Monday, 18th November 2024

Marriage Rituals : ನವವಧು ಕಾಲಿನ ಮೂಲಕವೇ ಪತಿಗೆ ಆಹಾರ ತಿನ್ನಿಸುವುದು ಇಲ್ಲಿನ ಸಂಪ್ರದಾಯ; ಎಲ್ಲಿ ಇದು?

Marriage Rituals

ಮದುವೆ ಅಥವಾ ಹಬ್ಬವಾಗಿರಲಿ, ಪ್ರತಿಯೊಂದು ಜಾತಿ, ಬುಡಕಟ್ಟುಗಳು ತನ್ನದೇ ಆದ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಹೊಂದಿರುತ್ತವೆ. ಅದರಲ್ಲಿ ಕೆಲವೊಂದು ಆಚರಣೆಗಳ ಬಗ್ಗೆ ಕೇಳಿದರೆ ಆಶ್ವರ್ಯವಾಗುತ್ತದೆ. ನಮ್ಮ ದೇಶದಲ್ಲಿ ಅನೇಕ ಜಾತಿಗಳು, ಬುಡಕಟ್ಟುಗಳಿವೆ. ಇವುಗಳಲ್ಲಿ ಒಂದು ಥಾರು ಬುಡಕಟ್ಟು. ಇದು ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ನೇಪಾಳ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಮದುವೆ (Marriage Rituals) ನಂತರ ಆಚರಿಸುವ ಇವರ ಒಂದು ವಿಚಿತ್ರ ಸಂಪ್ರದಾಯ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

Marriage Rituals

ಏನಿದು ಚಲಾ?
ಸಾಮಾನ್ಯವಾಗಿ ಮದುವೆಯಾದ ನವವಧು ಅತ್ತೆ ಮನೆಯಲ್ಲಿ ಅಡುಗೆ ಮಾಡಿ ಎಲ್ಲರಿಗೂ ಬಡಿಸುವ ಸಂಪ್ರದಾಯ ಹಲವೆಡೆ ಇದೆ. ಆದರೆ ಥಾರು ಬುಡಕಟ್ಟು ಜನಾಂಗದಲ್ಲಿ ನವ ವಧು ಮೊದಲ ಬಾರಿಗೆ ತನ್ನ ಅತ್ತೆ ಮನೆಯಲ್ಲಿ  ಅಡುಗೆ ಮಾಡಿ ಅದನ್ನು ತನ್ನ ಪತಿಗೆ ತಿನ್ನಲು ನೀಡಬೇಕು. ಆದರೆ ಆಕೆ ತನ್ನ ಪತಿಗೆ ಕೈಯಲ್ಲಿ ಅಲ್ಲ ಕಾಲಿನಲ್ಲಿ ಊಟವನ್ನು ತಂದು ನೀಡಬೇಕು. ಇಲ್ಲಿ ವಧು ತಟ್ಟೆಯನ್ನು ತನ್ನ ಕಾಲುಗಳಿಂದ ಜಾರಿಸಿ ತಂದು ತನ್ನ ಗಂಡನಿಗೆ ನೀಡುತ್ತಾಳೆ. ವರನು ಈ ಆಚರಣೆಯ ಪ್ರಕಾರ ಆ ಊಟವನ್ನು ತಲೆಗೆ ಒತ್ತಿಕೊಂಡು ನಂತರ ಪ್ರೀತಿಯಿಂದ ತಿನ್ನುತ್ತಾನೆ. ಇದರರ್ಥ ಇಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಉನ್ನತ ಸ್ಥಾನಮಾನವಿದೆ ಎಂದು ಹೇಳಲಾಗುತ್ತದೆ. ಈ ಆಚರಣೆಯನ್ನು ‘ಅಪ್ನಾ ಪರಯ’ ಎಂದು ಕರೆಯಲಾಗುತ್ತದೆ. ಹಾಗೇ ಥಾರು ಸಮುದಾಯದಲ್ಲಿ, ಮದುವೆಯ ನಂತರ ನಡೆಯುವ ಆಚರಣೆಗಳನ್ನು ‘ಚಲಾ’ ಎಂದು ಕರೆಯಲಾಗುತ್ತದೆ.

Marriage Rituals

ಇದನ್ನೂ ಓದಿ:ರಾಜಸ್ಥಾನದ ಈ ಗ್ರಾಮದ ಜನ ರಾತ್ರಿಯೂ ಮನೆಯ ಬಾಗಿಲು ಹಾಕುವುದಿಲ್ಲ!

ಚಂಪಾರಣ್ (ಬಿಹಾರ), ನೈನಿತಾಲ್, ಉಧಮ್ ಸಿಂಗ್ ನಗರ (ಉತ್ತರಾಖಂಡ್), ಲಖಿಂಪುರ್ ಖೇರಿ (ಉತ್ತರ ಪ್ರದೇಶ) ಥಾರು ಬುಡಕಟ್ಟು ಜನಾಂಗದವರು ಹೆಚ್ಚು ಜನಸಂಖ್ಯೆಯಲ್ಲಿರುವ  ಪ್ರದೇಶಗಳಾಗಿವೆ. ಇದಲ್ಲದೆ, ಈ ಬುಡಕಟ್ಟು ಜನಾಂಗದ ಜನರು ನೇಪಾಳದ ಒಟ್ಟು ಜನಸಂಖ್ಯೆಯ 6-7 ಪ್ರತಿಶತದಷ್ಟಿದ್ದಾರೆ. ಈ ಬುಡಕಟ್ಟು ಉತ್ತರಾಖಂಡದ ಕುಮಾವೂನ್ ಪ್ರದೇಶದ ಅನೇಕ ಹಳ್ಳಿಗಳಲ್ಲಿ ವಾಸಿಸುತ್ತಿದೆ. ಈ ಜನರು ಕಾಡುಗಳು, ಪರ್ವತಗಳು, ನದಿಗಳ ಪ್ರದೇಶದಲ್ಲಿ ವಾಸಿಸುತ್ತಾರೆ. ‘ಥಾರು’ ಎಂಬ ಪದದ ಮೂಲವು ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ವಾಸಿಸುವ ಜನರಿಂದ ಬಂದಿದೆ ಎಂದು ಹೇಳಲಾಗುತ್ತದೆ.