Thursday, 28th November 2024

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ : ಬದುಕು ಸಂಸ್ಥೆ ನಂದಕುಮಾರ್

ತಿಪಟೂರು: ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸು ವುದು ಮತ್ತು ಪ್ರೋತ್ಸಾಹಿಸುವುದು ಜವಾಬ್ದಾರಿ ನಾಗರೀಕರ ಅಂಶವಾಗ ಬೇಕು ಎಂದು ಬದುಕು ಸಂಸ್ಥೆಯ ನಿರ್ಥೇಶಕರಾದ ಬಿ.ಎಸ್.ನಂದಕುಮಾರ್ ತಿಳಿಸಿದರು.

ಹೊನ್ನವಳ್ಳಿಯ ಸರ್ಕಾರಿ ಶಾಲಾ ಅವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಕ್ಕಳ ಸಹಾಯ ವಾಣಿ- ೧೦೯೮, ಬದುಕು ಸಂಸ್ಥೆ,. ಇವರುಗಳ ಸಂಯುಕ್ತ ಸಹಯೋಗದಲ್ಲಿ ಕನ್ನಡ ಗೀತೆ ಸ್ಫರ್ಧೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.

ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಗೀತೆ ಸ್ಪರ್ಧೆ ಒಂದು ವಿಶೇಷ ಪ್ರಯತ್ನ ಮಾಡಲಾಗಿದ್ದು ಈ ಮೂಲಕ ನಮ್ಮ ತಾಯಿ ಭಾಷೆಗೆ ಗೌರವ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತಾನಾಡಿದ ಶಿಕ್ಷಣ ಇಲಾಖೆಯ ದಕ್ಷಿಣಾ ಮೂರ್ತಿ ಮಕ್ಕಳಲ್ಲಿ ಪಠ್ಯೇತರ ವಿಚಾರಗಳು ನಮ್ಮ ಕನ್ನಡದ ಸಂಸ್ಕೃತಿಯ ಕಲೆಗಳನ್ನು ಮಕ್ಕಳು ಅಳವಡಿಸಿಕೊಂಡರೆ ಇಂದಿನ ಮಕ್ಕಳು ದಾರಿ ತಪ್ಪದೇ ಉತ್ತಮ ಭವಿಷ್ಯರೂಪಿಸಲು ಸಹಕಾರಿಯಾಗುತ್ತದೆ ಎಂದರು

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ೧೦೦ ಮಕ್ಕಳು ಭಾಗವಹಿಸಿದ್ದರು ವಿಜೇತ ೯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು & ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಸುಶ್ಮಾ . ಶ್ರೀಮತಿ ಲೀಲಾಬಾಯಿ ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆಯ ಸಿಬ್ಬಂದಿಯವರು ಹೊನವಳ್ಳಿ ಹೋಬಳಿಯ ಎಲ್ಲಾ ಸಿ.ಆರ್.ಪಿ.ಗಳು ಮತ್ತು ಬದುಕು ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.