Saturday, 27th April 2024

ಮಧುರೈ: ಕೈವಾರ, ಚಿಂತಾಮಣಿಯ ಬಾಲ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

ಚಿಂತಾಮಣಿ: ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಟ್ಯ ಸಮರ್ಪಣಾ, ಭಾರತೀಯ ಶಾಸ್ತ್ರೀಯ ನೃತ್ಯ ಹಬ್ಬ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ಬಾಲ ಕಲಾವಿದರು ಭರತ ನಾಟ್ಯ ಪ್ರದರ್ಶಿಸಿದರು.

ಕೈವಾರದ ನಾಟ್ಯಾಂಜಲಿ ನೃತ್ಯಕಲಾ ಅಕಾಡೆಮಿ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರ ಸಾರಥ್ಯ ಹಾಗೂ ಚಿಂತಾಮಣಿಯ ಸಂಗೀತ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಪದ್ಮಾ ಅವರ ಮಾರ್ಗದರ್ಶನದಲ್ಲಿ ಶಿಷ್ಯ ವೃಂದದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ನಾಟ್ಯಾಾಂಜಲಿ ನೃತ್ಯಕಲಾ ಅಕಾಡೆಮಿಯ ಗುರುಗಳಾದ ಪರಿಮಳ ಆರಳುಮಲ್ಲಿಗೆ ಅವರ ಶಿಷ್ಯವೃಂದದ ಪಾವನಿಕುಮಾರ್, ಚಿರಂತ್, ಅಸ್ಮಿತಾ, ಸುಮಿತಾ, ತನುಶ್ರಿ , ರಷ್ಮಿ, ದೀಪ್ತಿ, ದುರ್ಗಾ, ನಿಶ್ಮಿತಾ , ಮೇದ ಹಾಗೂ ಚಿಂತಾಮಣಿಯ ಸಂಗೀತ ಮಹಾವಿದ್ಯಾ ಲಯದ ವರ್ಷಿಣಿ, ಸ್ವರ್ಣ , ಯುಕ್ತಾ, ಕೀರ್ತಿ, ಬೃಂದಾ , ತ್ರಿಶಾಲ , ವೈಷ್ಣವಿ, ಗುರುಪ್ರಿಯಾ, ಹಿತಶ್ರೀ, ಶ್ರಮಿತಪ್ರಿಯಾ, ಭರತನಾಟ್ಯ ಪ್ರದರ್ಶಿಸಿದರು. ಪ್ರದರ್ಶನ ನೀಡಿದ ಎಲ್ಲಾ ಮಕ್ಕಳಿಗೆ ಹಾಗೂ ಅವರ ಗುರುಗಳಿಗೆ ಆಯೋಜಕರಿಂದ ಪ್ರಶಂಸನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!