ಕ್ಯಾಪ್ಟನ್ ವಿಶ್ವೇಶ್ವರ ಭಟ್ ಅವರೊಂದಿಗೆ ನಿಮಗಾಗಿ ಕಾದಿರುತ್ತೇವೆ
ಅಂದೊಮ್ಮೆ ಬೆಳ್ಳಂಬೆಳ್ಳಗ್ಗೆ ವಿಶ್ವೇಶ್ವರ ಭಟ್ಟರು ಕರೆ ಮಾಡಿ ‘ಕ್ಲಬ್ ಹೌಸ್‌ಮಾಡೋಣ್ವಾ’ ಅಂದರು.
ಕಾಸ್ಮೋಪಾಲಿಟಿನ್ ಕ್ಲಬ್, ರೇಸ್‌ಕ್ಲಬ್, ಗಾಲ್ ಕ್ಲಬ್, ಪ್ರೆಸ್ ಕ್ಲಬ್… ಇಂತಹ ಕ್ಲಬ್‌ಗಳ ಬಗ್ಗೆ ಅರಿವಿದ್ದ ನನಗೆ ಒಮ್ಮೆಲೆ ಗಾಬರಿ ಯಾಯಿತು. ಈಗ ತಾನೇ ವಿಶ್ವವಾಣಿ ಗಟ್ಟಿಯ ನೆಲೆ ಕಂಡುಕೊಳ್ಳುತ್ತಿದೆ. ಇದ್ಯಾವುದಪ್ಪ ಭಟ್ಟರ ಹೊಸ ಸಾಹಸ. ಇಂಥದ್ದೊಂದು ಕ್ಲಬ್ ರೂಪು ಗೊಳ್ಳಬೇಕಾದರೆ ಕಡಿಮೆ ಖರ್ಚಾದೀತೇ? ಇದೇನಿದು ಇವರ ಹೊಸ ಜಂಜಾಟ ಅಂತೆಲ್ಲ ತಲೆ ಓಡಲಾರಂಭಿಸಿತು.
ಯಾವುದು ಸ್ವಾಮಿ ಇದು ಹೊಸ ಕ್ಲಬ್? ಎಲ್ಲಿ ಮಾಡೋದು? ಎಂದು ಬೇಸರದಿಂದಲೇ ಕೇಳಿದೆ. ಆಗ ಭಟ್ಟರು, ಕ್ಲಬ್‌ಹೌಸ್ ಎಂಬ ಅಶರೀರವಾಣಿಯ ಹುಟ್ಟು, ಬಳಕೆ ಮತ್ತು ತಾವು ಹೊಂದಿರುವ ವಿಶ್ವವಾಣಿ ಕ್ಲಬ್‌ಹೌಸ್‌ನ ಪರಿಕಲ್ಪನೆಯನ್ನು ನನ್ನ ಮುಂದೆ ಬಿಚ್ಚಿ ಟ್ಟರು. ಗೊತ್ತಲ್ಲ, ಒಂದು ವಿಷಯ ತೆಗೆದರೆ ಆದ್ಯಂತ ತೆರೆದಿಡುವುದು ಭಟ್ಟರ ಗುಣ. 2021ರ ಜೂನ್ ೧೮ರಂದು ಅವರೇ ಕ್ಲಬ್‌ಹೌಸ್‌ಗೆ ನನ್ನನ್ನು ನಾಮಿನೇಟ್ ಮಾಡಿದರು. ಇದು ನಾನು ಕ್ಲಬ್‌ಹೌಸ್ ಎಂಬ ಹೊಸ ಜಗತ್ತಿಗೆ ಪರಿಚಯವಾದ ಪರಿ.
