Saturday, 27th July 2024

ಒಳಮೀಸಲಾತಿ ಲಾಭ – ನಷ್ಟ ಯಾರಿಗೆ ?

ವಿಶ್ಲೇಷಣೆ

ಮಣಿಕಂಠ ಮ ಹಿರೇಮಠ

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಶಿಪಾರಸ್ಸು ಆಧರಿಸಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡಬೇಕೆಂಬುದು ಸುಮಾರು ಮೂರು ದಶಕಗಳ ಬೇಡಿಕೆಯಾಗಿತ್ತು. ಈ ಕಾರಣದಿಂದಾಗಿ ಇಡೀ ದಲಿತ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿತ್ತು.

ಮೀಸಲಾತಿ ಹಂಚಿಕೆ ಎಂಬುದು ಜೇನುಗೂಡು ಇದ್ದಂತೆ? ಯಾವುದೇ ಸರ್ಕಾರ ಮೀಸಲಾತಿಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು . ಇತ್ತೀಚಿನ ಜಾತಿ ಓಲೈಕೆ ರಾಜಕಾರಣದಲ್ಲಂತೂ ಒಬ್ಬರನ್ನೂ ಸಮಾಧಾನ ಪಡಿಸುವುದರಲ್ಲಿ ಇನ್ನೊಬ್ಬರು ಮುನಿಸಿಕೊಂಡು ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯಂತ ಜಾಣ್ಮೆ ಮತ್ತು ಜಾಗೃತೆಯಿಂದ ಮೀಸಲು ಪರಿಷ್ಕರಣೆ ಮಾಡುವ ಮೂಲಕ ಚುನಾವಣೆಗೂ ಮುಂಚೆ ಬಿಜೆಪಿ ಪಕ್ಷಕ್ಕೆ ಆನೆ ಬಲ ತಂದಿದ್ದಾರೆ ಎಂದರೆ ತಪ್ಪಾಗದು.

ಅನೇಕ ದಶಕಗಳ ಬೇಡಿಕೆಯಾಗಿದ್ದ ದಲಿತ ವರ್ಗಕ್ಕೆ ಒಳಮಿಸಲಾತಿ ಕಲ್ಪಿಸಿರುವುದು. ಯಡಿಯೂ ರಪ್ಪನವರ ಕಾರಣದಿಂದ ಇಷ್ಟು ವರ್ಷ ಬಿಜೆಪಿ ಯೊಂದಿಗೆ ನಿಂತಿದ್ದ ಲಿಂಗಾಯತ ಸಮಾಜ. ಅವರನ್ನು ಅವರ ಪಕ್ಷದ ವರಿಷ್ಠರು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂಬ ಅಪಪ್ರಚಾರದಿಂದ
ಈಗಾಗಲೇ ಒಂದು ಹೆಜ್ಜೆಯನ್ನು ಹೊರಗಿಟ್ಟಿತ್ತು? ಅದರಲ್ಲೂ ಲಿಂಗಾಯತರಲ್ಲಿ ದೊಡ್ಡ ಸಮುದಾಯವಾದ ಪಂಚಮಸಾಲಿ ಸಮಾಜ ೨ ಎ ಗಾಗಿ ಸುಮಾರು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ಅವರಿಗಾಗಿ ೨ ಡಿ ಪ್ರವರ್ಗದಡಿಯಲ್ಲಿ ಮೀಸಲಾತಿ ಏರಿಸಲಾಗಿದೆ? ಹಳೆ ಮೈಸೂರು? ಹಾಸನ ಭಾಗದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಎಲ್ಲ ಸಮುದಾಯಗಳಿಗೂ ಸಮಾಧಾನ ತಂದಿದ್ದಾರೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಶಿಪಾರಸ್ಸು ಆಧರಿಸಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡಬೇಕೆಂಬುದು ಸುಮಾರು ಮೂರು ದಶಕಗಳ ಬೇಡಿಕೆಯಾಗಿತ್ತು. ಈ ಕಾರಣದಿಂದಾಗಿ ಇಡೀ ದಲಿತ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿತ್ತು. ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದ ವೇಳೆ ಈ ವಿಷಯ ಚರ್ಚೆಗೆ ಬಂದಾಗಲೆಲ್ಲಾ ಬೇರೆ ಬೇರೆ ಒತ್ತಡದಿಂದಾಗಿ ಎಲ್ಲಿ ಆರಂಭವಾಗಿತ್ತೋ ಅಲ್ಲೆ ನಿಂತಿತ್ತು. ಇಂದರಿಂದ
ಬೇಸರಗೊಂಡಿದ್ದ ದಲಿತ ಸಮುದಾಯ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿತ್ತು.

