Sunday, 19th May 2024

ಸನ್‌ರೈಸ್ ವಿರುದ್ದ ರಾಯಲ್ ಗೆಲುವಿನ ಚಿಯರ‍್ಸ್

*ಸನ್‌ರೈಸ್‌ಗೆ ಲಗಾಮು ಹಾಕಿದ ಚಹಲ್

ಪಂದ್ಯಶ್ರೇಷ್ಠ : ಯಜುವೇಂದ್ರ ಚಹಲ್

ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡವನ್ನು ಹತ್ತು ರನ್ನುಗಳಿಂದ ಸೋಲಿಸಿದೆ.

ಇದು ಆರ್‌ಸಿಬಿ ನಾಯಕ ವಿರಾಟ್ ಅವರಿಗೆ ನಾಯಕನಾಗಿ 50ನೇ ಗೆಲುವಾಗಿದೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಈ ಗೌರವಕ್ಕೆ ಭಾಜನರಾದ ನಾಲ್ಕನೇ ನಾಯಕನಾಗಿದ್ದಾರೆ. ಈ ಐಪಿಎಲ್‌ನ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ನಡುವೆ ನಡೆದಿತ್ತು. ಚೆನ್ನೆöÊ ಗೆಲುವು ಸಾಧಿಸಿದ್ದು, ನಾಯಕ ಧೋನಿಗೆ ನಾಯಕನಾಗಿ ನೂರನೇ ಗೆಲುವಾಗಿದೆ.

ದುಬೈ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು, ಆರ್‌ಸಿಬಿ ತಂಡವನ್ನು ಬ್ಯಾಟಿಂಗಿಗೆ ಆಹ್ವಾನಿಸಿತು. ತಮ್ಮ ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಮಿ.360 ಖ್ಯಾತಿಯ ಹರಿಣ ಆಟಗಾರ ಎಬಿಡಿ ವಿಲಿರ‍್ಸ್ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ನಿಗದಿತ ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತು.

ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಹಾಗೂ ಆರನ್ ಫಿಂಚ್ ಅರ್ಧಶತಕದ ಅಡಿಪಾಯ ಹಾಕಿದರು. ದೇವದತ್ ಎಂಟು ಬೌಂಡರಿ ನೆರವಿನಿಂದ ತಮ್ಮ ಮೊದಲ ಅರ್ಧಶತಕ (56) ಬಾರಿಸಿದರೆ, ಎಬಿಡಿ ವಿಲಿರ‍್ಸ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ, ರನೌಟಿಗೆ ಬಲಿಯಾದರು. ನಾಯಕ ವಿರಾಟ್ ಕೊಹ್ಲಿ 14 ರನ್ನಿಗೆ ಸಾಕೆನಿಸಿಕೊಂಡರು. ಸನ್ರೆöÊಸ್ ತಂಡದ ಟಿ.ನಟರಾಜನ್, ವಿಜಯ್ ಶಂಕರ್ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಕಬಳಿಸಿದರು.

ಸವಾಲನ್ನು ಬೆನ್ನತ್ತಿದ ಸನ್‌ರೈರ‍್ಸ್’ಗೆ ಉತ್ತಮ ಆರಂಭ ಸಿಗಲಿಲ್ಲ. ಸ್ಫೋಟಕ ಆಟಗಾರ, ನಾಯಕ ಡೇವಿಡ್ ವಾರ್ನರ್ ಆರು ರನ್ ಗಳಿಸುವಷ್ಟರಲ್ಲಿ ರನೌಟ್ ಆದರು. ವಿಕೆಟ್ ಕೀಪರ್ ಜಾನಿ ಬೇರ್’ಸ್ಟೋ ತಂಡದ ಏಕೈಕ ಅರ್ಧಶತಕ(61) ಬಾರಿಸಿ ಸ್ಪಿನ್ನರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಇನ್ನೋರ್ವ ಕನ್ನಡಿಗ ಮನೀಶ್ ಪಾಂಡೆ 34 ರನ್ ಬಾರಿಸಿದರೆ, ಬಳಿಕ ಬಂದ ಬ್ಯಾಟ್ಸö್ಮನ್‌ಗಳು ಸಿಂಗಲ್ ಡಿಜಿಟ್ ರನ್ ಗಳಿಸಿ, ಪೆವಿಲಿಯನ್ ಪರೇಡ್ ನಡೆಸಿದರು.

ಒಂದೇ ಓವರಿನಲ್ಲಿ ಜಾನಿ ಬೇರ್‌ಸ್ಟೋ ಹಾಗೂ ವಿಜಯ್ ಶಂಕರ್ ವಿಕೆಟ್ ಪತನ ಪಂದ್ಯಕ್ಕೆ ಹೊಸ ತಿರುವನ್ನು ನೀಡಿತು. ಸ್ಪಿನ್ನರ್ ಯಜುವೇಂದ್ರ ಚಹಲ್ 18 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಿತ್ತು ಎದುರಾಳಿಗೆ ಲಗಾಮು ಹಾಕಿದರು. ಶಿವಂ ದುಬೆ ಹಾಗೂ ನವದೀಪ್ ಸೈನಿ ತಲಾ ಎರಡು ವಿಕೆಟ್ ಕಿತ್ತು, ಸಮರ್ಥ ಸಾಥ್ ನೀಡಿದರು.

ಚಹಲ್‌ಗೆ ಒಂದು ಹಂತದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವಿದ್ದರೂ, ರಶೀದ್ ಖಾನ್ ಆಸ್ಪದ ನೀಡಲಿಲ್ಲ. ಒಂದು ಹಂತದಲ್ಲಿ 121 ರನ್ನಿಗೆ ಕೇವಲ ಎರಡು ವಿಕೆಟ್ ಕಳೆದುಕೊಂಡಿದ್ದ ಸನ್‌ರೈಸ್ ಅಂತಿಮವಾಗಿ 153 ರನ್ನಿಗೆ ಸರ್ವಪತನ ಕಂಡಿತು.

ಸ್ಕೋರ್ ವಿವರ
ರಾಯಲ್ ಚಾಲೆಂರ‍್ಸ್ ಬೆಂಗಳೂರು 163-5
ಸನ್‌ರೈರ‍್ಸ್ ಹೈದರಾಬಾದ್ 153 ಆಲೌಟ್ (19.4)
ಜಾನಿ ಬೇರ್‌ಸ್ಟೋ 61, ಮನೀಶ್ ಪಾಂಡೆ 34, ಇತರ 15.

Leave a Reply

Your email address will not be published. Required fields are marked *

error: Content is protected !!