Sunday, 28th April 2024

200 ಅಂಕ ಕುಸಿತ ಕಂಡ ಸೂಚ್ಯಂಕ ಸೆನ್ಸೆಕ್ಸ್

ಮುಂಬೈ: ಬಾಂಬೆ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 200 ಅಂಶ ಕುಸಿತ ದಾಖಲಿಸಿದರೆ,
ನ್ಯಾಷನಲ್​ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 11,600ರಿಂದ ಕೆಳಕ್ಕೆ ಕುಸಿದಿದೆ.

ಯುಎಸ್​ ಫೆಡರಲ್​ ರಿಸರ್ವ್​ ಆರ್ಥಿಕ ಪುನಶ್ಚೇತನ ಅನಿಶ್ಚಿತವಾದ್ದರಿಂದ ಆರ್ಥಿಕ ಷೇರುಗಳು ನಷ್ಟ ಅನುಭವಿಸಿದವು. ಇದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಅಗಿದೆ. ಆರಂಭಿಕ ವಹಿವಾಟಿನ ವೇಳೆ ಸೆನ್ಸೆಕ್ಸ್ 216.76 ಅಂಶ (0.55%) ಕುಸಿತ ಕಂಡು 39,086.09ರಲ್ಲಿ ಹಾಗೂ ನಿಫ್ಟಿ 44 ಅಂಶ (0.38%) ಕುಸಿದು 11,560.55 ರಲ್ಲಿ ವಹಿವಾಟು ಆರಂಭಿಸಿತ್ತು.

ಸೆನ್ಸೆಕ್ಸ್ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕ್​ ಷೇರು ಶೇಕಡ 1 ನಷ್ಟ ಅನುಭವಿಸಿದರೆ, ಎಚ್​ಡಿಎಫ್​ಸಿ ಬ್ಯಾಂಕ್​, ಪವರ್ ಗ್ರಿಡ್​, ಬಜಾಜ್ ಆಟೋ, ಕೊಟಾಕ್ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಮತ್ತು ಎಲ್​ಆಯಂಡ್ ಟಿ ಷೇರುಗಳು ನಷ್ಟ ಅನುಭವಿಸಿವೆ.
ಇನ್ನೊಂದೆಡೆ, ಎಚ್​ಸಿಎಲ್​ ಟೆಕ್​, ಟೆಕ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಒಎನ್​ಜಿಸಿ, ಇನ್​ಫೋಸಿಸ್ ಷೇರುಗಳು ಲಾಭ ದಾಖಲಿಸಿವೆ.

ಈ ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 258.50 ಅಂಶ (0.66%) ಏರಿಕೆ ದಾಖಲಿಸಿ 39,302.85ರಲ್ಲೂ, ನಿಫ್ಟಿ 82.75 ಅಂಶ (0.72%) 11,604.55 ಏರಿಕೆ ದಾಖಲಿಸಿ ವಹಿವಾಟು ಕೊನೆಗೊಂಡಿತ್ತು.

Leave a Reply

Your email address will not be published. Required fields are marked *

error: Content is protected !!