ವಿಶ್ವೇಶ್ವರ ಭಟ್ ಎಂಬ ವ್ಯಕ್ತಿತ್ವವೇ ಹಾಗೆ. ಸ್ವಲ್ಪ ಕಂಡರೂ ಅದನ್ನು ಮಹತ್ತಾಗಿಸಬೇಕೆಂಬ ಮಹದಾಸೆ. ಅ… ಎಂದವನ ಬಾಯಲ್ಲಿ ಅಮರಕೋಶ ಹೇಳಿಸುವ ಒತ್ತಾಸೆ. ನನ್ನ ಮಾತಿನ ಬಂಡವಾಳವನ್ನೇ ಇನ್ವೆ ಮಾಡಿದರು. ತಾವೂ ಜತೆಯಾಗಿ ನಿಂತರು ರೇಡಿಯೊ ಜಾಕಿ ‘ರೂಪ’ಸಿಯನ್ನೂ ಹುಡುಕಿ ತಂದರು. ಅನುಭವ ಮಂಟಪದ ಅರಿವಿನ ಒಡ್ಡೊಲಗವನ್ನೇ ನಿರ್ಮಿಸಿದರು.
ಕಂಡುಕೇಳರಿಯದಿದ್ದ ಅದ್ಯಾವುದೋ ಕ್ಲಬ್‌ಹೌಸ್ ನ್ನು ನಿಮ್ಮೆಲ್ಲರ ಮನೆ-ಮನ ಮುಟ್ಟುವಂತೆ ಪರಿಕಲ್ಪನೆ ಹೆಣೆದರು. ಅತಿರಥ ಮಹಾರಥರು ವಿಶ್ವವಾಣಿ ಕ್ಲಬ್‌ಹೌಸ್‌ನ ಅನುಭವ ಮಂಟಪದ ಅರಿವಿನ ವೇದಿಕೆಯಲ್ಲಿ ಮಾತಿನ ಮೋಡಿಯನ್ನೇ ಸೃಷ್ಟಿಸುವಂತೆ ಮಗ ದೊಂದು ಆಕಾಶವಾಣಿಯನ್ನೇ ಹುಟ್ಟು ಹಾಕಿದರು ಭಟ್ಟರು. ಉಪನ್ಯಾಸ, ಹರಟೆ, ಗಾನಯಾನ… ಹೀಗೆ ಒಂದೊಂದೂ,
ಮತ್ತೊಂದನ್ನು ನಿವಾಳಿಸು ವಂತಹ ಕಾರ‍್ಯಕ್ರಮಗಳು ಪ್ರಸಾರಗೊಂಡವು.
ನಾಡಿನ ನೆಲದಲ್ಲಷ್ಟೇ ಅಲ್ಲ, ಸಾಗರದಾಚೆಯ ದೇಶಗಳಲ್ಲೂ ವಿಶ್ವವಾಣಿ ಕ್ಲಬ್‌ಹೌಸ್ ಪ್ರತಿಧ್ವನಿಸಿತು. ಭಾನುವಾರ ಹೊರತು ಪಡಿಸಿ ಪ್ರತಿದಿನವೂ ಸಂಜೆ ೭ ಗಂಟೆಯಾದರೇ ಸಾಕು, ಆಕಾಶವಾಣಿಯ ವಾರ್ತೆಗಳಿಗೆ ಕಿವಿಯಾಗುವಂತೆ ಶ್ರೋತೃಗಳು ಅರಿವಿನ ವೇದಿಕೆಯಲ್ಲಿ ಹಾಜರಾಗುತ್ತಾರೆ. ಪರಿಚಿತರ ಡಿಪಿ ನೋಡುವುದೇ ಸಂಭ್ರಮ. ೨೦೦ ರಿಂದ ೩೦೦ ಮಂದಿ ಖಾಯಂ ಕೇಳುಗರು ಕ್ಲಬ್‌ಹೌಸ್‌ನ ಬೆನ್ನೆಲುಬು.
