ಬಹು ದಿನಗಳಿಂದ ನಮ್ಮ ಸಂದೇಶಕ್ಕೆ (whatsapp messages) ಸ್ನೇಹಿತರು, ಸಂಬಂಧಿಗಳು ಉತ್ತರಿಸುತ್ತಿಲ್ಲ ಎಂದಾದರೆ ಅವರು ನಮ್ಮನ್ನು ವಾಟ್ಸ್ ಆಪ್ (whatsapp)ನಲ್ಲಿ ಬ್ಲಾಕ್ (block list) ಮಾಡಿರಬಹುದೇ ಎನ್ನುವ ಅನುಮಾನ ಕಾಡತೊಡಗುತ್ತದೆ. ವಾಟ್ಸ್ ಆಪ್‌ನಲ್ಲಿ ನಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ ಹೇಗೆ ಗೊತ್ತಾಗುತ್ತದೆ? ಇದನ್ನು ತಿಳಿದುಕೊಳ್ಳುವುದು ಹೇಗೆ?
ವಾಟ್ಸ್ ಆಪ್‌ನಲ್ಲಿ ಯಾರಾದರೂ ನಮ್ಮನ್ನು ಬ್ಲಾಕ್ ಮಾಡಿದರೆ, ಮುಖ್ಯವಾಗಿ ನಾವು ಕಳುಹಿಸುವ ಸಂದೇಶಗಳಿಗೆ ಡಬಲ್ ಟಿಕ್ ಕಾಣಿಸುವುದಿಲ್ಲ. ಅವರ ಸ್ಟೇಟಸ್, ಪ್ರೊಫೈಲ್ ಫೋಟೋ, ಲಾಸ್ಟ್ ಸೀನ್ ಸ್ಟೇಟಸ್ ಕೂಡ ಗೋಚರಿಸುವುದಿಲ್ಲ.
ನೀವು ಕಳುಹಿಸಿದ ಸಂದೇಶದ ಮೇಲೆ ಕೇವಲ ಒಂದು ಬೂದು ಬಣ್ಣದ ಟಿಕ್ ಮಾತ್ರ ಕಾಣಿಸಿಕೊಳ್ಳುತ್ತದೆ. ಅಲ್ಲದೆ ವಾಟ್ಸ್ ಆಪ್‌ನಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಬ್ಲಾಕ್ ಮಾಡಿದ ವ್ಯಕ್ತಿಯನ್ನು ನೀವು ಅಡ್ಮಿನ್ ಆಗಿರುವ ಗ್ರೂಪ್‌ಗಳಿಗೆ ಸೇರಿಸಲು ಸಾಧ್ಯವಾಗುವುದಿಲ್ಲ.
ಯಾರಾದರೂ ನಿಮ್ಮನ್ನು ವಾಟ್ಸ್ ಆಪ್‌ನಲ್ಲಿ ನಿರ್ಬಂಧಿಸಿದರೆ ಇದನ್ನು ತಿಳಿದುಕೊಳ್ಳಲು ಹಲವು ದಾರಿಗಳಿವೆ.
ಸಂದೇಶ ದೃಢೀಕರಣ
ಯಾರಾದರೂ ವಾಟ್ಸ್ ಆಪ್‌ನಲ್ಲಿ ನಿಮ್ಮನ್ನು ನಿರ್ಬಂಧಿಸಿದ್ದರೆ ಅವರ ಸಂದೇಶವನ್ನು ಓದಲು, ದೃಢೀಕರಣವನ್ನು ನೋಡಲು ಸಾಧ್ಯವಾಗುವುದಿಲ್ಲ. ಎರಡು ನೀಲಿ ಟಿಕ್‌ಗಳು ಗೋಚರಿಸುವುದಿಲ್ಲ. ಕಳುಹಿಸಿರುವ ಸಂದೇಶಕ್ಕೆ ಕೇವಲ ಒಂದು ಬೂದು ಬಣ್ಣದ ಟಿಕ್ ಮಾತ್ರ ಇರುತ್ತದೆ. ಅದು ಅವರಿಗೆ ತಲುಪಿದೆಯೋ ಇಲ್ಲವೋ ಎಂಬುದರ ದೃಢೀಕರಣ ಪಡೆಯಲು ಸಾಧ್ಯವಾಗುವುದಿಲ್ಲ.