ಅಽಕಾರಕ್ಕೆ ಬಂದರೆ ಜಾರಿ ಮಾಡುತ್ತೇವೆ ಎಂದು ಪಕ್ಷವು ಘೋಷಿಸಿತ್ತು. ಈಗ ನುಡಿದಂತೆ ನಡೆಯುವ ಮೂಲಕ ಆ ವರ್ಗದ ಜೊತೆಗೆ ನಿಲ್ಲುತ್ತೇವೆ ಎಂಬ ಧೈರ್ಯ ನೀಡಿದೆ. ಚುನಾವಣೆ ಘೋಷಣೆಗೆ ದಿನಗಣನೆ ಇರುವ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಎಡಗೈ ಶೇ. ೬, ಬಲಗೈ ವರ್ಗಕ್ಕೆ ಶೇ. ೫.೫ , ಸ್ಪೃಶ್ಯ ದಲಿತರಿಗೆ ಶೇ. ೪.೫, ಇತರೆ ದಲಿತರಿಗೆ ಶೇ. ೧ ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಒಳ ಮೀಸಲಾತಿಯ ಕುರಿತು ಪರಿಶಿಷ್ಟ ಜಾತಿ ಜನ ಕಂಡ ಕನಸನ್ನು ತಡವಾದರೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನನಸು ಮಾಡಿದೆ.
ಬಹು ವರ್ಷಗಳ ಬೇಡಿಕೆಯಾಗಿದ್ದ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ವಿಷಯದಲ್ಲಿ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಹೋರಾಟದ ಮುಂದಾಳತ್ವ ವಹಿಸಿದ್ದವರೆಲ್ಲರೂ ೨ ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.

ಆದರೆ ಕಾನೂನು ತೊಡಕುಗಳು ಮತ್ತು ಆ ಮೀಸಲಾತಿಯಲ್ಲಿ ಸದ್ಯ ಇರುವ ೧೦೨ ಜಾತಿಗಳಲ್ಲಿ ಅತ್ಯಂತ ಸಣ್ಣ ಜಾತಿಗಳಿಗೆ ಅನ್ಯಾಯ ಮಾಡಿದಂತಾ ಗುತ್ತದೆ ಎಂಬ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ೨ ಸಿ ಮತ್ತು ೨ ಡಿ ಎಂಬ ಎರಡು ಹೊಸ ಪ್ರವರ್ಗಗಳನ್ನು ರಚಿಸಿ ಮೀಸಲಾತಿ ಘೋಷಿಸಲಾಗಿತ್ತು. ಹೆಚ್ಚುವರಿ ಮೀಸಲಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಇಲ್ಲಿಯವರೆಗೆ ಮುಸ್ಲಿಂ
ಸಮುದಾಯಕ್ಕೆ ನೀಡುತ್ತಿದ್ದ ಶೇ. ೪ ರಷ್ಟು ಮೀಸಲಾತಿಯನ್ನು ಹಿಂಪಡೆದು ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ ತಲಾ ಎರಡರಂತೆ ಹಂಚಿಕೆ ಮಾಡಲಾಗಿದೆ.

