Friday, 19th July 2024

ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಜನವರಿ 8ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿ ದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ Yash19 ಹ್ಯಾಶ್ ಟಾಗ್ ಟ್ರೆಂಡಿಯಾಗಿದೆ. ಆದರೆ ನಾನು ದೊಡ್ಡದಾದ ಪ್ರಾಜೆಕ್ಟ್ ತಯಾರಿಯಲ್ಲಿ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಿರಿ, ಹೇಳುತ್ತೇನೆ ಎಂದು ಅಭಿಮಾನಿ ಗಳಿಗೆ ಪತ್ರ ಬರೆದು ಪತ್ನಿ, ಮಕ್ಕಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್ ಗೆ ದುಬೈಗೆ ಹಾರಿದ್ದಾರೆ ಯಶ್.

ರೆಸ್ಟೋರೆಂಟ್ ಒಂದರಲ್ಲಿ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಪಾರ್ಟಿ ಮಾಡು ತ್ತಿರುವ ಫೋಟೋಗಳನ್ನು ಅಭಿಮಾನಿ ಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುತ್ತಿದ್ದಾರೆ.

Read E-Paper click here
error: Content is protected !!