Wednesday, 30th October 2024

ಲಾಭದ ಆಸೆ ಹುಟ್ಟಿಸಿ ಯುವಕನಿಗೆ 85 ಸಾವಿರ ರು. ವಂಚನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಬಿಟ್‌ಕಾಯಿನ್ ಅಥವಾ ಕ್ರಿಪೋ ಕರೆನ್ಸಿ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಬೃಹತ್ ಜಾಲವೊಂದು ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ಹಲವು ನಿರುದ್ಯೋಗಿಗಳು ಹಣದ ಆಸೆಗಾಗಿ ಬಲಿಯಾಗುತ್ತಿದ್ದಾರೆ.

ಸಾಮಾಜಿಕ  ಜಾಲತಾಣದ ಮೂಲಕ ಯುವಕನ ಸ್ನೇಹ ಬೆಳೆಸಿ ಬಿಟ್‌ಕಾಯಿನ್ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸುವ ಆಸೆ ಹುಟ್ಟಿಸಿ  85 ಸಾವಿರ ರು. ವಂಚಿಸಿರುವ ಖದೀಮರ ಪತ್ತೆಗೆ  ದಕ್ಷಿಣ ವಿಭಾಗದ ಸೈಬರ್ ಕ್ರೆೆಂ ಪೊಲೀಸರು ಶೋಧ ನಡೆಸಿದ್ದಾರೆ.

ಟಿ.ಆರ್.ನಗರದ  ನಿವಾಸಿ ಗಣೇಶ್ ಅವರಿಗೆ  ಟೆಲಿಗ್ರಾಾಂ ಆ್ಯಪ್‌ನಲ್ಲಿ ಅಪರಿಚಿತರು ಯುವಕನನ್ನು  ಸಂರ್ಪಸಿದ್ದರು. ಕ್ರಿಪೋ ಕರೆನ್ಸಿ ಖರೀದಿಸಿ ಅದನ್ನು ಬಿಟ್‌ಕಾಯಿನ್ ರೂಪದಲ್ಲಿ  ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದರು. ನಂತರ  ಗಣೇಶ್  ಹಂತ ಹಂತವಾಗಿ 85 ಸಾವಿರ ರು. ವರ್ಗಾವಣೆ ಮಾಡಿದ್ದರು. ಹಣ ಸಂದಾಯದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರು ನೀಡಿದ್ದು , ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ತಿಂಗಳಿಗೆ 25 ಸಾವಿರದಿಂದ 50 ಸಾವಿರ ರುಪಾಯಿವರೆಗೆ ಹಣ ಸಂಪಾದಿಸಬಹುದು ಎಂಬ ಸಂದೇಶ ವಾಟ್‌ಸ್‌‌ಆ್ಯಪ್‌ಗೆ ಬರುತ್ತದೆ. ಝೂಮ್ ಆ್ಯಪ್‌ನಲ್ಲಿ ನಡೆಯುವ ತರಗತಿಗೆ ಕುಳಿತುಕೊಂಡರೆ ಆ್ಯಪ್ ಡೌನ್ ಲೋಡ್ ಮಾಡುವ ಕುರಿತು ತಿಳಿಸಿಕೊಡಲಾಗುತ್ತದೆ. 2400 ರುಪಾಯಿ ನೋಂದಣಿ ಶುಲ್ಕ ಪಾವತಿಸಿ ಅದಕ್ಕೆ ಸೇರಿದ ಬಳಿಕ ಇನ್ನಷ್ಟು ಜನರನ್ನು ಸೇರಿಸಬೇಕು. ಜನ ಹೆಚ್ಚಾದಂತೆ ನಿಮ್ಮ ವರ್ಜುವಲ್ ಖಾತೆಗೆ ಹಣ ಬರುತ್ತದೆ. ಅದನ್ನು ನಿರ್ದಿಷ್ಟ  ಬಿಟ್‌ಕಾಯಿನ್ ಬ್ಯಾಾಂಕುಗಳಲ್ಲಿ ನಗದೀಕರಿಸಬಹುದು ಎಂದು ತಿಳಿಸಲಾಗುತ್ತದೆ.

ಇದನ್ನು ನಂಬಿ ಹಲವು ಯುವಕರು ಹಣ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಅಪರಿಚಿತ ವ್ಯಕ್ತಿಗಳೇ ಇರುವುದರಿಂದ ವಿಶ್ವಾಸಾರ್ಹತೆ ಪ್ರಶ್ನೆ ಉದ್ಘವಿಸುವುದೇ ಇಲ್ಲ. ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಎಲ್ಲವೂ ಗೌಪ್ಯವಾಗಿರುತ್ತದೆ.