Sunday, 19th May 2024

ಜೈಲಿನಲ್ಲಿ ಪುಸ್ತಕ ಬರೆದ ನೆಹರೂ

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ

ಒಂಬತ್ತು ವರ್ಷ ಜೈಲಿನಲ್ಲಿ ಕಳೆದ ನೆಹರೂ ಅವರು ಆ ದಿನಗಳನ್ನು ಕ್ರಿಯಾತ್ಮಕವಾಗಿ ಕಳೆದರು. ಗುಲಾಬಿ ಗಿಡಗಳನ್ನು ಬೆಳೆಸಿದರು ಮತ್ತು ಉತ್ತಮ ಗ್ರಂಥಗಳನ್ನು ರಚಿಸಿದರು.

ಜವಾಹರಲಾಲ್ ನೆಹರೂ ಅವರು ಸದಾ ತಮ್ಮ ಎದೆಯ ಮೇಲೆ ಸುಂದರವಾದ ಗುಲಾಬಿ ಹೂ ಧರಿಸುತ್ತಿದ್ದರು. ಅವರು ಗುಲಾಬಿ ಹೂ ಪ್ರಿಯರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು, ಆದರೆ ಅವರು ಸ್ವತಃ ತುಂಬ ಶ್ರಮ ವಹಿಸಿ ಗುಲಾಬಿ ಹೂ  ಬೆಳೆಯುತ್ತಿದ್ದರು
ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

ನೆಹರೂ ಗುಲಾಬಿ ಹೂ ತಳಿಗಳ ಬಗ್ಗೆೆ ಅಪಾರ ಮಾಹಿತಿ ಹೊಂದಿದ್ದರು. ಅವರು ಪ್ರಧಾನಿಯಾಗಿದ್ದಾಗ ನೇಮಕಗೊಳ್ಳುತ್ತಿದ್ದ ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ತಮ್ಮ ತಮ್ಮ ರಾಜಭವನಗಳಲ್ಲಿ ಗುಲಾಬಿ ಗಾರ್ಡನ್ ಬೆಳೆಸಲು ಸಲಹೆ ಮಾಡುತ್ತಿದ್ದರು. 1942ರಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳುವಳಿಯ ನೇತೃತ್ವ ವಹಿಸಿದ್ದಕ್ಕಾಗಿ ಜವಾಹರಲಾಲ್ ನೆಹರೂ ಅವರಿಗೆ ಬ್ರಿಟಿಷ್ ಸರ್ಕಾರ ಮೂರು ವರ್ಷ ಶಿಕ್ಷೆ ವಿಧಿಸಿ ಮಹಾರಾಷ್ಟ್ರದ ಅಹಮದ್‌ನಗರ ಜೈಲಿಗೆ ಕಳುಹಿಸಿತು.

ಜೈಲಿಗೆ ಹೊಂದಿಕೊಂಡ ವಿಶಾಲ ಭೂಮಿಯಲ್ಲಿ ನೆಹರೂ ಗುಲಾಬಿ ಗಾರ್ಡನ್ ನಿರ್ಮಿಸಲು ಮುಂದಾದರು. ಇದೇ ಜೈಲಿನಲ್ಲಿ ಖೈದಿಗಳಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಜೆ.ಬಿ.ಕೃಪಲಾನಿ, ಆಚಾರ್ಯ ನರೇಂದ್ರ ದೇವ್ ಮುಂತಾದವರು ರೋಜ್ ಗಾರ್ಡನ್ ಬಗ್ಗೆ ಆಸಕ್ತಿ ವಹಿಸಲಿಲ್ಲ. ಆದರೂ ನೆಹರೂ ಬೇರೆ ಕೈದಿಗಳ ಜೊತೆಗೂಡಿ 62 ಗುಂಟೆ ವಿಶಾಲ ಪ್ರದೇಶದಲ್ಲಿ ರೋಜ್ ಗಾರ್ಡನ್ ನಿರ್ಮಿಸುತ್ತಾರೆ.

ಜೈಲು ಅಧಿಕಾರಿಗಳು ಗುದ್ದಲಿ, ಪಿಕಾಸು, ಕುರಪಿ, ಸಲಾಕಿ ಮುಂತಾದ ಕೃಷಿ ಉಪಕರಣಗಳನ್ನು ಒದಗಿಸುತ್ತಾರೆ. ಪುಣೆಯಲ್ಲಿ ನೂತನವಾಗಿ ಆರಂಭವಾದ ಪೋಚ್ ಬೀಜ ಮಾರಾಟ ಕಂಪನಿಯಿಂದ 30 ವಿದಧ ಗುಲಾಬಿ ಗಿಡದ ಬೀಜದ ತಳಿಗಳನ್ನು ತರಿಸಿ ಗುಲಾಬಿ ತೋಟವನ್ನು ಅಭಿವೃದ್ದಿಪಡಿಸುತ್ತಾರೆ. ಇಂದು ಆ ಕಂಪನಿ ಬೀಜ ಉತ್ಪಾದನೆಯಲ್ಲಿ ದೇಶದಲ್ಲಿಯೇ ಹೆಮ್ಮರವಾಗಿ ಬೆಳೆದಿದೆ.

