Saturday, 13th July 2024

ಜೀವನದಲ್ಲಿ ಮುಂದೆ ಬರೋಕೆ ಕಂಬಿ ಹಿಂದೆ ಹೋಗ್ಬೇಕು

ತುಂಟರಗಾಳಿ

ಸಿನಿಗನ್ನಡ

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅವರಿಗಿಂತ ಜಾಸ್ತಿ ಚರ್ಚೆ ಆಗ್ತಾ ಇರೋದು ಅವರ ಅಭಿಮಾನಿಗಳ ಬಗ್ಗೆ. ಮೂರೂ ಬಿಟ್ಟವರ ಹಾಗೆ ಕೊಲೆ ಆರೋಪಿ ಸ್ಥಾನದಲ್ಲಿರೋ ಒಬ್ಬ ಸಿನಿಮಾ ಹೀರೋನ ಮೆರೆಸುತ್ತಿರುವ ಮತ್ತು ಕೊಲೆ ಮಾಡಿದ್ದು ಸರಿ ಅನ್ನೋ ಮಟ್ಟಕ್ಕೆ ಸಮರ್ಥನೆ ಮಾಡಿಕೊಳ್ಳುತ್ತಿರುವ
ಇವರ ಪರಿ ನೋಡಿದ್ರೆ ಯಾರಿಗಾದ್ರೂ ಮೈ ಉರಿಯುತ್ತೆ.

ಅಂದ ಹಾಗೆ ದರ್ಶನ್ ಈ ಮಟ್ಟದ ದುರಹಂಕಾರ ಬೆಳೆಸಿಕೊಳ್ಳಲು ಅವರ ಈ ಹುಂಬ ಅಭಿಮಾನಿಗಳೇ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಈ ಸೋ ಕಾಲ್ಡ್ ಡಿಗ್ಯಾಂಗ್, ಸತ್ತವನ ಬಗ್ಗೆ ಕನಿಷ್ಠ ಎರಡು ಅನುಕಂಪದ ಮಾತನ್ನೂ ಆಡದೇ, ಇನ್ನೂ ದರ್ಪ ತೋರುತ್ತಿದ್ದಾರೆ. ತಮಗೆ ಸಂಬಂಧ
ಇಲ್ಲದ ಸಭೆ ಸಮಾರಂಭಗಳಿಗೆ ಹೋಗಿ, ಅಪ್ಪು ಅವರ ಸಮಾಧಿ ಬಳಿ ಹೋಗಿ ಜೈ ಡಿ ಬಾಸ್ ಅಂತ ಕೂಗೋ ಇವರ ವಿಕೃತಿ ಈಗ ಪೊಲೀಸ್ ಸ್ಟೇಷನ್ ಮುಂದೆ ನಡೆಯುತ್ತಿದೆ.

ಕೆಲವು ದುರಭಿಮಾನಿಗಳಂತೂ ದರ್ಶನ್ ಅವರಿಗೋಸ್ಕರ ಕೊಲೆನೂ ಮಾಡ್ತೀವಿ ಅಂತ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ಅವರ ಮೇಲೆ ಲಾಠಿ ಬೀಸಿದ್ದರೂ ಇಂಥವರ ಬಗ್ಗೆ ಅನ್ನಷ್ಟು ಉಗ್ರ ಕ್ರಮ ಅಗತ್ಯ ಅನ್ನೋದು ಸತ್ಯ. ಕೊಲೆ ಆರೋಪಿ ಒಬ್ಬನನ್ನು ಸಮರ್ಥಿಸಿ ಜೈಕಾರ ಕೂಗುವವರಿಗೆ ಪೊಲೀಸ್
ಸ್ಟೇಷನ್‌ನಲ್ಲಿ ಖಾರದ ಪುಡಿ ರುಚಿ ತೋರಿಸುವ ಅಗತ್ಯ ಇದೆ. ಅಲ್ಲದೆ ಓಪನ್ ಆಗಿ ಕ್ಯಾಮೆರಾ ಮಂದೆ ದರ್ಶನ್‌ಗಾಗಿ ಕೊಲೆನೂ ಮಾಡ್ತೀನಿ ಅಂದವನದು ಕಾನೂನು ಪ್ರಕಾರ ಅಪರಾಧವೇ ಆಗತ್ತೆ. ಅಂಥವರನ್ನು ಕಾರ್ಪೋರೇಷನ್ ನಾಯಿಗಳಂತೆ ಹಿಡಿದು ತಂದು ಸರಿಯಾದ ಟ್ರೀಟ್ ಮೆಂಟ್ ಕೊಡೋ ಅಗತ್ಯ ಖಂಡಿತಾ ಇದೆ.

