Sunday, 24th September 2023

ಸಮಾಜ ಸುಧಾರಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವವಾದದ್ದು: ಆರ್.ಕೆ ಪಾಟೀಲ

ಹುಬ್ಬಳ್ಳಿ: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಲೋಗೋವನ್ನು ಹುಬ್ಬಳ್ಳಿಯಲ್ಲಿರುವ ಎಚ್.ಕೆ ಪಾಟೀಲ್ ವಿದ್ಯಾ ಸಂಸ್ಥೆಯಲ್ಲಿ ಸಮಾಜ ಸೇವಕರು, ಯುವ ರಾಜಕೀಯ ಮುಖಂಡ ಆರ್.ಕೆ ಪಾಟೀಲ ಬಿಡುಗಡೆಗೊಳಿಸಿದರು.

ಇದೇ ಸಂದರ್ಭ ಮಾತನಾಡಿದ ಅವರು ಸಮಾಜದಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಸ್ವಾತಂತ್ರ್ಯದ ಪೂರ್ವದಿಂದಲೇ ಸಂಘ ಸಂಸ್ಥೆಗಳು ಭಾರತ ದೇಶಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದೆ.

ಈ ನಿಟ್ಟಿನಲ್ಲಿ ಸಮಾಜ ಸುಧಾರಣೆಯಲ್ಲಿ ಸಂಘಟನೆಗಳ ಪಾತ್ರ ಮಹತ್ವವಾದದ್ದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭ ಹಿರಿಯರಾದ ಎಚ್ ಎಚ್ ಕಿರೆಸೂರ, ಎಸ್ ಬಿ ಸನಗೌಡರ, ಶಿವರಾಮ್ ಪಾಟೀಲ, ಉಮೇಶ ಬಳಿಗಾರ ಹಾಗೂ ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಉಪಸ್ಥಿತರಿದ್ದರು.

error: Content is protected !!