ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಬ್ಯಾಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 85 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಯನಗರ ಬ್ರ್ಯಾಾಂಚ್ ಬ್ಯಾಾಂಕ್ ಆಫ್ ಬರೋಡದ ಲಾಕರ್‌ನಲ್ಲಿ ಇಟ್ಟಿದ್ದ, ತಮ್ಮ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಜೆ.ಪಿ ನಗರದ ಶಿವ ಪ್ರಸಾದ್ (52) ಎಂಬುವವರು ದೂರು ದಾಖಲಿಸಿದ್ದಾರೆ. ಶಿವಪ್ರಸಾದ್ ಅವರು ತಮ್ಮ ಬ್ಯಾಾಂಕ್ ಲಾಕರ್‌ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ 1.73 ಕೆ.ಜಿ ಚಿನ್ನಾಭರಣ ಇಟ್ಟಿದ್ದರು. ಕರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ಪರಿಣಾಮ ಅವರು ಬ್ಯಾಾಂಕಿನತ್ತ ಸುಳಿದಿರಲಿಲ್ಲ. ಜು.22 ರಂದು ಬ್ಯಾಾಂಕ್ ಲಾಕರ್ ಓಪನ್ ಮಾಡಿದಾಗ 50 ಗ್ರಾಾಂ ಪೀಕಾಕ್ ಚೈನ್, 45 ಗ್ರಾಾಂ ಒಂದು ರೌಂಡ್ ಬಾಲ್ ಬೈನ್, 1200 ಗ್ರಾಾಂ ಗಟ್ಟಿ ಚಿನ್ನ ಸೇರಿ 1.73 ಕೆ.ಜಿ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಗಾಬರಿಗೊಂಡ ಶಿವಪ್ರಸಾದ್ ಅವರು ಬ್ಯಾಾಂಕ್ ಸಿಬ್ಬಂದಿ ಕಳವು ಮಾಡಿದ್ದಾರೋ ಅಥವಾ ಬ್ಯಾಾಂಕಿಗೆ ಬಂದಿದ್ದ ಯಾರಾದರೂ ಕಳವು ಮಾಡಿದ್ದಾರೋ ಎಂಬುದನ್ನು ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇ್ಸ್ಪೆಕ್ಟರ್ ನಂಜೇಗೌಡರ ತಂಡ ತನಿಖೆ ಆರಂಭಿಸಿದೆ.