ಲೂಸ್ ಟಾಕ್: ಪವಿತ್ರಾ ಗೌಡ

ಏನ್ ಪವಿತ್ರಾ ಅವರೇ, ಅಪವಿತ್ರ ಮೈತ್ರಿಯ ಫಲವಾಗಿ ಕೊನೆಗೂ ನೀವು ಜೈಲು ಪಾಲಾಗಿಬಿಟ್ರಲ್ಲ?

-ಅವ್ರೂ ಬಂದಿದ್ದಾರೆ ಬಿಡಿ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು

ಆದ್ರೂ ಪವಿತ್ರಾ ಕಂಬಿ ಹಿಂದೆ ಅಪವಿತ್ರಾ ಅನ್ನೋ ಥರ ಆಗಿಬಿಡ್ತಲ್ಲ ನಿಮ್ ಜೀವನ?
-ಜೀವನದಲ್ಲಿ ಮುಂದೆ ಬರೋಕೆ ಒಂದ್ಸಲನಾದ್ರೂ ಕಂಬಿ ಹಿಂದೆ ಬರಬೇಕು ಅಂತ ಯಾರೋ ದೊಡ್ಡೋರು ಹೇಳಿದ್ರು. ಅದಕ್ಕೇ.

ಯಾರು, ನಿಮ್ಮ ದರ್ಶನ್ ಹೇಳಿದ್ರಾ?
-ಹಂಗೆ ನಿಮ್ಮ ದರ್ಶನ್ ಅನ್ಬೇಡ್ರೀ, ವಿಜಯಲಕ್ಷ್ಮಿ ಬಯ್ತಾರೆ.

ಓಹೋ, ಒಳಗೆ ಹೋದಮೇಲೆ ಸ್ವಲ್ಪ ಬುದ್ಧಿ ಬಂದ ಹಾಗಿದೆ. ಸರಿ, ಡಿಬಾಸ್ ಈ ಪರಿಸ್ಥಿತಿಗೆ ನೀವೇ ಕಾರಣ ಅಂತ ಎಲ್ಲರೂ ನಿಮ್ಮನ್ನೇ ಬಯ್ತಾ ಇದ್ದಾರಲ್ಲ
-ಅಯ್ಯೋ, ನಾನೇನು ಮಾಡಿಲ್ಲ. ನಮ್ ಡಿ ಬಾಸ್ ಅದೆಷ್ಟು ವೇದಿಕೆಗಳಲ್ಲಿ, ಪ್ರೆಸ್ ಮೀಟ್ ಗಳಲ್ಲಿ, ಯಾರೂ ನಂದೊಂದು ಇದು ಕಿತ್ಕೊಳ್ಳೋಕಾಗಲ್ಲ ಅಂತ ತಮ್ಮ ಕೂದಲು ಕಿತ್ತು ಹಾಕಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ರು ತಾನೇ? ಅದಕ್ಕೇ ಪೊಲೀಸ್ನೋರು ಮೆಡಿಕಲ್ ಟೆ ನೆಪದಲ್ಲಿ ಕಿತ್ಕೊಂಡ್ರು ಅಷ್ಟೇ.

