Friday, 26th April 2024

ಕಾಸಗಲದ ಕಣ್ಣಲ್ಲಿ ಊರಗಲದ ಆಸೆ..

* ಮೂಕಾಂಬಿಕ ಕೆ.ಎಸ್
ಮದುವೆ ಎಂಬುದು ಪ್ರತಿಯೊಬ್ಬರ ಬಾಳಿನಲ್ಲೂ ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಬದಲಾವಣೆಯ ಕಾಲ, ಹಲವಾರು ಆಸೆ, ನಿರೀಕ್ಷೆಗಳೊಂದಿಗೆ ಗಂಡನ ಮನೆಗೆ ಕಾಲಿಡುವಾಗ ಅವಳ ಕಣ್ಣಲ್ಲಿ ಸಾವಿರ ಕನಸಿರುತ್ತವೆ.
ಆ ಕನಸುಗಳ ಒಡೆಯ ಗಂಡನಾದರೂ ಅದನ್ನು ಈಡೇರಿಸುವ ಮೊದಲ ಮೆಟ್ಟಿಿಲು ಹೆಣ್ಣಿಿನ ತಂದೆಯೇ ಆಗಿರುತ್ತಾಾನೆ. ಅವಳ ಆಸೆ-ಆಕಾಂಕ್ಷೆಗೆ ತಕ್ಕ ವರನ ಹುಡುಕಾಟವೇ ಕನಸಿನ ಮನೆಯ ಮೊದಲ ಮೆಟ್ಟಿಿಲು.

ಮಗಳು ಮದುವೆ ವಯಸ್ಸಿಿಗೆ ಬಂದಾಗ ತಂದೆಯ ಮನದಲ್ಲಿ ನೂರೆಂಟು ಯೋಚನೆ ಮೂಡುತ್ತವೆ. ಮಗಳಿಗೆ ಎಂಥ ವರನನ್ನು ಆಯ್ಕೆೆ ಮಾಡಬೇಕು, ನೌಕರಿ, ಮನೆ, ಆಸ್ತಿಿ-ಪಾಸ್ತಿಿ, ಕುಟುಂಬ ಹೀಗೆ ಹಲವಾರು ವಿಷಯಗಳು ಗಿರಕಿ ಹೊಡೆಯುತ್ತವೆ. ಮಗಳನ್ನು ಒಳ್ಳೆೆಯ ಮನೆತನಕ್ಕೆೆ ಕೊಡಬೇಕು ಎಂಬ ಇರಾದೆ ಇರುತ್ತದೆ. ಆದರೆ ತಂದೆ ಮಗಳನ್ನು ಎಂದೂ ನಿನಗೆ ಎಂಥ ಹುಡುಗ (ವರ) ಬೇಕು ಎಂದು ಕೇಳುವುದಿಲ್ಲ! ಹಲವು ಮನೆಗಳಲ್ಲಿ ಇಂತಹ ವಾತಾವರಣ ಇಂದಿಗೂ ಇದೆ.

ಮಗಳು ಎಂದೂ ತಂದೆಯನ್ನು ಇದೇ ರೀತಿಯ ಹುಡುಗನನ್ನು ಹುಡುಕಿ ಎಂದು ಕೇಳುವುದಿಲ್ಲ. ಅವಳ ಆಸೆಗಳನ್ನು ಮನದಲ್ಲಿಯೇ ಕಾಪಿಟ್ಟುಕೊಳ್ಳುತ್ತಾಾಳೆ.

ಹೆಣ್ಣಿಿನ ‘ಕಾಸಗಲದ ಕಣ್ಣಿಿನಲ್ಲಿ ಊರಗಲದ ಆಸೆ’ ಇರುತ್ತೆೆ, ಇದು ತಂದೆ-ತಾಯಿಗೆ ತಿಳಿದಿರುವುದು ಅವಶ್ಯ. ಮದುವೆ ಎಂದಾಗ ಹೆಣ್ಣಿಿನ ತಾಯಿಯ ಪಾತ್ರವೂ ಮುಖ್ಯ, ಮಗಳ ಮನಸ್ಸಿಿನಲ್ಲಿ ಏನಿದೆ ಎಂಬುದ ಅರಿತು ಅವಳ ಕನಸಿಗೆ ರೆಕ್ಕೆೆ ಕಟ್ಟುವ ಜವಾಬ್ದಾಾರಿಯುತ ಕೆಲಸ ತಾಯಿಯದ್ದು. ಹೆಣ್ಣಿಿನ ಮನಸ್ಸು ಸೂಕ್ಷ್ಮ ಇದನ್ನು ತಾಯಿಗಿಂತ ಬೇರಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಉನ್ನತ ವಿದ್ಯಾಾಭ್ಯಾಾಸ ಪಡೆದು, ನೌಕರಿ ಮಾಡುತ್ತಿಿದ್ದ ಮಗಳಿಗೆ ಇಷ್ಟವಿಲ್ಲದ ಕಡೆ ಮದುವೆ ಮಾಡಿಕೊಟ್ಟರೆ ಸಂತೋಷದಿಂದ ಇರಲು ಹೇಗೆ ಸಾಧ್ಯ. ಮದುವೆ ಹೆಣ್ಣು, ಗಂಡಿಗೆ ಮಾತ್ರ ಸೀಮಿತವಾದುದಲ್ಲ. ಎರಡು ಮನಸ್ಸು, ಕುಟುಂಬದ ವಿಷಯ. ತನಗೆ ಯಾವ ರೀತಿಯ ಹುಡುಗಿ ಬೇಕು ಎಂದು ಕೇಳುವ ಹೆತ್ತವರು ಅದೇ ಹೆಣ್ಣಿಿನ ವಿಷಯದಲ್ಲಿ ಅದರ ಗೋಜಿಗೆ ಹೋಗುವುದಿಲ್ಲ.

