Saturday, 14th December 2024

ಇಂದು ವಿಶ್ವ ಹೆಪಟೈಟಿಸ್‌ ದಿನ: ಹೆಪಟೈಟಿಸ್‌ ಎ ಮತ್ತು ಇ ಬಗ್ಗೆ ನಿಮಗೆಷ್ಟು ಗೊತ್ತು?

ಇಂದು ವಿಶ್ವ ಹೆಪಟೈಟಿಸ್‌ ದಿನ. ಹೆಪಟೈಟಿಸ್ ಎ ಇದು ಇಂದು ನೆನ್ನೆಯ ಕಾಯಿಲೆಯಲ್ಲ. ಸುಮಾರು 5,000 ವರ್ಷಗಳ ಹಿಂದೆ ಚೀನಾದಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಅಂದಿನಿಂದ, ವಿಶೇಷವಾಗಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮತ್ತು ಯುದ್ಧಗಳ ಸಮಯದಲ್ಲಿ ಈ ಪ್ರಕರಣಗಳು ದಾಖಲಾಗಿರುವುದನ್ನು ನಾವು ನೋಡಬಹುದು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹೆಪಟೈಟಿಸ್‌ ಎ ದೊಡ್ಡ ಸಮಸ್ಯೆಯಾಗಿ ಕಾಡಿತ್ತು.

ಇನ್ನು ಹೆಪಟೈಟಿಸ್‌ ಇ ಕೂಡ ಎಲ್ಲೆಡೆ ಕಂಡು ಬರಲು ಪ್ರಾರಂಭವಾಯಿತು. ಕಾಶ್ಮೀರದಲ್ಲಿ ತೀವ್ರವಾದ ಹೆಪಟೈಟಿಸ್‌ನ ನೀರಿನಿಂದ ಹರಡುವ ಸಾಂಕ್ರಾಮಿಕ ಸಮಯದಲ್ಲಿ ಮೊದಲ ಬಾರಿಗೆ ಶಂಕಿಸಲ್ಪಟ್ಟಿತು. ಈ ಎರಡೂ ರೋಗಗಳು ಈಗಲೂ ಹೆಚ್ಚು ಪ್ರಮಾಣ ದಲ್ಲಿ ಹರಡುತ್ತಿದೆ. ಈ ಬಗ್ಗೆ ಫೋರ್ಟಿಸ್‌ ಆಸ್ಪ್ರೆಯ ಗ್ಯಾಸ್ಟ್ರೋಎಂಟರಾಲಜಿ ಕನ್ಸಲ್ಟೆಂಟ್‌ ಆದ ಡಾ. ತೇಜಸ್ವಿನಿ ದಂಡೆ ವಿವರಿಸಿದ್ದಾರೆ.

ಹೆಪಟೈಟಿಸ್ ಎ ಅಥವಾ ಇ ಹೇಗೆ ಹರಡಲಿದೆ?
ಹೆಪಟಿಟಿಸ್ ಎ ಸೋಂಕು ಹೆಪಟಿಟಿಸ್ ಎ ವೈರಸ್(ಎಚ್ ಎವಿ) ಯಿಂದ ಬರುವುದು. ಹೆಪಟಿಟಿಸ್ ಇರುವಂತಹ ವ್ಯಕ್ತಿಯ ಮಲವು ನೀರಿನಲ್ಲಿ ಮಿಶ್ರಣಗೊಂಡು ಅಂತಹ ನೀರು ಅಥವಾ ಆಹಾರವನ್ನು ಸೇವನೆ ಮಾಡಿದರೆ ಅದರಿಂದ ಸೋಂಕು ಹರಡಲಿದೆ. ಹಾಗೆಯೇ, ಹೆಪಟೈಟಿಸ್ ಇ ವೈರಸ್(ಎಚ್ಇವಿ)ಯಿಂದಾಗಿ ನೀರಿನಿಂದ ಬರುವಂತಹ ಕಾಯಿಲೆಯಾಗಿದೆ. ಹೆಪಟೈಟಿಸ್ ಇ ಅಸ್ವಚ್ಛತೆ ಮತ್ತು ಶೌಚಾಲಯವು ನೀರಿನೊಂದಿಗೆ ಸೇರ್ಪಡೆಗೊಂಡ ವೇಳೆ ಬರುವುದು. ಹೆಪಟೈಟಿಸ್ ಎ ಮತ್ತು ಇ ಯಕೃತ್ತಿನ ಜೀವಕೋಶಗಳ ಉರಿಯೂತ ಉಂಟುಮಾಡಿ, ಕಾಲಕ್ರಮೇಣ ಯಕೃತ್‌ನನ್ನು ಹಾನಿ ಮಾಡುತ್ತಾ ಹೋಗುತ್ತದೆ. ಹೆಪಟೈಟಿಸ್ ಎ ಮತ್ತು ಇ ಎರಡೂ ಇತರ ಅಂಗಗಳಿಗಿಂತ ಹೆಚ್ಚಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತವೆ, ಇದು ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು.