ಅದು ಸರಿನೇ, ಹೋಗ್ಲಿ, ಜೈಲಲ್ಲಿ ಟೈಮ್ ಪಾಸ್‌ಗೆ ಏನ್ ಮಾಡ್ತಾ ಇದ್ದೀರಾ?
-ಅವನಲ್ಲಿ, ಇವಳಿಲ್ಲಿ ಅಂತ ಸಿನಿಮಾ ಹಾಡು ಕೇಳ್ತಾ ಇದ್ದೀನಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ರಾತ್ರಿ ಹೊತ್ತು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಸಿಡಿಲು, ಗುಡುಗು ಸಹಿತ ಭಾರೀ ಮಳೆ ಬಂದು ರಸ್ತೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಸೋಮು ತನ್ನ ಗಾಡಿ ಮೇಲೆ ಆ ಮಳೆಯ ಹೊರಗೆ ಹೊರಟ. ಗಾಡಿ ಓಡಿಸುತ್ತಿದ್ದ ಸೋಮು ಹಾಕಿಕೊಂಡಿದ್ದ ಜರ್ಕಿನ್‌ನ ಜಿಪ್ ಕಿತ್ತು ಹೋಗಿತ್ತು. ಹಾಗಾಗಿ, ಅದು ಗಾಳಿಗೆ ಅಗಲ ಆಗಿ ಹಾರಾಡುತ್ತಾ ತೊಂದರೆ ಕೊಡುತ್ತಿತ್ತು. ಅದಕ್ಕೆ ಸೋಮು ತನ್ನ ಜರ್ಕಿನ್ ಅನ್ನು ಬಿಚ್ಚಿ ಅದರ ಜಿಪ್ ಬೆನ್ನಿನ ಮೇಲೆ ಬರುವಂತೆ, ಅದರ ಹಿಂಭಾಗ ತನ್ನ ಎದೆ ಮೇಲೆ ಬರುವಂತೆ ಮಾಡಿ ಹಾಕಿಕೊಂಡು ಹೊರಟ. ಸ್ವಲ್ಪ ಹೊತ್ತಿನ ನಂತರ ರಾತ್ರಿ ಮನೆಯ ಇದ್ದ ಖೇಮುಗೆ ಒಂದ್ ಕಾಲ್ ಬಂತು. ನೋಡಿದ್ರೆ ಸೋಮುದು. ಕಾಲ್ ಎತ್ತಿದ ತಕ್ಷಣ, ‘ಖೇಮು, ಆಕ್ಸಿಡೆಂಟ್ ಆಗಿದೆ, ಹೈವೇ ಪಕ್ಕ ಗಾಡಿ ಸ್ಕಿಡ್ ಆಗಿ ಪಕ್ಕದ ಹಳ್ಳಕ್ಕೆ ಬಿದ್ದಿದ್ದೇನೆ. ಬೇಗ ಬಾ’ ಅಂತ ಲೊಕೇಶನ್ ಹೇಳಿದ ಸೋಮು.

ಮಳೆಯಲ್ಲಿ ಹೈ ವೇ ರೋಡಿನ ಪಕ್ಕದ ಮನೆಯಿದ್ದ ಖೇಮು ಅವಸರವಾಗಿ ಸುರಿಯುವ ಮಳೆಯ ಗಾಡಿ ಹತ್ತಿ ಹೈ ವೇನಲ್ಲಿ ಹೊರಟ. ಸೋಮು ಹೇಳಿದ ಲೊಕೇಶನ್ ತಲುಪಿದಾಗ ಅಲ್ಲಿ ಸೋಮು ಗಾಡಿ ಬಿದ್ದಿತ್ತು. ಪಕ್ಕದಲ್ಲಿ ಬಗ್ಗಿ ನೋಡಿದಾಗ ಆಳವಾದ ಹಳ್ಳದಲ್ಲಿ ಬಿದ್ದಿದ್ದ ಸೋಮು ಕಾಣಿಸಿದ. ಖೇಮು ಏನೇ ಪ್ರಯತ್ನ ಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು, ಆಸ್ಪತ್ರೆಗೆ ತರೋಕೆ ಮುಂಚೆನೇ ಇವರ ಪ್ರಾಣ ಹೋಗಿದೆ ಅಂತ
ಹೇಳಿಬಿಟ್ಟರು. ದುಃಖದಲ್ಲಿ ಕೂತಿದ್ದ ಖೇಮುವನ್ನು ಪೊಲೀಸರು ವಿಚಾರಿಸಲು ಬಂದರು. ಖೇಮುವನ್ನು ಕುರಿತು ಪೊಲೀಸ್ ಆಫೀಸರ್ ಕೇಳಿದ ‘ನೀವು ಅಲ್ಲಿಗೆ ಹೋದಾಗ ಅವರ ಪ್ರಾಣ ಹೋಗಿತ್ತಾ?’. ಅದಕ್ಕೆ ಖೇಮು ಹೇಳಿದ, ‘ಇಲ್ಲ ಸಾರ್, ಆಕ್ಸಿಡೆಂಟ್ ಆಗಿ ಬಿದ್ದ ರಭಸಕ್ಕೆ ಸೋಮುನ ತಲೆ ಉಲ್ಟಾ
ತಿರುಗಿಕೊಂಡಿತ್ತು. ನಾನು ಅದನ್ನ ಸರಿ ಮಾಡಿದೆ. ತಕ್ಷಣ ಪ್ರಾಣ ಹೋಯ್ತು.