ಪ್ರತಿಯೊಬ್ಬ ಹೆಣ್ಣು ಮಗಳ ಮನಸ್ಸಿಿನಲ್ಲಿ ಎಣಿಸಲಾಗದ ಕನಸುಗಳು ಇರುತ್ತೆೆ. ಓದಿನಿಂದ ನೌಕರಿಯವರೆಗೆ ಅವಳ ಆಸೆಯಂತೆ ಬಿಡುವ ಹೆತ್ತವರು ಮದುವೆಯ ವಿಷಯದಲ್ಲಿ ಕನಿಷ್ಠ ಅವಳ ಅಭಿಲಾಷೆಯ ಸಂಗ್ರಹಕ್ಕೂ ಮನಸ್ಸು ಮಾಡುವುದಿಲ್ಲ. ತಂದೆ-ತಾಯಿಯ ಅಣತಿಯಂತೆ ಮದುವೆಯಾದ ಹೆಣ್ಣು ಅವಳ ಅದೆಷ್ಟೋೋ ಕನಸಿಗೆ ತಿಲಾಂಜಲಿ ಇಡುತ್ತಾಾಳೆ. ಕುಟುಂಬಕ್ಕಾಾಗಿ ಸರ್ವಸ್ವವನ್ನೂ ತ್ಯಾಾಗ ಮಾಡುತ್ತಾಾ, ಕುಟುಂಬದ ಸಂತೋಷದಲ್ಲಿ ತಾನೂ ನಗುತ್ತಾಾ ಜೀವನ ಕಳೆಯುತ್ತಾಾಳೆ.

ಕೆಲವರು ತಂದೆ-ತಾಯಿಯ ಒತ್ತಾಾಯದ ಮೇರೆಗೆ ಮದುವೆಯಾದರೂ ನಂತರ ಹೊಂದಿಕೊಳ್ಳಲಾಗದೆ ಹೆತ್ತವರ ಮನೆ ಸೇರುವುದುಂಟು. ಇದಕ್ಕೆೆ ಮನಸ್ಸನ್ನು ಅರಿತು ಹೊಂದಿಕೊಳ್ಳದ ಸಂಗಾತಿ ಒಂದು ಕಡೆಯಾದರೆ, ಹೆತ್ತವರ ಎಡವುಗಳೂ ಕಾರಣವಾಗಿರುತ್ತವೆ ಈ ವಿಷಯ ತಿಳಿಯುವಷ್ಟರಲ್ಲಿ ಸಮಯ ಮೀರಿರುತ್ತದೆ.

 

ಕಾಲಕ್ಕೆೆ ತಕ್ಕಂತೆ ಬದಲಾವಣೆ ಅಗತ್ಯ, ಬದಲಾವಣೆ ಜಗದ ನಿಯಮ ಎಂಬಂತೆ ತಂದೆ-ತಾಯಿ ತಮ್ಮ ಹಳೆಯ ಅಜ್ಜನ ಕಾಲದ ನಡವಳಿಕೆಗೆ ಜೋತುಬೀಳದೆ ಮಗಳ ಮನಸ್ಸನ್ನು ಅರಿತು ನಡೆಯುವುದರಿಂದ ಅವಳ ಜೀವನ ಸುಖಕರವಾಗಬಹುದು. ಹಾಗೆಯೇ ಮದುವೆಯ ಮೊದಲ ಮೆಟ್ಟಿಿಲು ಹತ್ತುವಲ್ಲಿ ಎಡವದಿದ್ದರೆ ಮುಂದಿನ ಹಾದಿ ಸುಗಮ ಎಂಬ ಸೂಕ್ಷ್ಮ ವಿಚಾರ ಹೆತ್ತವರಿಗೆ ಇರುವುದು ಅಗತ್ಯ.

Leave a Reply

Your email address will not be published. Required fields are marked *

error: Content is protected !!