Tuesday, 22nd October 2024

ಎಣ್ಣೆಕಾಳು ಸ್ವಾವಲಂಬನೆಗೆ ತಾಳೆ ಸಂಸ್ಕರಣೆ: ಶೋಭಾ

ಎಣ್ಣೆ ಕಾಳುಬೆಳೆ ಕುಸಿತ!

ಶೇ.70ರಷ್ಟುಬೇಳೆಕಾಳು ಆಮದು!

ಕಲಬುರಗಿ: ದೇಶದಲ್ಲಿ ಬೇಡಿಕೆಯ ಶೇ.70 ರಷ್ಟು ಭಾಗದ ಬೇಳೆ ಕಾಳು ಮತ್ತು ಎಣ್ಣೆ ಕಾಳುಗಳನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳು ತ್ತಿದ್ದೇವೆ. ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕರಾವಳಿ ಪ್ರದೇಶದಲ್ಲಿ ಹಾಗೂ ಇತರೆ ಬೇರೆಡೆ ಎಣ್ಣೆ ಸಂಸ್ಕರಣಾ ಘಟಕ ಆರಂಭಿ ಸಲು ಕ್ಯಾಂಪೋಗೆ ಸೂಚಿಸ ಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ 10ಸಾವಿರ ಟನ್ ಬೇಳೆಕಾಳು ಆಮದಾಗುತ್ತಿವೆ. ಈ ನಿಟ್ಟಿನಲ್ಲಿ ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಆತ್ಮ ನಿರ್ಭರ ಯೋಜನೆ ಅಡಿಯಲ್ಲಿ ಉಚಿತವಾಗಿ ಎಣ್ಣೆಕಾಳು ಬೀಜದ ಕಿಟ್‌ ನೀಡಲಾಗುತ್ತಿದೆ. ಅಲ್ಲದೆ, ಎಲ್ಲೆಲ್ಲಿ ತೆಂಗು ಬೆಳೆಯಲಾಗುತ್ತದೋ ಅಲ್ಲಿ ತಾಳೆ ಮರಗಳು ಬೆಳೆಸಲು ಅನುಕೂಲ ವಾತಾವರಣ ಇದೆ. ಹಾಗಾಗಿ ಈಶಾನ್ಯ ರಾಜ್ಯಗಳಲ್ಲಿ ಎಣ್ಣೆ ಬೀಜಗಳನ್ನು ಒದಗಿಸಲಾಗುತ್ತದೆ. ರೈತ ಉತ್ಪಾದಕ ಸಂಘ (ಎಫ್ ಪಿಒ)ಗಳನ್ನು ನೋಂದಣಿ ಮಾಡಿಕೊಂಡವರಿಗೆ ಸಂಸ್ಕರಣಾ ಘಟಕ, ಕಚೇರಿ ಸ್ಥಾಪಿಸಲು ರೂ. 18ರಿಂದ 20 ಲಕ್ಷ ಸಾಲ ಸೌಲಭ್ಯ ನೀಡಲಾಗು ವುದು. ಈ ನಿಟ್ಟಿನಲ್ಲಿ ಗಾಣದಿಂದಲೂ ಎಣ್ಣೆ ತೆಗೆಯುವಂತಹ ಸ್ಟಾರ್ಟ್‌ ಅಫ್‌ ಗಳನ್ನು ಸ್ಥಾಪಿಸಲು ಉದ್ದೇಶ ಹೊಂದಲಾಗಿದೆ. ಇದನ್ನು ಬಳಕೆ ಮಾಡಿಕೊಂಡು ಯುವಕರು ನಿರುದ್ಯೋಗ ನೀಗಿಸಿಕೊಳ್ಳಬೇಕು ಎಂದರು.

ಎಣ್ಣೆಕಾಳು ಬೆಳೆ ಕುಸಿತ: ರಾಜ್ಯದಲ್ಲಿ ಮೊದಲು 13 ಲಕ್ಷ ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ, ಕುಸಬೆ, ಸಾಸಿವೆ, ಶೇಂಗಾ, ಸೋಯಾಬೀನ್, ಎಳ್ಳು ಬೆಳೆಯುವ ಪ್ರಮಾಣ ಕುಸಿದಿದೆ. ಈಗ ಅವುಗಳ ಪ್ರಮಾಣ 3ಲಕ್ಷ ಎಕರೆಗೆ ಇಳಿದಿದೆ. ಇದು ಎಣ್ಣೆ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ನಿಟ್ಟಿನಲ್ಲಿ ಉತ್ತಮ ಎಂಎಸ್‌ಪಿ ಘೋಷಣೆ ಮಾಡುವ ಮುಖೇನ ಉತ್ಪಾದನಾ ವಲಯ ಹೆಚ್ಚಿಸಲುಮತ್ತು ರೈತರಿಗೆ ಆದಾಯ ಒದಗಿಸಿ ನೆರವು ನೀಡುವ ಕೆಲಸ ನಡೆಯುತ್ತಿದೆ ಎಂದರು.
*
ಮೌನಕ್ಕೆ ಜಾರಿದ ಶೋಭಾ: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಪುತ್ರ ಪ್ರಶಾಂತ್ ಅವರನ್ನು ಲಂಚ ಪಡೆದ ಪ್ರಕರಣದಲ್ಲಿ ಲೋಕಾ ಯುಕ್ತ ಪೊಲೀಸ ಬಂಧಿಸಿರುವ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವೆ ಶೋಭಾ
ಕರಂದ್ಲಾಜೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದರು.