ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಕರೋನಾ ನಿಯಂತ್ರಣಕ್ಕಾಗಿ ಖರೀದಿಸಲಾದ ಔಷಧಿ, ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ಹಾಗೂ ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ. ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ನೀಡಿದ ದೂರನ್ನು ಮಾನವ ಹಕ್ಕುಗಳ ಆಯೋಗ ವಿಚಾರಣೆ ಕೈಗೆತ್ತಿಕೊಂಡಿದೆ.
ಈ ಸಂಬಂದ ಪ್ರಕರಣ ದಾಖಲಿಸಿರುವ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಿ.ಎಚ್.ವಘೇಲಾ ವಿಚಾರಣೆಗೆ ಹಾಜರಾಗಿ
ಮಾಹಿತಿ ಹಾಗೂ ದಾಖಲೆಗಳನ್ನುಸಲ್ಲಿಸುವಂತೆ ಎಚ್.ಕೆ.ಪಾಟೀಲರಿಗೆ ಕೋರಿದ್ದಾರೆ. ಜು.27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಅಂದು ವಿಚಾರಣೆಗೆ ಗೈರಾದ ಹಿನ್ನಲೆಯಲ್ಲಿ ಆ.3 ಅಥವಾ 4 ರಂದು ಹಾಜರಾಗುವಂತೆ ಸೂಚಿಸಿದ್ದಾರೆ. ಈ ಬಗ್ಗೆೆ ಎಚ್.ಕೆ ಪಾಟೀಲರಿಗೆ ಬರೆದಿರುವ ಪತ್ರದ ಮಾಹಿತಿ ಹೀಗಿದೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ದಿನಾಂಕ 10.7.2020 ರಂದು ಗದಗ ಶಾಸಕ ಎಚ್.ಕೆ. ಪಾಟೀಲ ಅವರು ನೀಡಿದ ದೂರಿನನ್ವಯ ಎಚ್.ಆರ್.ಸಿ ನಂ:2158/10/27/2020(ಖಆ-1) ಅಡಿಯಲ್ಲಿ ಕರ್ನಾಟಕ ಸರಕಾರದ ವಿರುದ್ದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾಾರಂಭಿಸಿದೆ.
ಈ ಕುರಿತು ದಿನಾಂಕ 27.7.2020 ರಂದು ಎಚ್.ಕೆ. ಪಾಟೀಲರಿಗೆ ಪತ್ರ ಬರೆದಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ನಿಬಂಧಕರು ದಿನಾಂಕ 28.7.2020 ರಂದು ಮಾನ್ಯ ಶಾಸಕರಿಗೆ ಆಯೋಗದ ಮುಂದೆ ಹಾಜರಾಗಲು ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಶಾಸಕರು ಬೆಂಗಳೂರಿನಲ್ಲಿ ಇಲ್ಲದೇ ಇದ್ದಿದ್ದರಿಂದ ಅಂದು ದೂರುದಾರರು ಮಾಹಿತಿ ಒದಗಿಸಲು ಹಾಜರಾಗಲು ಸಾಧ್ಯವಾಗಲಿಲ್ಲ. ಈ ದಿನಾಂಕವನ್ನು ಬದಲಿಸಿ ಆ.3 ಅಥವಾ ಆ.4 ರಂದು ಹಾಜರಾಗಲು ಮತ್ತೊೊಂದು ಸಮಯ ನಿಗದಿಪಡಿಸುವುದಾಗಿ ದೂರವಾಣಿ ಮೂಲಕ ತಿಳಿಸಿರುತ್ತಾರೆ.
ಜು.10.ರಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಗೌರವಯುತ ಶವ ಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬುಲ್ಸ್ ವ್ಯವಸ್ಥೆ, ಸಕಾಲಕ್ಕೆ ಆಸ್ಪತ್ರೆಗೆ ರೋಗಿಯನ್ನು ಕರೆದು ಕೊಂಡು ಹೋಗುವ ಅನುಕೂಲತೆ, ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ನಮ್ಮ ಮಾನವ ಹಕ್ಕುಗಳಲ್ಲವೇ? ಈ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮ ಕರ್ತವ್ಯ ಹೊಂದಿರುವ ಸರಕಾರವೇ ಇವುಗಳ ಉಲ್ಲಂಘನೆಯ ಬಗ್ಗೆೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮವಾಗುತ್ತದೆ ಎಂದು ಮತ್ತು ಕಳೆದ ಕೆಲ ತಿಂಗಳಿಂದ ಕರೋನಾ ಸೋಂಕಿನಿಂದಾಗಿ ರಾಜ್ಯದ ಜನ ವಿಲ ವಿಲ ಒದ್ದಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 2 ಸಾವಿರಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದಾರೆ.
