Sunday, 19th May 2024

ಮತ್ತೆ ಕರೆಯುತ್ತಿದೆ ನಂದಿ ಬೆಟ್ಟ

ಮಂಜುನಾಥ್ ಡಿ.ಎಸ್

ಕರೋನ ಸೋಂಕಿನ ಕಾರಣದಿಂದ ಹಲವು ತಿಂಗಳುಗಳು ಮುಚ್ಚಲ್ಪಟ್ಟಿದ್ದ ನಂದಿ ಬೆಟ್ಟ 2020ರ ಸೆಪ್ಟಂಬರ್ ಏಳನೆಯ ದಿನಾಂಕದಿಂದ ತನ್ನ ದ್ವಾರಗಳನ್ನು ತೆರೆದು, ಸಕಲ ಸುರಕ್ಷಾ ಕ್ರಮಗಳೊಡನೆ ವೀಕ್ಷಕರನ್ನು ಸ್ವಾಗತಿಸಲು ಸಜ್ಜಾಗಿರುವ
ಸುದ್ದಿಯನ್ನು ಕೆಲ ವಾರಗಳ ಹಿಂದೆಯಷ್ಟೇ ಓದಿದ್ದು ಸ್ಮತಿಪಟಲದಲ್ಲಿ ಇನ್ನೂ ಹಸಿರಾಗಿತ್ತು.

ಈ ಗಿರಿಧಾಮಕ್ಕೆ ಗಾಂಧೀಜಿ ಎರಡು ಬಾರಿ ಭೇಟಿ ನೀಡಿ ಆರೋಗ್ಯ ಸುಧಾರಣೆ ಮಾಡಿಕೊಂಡ ಚಾರಿತ್ರಿಕ ಮಹತ್ವದ ಸಂಗತಿಯನ್ನು , ‘ವಿಶ್ವವಾಣಿ’ಯ ಅಕ್ಟೋಬರ್ ಎರಡನೆಯ ದಿನಾಂಕದ ಸಂಚಿಕೆಯಲ್ಲಿ ಪ್ರಕಟವಾದ ‘ಗಾಂಧಿ ಆರೋಗ್ಯ ಸುಧಾರಿಸಿದ್ದ ನಂದಿ ಬೆಟ್ಟ’ ಶೀರ್ಷಿಕೆಯ ಲೇಖನ ಮತ್ತೊಮ್ಮೆ ನೆನಪಿಸಿತು. ಹಾಗಾಗಿ, ಏಳೆಂಟು ತಿಂಗಳುಗಳಿಂದ ಪ್ರವಾಸಕ್ಕೆ ಹೋಗಲಾಗದಿದ್ದ ಕೊರತೆ ಯನ್ನು ತುಂಬಲು ಹಾಗು ಮುದುಡಿದ ಮನವನ್ನು ಮುದಗೊಳಿಸಲು ನಂದಿದುರ್ಗದ ವಿಹಾರವೇ ವಿಹಿತ ಎನಿಸಿದೆ.

ನವ ಸಂವತ್ಸರ 2021ರ ಪ್ರಥಮ ದಿನದಂದು ಈ ಪ್ರವಾಸ ಕೈಗೊಳ್ಳಬೇಕೆಂಬ ಆಸೆಯೂ ಈಗ ಅಂ ಕುರಿಸಿದೆ! ಪ್ರವಾಸವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ, ಸ್ವಂತ ವಾಹನವನ್ನು ಬಳಸಿ, ಪ್ರವಾಸಿಗರಿಂದ ಸಾಕಷ್ಟು ಅಂತರ ಕಾಯ್ದುಕೊಂಡರೆ ಸೋಂಕು
ತಗಲುವ ಸಾಧ್ಯತೆಗಳೂ ಕಡಿಮೆ. ಜೊತೆಗೆ ಊಟ ಉಪಾಹಾರಗಳನ್ನೂ ಸಹ ಮನೆಯಿಂದಲೇ ಕೊಂಡೊಯ್ದರೆ ಇನ್ನೂ ನಿರಾಳ ವಾಗಿರಬಹುದು.

ಹೀಗೆ ಸಾಗಿತು ಪ್ರವಾಸದ ಸುರಕ್ಷತೆ ಕುರಿತ ಚಿಂತನಾಲಹರಿ. ಹೊಸ ವರ್ಷದ ಮೊದಲ ದಿನ ನಂದಿದುರ್ಗ ಸಂದರ್ಶಿಸಬೇಕೆಂಬ ಅಪೇಕ್ಷೆಗೆ ಮತ್ತೊಂದು ವಿಶೇಷ ಕಾರಣವೂ ಸಿದ್ಧವಾಗಿದೆ. ಅದೆಂದರೆ, 1971ರ ಜನವರಿ ಒಂದರಂದು ನಾನು, ಐವರು ಗೆಳೆಯ ರೊಡನೆ ಬೆಂಗಳೂರಿನಿಂ ದ ಅಲ್ಲಿಗೆ ಸೈಕಲ್ ನಲ್ಲಿ ಪಯಣಿಸಿ ಆನಂದಿಸಿದ್ದ ಸಾಹಸ ಯಾತ್ರೆಯ ಸಿಹಿ ನೆನಪು ಇನ್ನೂ ಇದೆ. ಆ ಸುಂದರ ಪಯಣದ ಸುವರ್ಣ ಮಹೋತ್ಸವವನ್ನು ಅಲ್ಲಿಯೇ ಆಚರಿಸಬಹುದೆಂಬ ಮಹದಾಶಯ!

Leave a Reply

Your email address will not be published. Required fields are marked *

error: Content is protected !!