ಹೆಪಟೈಟಿಸ್ ಎ ಮತ್ತು ಇ ಮಾನವ ದೇಹವನ್ನು ಹೇಗೆ ಪ್ರವೇಶಿಸುತ್ತವೆ?
1 ಕಲುಷಿತ ಕುಡಿಯುವ ನೀರಿನ ಸೇವನೆಯ ಮೂಲಕ, ಭಾರೀ ಮಳೆ, ಪ್ರವಾಹ, ನಿಂತ ನೀರು, ಚರಂಡಿ ನೀರು ಸೋರಿಕೆ ಮತ್ತು ಕೊಳೆಗೇರಿಗಳಂತಹ ಜನನಿಬಿಡ ಸ್ಥಳಗಳಲ್ಲಿ.
2. ಕಚ್ಚಾ ಅಥವಾ ಕಡಿಮೆ ಬೇಯಿಸಿದ ಆಹಾರ
3. ಕೊಳಕು ಕೈಗಳು, ಕಳಪೆ ನೈರ್ಮಲ್ಯ.
ಹೀಗೆ ಕಲುಶಿತ ಪದಾರ್ಥ ಹಾಗೂ ನೀರಿನ ಸೇವನೆಯ ನಂತರ, ವೈರಸ್‌ಗಳಯ ಗ್ಯಾಸ್ಟ್ರಿಕ್ ಆಮ್ಲ ಬಿಡುಗಡೆ ಮಾಡುತ್ತದೆ, ಅದು ಸಣ್ಣ ಕರುಳಿಗೆ ತಲುಪಿ, ಪೋರ್ಟಲ್ ಸಿರೆಯ ಮೂಲಕ ಯಕೃತ್ತನ್ನು ತಲುಪುತ್ತವೆ. ಈ ವೈರಸ್‌ ಹೆಚ್ಚು ಬಲಿಷ್ಠವಾದ ನಂತರ ಪಿತ್ತರಸವನ್ನು ಪ್ರವೇಶಿಸಿ, ಸಣ್ಣ ಕರುಳಿನ ಮೂಲಕ ರಕ್ತವನ್ನು ಪ್ರವೇಶಿಸಲಿದೆ. ಈ ವೈರಸ್‌ ಮಲದ ಮೂಲಕ ಹೊರ ಹೋಗುವುದರಿಂದ ನೊಣ ಹಾಗೂ ಸೊಳ್ಳೆಗಳ ಮೂಲಕ ಆಹಾರಗಳಲ್ಲಿ ಹಡಿದರೆ ಈ ವೈರಸ್‌ ಬೇರೆಯವರಿಗೂ ತಗಲಿದೆ.

ಹೆಪಟೈಟಿಸ್‌ ಎ ಮತು ಇನ ಲಕ್ಷಣಗಳು: ಹೆಪಟೈಟಿಸ್ ಎ ಮತ್ತು ಇ ಎರಡೂ ಸಾಂಕ್ರಾಮಿಕ ರೋಗಲಕ್ಷಣಗಳು ಒಬ್ಬ ವ್ಯಕ್ತಿ ಯಲ್ಲಿ 2 ರಿಂದ 6 ವಾರಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹೆಪಟೈಟಿಸ್ ಎ ಸೋಂಕು ಭಾರತದಂತಹ ಮುಂದುವರೆಯು ತ್ತಿರುವ ದೇಶಗಳಲ್ಲಿ ವಾಸಿಸುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಪಟೈಟಿಸ್ ಇ ಸಾಮಾನ್ಯವಾಗಿ ಯುವ ವಯಸ್ಕ ರಲ್ಲಿ ಕಂಡುಬರುತ್ತದೆ, ಅದರಲ್ಲೂ ಗರ್ಭಾವಸ್ಥೆಯಲ್ಲಿ ಈ ವೈರಸ್‌ ಅಪಾಯಕಾರಿಯಾಗಬಹುದು.