ನೆಹರೂ 1942 ರಿಂದ 1945ರ ವರೆಗಿನ ತಮ್ಮ ಮೂರು ಹುಟ್ಟುಹಬ್ಬಗಳನ್ನು ಇದೇ ರೋಜ್ ಗಾರ್ಡನ್‌ನಲ್ಲಿ ಆಚರಿಸಿಕೊಂಡಿ ರುವುದು ವಿಶೇಷ. ಈ ಗಾರ್ಡನ್‌ಗೆ ಸ್ವಲ್ಪ ದೂರದಲ್ಲಿ ನೆಹರೂ ಒಂದು ಬ್ಯಾಡ್ಮಿಂಟನ್ ಕೋರ್ಟ್ ಕೂಡ ನಿರ್ಮಿಸಿದ್ದರು. ಇಲ್ಲಿ ನೆಹರೂ ಅವರೊಂದಿಗೆ ಸಹ ಕೈದಿಗಳಾಗಿದ್ದ ಕಾಂಗ್ರೆಸ್ ನಾಯಕರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಜವಾಹರಲಾಲ್ ನೆಹರೂ ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಎಂಬ ಜಗತ್ಪ್ರಸಿದ್ಧ ಕೃತಿಯನ್ನು ಅಹಮದ್ ನಗರ ಜೈಲಿನಲ್ಲಿ ಇದ್ದಾಗಲೇ ರಚಿಸಿದರು.
ನೆಹರೂ ಬೆಳಸಿದ ಮರಗಳು ಸುಂದರವಾದ ಅಹಮದ್‌ನಗರ ಪೋರ್ಟ್‌ನ್ನು ಮಲೀಕ್ ಅಹ್ಮದ್ ನಿಜಾಮ ಶಹಾ 1427ರಲ್ಲಿ ನಿರ್ಮಿಸಿದನು.

ಬ್ರಿಟೀಷ ಆಡಳಿತ ಈ ಕೋರ್ಟ್‌ನ್ನು ಜೈಲು ಮಾಡಿ ರಾಜಕೀಯ ಕೈದಿಗಳಿಗಾಗಿ ಉಪಯೋಗಿಸತೊಡಗಿತು. ನೆಹರೂ, ಪಟೇಲ ರಂತಹ ಹಿರಿಯ ನಾಯಕರು ಇಲ್ಲಿ ಕೈದಿಗಳಾಗಿ ವಾಸಿಸಿದ್ದರಿಂದ ಈ ಪೋರ್ಟ್‌ಗೆ ಐತಿಹಾಸಿಕ ಮಹತ್ವ ಲಭಿಸಿದೆ. ಇದನ್ನು ಈಗ ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಗುಲಾಬಿ ವನ ನಿರ್ಮಾಣಕ್ಕೆ ನೆಹರೂ ಬಳಸಿದ ಕೃಷಿ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಾಗೆಯೇ ಗುಲಾಬಿ ವನ ಮತ್ತು ಬ್ಯಾಡ್ಮಿಂಟನ್ ಕೊಟ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತವೆ. ನೆಹರೂ ಜೈಲಿನ ಬದಿಯ ಗುಂಟ ನೆಟ್ಟ ಮರಗಳು ಈಗಲೂ ಹಸಿರಿನಿಂದ ನಳನಳಿಸುತ್ತಿವೆ.

ನೆಹರೂ ಬೆಳೆಸಿದ ಮರಗಳು ಎಂಬ ಫಲಕವನ್ನು ಇವುಗಳಿಗೆ ಅಂಟಿಸಲಾಗಿದೆ. ನೆಹರೂ ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಈ
ಜೈಲು ಒಂದು ಸಾಕ್ಷಿ ಆಗಿ ನಿಂತಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಜವಾಹರರು ಒಂಬತ್ತು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅವರು ಒಟ್ಟು ಒಂಭತ್ತು ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಗ್ಲಿಂಪ್ಸ್‌‌ ಆಫ್ ಹಿಸ್ಟರಿ ಎಂಬ ಮಹತ್ವದ ಕೃತಿಯನ್ನು ಅವರು ಜೈಲಿನಲ್ಲಿಯೇ ರಚಿಸಿದ್ದಾರೆ.

ಜಗತ್ತಿನ ವಿವಿಧ ವಿಷಯ ಕುರಿತು ಮಗಳು ಇಂದಿರಾ ಗಾಂಧಿಗೆ ಜೈಲಿನಿಂದ ನಿಯಮಿತವಾಗಿ ಅವರು ಪತ್ರಗಳನ್ನು ಬರೆಯು ತ್ತಿದ್ದರು. ಮಗಳಿಗೆ ತಂದೆಯ ಓಲೆಗಳು ಎಂಬ ಹೆಸರಿನಲ್ಲಿ ಈ ಪತ್ರಗಳ ಸಂಕಲನ ಜಗತ್ಪ್ರಸಿದ್ಧವಾಗಿದೆ.

Leave a Reply

Your email address will not be published. Required fields are marked *

error: Content is protected !!