40 ರಿಂದ 50 ಜನ ಸಾವಿಗೀಡಾಗುತ್ತಿದ್ದಾರೆ. ಸರಕಾರದ ನಿಷ್ಕ್ರಿಯವಾದ ಕೆಲಸ, ಸ್ಪಷ್ಟ ನಿಲುವುಗಳ ಕೊರತೆ, ಪ್ರಾಮಾಣಿಕ ಪ್ರಯತ್ನದ ಕೊರತೆ, ಸರಕಾರದಲ್ಲಿ ಇಲ್ಲದಿರುವ ಸಮನ್ವ ಯತೆಗಳಿಂದಾಗಿ ಅದರ ಜತೆ ಎಲ್ಲಿ ನೋಡಿದಲ್ಲಿ ಭ್ರಷ್ಠಾಚಾರದ ವಾಸನೆಗಳಿಂದಾಗಿ ಜನರಿಗೆ ಆಸ್ಪತ್ರೆಯಲ್ಲಾಗಲಿ, ಕೋವಿಡ್ ಕೇಂದ್ರಗಳಲ್ಲಾಗಲಿ ಅಥವಾ ಆಂಬುಲ್ಸ್ೆ ಸೇವೆಯಲ್ಲಾಗಲಿ ಸಮರ್ಪಕ ಸೇವೆ ಇಲ್ಲದಾಗಿದೆ.
ಆಂಬುಲ್ಸ್ ಸೇವೆ ಲೋಪದಿಂದಾಗಿ ಸೋಂಕಿತರಿಗೆ 2ರಿಂದ 3 ದಿನ ಆಂಬುಲೆನ್ಸ್ ಸಿಗದೇ ಪ್ರಾಣ ಕಳೆದುಕೊಂಡ ಕೆಲ ಘಟನೆ
ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿರಲು ಸಾಕು. ಕೆಲ ಘಟನೆಗಳ ಪತ್ರಿಕಾ ವರದಿ ಲಗತ್ತಿಸಲಾಗಿದೆ ಹಾಗೂ ಈ ಪತ್ರದ ಜತೆ ಪೆನ್ಡ್ಡ್ರವ್ಯನ್ನು ಕಳಿಸಿರುವೆ.
ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ಪ್ರವೇಶ ನೀಡದೇ ಇರುವ ಘಟನೆ ಹಲವು. ಕೆಲವರು ಪ್ರವೇಶ ಸಿಗದೇ ಪ್ರಾಣ ಕಳೆದುಕೊಂಡಿದ್ದಾರೆ. ವರದಿ ಹಾಗೂ ಅದರ ಚಿತ್ರಗಳನ್ನು ಕಳಿಸಿರುವೆ. ವೈದ್ಯರಿಗೆ, ಆರೋಗ್ಯ ಕಾರ್ಯ ಕರ್ತರಿಗೆ ರಕ್ಷಣೆಗಾಗಿ ಗುಣಮಟ್ಟದ ಪಿಪಿಇ ಕಿಟ್ ಪೂರೈಸದೇ ನಿರ್ಲಕ್ಷದಿಂದಾಗಿ ಅವರ ಜೀವ ಗಂಡಾಂತರಕ್ಕೆೆ ದೂಡುವಂತೆ ಮಾಡಲಾಗಿದೆ. ಗುಣಮಟ್ಟದ ಕೊರತೆ ಬಗ್ಗೆ ಸರಕಾರವೇ ಬರೆದ ಪತ್ರ ಲಗತ್ತಿಸಲಾಗಿದೆ ಎಂದು ತಿಳಿಸಿದ್ದರು.
ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಲ್ಲಿ ಬಳ್ಳಾಾರಿ ಇರಲಿ ಬೆಂಗಳೂರಲ್ಲಾಗಲಿ ಭಾವನೆಗಳಿಗೆ ಘಾಸಿಯಾಗುವ ರೀತಿಯಲ್ಲಿ ಶವಗಳ ಅಂತ್ಯಸಂಸ್ಕಾಾರ ಮಾಡಿದ್ದಾರೆ ಎಂಬ ಚಿತ್ರ ಹಾಗೂ ವರದಿಗಳು ಹೃದಯ ವಿದ್ರಾವಕ ಘಟನೆಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಆಯೋಗವು ಆಹ್ವಾನಿಸಿದರೆ, ಚರ್ಚೆ ಬಯಸಿದರೆ ಇನ್ನೂ ಹೆಚ್ಚಿನ ವಿವರ ಲಭ್ಯಗೊಳಿಸುವೆ. ಜನ ಕಲ್ಯಾಣ ಎಲ್ಲ ಸಂಸ್ಥೆಗಳ ಉದ್ದೇಶ, ಗಾಬರಿಗೊಳಿಸುವ ಇಂಥ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದಿಂದ ಆಯೋಗ ತನ್ನ ಉಳಿದೆಲ್ಲ ಕೆಲಸ ಬದಿಗೊತ್ತಿ ಕರೋನಾ ಸಂದರ್ಭದಲ್ಲಿ ವಿಶಿಷ್ಟ ಕರ್ತವ್ಯ ನಿರ್ವಹಣೆಗೆ ಮುಂದಾಗಲಿ ಎಂದು ಕೋರಿದ್ದರು.
ಜು.27 ರಂದು ಸಭೆ ಸೇರಿದ ಮಾನವ ಹಕ್ಕುಗಳ ಆಯೋಗದ ಪೂರ್ಣಪೀಠ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಪ್ರಾಾರಂಭಿಸಿದೆ. ಆ.3 ಅಥವಾ ಆ.4 ರಂದು ಆಯೋಗ ಬಯಸಿದರೆ ಮಾನ್ಯ ಶಾಸಕರು ಹಾಜರಾಗಿ ಈಗಾಗಲೇ ನೀಡಲಾಗಿರುವ ದಾಖಲೆಗಳು ಮತ್ತು ಪೆನ್ಡ್ಡ್ರವ್ ಜತೆಗೆ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳುವರು ಎಂದು ತಿಳಿಸಿದ್ದಾರೆ.