆಂದ ಸಿಎಂ: ಬೆಂಗಳೂರಿನಲ್ಲಿ ಒಮ್ಮೆ ಮುಖ್ಯಮಂತ್ರಿಗಳ ಕಾನ್ವೇ ಹೋದರೆ, ಕನಿಷ್ಠ ೨೦ ನಿಮಿಷಗಳ ಕಾಲ ವಾಹನಗಳು ನಿಂತು ಭಾರಿ ಸಂಚಾರ ದಟ್ಟಣೆಯಾಗುತ್ತದೆ. ಕೆಲವೊಮ್ಮೆ ಮುಖ್ಯಮಂತ್ರಿಗಳು ಹೋಗುತ್ತಾರೆ ಎನ್ನುವ ಕಾರಣಕ್ಕೆ ಆಂಬ್ಯುಲೆನ್ಸ್‌ಗಳನ್ನು ತಡೆದಿರುವ ಘಟನೆಗಳಿವೆ. ಇದನ್ನು ಅರಿತ ಬೊಮ್ಮಾಯಿ ಅವರು, ತಮಗೆ ಝೀರೋ ಟ್ರಾಫಿಕ್ ಬೇಡ. ಆಂಬ್ಯುಲೆನ್ಸ್ ಬಂದರೆ ಮೊದಲು ಅದಕ್ಕೆ ದಾರಿ ಬಿಡಿ ಎನ್ನುವ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದಾರೆ. ಈ ತೀರ್ಮಾನದಿಂದ ಝೀರೋ ಟ್ರಾಫಿಕ್ ಸಂಸ್ಕೃತಿಗೆ ಬ್ರೇಕ್ ಬಿದ್ದಿದೆ.

ಈ ಎಲ್ಲದರ ಜತೆ ಬೊಮ್ಮಾಯಿ ಸಂಪುಟದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು, ಹಾರ, ತುರಾಯಿ ಬದಲಿಗೆ ಪುಸ್ತಕವನ್ನು ತನ್ನಿ ಎಂದು ಮನವಿ ಮಾಡಿದ್ದರು. ಇದು ಕೇವಲ ಸುನೀಲ್ ಕುಮಾರ್ ಅವರಿಗೆ ಮಾತ್ರ ಸೀಮಿತಗೊಳ್ಳದೇ, ಇಡೀ ಸರಕಾರಿ ವ್ಯವಸ್ಥೆ ಇದನ್ನು ಪಾಲಿಸಬೇಕು
ಎಂದು ಆದೇಶ ಹೊರಡಿಸುವ ಮೂಲಕ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಕಾಳಜಿ ತೋರಿದರು.

ಜನರ ಸಮಸ್ಯೆ ನೀಗಿಸಿದ ಬಸವರಾಜ ಬೊಮ್ಮಾಯಿ
ರೈಲು ನಿಲ್ದಾಣ ಅಥವಾ ಪ್ರಮುಖ ರಸ್ತೆಗಳಲ್ಲಿ ಮುಖ್ಯಮಂತ್ರಿಗಳು ಆಗಮಿಸಿದರೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗಾರ್ಡ್ ಆಫ್ ಆನರ್ ನೀಡಬೇಕಿತ್ತು. ಇದಕ್ಕಾಗಿ ಪೊಲೀಸರು ಮುಖ್ಯಮಂತ್ರಿಗಳು ಬರುವ ಗಂಟೆಗಳ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಗಮನಿಸಿದ ಸಿಎಂ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನದಲ್ಲಿ ಈ ಆದೇಶವನ್ನು ರದ್ದುಗೊಳಿಸಿದರು.

ಮಂಗಳೂರಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದರು ಎನ್ನುವ ಕಾರಣಕ್ಕೆ ಅವಕಾಶ ನೀಡಿದ ಅವರು, ಮುಂದಿನ ದಿನಗಳಲ್ಲಿ ಯಾರೂ ಗಾರ್ಡ್ ಆಫ್ ಆನರ್ ನೀಡುವಂತಿಲ್ಲ ಎಂದು ಸೂಚಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡಿಐಜಿ ಪ್ರವೀಣ್ ಸೂದ್ ಅವರು ಅಧಿಕೃತ ಆದೇಶವನ್ನು ಹೊರಡಿಸಿದರು.

ಸಿಎಂ ತೆಗೆದುಕೊಂಡ ಪ್ರಮುಖ ನಿರ್ಣಯಗಳು
? ಝೀರೋ ಟ್ರಾಫಿಕ್ ವ್ಯವಸ್ಥೆ ರದ್ದು
? ಗಾರ್ಡ್ ಆಫ್ ಆನರ್ ಎನ್ನುವ ಬ್ರಿಟಿಷ್ ಪದ್ಧತಿಗೆ ಬ್ರೇಕ್
? ಸಭೆ-ಸಮಾರಂಭದಲ್ಲಿ ಹಾರ ತುರಾಯಿ ತರುವ ಬದಲು, ಪುಸ್ತಕಗಳನ್ನು ನೀಡಲು ಸೂಚನೆ
? ರೈತರ ಮಕ್ಕಳ ಉನ್ನತ್ತ ಶಿಕ್ಷಣ ಯೋಜನೆಗೆ ವಿದ್ಯಾರ್ಥಿ ವೇತನಕ್ಕೆ ಸಾವಿರ ಕೋಟಿ ರು. ಬಿಡುಗಡೆ
? ವೃದ್ಧಾಪ್ಯ ವೇತನ ೧,೦೦೦ ರು.ಗಳಿಂದ ೧,೨೦೦ ರು.ಗೆ ಏರಿಕೆ

? ವಿಧವಾ ವೇತನ ೬೦೦ ರು.ಗಳಿಂದ ೮೦೦ ರು.ಗೆ ಏರಿಕೆ
? ಅಂಗವಿಕಲರ ಮಾಸಿಕ ವೇತನ ೬೦೦ ರು. ಗಳಿಂದ ೮೦೦ಕ್ಕೆ ಏರಿಕೆ
? ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ

Leave a Reply

Your email address will not be published. Required fields are marked *