ನವದೆಹಲಿ: ಲೈಂಗಿಕ ಬಯಕೆಗಳು ವೈಯಕ್ತಿಕ ವಿಚಾರ ಮತ್ತು ಉತ್ತಮ ಸ್ವಾಸ್ಥ್ಯಕ್ಕಾಗಿ ಅಗತ್ಯವೂ ಹೌದು. ಅದನ್ನು ತೀರಿಸಿಕೊಳ್ಳವುದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಆದರೆ, ಒಂದೇ ಸಂಗಾತಿಯ ಜತೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು ಸೂಕ್ತ ಆಯ್ಕೆ. ಇದು ಆರೋಗ್ಯ ಕಾಳಜಿಯ ಸಲಹೆ. ಆದರೆ, ಒತ್ತಡ ಹಾಗೂ ಜಂಜಾಟದ ಬದುಕಿನ ನಡುವೆ ಸಂಗಾತಿಗಳು ಆಪ್ಯಾಯಮಾನ ಸಂಬಂಧ ಇಟ್ಟುಕೊಳ್ಳುವುದಕ್ಕೆ ಇತ್ತೀಚಿನ ದಿನಗಳಲ್ಲಿ ಆಗುತ್ತಿಲ್ಲ. ಪುರುಷರು ಈ ವಿಚಾರದಲ್ಲಿ ಅನ್ಯ ಮಾರ್ಗವನ್ನು ಹುಡುಕಿಕೊಂಂಡರೂ ಮಹಿಳೆಯರಿಗೆ ಆಯ್ಕೆಗಳು ಕಡಿಮೆ. ಹೀಗಾಗಿ ಲೈಂಗಿಕ ಬಯಕೆಗಳು ತನುವಿನ ಬೆಂಕಿಯಾಗಿಯೇ ಉಳಿಯುತ್ತದೆ. ಹೀಗಾಗಿ ಸ್ತ್ರೀಯರು ತಮ್ಮ ಲೈಂಗಿಕ ಬಯಕೆಗಳ ಈಡೇರಿಕೆಗಾಗಿ ಸಮರ್ಪಕ ಮಾರ್ಗವನ್ನು ಹುಡುಕುತ್ತಿದ್ದಾರೆ. ಈ ಪರಿವರ್ತನೆಯ ಸಮಯದಲ್ಲಿ ಪುರುಷರಿಗಿಂತ ಹೆಚ್ಚಾಗಿ ರೊಬೊಟ್‌ಗಳನ್ನು ಮಹಿಳೆಯರು ಇಷ್ಟಪಡಲು ಆರಂಭಿಸಿದ್ದಾರೆ ಎಂಬುದಾಗಿ ಅಧ್ಯಯನ ವರದಿಯೊಂದು ಹೇಳಿದೆ. ಇದು ಬೆಳೆಯುತ್ತಾ ಹೋಗಿ ಮುಂದಿನ 10 ವರ್ಷಗಳಲ್ಲಿ ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಯಂತ್ರ ಮಾನವನನ್ನೇ ಆಶ್ರಯಿಸಲಿದ್ದಾರೆ ಎಂದು ಆ ವರದಿಯಲ್ಲಿ (Human Research ) ಉಲ್ಲೇಖಿಸಲಾಗಿದೆ. 2025 ರ ವೇಳೆಗೆ ಶ್ರೀಮಂತ ಕುಟುಂಬದವರು ಲೈಂಗಿಕತೆಗಾಗಿ ರೋಬೋಟ್‍ಗಳನ್ನು ತಮ್ಮ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ ಎಂಬುದೇ ಈ ಅಧ್ಯಯನದ ಸಾರ.
