Sunday, 28th April 2024

ಕೆಕೆಆರ್ ಪ್ಲೇಆಫ್ ಆಸೆ ಜೀವಂತ: ಸ್ಯಾಮ್ಸನ್ ಆಟ ವ್ಯರ್ಥ

ಮುಂಬೈ: ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-15ರಲ್ಲಿ ಗೆಲುವಿನ ಹಳಿಗೇ ರಿತು. ಕೆಕೆಆರ್ ತಂಡ ಈ ಗೆಲುವಿನೊಂದಿಗೆ ಪ್ಲೇಆಫ್ ಹಂತದ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು.

ಸೋಮವಾರ ನಡೆದ ಹಣಾಹಣಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ 7 ವಿಕೆಟ್‌ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಆರಂಭಿಕ ವೈಫಲ್ಯದ ನಡುವೆಯೂ ನಾಯಕ ಸಂಜು ಸ್ಯಾಮ್ಸನ್ (54 ರನ್) ಅರ್ಧಶತಕದಾಟ ಹಾಗೂ ಶಿಮ್ರೋನ್ ಹೆಟ್ಮೆಯೆರ್ (27*ರನ್) ಡೆತ್ ಓವರ್‌ಗಳಲ್ಲಿ ತೋರಿದ ಬಿರುಸಿನ ಬ್ಯಾಟಿಂಗ್ ನೆರವಿ ನಿಂದ 5 ವಿಕೆಟ್‌ಗೆ 152 ರನ್ ಕಲೆ ಹಾಕಿತು. ಪ್ರತಿಯಾಗಿ ಅನುಭವಿ ನಿತೀಶ್ ರಾಣಾ (48* ರನ್) ಹಾಗೂ ರಿಂಕು ಸಿಂಗ್ (42*ರನ್) ಪ್ರತಿ ಹೋರಾಟದ ಫಲವಾಗಿ ಕೆಕೆಆರ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ರಾಜಸ್ಥಾನ ರಾಯಲ್ಸ್: 5 ವಿಕೆಟ್‌ಗೆ 152 (ಸಂಜು ಸ್ಯಾಮ್ಸನ್ 54, ಶಿಮ್ರೋನ್ ಹೆಟ್ಮೆಯರ್ 27*, ರಿಯಾನ್ ಪರಾಗ್ 19, ಜೋಸ್ ಬಟ್ಲರ್ 22, ಟಿಮ್ ಸೌಥಿ 46ಕ್ಕೆ 2, ಉಮೇಶ್ ಯಾದವ್ 24ಕ್ಕೆ 1, ಅನುಕೂಲ್ ರಾಯ್ 28ಕ್ಕೆ 1),

ಕೋಲ್ಕತ ನೈಟ್‌ರೈಡರ್ಸ್‌: 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 (ನಿತೀಶ್ ರಾಣಾ 48*, ರಿಂಕು ಸಿಂಗ್ 42*, ಶ್ರೇಯಸ್ ಅಯ್ಯರ್ 34, ಬಾಬಾ ಇಂದ್ರಜಿತ್ 15, ಟ್ರೆಂಟ್ ಬೌಲ್ಟ್ 25ಕ್ಕೆ 1, ಪ್ರಸಿದ್ಧ ಕೃಷ್ಣ 37ಕ್ಕೆ 1, ಕುಲದೀಪ್ ಸೆನ್ 28ಕ್ಕೆ 1)

error: Content is protected !!