Sunday, 15th December 2024

Best Friend : ಬಾಯ್‌ಫ್ರೆಂಡ್‌ ಮೋಸ ಮಾಡುತ್ತಿದ್ದಾನೆ ಎಂಬುದನ್ನುತಿಳಿದುಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್‌ ಟ್ರಿಕ್ಸ್‌

Best Friend

ಬೆಂಗಳೂರು : ನಮ್ಮ ಕುಟುಂಬದವರನ್ನ ಹೊರತುಪಡಿಸಿದರೆ ನಮ್ಮ ಮನಸ್ಸಿನ  ಭಾವನೆಗಳಿಗೆ ಸ್ಪಂದಿಸುವವರನ್ನು ನಮ್ಮ ಸ್ನೇಹಿತರು ಎಂದು ಭಾವಿಸುತ್ತೇವೆ. ಆದರೆ ಇಂದಿನ ಕಾಲದಲ್ಲಿ ನಿಜವಾದ ಸ್ನೇಹಿತನನ್ನು (Best Friend) ಹುಡುಕುವುದು ತುಂಬಾ ಕಷ್ಟದ ಕೆಲಸ. ನಮ್ಮ ಹಿತೈಷಿಗಳು ಎಂದು  ನಮ್ಮ ಮುಂದೆ ಹೇಳುವ ಅನೇಕ ಸ್ನೇಹಿತರು ನಮ್ಮ ಬೆನ್ನ ಹಿಂದೆ ನಮಗೆ ಕೆಟ್ಟದ್ದನ್ನು ಮಾಡುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಸ್ನೇಹ, ಪ್ರೀತಿ ನಿಜವೇ ಅಥವಾ ನಕಲಿಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಅಂತಹ ಸ್ನೇಹಿತನನ್ನು ಗುರುತಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

Best Friend

ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ: ನಿಮ್ಮ ಬಾಯ್‌ಫ್ರೆಂಡ್‌ “ನಿನ್ನೊಂದಿಗೆ ಸದಾ ಇರುತ್ತೇನೆ,” ಎಂದು ಪದೇ ಪದೇ ಹೇಳುತ್ತಿರುತ್ತಾನೆ ಎಂದರೆ ನಂಬಬೇಡಿ. ಅಗತ್ಯವಿದ್ದಾಗ ಅವನು ಎಂದಿಗೂ ನಿಮ್ಮ ಪರವಾಗಿ ನಿಲ್ಲುವುದಿಲ್ಲ. ಅಂತವನನ್ನು  ನಿಮ್ಮ ನಕಲಿ ಬಾಯ್‌ಫ್ರೆಂಡ್‌ ಎಂದು ಅರ್ಥಮಾಡಿಕೊಳ್ಳಿ.

ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ: ನಿಮ್ಮನ್ನು ಭೇಟಿ ಮಾಡಲು ಕಾತರದಿಂದ ಕಾಯುತ್ತಿರುವವನು ನಿಮ್ಮ ನಿಜವಾದ ಸ್ನೇಹಿತ. ಅವನು ಎಷ್ಟೇ ಬ್ಯುಸಿ ಇದ್ದರೂ ನಿಮಗೋಸ್ಕರ ಬಿಡುವು ಮಾಡಿಕೊಂಡು ಭೇಟಿ ಮಾಡಿಯೇ ಮಾಡುತ್ತಾನೆ. ನಿಮ್ಮನ್ನು ಭೇಟಿಯಾಗಲು ಇಷ್ಟವಿಲ್ಲದವನು ತಾನು ಕೆಲಸದಲ್ಲಿ ಬ್ಯುಸಿ ಎಂದು ಪದೇ ಪದೇ ಹೇಳುತ್ತಿರುತ್ತಾನೆ. ಅವನು ನಿಮ್ಮ ನಿಜವಾದ ಸ್ನೇಹಿತನಲ್ಲ ಎಂಬುದನ್ನು ಆ ಮೂಲಕ ತಿಳಿದುಕೊಳ್ಳಬಹುದು.

Best Friend

ನೀವು ನನ್ನನ್ನು ನಂಬಬಹುದು:  ನೀವು ನಿಮ್ಮ ನಿಜವಾದ ಸ್ನೇಹಿತನನ್ನು ಕುರುಡಾಗಿ ನಂಬಬಹುದು. ಆದರೆ ತನ್ನನ್ನು ನಂಬು ಎಂದು ಆಗಾತ ಪದೇ ಹೇಳುವ ಸ್ನೇಹಿತನನ್ನು ಕುರುಡಾಗಿ ನಂಬಬೇಡಿ. ಅವನು ನಿಮಗೆ ಒಂದು ದಿನ ಮೋಸ ಮಾಡಬಹುದು.

ಭಾವನೆಗಳಿಗೆ ಪ್ರತಿಕ್ರಿಯಿಸುವವರು: ನಿಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಕೇಳುವಾತ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತಾನೆ. ನೀವು ದುಃಖದಲ್ಲಿದ್ದಾಗ ಆತ ದುಃಖಗೊಂಡರೆ ಅವನು ನಿಮ್ಮ ನಿಜವಾದ ಬಾಯ್‌ಫ್ರೆಂಡ್‌. ಆದರೆ ನಿಮಗೆ  ಕೆಟ್ಟದ್ದಾದಾಗ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವವನು ನಿಮ್ಮ ನಿಜವಾದ ಸ್ನೇಹಿತ ಆಗಿರಲಾರ.

ಇದನ್ನೂ ಓದಿ: ಕಣ್ಣುಗಳ ಕೆಳಗಿನ ಡಾರ್ಕ್‌ ಸರ್ಕಲ್‌ಗೆ ನಿಮ್ಮ ಅಡುಗೆ ಮನೆಯಲ್ಲೇ ಇದೆ ಪರಿಹಾರ

ನಿಮ್ಮ ಹಿಂದಿನ ಯಾವುದೇ ಒಳ್ಳೆಯ ಕ್ಷಣಗಳನ್ನು ನೆನಪಿಸುತ್ತಿದ್ದರೆ ಆತ ನಿಜವಾದ ಬಾಯ್‌ಫ್ರೆಂಡ್. ನಿಮ್ಮ ಹಳೆಯ ತಪ್ಪು ಅಥವಾ ಕೆಟ್ಟ ಕ್ಷಣವನ್ನು ಪದೇ ಪದೇ ನೆನಪಿಸುತ್ತಿದ್ದರೆ, ಅವನು ನಿಮ್ಮ ಸ್ನೇಹಿತನಲ್ಲ. ಅಂತಹ ಜನರಿಂದ ದೂರವಿರಲು ಪ್ರಯತ್ನಿಸಿ.