Sunday, 24th November 2024

Dream chaser: ಎಂಬಿಬಿಎಸ್ ಕನಸು ನನಸಾಗಿಸಲು 64ನೇ ವರ್ಷಕ್ಕೆ ನೀಟ್ ಪರೀಕ್ಷೆ ಪಾಸಾದ ಎಸ್‍ಬಿಐ ಉದ್ಯೋಗಿ

Dream chaser

ಬೆಂಗಳೂರು : ಪ್ರತಿಯೊಬ್ಬರಿಗೆ ತಾವು ಓದು ಮುಗಿಸಿದ ಮೇಲೆ ಡಾಕ್ಟರ್, ಎಂಜಿನಿಯರ್, ಟೀಚರ್ ಆಗಬೇಕು ಎಂಬ ಆಸೆಗಳಿರುತ್ತದೆ. ಆದರೆ ತಮ್ಮಲ್ಲಿ ಹಣವಿರದ ಕಾರಣ ಜೀವನ ನಡೆಸಲು ಸಿಕ್ಕಿದ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಿಂದ ಅವರ ಕನಸು(Dream chaser) ನುಚ್ಚು ನೂರಾಗುತ್ತದೆ.  ಆದರೆ ಕೆಲಸ ಮಾಡುವಾಗ ಮತ್ತೆ ಓದುವುದು ಅಸಾಧ್ಯವಾದ ಮಾತು ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಶಿಕ್ಷಣವನ್ನು ಮುಂದುವರಿಸಿ ಯಶಸ್ಸನ್ನು ಸಾಧಿಸಿ ತಮ್ಮ ಕನಸನ್ನು ನನಸಾಗಿಸಲು ಹೊರಟಿದ್ದಾರೆ.

ಒಡಿಶಾ ಮೂಲದ 64 ವರ್ಷ ವಯಸ್ಸಿನ ಜಯ್ ಕಿಶೋರ್ ಪ್ರಧಾನ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಡೆಪ್ಯೂಟಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಅವರು ವಿದ್ಯಾರ್ಥಿಯಾಗಿದ್ದಾಗ ಡಾಕ್ಟರ್ ಆಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಆರ್ಥಿಕ ಸಮಸ್ಯೆ ಇದ್ದ ಕಾರಣ ಅವರು ತಮ್ಮ ಕನಸನ್ನು ತ್ಯಾಗ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಈಗ ನಿವೃತ್ತಿಯ ನಂತರ ಅವರು ತಾವು ಡಾಕ್ಟರ್ ಆಗಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ಹಾಗಾಗಿ ಅವರು ತಮ್ಮ ಕುಟುಂಬದ ಜವಾಬ್ದಾರಿಗಳ ನಡುವೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅದಕ್ಕಾಗಿ ಅವರು ನೀಟ್‍ಗೆ ಸಂಬಂಧಿಸಿದ ಪಾಠಗಳನ್ನು ಕಲಿಯಲು ಆನ್‌ಲೈನ್‌ ಕೋಚಿಂಗ್ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಅವುಗಳನ್ನು ನಿಭಾಯಿಸಿಕೊಂಡು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ:ಸಿರಿವಂತರಾಗಿದ್ದರೂ ರತನ್ ಟಾಟಾ ಧರಿಸುತ್ತಿದ್ದ ವಾಚ್‌ ಯಾವುದು ನೋಡಿ!

ಅವರ ಈ ಛಲ 2020 ರಲ್ಲಿ, ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಿದೆ. ಅವರು ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ (ವಿಐಎಂಎಸ್‍ಎಆರ್) ನಲ್ಲಿ ಸೀಟು ಪಡೆದುಕೊಂಡಿದ್ದಾರೆ. ನಿವೃತ್ತಿ ವಯಸ್ಸಿನಲ್ಲಿ ವಿಶ್ರಾಂತಿ ಪಡೆಯುವುದನ್ನು ಬಿಟ್ಟು ತಮ್ಮ ಗುರಿಯತ್ತ ಸಾಗಲು ಛಲ ತೊಟ್ಟು ನಿಂತ ಪ್ರಧಾನ್ ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಜೀವನದಲ್ಲಿ ಛಲವೊಂದಿದ್ದರೆ ಎಂತಹ ಕಷ್ಟದ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಗುರಿ ಸಾಧಿಸಬಹುದು ಎಂಬುದನ್ನು ಪ್ರಧಾನ್ ಅವರು ತೋರಿಸಿಕೊಟ್ಟಿದ್ದಾರೆ.