Tuesday, 19th November 2024

Tiger Johnny: ಸಂಗಾತಿಯನ್ನರಸಿ ಬರೋಬ್ಬರಿ 300 ಕಿ.ಮೀ ಪ್ರಯಾಣಿಸಿದ ಟೈಗರ್ ‘ಜಾನಿ’! ವಿಡಿಯೊ ಇದೆ

Tiger Johnny

ಮುಂಬೈ: ಜಾನಿ(Tiger Johnny) ಎಂಬ ಗಂಡು ಹುಲಿ ಮಹಾರಾಷ್ಟ್ರದ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ ತೆಲಂಗಾಣಕ್ಕೆ 300 ಕಿ.ಮೀ ದೂರ ಪ್ರಯಾಣಿಸಿದೆ ಎಂದು ವರದಿಯಾಗಿದೆ. ರೇಡಿಯೋ ಕಾಲರ್ ಮೂಲಕ ಹುಲಿಯ ಪ್ರಯಾಣವನ್ನು ಪತ್ತೆಹಚ್ಚಲಾಗಿದ್ದು, ಅದು ಆದಿಲಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳ ಮೂಲಕ ಪ್ರಯಾಣಿಸುತ್ತಾ ಕಾಡು ಮತ್ತು ಹೊಲಗಳನ್ನು ದಾಟಿಹೋಗಿದೆಯಂತೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಿನ್ವತ್ ತಾಲ್ಲೂಕಿನಿಂದ ಅಕ್ಟೋಬರ್ ಮೂರನೇ ವಾರದಲ್ಲಿ ಆರರಿಂದ ಎಂಟು ವರ್ಷದ ಜಾನಿ ಎಂಬ ಹುಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆಯಂತೆ. ನಿರ್ಮಲ್ ಜಿಲ್ಲೆಯ ಕುಂತಲ, ಸಾರಂಗಪುರ, ಮಮಡಾ ಮತ್ತು ಪೆಂಬಿ ಮಂಡಲಗಳು ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ಪ್ರಯಾಣಿಸುವಾಗ ಮೊದಲು ಅದನ್ನು ಅರಣ್ಯ ಅಧಿಕಾರಿಗಳು ಆದಿಲಾಬಾದ್‍ನ ಬೋತ್ ಮಂಡಲದ ಕಾಡುಗಳಲ್ಲಿ ಗುರುತಿಸಿದ್ದಾರೆ.  ನಂತರ ಹುಲಿ ಹೈದರಾಬಾದ್-ನಾಗ್ಪುರ ಎನ್ಎಚ್ -44 ಹೆದ್ದಾರಿಯನ್ನು ದಾಟಿ ಪ್ರಸ್ತುತ ತಿರ್ಯಾನಿ ಪ್ರದೇಶದ ಕಡೆಗೆ ಹೋಗಿದೆಯಂತೆ.

ಆದಿಲಾಬಾದ್ ಜಿಲ್ಲಾ ಅರಣ್ಯ ಅಧಿಕಾರಿ ಪ್ರಶಾಂತ್ ಬಾಜಿರಾವ್ ಪಾಟೀಲ್, ಚಳಿಗಾಲದಲ್ಲಿ ಸಂಗಾತಿಗಳನ್ನು ಹುಡುಕುವುದು ಗಂಡು ಹುಲಿಗಳ ನೈಸರ್ಗಿಕ ಪ್ರವೃತ್ತಿಯಾಗಿದೆ. ಹಾಗಾಗಿ ಹುಲಿ ಜಾನಿ ಈ ರೀತಿ ಪ್ರಯಾಣ ಬೆಳೆಸಿದೆ. ಗಂಡು ಹುಲಿಗಳು ತಮ್ಮ ಪ್ರದೇಶದಲ್ಲಿ ಸಂಗಾತಿಯನ್ನು ಹುಡುಕಲು ಸಾಧ್ಯವಾಗದಿದ್ದಾಗ ದೀರ್ಘ ಪ್ರಯಾಣವನ್ನು ಕೈಗೊಳ್ಳುತ್ತವೆ” ಎಂದು ತಿಳಿಸಿದ್ದಾರೆ.

ಗಂಡು ಹುಲಿಗಳು ತಮ್ಮಿಂದ 100 ಕಿಲೋಮೀಟರ್‌ ದೂರದಲ್ಲಿದ್ದ ಹೆಣ್ಣು ಹುಲಿಗಳಿಂದ ಬಿಡುಗಡೆಯಾಗುವ ಪರಿಮಳದ ಮೂಲಕ ಅವುಗಳನ್ನು ಪತ್ತೆಹಚ್ಚುತ್ತವೆ. ಆದರೆ ಜಾನಿಯ ಪ್ರಯಾಣವು ಸಂಗಾತಿಗಾಗಿ ಅಲ್ಲ. ಏಕೆಂದರೆ ಅದು ಈ ಹಿಂದೆ ಬೇರೆ ರಾಜ್ಯಗಳಿಗೆ ಪ್ರಯಾಣಿಸುವಾಗ ಐದು ಪ್ರಾಣಿಗಳನ್ನು ಕೊಂದಿದೆ ಮತ್ತು ಹಸುಗಳನ್ನು ಬೇಟೆಯಾಡಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಅಬ್ಬಾ.. ಇದೆಂಥಾ ಅಚಾತುರ್ಯ! ಸಹಾಯಕ್ಕಾಗಿ 911ಗೆ ಕರೆ ಮಾಡಿದವನನ್ನೇ ಗುಂಡಿಕ್ಕಿ ಕೊಂದ ಪೊಲೀಸರು!

ಸಂಗಾತಿಗಳನ್ನು ಹುಡುಕುವ ಹುಲಿಗಳು ಜನರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.  ಆದರೆ ಜನರು ಹುಲಿಗೆ ಯಾವುದೇ ರೀತಿಯ ಹಾನಿಯುಂಟುಮಾಡದಂತೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಾನಿ ಹುಲಿ ಈಗ ಕಾವಲ್ ಹುಲಿ ಮೀಸಲು ಪ್ರದೇಶಕ್ಕೆ ಹೋಗಬಹುದು. ವಲಸೆ ಹೋಗುವ ಹೆಚ್ಚಿನ ಹುಲಿಗಳು ಆಗಾಗ್ಗೆ ಈ ಮೀಸಲು ಪ್ರದೇಶಕ್ಕೆ ಭೇಟಿ ನೀಡುತ್ತವೆ. ಆದರೆ 2022 ರಿಂದ ಯಾವುದೇ ಹುಲಿ ಅಲ್ಲಿ ಶಾಶ್ವತವಾಗಿ ನೆಲೆಸಿಲ್ಲ ಎನ್ನಲಾಗಿದೆ.