ಆರಂಭದಲ್ಲಿ, ಈ ವೈರಸ್‌ನಿಂದ ಹಸಿವು, ವಾಕರಿಕೆ ಮತ್ತು ವಾಂತಿ, ಆಯಾಸ, ದೇಹದ ನೋವು, ಕಡಿಮೆ ಜ್ವರ, ಸೌಮ್ಯವಾದ ತಲೆನೋವುನಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಿಗೆ ಕಾಮಾಲೆ, ಹೊಟ್ಟೆ ನೋವು, ಕೀಲು ನೋವು, ಚರ್ಮದ ದದ್ದುಗಳು, ತುರಿಕೆ ಮತ್ತು ಸಿಮೆಂಟ್ ಬಣ್ಣದ ಮಲ ಹೋಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಶೇ. 1 ಕ್ಕಿಂತ ಕಡಿಮೆ ರೋಗಿಗಳು ತೀವ್ರವಾದ ಪಿತ್ತಜನಕಾಂಗದ ವೈಫಲ್ಯವನ್ನು ಕಾಣಬಹುದು. ಜೊತೆಗೆ, ಇತರ ಅಂಗ ವೈಫಲ್ಯ, ಹೃದಯದ ಬ್ಲಾಕ್‌ ಗಳು, ಪ್ಯಾಂಕ್ರಿಯಾಟೈಟಿಸ್, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಸ್ವಯಂ ನಿರೋಧಕ ಕಾಯಿಲೆಯ ಬರುವ ಸಾಧ್ಯತೆ ಇದೆ.

ಹೆಪಟೈಟಿಸ್ ಎ ತಡೆಯುವುದು ಹೇಗೆ?
ನೈರ್ಮಲ್ಯ ಪರಿಸ್ಥಿತಿಗಳನ್ನು ಸುಧಾರಿಸುವುದು ಮತ್ತು ಸುರಕ್ಷಿತ, ಶುದ್ಧ ಕುಡಿಯುವ ನೀರು, ಚರಂಡಿನೀರು ನಿಲ್ಲದಂತೆ ನೋಡಿ ಕೊಳ್ಳುವುದು, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಹೆಪಟೈಟಿಸ್‌ ಎ ವೈರಸ್‌ನನ್ನು ತಡೆಗಟ್ಟಬಹುದು. ನಿಮ್ಮ ಸುತ್ತಲಿನ ಪ್ರದೇಶ ಸ್ವಚ್ಛವಾಗಿಲ್ಲದಿದ್ದರೆ, ಕುಡಿಯುವ ನೀರನ್ನು ಕುದಿಸಿ ಕುಡಿಯುವುದು ಒಳ್ಳೆಯದು. ಇದು ವೈರಸ್‌ನನ್ನು ಕೊಲ್ಲುವ ಮೂಲಕ ನಿಮ್ಮನ್ನು ಹೆಪಟೈಟಿಸ್‌ ಎ ಮುಕ್ತವನ್ನಾಗಿಸಲು ಸಹಕಾರಿಯಾಗಲಿದೆ.

ಲಸಿಕೆ ಲಭ್ಯವಿದೆ: HAV ಲಸಿಕೆ , ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಯಾವುದೇ ಪರವಾನಗಿ ಪಡೆದ ಲಸಿಕೆಗಳಿಗೆ ಎರಡು ಡೋಸ್‌ ಗಳನ್ನು ಶಿಫಾರಸು ಮಾಡುತ್ತದೆ, ಇದನ್ನು 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 6 ತಿಂಗಳ ಅಂತರದಲ್ಲಿ ನೀಡಬೇಕು. ಇದು ಹೆಪಟೈಟಿಸ್ ಇ ವೈರಸ್ ಸೋಂಕನ್ನು ತಡೆಗಟ್ಟುವ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಚೀನಾದಲ್ಲಿ ಪರವಾನಗಿ ಪಡೆಯಲಾಗಿದೆ, ಆದರೆ ಈ ಲಸಿಕೆ ಸದ್ಯಕ್ಕೆ ಎಲ್ಲಿಯೂ ಲಭ್ಯವಿಲ್ಲ.

ಚಿಕಿತ್ಸೆ: ಹೆಪಟೈಟಿಸ್‌ ಎ ಮತ್ತು ಇಗೆ ನಿರ್ಧಿರ್ಷ ಚಿಕಿತ್ಸೆಗಳಿಲ್ಲ. ಈ ಸೋಂಕನ್ನು ನಿವಾರಿಸು 2 ರಿಂದ6 ವಾರಗಳ ಕಾಲಾವಧಿ ಬೇಕಾಗ ಬಹುದು, ಕೆಲವೊಮ್ಮೆ ತಿಂಗಳುಗಳು ತೆಗೆದುಕೊಳ್ಳುತ್ತದೆ. ಹೀಗಾಗಿ ಹೆಪಟೈಟಿಸ್‌ ಎ ಮತ್ತು ಇ ಬರುವುದನ್ನು ಮುಂಚಾ ಗೃತವಾಗಿ ತಡೆಗಟ್ಟುವುದು ಒಳಿತು ಎನ್ನುವುದು ವೈದ್ಯರ ಸಲಹೆ.