ಮುಂದಿನ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ರೋಬೋಟ್‍ಗಳನ್ನು ಪ್ರೀತಿಸಲು ಶುರುಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಅನೇಕರು ಅವರ ಈ ಮಾತನ್ನು ತಳ್ಳಿಹಾಕಿದರೂ, ಕೂಡ ಜನರು ಲೈಂಗಿಕತೆಯ ಬಗ್ಗೆ ತೋರುತ್ತಿರುವ ಆಸಕ್ತಿ, ಲೈಂಗಿಕ ಆಟಿಕೆಗಳು, ಸೆಕ್ಸ್ ಡಾಲ್‍ಗಳನ್ನು ಅತಿ ಹೆಚ್ಚು ಬಳಸುತ್ತಿರುವುದು ಹಾಗೂ ಇವುಗಳನ್ನು ತಯಾರಿಸುವ ಉದ್ಯಮಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಅವರ ಭವಿಷ್ಯವಾಣಿ ನಿಜವಾಗಬಹುದು ಎನ್ನಲಾಗಿದೆ.
ಈಗೀಗ ಜನರ ವರ್ತನೆಯನ್ನು ನೋಡಿದರೆ ಈ ಸಮಯ ಬಹಳ ಬೇಗನೆ ಬರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಲೈಂಗಿಕ ಆಟಿಕೆಗಳನ್ನು ಬಳಸುವುದು ಮತ್ತು ವೆಬ್‍ಸೈಟ್‍ಗಳಲ್ಲಿ ಅಶ್ಲೀಲತೆಯ ವಿಡಿಯೊಗಳನ್ನು ನೋಡುವುದನ್ನು ಗಮನಿಸಿದರೆ ರೋಬೋಟ್‌ಗಳ ಜೊತೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳಲು ಮಹಿಳೆಯರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ 2050 ರ ವೇಳೆಗೆ ರೋಬೋಟ್‌ಗಳ ಜೊತೆಗಿನ ಲೈಂಗಿಕತೆಯು ಸಾಮಾನ್ಯ ಲೈಂಗಿಕತೆಗಿಂತ ಹೆಚ್ಚಾಗಿರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ದಿ ರೈಸ್ ಆಫ್ ದಿ ರೋಬೋಸೆಕ್ಷುಯಲ್ಸ್ ಎಂಬ ಶೀರ್ಷಿಕೆಯ ಪತ್ರಿಕೆಯು 2030ರ ವೇಳೆಗೆ ವರ್ಚುವಲ್ ರಿಯಾಲಿಟಿ ಸೆಕ್ಸ್ ಸಾಮಾನ್ಯವಾಗಲಿದೆ ಎಂದು ಊಹಿಸಿದೆ. 2035ರ ವೇಳೆಗೆ ಲೈಂಗಿಕ ಆಟಿಕೆಗಳು ವರ್ಚುವಲ್ ರಿಯಾಲಿಟಿ ಸೆಕ್ಸ್‌ಗೆ ಲಿಂಕ್ ಆಗುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನುಸ್ಸೆರ್ವಾನ್ಜಿಯಿಂದ ಹಿಡಿದು ಮಾಯಾ ಟಾಟಾವರೆಗೆ… ರತನ್ ಟಾಟಾ ವಂಶವೃಕ್ಷದ ಬಗ್ಗೆ ಇಲ್ಲಿದೆ ಮಾಹಿತಿ
ಸೆಕ್ಸ್ ರೋಬೋಟ್‍ಗಳನ್ನು ಬಳಸುವುದರಿಂದ ಭಾವನಾತ್ಮಕ ಅಡೆತಡೆಗಳನ್ನು ಇದು ಇನ್ನಷ್ಟು ಕಡಿಮೆ ಮಾಡುತ್ತದೆ, ಜನರ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ಜನರು ತಮ್ಮ ಜೀವನದಿಂದ ಇನ್ನೂ ಹೆಚ್ಚಿನದನ್ನು ಪಡೆಯುತ್ತಾರೆ ಮತ್ತು ಲೈಂಗಿಕ ಅಪರಾಧಗಳು ಕಡಿಮೆಯಾಗುತ್ತದೆ” ಎಂದು ತಜ್ಞರು ತಿಳಿಸಿದ್ದಾರೆ.