ಸಂಪರ್ಕಗಳ ಸ್ಥಿತಿ
ವಾಟ್ಸ್ ಆಪ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದರೆ ಅವರ ಪ್ರೊಫೈಲ್ ಫೋಟೋಗಳ ನವೀಕರಣ, ಸ್ಟೇಟಸ್ ಅಪ್ಡೇಟ್, ಲಾಸ್ಟ್ ಸೀನ್ ಅಪ್ಡೇಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
ಸಂದೇಶಗಳ ಸ್ಥಿತಿ
ವಾಟ್ಸ್ ಆಪ್‌ನಲ್ಲಿ ನಿರ್ಬಂಧಿಸಿರುವ ವ್ಯಕ್ತಿಗೆ ಕಳುಹಿಸಲಾದ ಸಂದೇಶಗಳಿಗೆ ಕೇವಲ ಒಂದು ಟಿಕ್ ಮಾತ್ರ ಗೋಚರಿಸುತ್ತದೆ. ಬೂದು ಬಣ್ಣದ ಡಬಲ್ ಟಿಕ್, ನೀಲಿ ಬಣ್ಣದ ಡಬಲ್ ಟಿಕ್ ಗಳು ಕಾಣಿಸುವುದಿಲ್ಲ. ಇದರಿಂದ ನೀವು ಕಳುಹಿಸಿರುವ ಸಂದೇಶಗಳು ಅವರನ್ನು ತಲುಪಿದೆಯೋ ಇಲ್ಲವೋ ಎನ್ನುವುದು ನಿಮಗೆ ತಿಳಿಯಲು ಸಾಧ್ಯವಾಗುವುದಿಲ್ಲ.
ವಾಟ್ಸ್ ಆಪ್ ಕರೆ
ವಾಟ್ಸ್ ಆಪ್‌ನಲ್ಲಿ ನಿರ್ಬಂಧಿಸಿರುವ ವ್ಯಕ್ತಿಗೆ ವಾಟ್ಸ್ ಆಪ್ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನೀವು ಮಾಡಲು ಪ್ರಯತ್ನಿಸುವ ಯಾವುದೇ ಕರೆಗಳು ಅವರನ್ನು ತಲುಪುವುದಿಲ್ಲ.
ಗುಂಪಿಗೆ ಸೇರಿಸಲು ಸಾಧ್ಯವಿಲ್ಲ
ವಾಟ್ಸ್ ಆಪ್‌ನಲ್ಲಿ ನಿರ್ಬಂಧಿಸಿರುವ ವ್ಯಕ್ತಿಯನ್ನು ನೀವು ಯಾವುದೇ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ನೀವು ಗುಂಪಿನ ನಿರ್ವಾಹಕರಾಗಿದ್ದರೂ ಅದನ್ನು ಮಾಡಲಾಗದು.
ಆನ್ ಲೈನ್ ನಲ್ಲಿ ಇದ್ದಾರೆಯೇ?
ಒಂದುವೇಳೆ ವಾಟ್ಸ್ ಆಪ್‌ನಲ್ಲಿ ನಿಮ್ಮನ್ನು ಯಾರಾದರೂ ನಿರ್ಬಂಧಿಸಿದರೆ ಅವರು ಆನ್ ಲೈನ್‌ನಲ್ಲಿ ಇದ್ದಾರೆಯೋ ಇಲ್ಲವೋ ಎಂಬುದನ್ನು ನೋಡಲು ಸಾಧ್ಯವಾಗುವುದಿಲ್ಲ.
ವಾಟ್ಸ್ ಆಪ್‌ನಲ್ಲಿ ನೀವು ಯಾರನ್ನೇ ಆಗಲಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೆ ಈ ಮೇಲಿನ ಅಂಶಗಳು ಕಂಡು ಬಂದರೆ ಅವರು ನಿಮ್ಮನ್ನು ನಿರ್ಬಂಧಿಸಿದ್ದಾರೆ ಎಂದರ್ಥ. ಆದರೆ ಇದು ಇತರ ಕಾರಣಗಳಿಂದಲೂ ಆಗಿರುವ ಸಾಧ್ಯತೆ ಇದೆ. ಮುಖ್ಯವಾಗಿ ಅವರು ನೆಟ್ವರ್ಕ್ ಪ್ರದೇಶದಲ್ಲಿ ಇಲ್ಲದೇ ಇದ್ದಾಗಲೂ ಈ ರೀತಿ ಆಗುತ್ತದೆ. ಹೀಗಾಗಿ ಸ್ವಲ್ಪ ಕಾಲ ಕಾದ ಮೇಲೂ ಅವರ ಪ್ರತಿಕ್ರಿಯೆ ಸಿಗದೇ ಇದ್ದರೆ ಅವರು ನಿಮ್ಮನ್ನು ನಿರ್ಬಂಧಿಸಿದ್ದಾರೆ ಎಂದು ತಿಳಿದುಕೊಳ್ಳಬಹುದು.