ಹಾಗಾಗಿಯೇ ಸರಿಸುಮಾರು ೫೮ ಸಾವಿರ ಅನುಯಾಯಿಗಳನ್ನು ಹೊಂದಿರುವ ಕನ್ನಡದ ವಿಶ್ವವಾಣಿ ಕ್ಲಬ್‌ಹೌಸ್ ಜಾಗತಿಕ ದಾಖಲೆ ನಿರ್ಮಿಸಿದೆ. ಸುಮಾರು ೩೮೦ಕ್ಕೂ ಹೆಚ್ಚು ಉಪನ್ಯಾಸ ಕಾರ‍್ಯಕ್ರಮಗಳು, ಜಗದಗಲ ಸುಮಾರು ೩೦೦ಕ್ಕೂ ಹೆಚ್ಚು
ವಾಗ್ಮಿಗಳು, ಕಲಾವಿದರು, ಸಾಧಕರು ಅನುಭವ ಮಂಟಪಕ್ಕೆ ಬಂದು ಹೋಗಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ‍್ಯಕ್ರಮ ದಂದು ಕ್ಲಬ್‌ಹೌಸ್, ತುಂಬಿ ತುಳುಕಿದ ಶ್ರೋತೃಗಳ ಒತ್ತಡದಿಂದಾಗಿ ಪ್ರತ್ಯೇಕ ಕೋಣೆಗಳನ್ನೇ ತೆರೆದದ್ದು ಕ್ಲಬ್‌ಹೌಸ್ ನಲ್ಲೇ ಒಂದು ದಾಖಲೆ.
ಸುಧಾ ನಾರಾಯಣ ಮೂರ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಸೇರಿದಂತೆ ಹಲವಾರು ಗಣ್ಯರು, ಅನುಭವ ಮಂಟಪಕ್ಕೆ ಕಳೆ ತಂದರು. ಇಂತಹ ಸಾಹಸಗಳು ನಾನು ಅಭಿಮಾನಿಸುವ ವಿಶ್ವೇಶ್ವರ ಭಟ್ ಎಂಬ ಅಪರೂಪದ ವ್ಯಕ್ತಿಗಳಿಂದ ಮಾತ್ರವೇ ಸಾಧ್ಯ. ತನ್ನಂತೆ ಇತರರೂ ಸಂಭ್ರಮಿಸ
ಬೇಕೆಂಬ ನಿಸ್ಪೃಹ ಮನಸ್ಸು ಭಟ್ಟರದು. ಅವರಿಗೊಂದು ನಮಸ್ಕಾರ. ಒಂದು ವರ್ಷದ ಅವಧಿಯಲ್ಲಿ. ಅದೆಷ್ಟೋ ಮಮತೆಯ ಕರೆಗಳು, ಸಾಕಷ್ಟು ಆಪ್ತ ಭೇಟಿಗಳು, ರಸ್ತೆಯ ಸಮಾರಂಭದ ಸಿಕ್ಕಾಗ ಸೆಲ್ಫಿಗಾಗಿ ಬಂದು ಪಕ್ಕ ನಿಲ್ಲುವ ಆತ್ಮೀಯರು, ದಿನವೂ
ಅದೆಂತಹ ಸಡಗರ…. ಹೀಗೆ ಜೀವನ ಖುಷಿ ಕೊಟ್ಟಿದೆ.
ನಾಡು, ದೇಶ-ವಿದೇಶಗಳ ಅದೆಷ್ಟು ಮಂದಿ ಹತ್ತಿರವಾಗಿದ್ದೀರಿ! ಜಗತ್ತೇ ನೆರೆಮನೆಯಂತೆ ಭಾಸವಾಗಿದೆ. ಮನಸ್ಸು ಮುದ ಗೊಂಡಿದೆ. ವರ್ಷ ತುಂಬಿದ ವಿಶ್ವವಾಣಿ ಕ್ಲಬ್‌ಹೌಸ್‌ನ ವರ್ಷದ ಸಂಭ್ರಮಾಚರಣೆ ನಿಮ್ಮೊಂದಿಗೆ, ಇಂದು ಸಂಜೆ ೫ಕ್ಕೆ
ಬೆಂಗ ಳೂರಿನ ರಿಚ್‌ಮಂಡ್ ರಸ್ತೆಯ ರಮಣಶ್ರೀ ಹೋಟೆಲ್ ಆವರಣದಲ್ಲಿ. ಕ್ಯಾಪ್ಟನ್ ವಿಶ್ವೇಶ್ವರ ಭಟ್ ಅವರೊಂದಿಗೆ ರೂಪಾ ಗುರುರಾಜ್ ಮತ್ತು ನಾನು ನಿಮಗಾಗಿ ಕಾಯುತ್ತಿರುತ್ತೇವೆ.