ಲೈನ್ ಮ್ಯಾನ್

ಜೈಲಲ್ಲಿರೋ ದರ್ಶನ್ ನೋಡಿ ಅನಿಸಿದ್ದು 
-ನಮ್ಮಂಥ ಸಾಮಾನ್ಯ ಜನರ ಲೈಫ್ ಎಷ್ಟೋ ವಾಸಿ ಗುರೂ. ಸಿಗರೇಟ್ ಸೇದೋಕೆ, ಎಣ್ಣೆ ಹೊಡೆಯೋಕೆ ಇನ್ನೊಬ್ಬರ ಪರ್ಮಿಷನ್ ತಗೋಬೇಕಾಗಿಲ್ಲ.

ದರ್ಶನ್ ಪವಿತ್ರಾ ಇರೋ ಪೊಲೀಸ್ ಸ್ಟೇಷನ್‌ನಲ್ಲಿ ಶಾಮಿಯಾನ ಹಾಕ್ಸಿದ್ ಯಾಕೆ?
-ಕಿಡಿಗೇಡಿ ಉತ್ತರ – ಇಬ್ರಿಗೂ ಆಫೀಷಿಯಲ್ ಆಗಿ ಮದ್ವೆ ಮಾಡಿಸೋಕೆ

ಸತ್ಯ ದರ್ಶನ
-ಕಾಲರ್ ಎತ್ಕೊಂಡೆ ಓಡಾಡೋಣ ಅಂದೋರಿಗೆ ಏನಾದ್ರೂ ಶಿಕ್ಷೆ ಆದ್ರೆ, ಜೈಲಲ್ಲಿ ಸಿಗೋ ಯುನಿಫಾರ್ಮ್‌ಗೆ ಕಾಲರ್ರೇ ಇರಲ್ಲ

ಅತಿರೇಕದ ಪನ್
-ದರ್ಶನ್ ಅಭಿಮಾನಿ
-‘ದಾರ್ಶನಿಕ’

ಕ್ರಿಮಿನಲ್ ಮೈಂಡ್
-ಆ ಮನುಷ್ಯ ಎ ಒಳ್ಳೆ ಕೆಲಸ ಮಾಡಿzನೆ ಗೊತ್ತಾ? ಬಲಗೈಯಲ್ಲಿ ಕೊಲೆ ಮಾಡಿದ್ದು ಎಡಗೈಗೆ ಗೊತ್ತಾಗ್ಬಾರ್ದು ಅಂತ ಹೇಳಿಕೊಳ್ಳಲ್ಲ ಅಷ್ಟೇ

ಸಿಂಗಲ್ ಸತ್ಯ
-ವಯಸ್ಸಾದ್ರೂ ಮದ್ವೆ ಆಗದೇ ಇರೋ ಸಿಂಗಲ್‌ಗಳನ್ನ ನೋಡಿ ಜನ, ಅಯ್ಯೋ ಪಾಪ ಅಂತ ಅನುಕಂಪ ತೋರಿಸ್ತಾರೆ. ಆ ಬಡ್ಡಿಮಕ್ಳು ಎಲ್ಲಾ
ನೆಮ್ಮದಿಯಾಗಿ ಇರ್ತಾರೆ ಅಂತ ಇವ್ರಿಗೇನ್ ಗೊತ್ತು

ತಿನ್ನುವ ವಸ್ತುಗಳನ್ನು ಬಳಸಿ ದೇವರಿಗೆ ಹಾಕುವ ನಿಂಬೆಹಣ್ಣಿನ ಹಾರ, ಏಲಕ್ಕಿ ಹಾರಗಳನ್ನು ಏನಂತಾರೆ?
-ಆಹಾರ

– ಫುಡ್ ಮಾರುವ ಫುಟ್ ಪಾತ್
-ಫುಡ್ ಪಾತ್

ಹಳೇ ಡವ್ ಗೋಸ್ಕರ ಫುಲ್ ಸಾಲ ಮಾಡಿರೋ ನಮ್ ಹುಡುಗ್ರು ‘ಸಾಲಗಾರರು’ ಮನೆ ಹತ್ರ ಬಂದಾಗ ಹೇಳೋ ಮಾತು
-ಲೀವ್ ಮಿ ಅ‘ಲೋನ್’

ಕ್ಯಾಮೆರಾಮ್ಯಾನ್ ಎಡವಿ ಬಿದ್ದ ಫೋಟೋಗೆ ಕ್ಯಾಪ್ಶನ್
-ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು

Leave a Reply

Your email address will not be published. Required fields are marked *

error: Content is protected !!