Saturday, 27th April 2024

ರಾಹುಲ್, ಅಗರ್ವಾಲ್‌’ಗೆ ಮುಂಬೈ ಕಂಟಕವಾಗುವುದೇ ?

ಅಬುದಾಬಿ: ಐಪಿಎಲ್ ಅಂಗಳದಲ್ಲಿ ಗುರುವಾರ ಮತ್ತೊಂದು ಬೃಹತ್ ಕಾದಾಟ ನಡೆಯಲಿದೆ. ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಅಬ್ಬರದ ಆಟ ಪ್ರದರ್ಶಿಸುತ್ತಿರುವ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲನ್ನು ಎದುರಿಸಲಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಾ ಬಂದಿದೆ. ಆರಂಭಿಕ ಆಟಗಾರರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಫಾರ್ಮ್‌ನಲ್ಲಿದ್ದು ಇಬ್ಬರೂ ತಲಾ ಒಂದು ಶತಕ ಹಾಗೂ ಒಂದು ಅರ್ಧ ಶತಕ ಗಳಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸದ ಆಟಗಾರರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 80 ರನ್ ಗಳಿಸಿ ಮಿಂಚಿದ್ದಾರೆ. ಆರಂಭಿಕ ಆಟಗಾರ ಇಶಾನ್ ಕಿಶನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಾಬೀತಿ ಪಡಿಸಿ ದ್ದಾರೆ. ಇನ್ನು ಕಿರಾನ್ ಪೊಲಾರ್ಡ್ ಮುಂಬೈ ಪಾಲಿಗೆ ಕೆಳ ಕ್ರಮಾಂಕದಲ್ಲಿ ನೆರವಾಗಲು ಸದಾ ಸಿದ್ಧ ಎಂದು ಕಳೆದ ಪಂದ್ಯ ದಲ್ಲೂ ಸಾಭೀತುಪಡಿಸಿದರು.

ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು ಒಂದರಲ್ಲಷ್ಟೇ ಗೆಲುವನ್ನು ಸಾಧಿಸಿದೆ. ಹೀಗಾಗಿ, ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನದಲ್ಲಿದ್ದರೆ ಮುಂಬೈ 6ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಒಂದು ಸೂಪರ್ ಓವರ್‌ ಸೋಲನ್ನು ಕಂಡಿರು ವುದು ಮತ್ತೊಂದು ಗಮನಾರ್ಹ ವಿಚಾರ. ಮುಂಬೈ ಆರ್‌ಸಿಬಿ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲು ಕಂಡಿದ್ದರೆ ಡೆಲ್ಲಿ ವಿರುದ್ಧ ನಡೆ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಆಘಾತಕಾರಿಯಾಗಿ ಸೂಪರ್ ಓವರ್‌ನಲ್ಲಿ ಮಣಿದಿತ್ತು.

ಎರಡು ತಂಡಗಳಲ್ಲೂ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಪಂಜಾಬ್ ತಂಡದ ಮೊಹಮದ್ ಶಮಿ ವಿಕೆಟ್ ಗಳಿಕೆಯ ರೇಸ್‌ ನಲ್ಲಿ ಮುಂದಿದ್ದಾರೆ. ಮುಂಬೈ ತಂಡದಲ್ಲಿ ವೇಗಿಗಳೇ ಹೆಚ್ಚಿದ್ದು ಬೂಮ್ರಾ, ಟ್ರೆಂಟ್ ಬೋಲ್ಟ್, ಚಾಹರ್ ಮಿಂಚಲು ಸಿದ್ಧರಾಗಿ ದ್ದಾರೆ.

ಸಂಭಾವ್ಯ ತಂಡ ಇಂತಿದೆ.

ಕಿಂಗ್ಸ್ ಎಲೆವೆನ್ ಪಂಜಾಬ್: ಕೆ.ಎಲ್.ರಾಹುಲ್ (ನಾ/ಕೀ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್‌, ನಿಕೋಲಸ್ ಪೂರನ್‌/ಕ್ರಿಸ್ ಗೇಲ್‌, ಗ್ಲೆನ್ ಮ್ಯಾಕ್ಸ್‌’ವೆಲ್, ಜೇಮ್ಸ್‌ ನೀಶಮ್, ಸರ್ಫರಾಜ್ ಖಾನ್‌, ಮುರುಗನ್ ಅಶ್ವಿನ್, ರವಿ ಬಿಷ್ಣೊಯಿ, ಶೆಲ್ಡನ್ ಕಾಟ್ರೆಲ್/ಮುಜೀಬ್ ಉರ್‌ ರೆಹಮಾನ್‌, ಮೊಹಮ್ಮದ್ ಶಮಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಕ್ವಿಂಟನ್ ಡಿ’ಕಾಕ್ (ಕೀ), ಸೂರ್ಯ ಕುಮಾರ್‌ ಯಾದವ್‌, ಇಶಾನ್ ಕಿಶನ್‌, ಕೀರನ್‌ ಪೋಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್‌ ಪ್ಯಾಟಿನ್’ಸನ್‌/ನಥನ್ ಕೌಲ್ಟರ್‌’ನೈಲ್, ರಾಹುಲ್ ಚಹರ್‌, ಟ್ರೆಂಟ್ ಬೌಲ್ಟ್‌, ಜಸಪ್ರೀತ್ ಬುಮ್ರಾ.

Leave a Reply

Your email address will not be published. Required fields are marked *

error: Content is protected !!