ಮುಸ್ಲಿಂ ಸಮುದಾಯದ ಮೀಸಲಾತಿ ಹಿಂಪಡೆದಿದ್ದಕ್ಕೆ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಅನೇಕರು ನ್ಯಾಯಾಲಯದ ಕದ ತಟ್ಟಲುಬಹುದು. ಆದರೆ ಸಂವಿಧಾನದ ಪ್ರಕಾರ ಮೀಸಲಾತಿ ಎನ್ನುವುದು ಜಾತಿ ಆಧಾರಿತವಾಗಿರಬೇಕೆ ಹೊರತು ಧರ್ಮಧಾರಿತ ಅಲ್ಲ ಎಂಬ ಅಂಶ ಇರುವು
ದರಿಂದ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಈ ಮೀಸಲಾತಿ ನಿರ್ಧಾರ ಆಡಳಿತಾರೂಢ ಬಿಜೆಪಿ ಸಂಭ್ರಮ ತಂದಿದ್ದರೆ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ತಮ್ಮ ಬಲಿಷ್ಠ ವೋಟ್ ಬ್ಯಾಂಕ್ ಮುಸ್ಲಿಂ ಸಮುದಾಯಕ್ಕಾಗಿರುವ ಅನ್ಯಾಯ ವನ್ನು ಪ್ರಶ್ನೆ ಮಾಡಲು ಹೋದರೆ ಇತ್ತ ಇನ್ನೊಂದು ಬಲಿಷ್ಠ ವೋಟ್ ಬ್ಯಾಂಕ್ ಆಗಿರುವ ಒಕ್ಕಲಿಗರು ಸಾರಾಸಗಟಾಗಿ ಪ್ರತಿಪಕ್ಷಗಳ ಮೇಲೆ ಮುನಿಸಿಕೊಳ್ಳುತ್ತಾರೆ ಎಂಬ ಅಳುಕು ಕಾಡುತ್ತಿದೆ.

ಕೆಲವು ವಾರಗಳ ಹಿಂದೆ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಸರ್ಕಾರ ಈ ಬಾರಿ ಅಽಕಾರ ಕಳೆದುಕೊಳ್ಳಲಿದೆ ಎಂದೇ ಹೇಳಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಘ ಮತ್ತು ಹೈಕಮಾಂಡ್ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಮತ್ತು ಅನೇಕ ಕೇಂದ್ರ ಮಂತ್ರಿಗಳನ್ನು ರಾಜ್ಯಕ್ಕೆ ಕಳುಹಿಸಿ ಅಭಿವೃದ್ಧಿ ಕಾರ್ಯಗಳಿಗೆ ಬಲ ತುಂಬದಿದ್ದರೆ ಪರಿಸ್ಥಿತಿ ಸುಧಾರಿಸುತ್ತಿರಲಿಲ್ಲ. ಆದರೆ ಈ ಮೀಸಲಾತಿಯ ಮಾಸ್ಟರ್ ಸ್ಟ್ರೋಕ್‌ನಿಂದಾಗಿ ಲಿಂಗಾಯತರು ಮತ್ತು ದಲಿತರು ಬಿಜೆಪಿಯೊಂದಿಗೆ ಉಳಿಯುವುದಷ್ಟೆ ಅಲ್ಲದೆ, ಹಳೆ ಮೈಸೂರು ಭಾಗದಲ್ಲಿ ಪಕ್ಷ ತಳವೂರ ಬೇಕೆಂಬ ಮಹತಾಕಾಂಕ್ಷೆ ಹೊಂದಿರುವ ಕೇಸರಿ ನಾಯಕರ ಆಸೆ ಸ್ಪಲ್ಪ ಮಟ್ಟಿಗಾದರೂ ಈಡೇರಿದಂತಾಗಲಿದೆ.

ಮೀಸಲನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಈ ಅವೈಜ್ಞಾನಿಕ ಮೀಸಲನ್ನು ರದ್ದುಗೊಳಿಸುತ್ತೇವೆ ಎಂದು ಹೇಳುವ ಮೂಲಕ ಮೀಸಲಾತಿ ಲಾಭ ಪಡೆದವರ ಕೆಂಗಣ್ಣಿಗೆ ಗುರಿಯಾಗುವುದಷ್ಟೆ ಅಲ್ಲದೆ, ಮುಂದೆ ಇವರು ಅಧಿಕಾರದಿಂದ ದೂರ ಉಳಿಯಲು ಇದೇ ಕಾರಣವಾಗಲಿದೆ.

error: Content is protected !!